ಒಂದು ಐವತ್ತು ವರ್ಷ ಮುಂಚೆ ಹುಟ್ಟಬೇಕಿತ್ತಾ ಅಂತ…!

Posted: September 13, 2008 in ಮನಸಿನ ಹಾಡು
Tags: , , ,

ನಾವು ಬದಲಾಗುತ್ತಿರಬೇಕಂತೆ…

ಇಲ್ಲವಾದರೆ

ಕಾಲದ ಯಾವುದೋ ಘಟ್ಟದಲ್ಲಿ

ನಿಂತಿರುವಲ್ಲೇ ನಿಂತುಹೋಗಿ

ಶಿಲೆಯಂತಾಗಿಬಿಟ್ಟು

ಪಳೆಯುಳಿಕೆಗಳಾಗಿ ಬಿಡುತ್ತೇವಂತೆ

 

ನಿನ್ನೆ ಇಂದು ನಾಳೆಗಳಾಗಿ

ಸೆಕೆಂಡು ನಿಮಿಷ ಘಂಟೆಗಳಾಗಿ

ಉರುಳುವ ಕಾಲಚಕ್ರದೊಡನೆ

ಗುಂಪಿನೊಳಗೆ ಗೋವಿಂದ ಅಂತ

ನಾಲ್ಕ್ ಹೆಜ್ಜೆ ಹಾಕುತ್ತಿರಬೇಕಂತೆ

 

ನಿನ್ನೆಯದು ಇಂದಿಗೆ ರದ್ದಿಯಾಗುವ

ಇಂದು ಅದಾಗಲೇ ಭೂತಕ್ಕೆ ಸಂದಾಯವಾಗುವ

ನಾಳೆಯ ಹೊಸ್ತಿಲಾಚೆ ಕಾಲಿಟ್ಟು ಕಾಯುತ್ತಿರುವ

ಈ ಧಾವಂತದ ಬದುಕಿನಲಿ

ಕಾಲಕ್ಕೆ ತಕ್ಕ ಕೋಲ ಕಟ್ಟುತಿರುವವರು

ಪಿಸುನುಡಿಯುವುದು ಕೇಳಿಸುತ್ತಿಲ್ಲವೇ…

ಸರ್ವೈವಲ್ ಆಫ್ ಫಿಟ್ಟೆಸ್ಟ್ ಯುಗ

ಯಾವತ್ತೋ ಮುಗಿದಿದೆ

ಇನ್ನೇನಿದ್ರೂ ಸರ್ವೈವ್ ಆಗೋರು

ಫಾಸ್ಟೆಸ್ಟ್ ಇರೋರು ಮಾತ್ರವಂತೆ

 

ಒಮ್ಮೊಮ್ಮೆ ನನಗೆ ಅನ್ನಿಸುವುದುಂಟು

ನಾನೊಂದು ಐವತ್ತು ವರ್ಷ ಮುಂಚೇನೇ

ಹುಟ್ಟಬೇಕಿತ್ತಾ ಅಂತ….!

ಅಲ್ಲೂ ನಿಧಾನ ಮಾಡಿದೆನಾ ಏನ್ಕತೆ ಅಂತ !!

 

Comments
  1. ಶಿಶಿರ ಕನ್ನಂತ says:

    ಒಂದು ವಸ್ತುವನ್ನು ಅನುಭವಿಸಲು ಟೈಮ್ ಇಲ್ಲ ಅಂದ್ರ್ ಮೇಲೆ ಮನುಷ್ಯನಿಗೆ ಸ್ಯಾಟಿಸ್ಫ್ಯಾಕ್ಷನ್ ಎಲ್ಲಿಂದ ಸಿಗುತ್ತೋ?.

  2. ಶಿಶಿರ ಕನ್ನಂತ says:

    ಈಗ ಕಾಲ ತುಂಬ ಫಾಸ್ಟ್. ಯಾಕಂದ್ರೆ ಇವತ್ತ್ ತಕಂಡ ವಸ್ತು ನಾಳಿಗೆ ಹಳ್ಸಿ ಹೊತ್ತ್.

  3. ನನಗನ್ನಿಸುತ್ತೆ..ಐವತ್ತು ವರ್ಷ ಹಿಂದೆ ಹುಟ್ಟಿದ್ದಿದ್ದರೇ ತುಂಬಾ ಬೋರೆ ಅನ್ನಿಸ್ತಿತು ಅಂತ… ಲೋಕ ತುಂಬಾ ಪಾಸ್ಟ್ ಇದ್ರೆನೆ ಮಜಾ….😉

  4. neelihoovu says:

    ನಿಜಾ ಸರ್…ಈಗ ಲೋಕ ತುಂಬಾ ಫಾಸ್ಟು…

    ಒಂದೈವತ್ತು ವರ್ಷ ಹಿಂದೆ ಹುಟ್ಟಿದ್ರೆ ಜೀವನದ ನಿಜ ಸುಖ ಸಿಗ್ತಾ ಇತ್ತೇನೋ?

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s