ಇವೂ ಕೂಡಾ ನನ್ನ ಪುಸ್ತಕದಿಂದಲೇ ಹೆಕ್ಕಿದಂತವುಗಳು….
ಆದರೂ ಒಂದಿಷ್ಟು ಬೇರೆಯೇ ತರಹದ ಸಾಲುಗಳು ಅನ್ನುವ ಕಾರಣಕ್ಕೆ ಹೀಗೆ ಪ್ರತ್ಯೇಕವಾಗಿ ಕೊಡುತ್ತಿದ್ದೇನೆ ಬಿಟ್ರೆ ಬೇರೆ ಏನೂ ಸೀರಿಯಸ್ ಅರ್ಥಗಳಿಲ್ಲ. ಹಾಗೆಲ್ಲ ಪ್ರತಿಮೆ ರೂಪಕ ಇಟ್ಟು ಬರೆಯೋಕೆ ನಾನು ಕವಿಯೂ ಅಲ್ಲ. ಇದಕ್ಕೆ ಒಳಾರ್ಥ ಮತ್ತೊಂದು ಇನ್ನೊಂದು ಅಂತ ಹುಡುಕಲು ಹೋಗಬೇಡಿ…. ಸುಮ್ನೆ ಓದಿ… ಖುಷಿಯಾದ್ರೆ ಹೇಳಿ…
ಎಲ್ಲ ಭವ ಬಂಧನದ ಬಿಡುಗಡೆಯ ಬೆಳಕಿನಲಿ
ಇಲ್ಲವಾಗುವೆನೆಂಬ ಅವ್ಯಕ್ತ ಅಳುಕಿನಲಿ
ಸೊಲ್ಲಡಗಿ ಹೋಗುತಿದೆ ಬರದಿರುವ ನಾಳೆಯಲಿ
ಎಲ್ಲಡಗಿ ಕುಳಿತಿರುವೆ ಸಾವೇ ಮಾತಾಡು
————————————
ಬುದ್ಧನಾಗೋದು ಅಂದ್ರೆ ಮುಗ್ಧನಾಗೋದು
ಸದ್ದಿಲ್ಲದೆ-ಸುದ್ದಿ ಮಾಡದೆ ಶುದ್ಧನಾಗೋದು
ಜಿದ್ದಿಲ್ಲದೆ-ಗುದ್ದಾಡದೆ ಕಾರ್ಯ ಮಗ್ನನಾಗೋದು
ಗೆದ್ದರೂ-ಬಿದ್ದರೂ ಅಲುಗದ ಪ್ರಬುದ್ಧನಾಗೋದು
————————————-
ಅವನು ಅವನಿಯ ಕಾದು
ಅವನಿ ಅವನ ಕಾದರೂ
ಅವನವನಿಗೆ ಸಿಗಲಿಲ್ಲ
ಅವನಿಯವನಿಗೆ ಸಿಗಲೇ ಇಲ್ಲ
————————————–
budha na bagge odiddu nenapaagta illa…
akshara prayoga chennagide.