ರೈತರ ಆತ್ಮಹತ್ಯೆಗೆ ಅವರ ಪೂರ್ವಜನ್ಮಾದಿ ಕರ್ಮ ಕಾರಣವಂತೆ…!!!

Posted: ಜುಲೈ 29, 2008 in ವಿಚಾರ
ಟ್ಯಾಗ್ ಗಳು:, ,

 

ಇದಕ್ಕೆ ಹೇಗೆ ಪ್ರತಿಕ್ರಿಯೆ ತೋರಬೇಕೋ ಗೊತ್ತಾಗುತ್ತಾ ಇಲ್ಲ. ಅದೂ ಈ ಮಾತು ಬಂದಿದ್ದು ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಕರೆಯಿಸಿಕೊಳ್ಳುವ ವಿಜಯಕರ್ನಾಟಕದಲ್ಲಿ. ಇವತ್ತಿನ ವಿಜಯ ಕರ್ನಾಟಕದ ಜ್ಯೋತಿಷ್ಯ ವಿಜಯದಲ್ಲಿ ಪ್ರಕಟವಾದದ್ದು ಇದು. ಆತ್ಮಹತ್ಯೆಗೆ ಆ ವ್ಯಕ್ತಿಯ ಪೂರ್ವಜನ್ಮಾದಿ ಕರ್ಮಗಳೇ ಕಾರಣ. ಗುರುಹಿರಿಯರ ನಿಂದನೆ, ಮಾತಪಿತೃಗಳನ್ನು ಹಿಂಸಿಸಿರುವುದು, ಪತಿ-ಪತ್ನಿಯಲ್ಲಿ ವಿರಸ ಮೂಡಿಸಿರುವುದು, ಮೂಕಪ್ರಾಣಿಗಳಿಗೆ ಹಿಂಸೆ ನೀಡಿರುವುದು, ಮೋಸಮಾಡಿ ಮಾನಸಿಕ ಹಿಂಸೆ ನೀಡಿದ ದೋಷಗಳು ಈ ಜನ್ಮದಲ್ಲಿ ಆತ್ಮಹತ್ಯೆಗೆ ಪ್ರೇರಕವಾಗುತ್ತವೆ ಅನ್ನುತ್ತೆ ಈ ಲೇಖನ.

 

ಇಂತಹ ಲೇಖನ ಬರೆದವರ ವಿಷಯ ಬಿಟ್ಟುಬಿಡಿ. ಅವರರವರ ಅಭಿಪ್ರಾಯ ಅದು. ಹಾಗಂತ ಅದನ್ನು ಯಥಾವತ್ತಾಗಿ ಪ್ರಕಟಿಸಿದ ನಮ್ಮ ಹೆಮ್ಮೆಯ ಪತ್ರಿಕೆ ಬಗ್ಗೆ ಏನನ್ನೋಣ ಸ್ವಾಮಿ! ಸರ್ಕಾರದವರು ರೈತರ ನೆರವಿಗೆ ಹೋಗೋದು ಕೂಡಾ ಬೇಡ ಅನ್ಸುತ್ತೆ. ಯಾಕಂದ್ರೆ ಸಾಯೋದು ಅವರ ಪೂರ್ವಜನ್ಮದ ಕರ್ಮಫಲ ಅಂತಾದ್ಮೇಲೆ ಕರ್ಮಫಲ ತಪ್ಪಿಸೋಕಾಗುತ್ತಾ!!

 

ಇಂತಹ ಲೇಖನಗಳನ್ನು ಪ್ರಕಟಿಸುವ ಹಕ್ಕು, ಅಧಿಕಾರ ನಿಮ್ಮ ಯಾವುದೋ ಜನ್ಮದ ಸುಕೃತದ ಫಲವೇ ಇರಬಹುದೋ ಏನೋ, ಆದರೆ ಮೌಢ್ಯದ ಪರಮಾವಧಿಯಂತಹ ಇಂತಹ ವಿಚಾರಧಾರೆಯೆ ಲೇಖನ ಓದುವ ಕರ್ಮ ನಮ್ಮ ಯಾವ ಜನ್ಮದ ಪಾಪ ಶೇಷದ ಫಲ ಅಂತ ಹೇಳ್ತೀರಾ?

 

ಟಿಪ್ಪಣಿಗಳು
  1. Vishalamathi N K ಹೇಳುತ್ತಾರೆ:

    ಸರಿಯಾದ ವಿಚಾರ. ಇನ್ನೂ ಸ್ವಲ್ಪ ಜಾಸ್ತಿಯಾಗೇ ಉಗಿಯಬಹುದು ಆ ಪತ್ರಿಕೆಯ ಬೇಜವಾಬ್ದಾರಿತನಕ್ಕೆ

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s