ನೀವು ಜಾಣರಾದ್ರೆ ಈ ಒಗಟಿಗೆ ಉತ್ತರ ಹೇಳಿ ನೋಡೋಣ…

Posted: ಸೆಪ್ಟೆಂಬರ್ 22, 2008 in ಹಾಗೆ ಸುಮ್ಮನೆ
ಟ್ಯಾಗ್ ಗಳು:

ಒಬ್ಬರು ಅಧ್ಯಾಪಕರು ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಆಗ ಗುಂಡ ಎಂದಿನಂತೆ ತರಲೆ ಮಾಡಲು ಶುರುಮಾಡಿದ. ಅಧ್ಯಾಪಕರಿಗೆ ತುಂಬಾ ಸಿಟ್ಟು ಬಂತು. ಅವನನ್ನು ಬಯ್ಯಲು ಹೊರಟರು. ಆದರೆ ಅವರಿಗೊಂದು ವಿಲಕ್ಷಣ ಅಭ್ಯಾಸವಿತ್ತು. ಯಾರನ್ನು ಬಯ್ಯುವುದಾದರೂ ಕೆಟ್ಟ ಶಬ್ದಗಳನ್ನು ಬಳಸದೆ, ಬಯ್ಗುಳವನ್ನು ಒಗಟಿನ ರೂಪದಲ್ಲಿ ಹೇಳುತ್ತಿದ್ದರು. ಹಾಗಾಗಿ ಗುಂಡನನ್ನು ಬಯ್ಯಲು ಕೂಡ ಒಂದು ಒಗಟನ್ನು ಹೇಳಿದರು. ಗುಂಡನಿಗೆ ಏನೂ ಅರ್ಥವಾಗದೆ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ನಿಂತ. ನಿಮಗೆ ಏನಾದರು ಅರ್ಥವಾಗುತ್ತದೆಯೆ ನೋಡಿ…ಗೊತ್ತಾದರೆ ಗುಂಡನಿಗೂ ಹೇಳಿ.. J

 

ಕತ್ತಲೆ ಮನೆಯೊಳಗಿದ್ದಾತನ ಕೊಂದಾತನ ಅಗ್ರಜನ ಪಿತನ ವಾಹನದಂತೆ ಇದ್ದೀಯಲ್ಲೋ..

Advertisements
ಟಿಪ್ಪಣಿಗಳು
 1. Manu.N ಹೇಳುತ್ತಾರೆ:

  konna sir .r u freind with me

 2. ಪ್ರದೀಪ್ ಹೇಳುತ್ತಾರೆ:

  ಹ್ಹಿ ಹ್ಹಿ.. 🙂 ಪವನರು ಹೇಳಿದಂತೆ, ಉತ್ತರ “ಕೋಣ!” ಅಲ್ಲವೇ….

 3. ವಿಕಾಸ್ ಹೆಗಡೆ ಹೇಳುತ್ತಾರೆ:

  ಈ ’ಕತ್ತಲೆ ಮನೆ’ ಯಾವುದು ಅಂತ ಗೊತ್ತಾಗ್ತಿಲ್ಲ!
  ಅದು ಗೊತ್ತಾದ್ರೆ ಉತ್ರ ಗೊತ್ತಾದಂಗೆ. 🙂

 4. PAVAN ಹೇಳುತ್ತಾರೆ:

  Hi

  It is nice… Kattale koneyolagiddavanu Keechaka, avanannu kondavanu Bheema, avana agraja Dharmaraya, avana pita Yama, so avana vaahana Kona. Am i right?

 5. nilgiri ಹೇಳುತ್ತಾರೆ:

  ಎಮ್ಮೆ ಅಥವಾ ಕೋಣ ಇರಬಹುದಾ??!! 😉

 6. vijayraj ಹೇಳುತ್ತಾರೆ:

  somu…. handi utra alla kanO

 7. vijayraj ಹೇಳುತ್ತಾರೆ:

  yenu guess workaa? goobe alla kanO goobe

 8. ಶಿಶಿರ ಕನ್ನಂತ ಹೇಳುತ್ತಾರೆ:

  “ಗೂಬೆ” ಇರಬಹುದೇ ವಿಜಯರಾಜ್?

 9. Anupama ಹೇಳುತ್ತಾರೆ:

  “ಗರುಡ ” ಇರಬಹುದೇ?

 10. neelihoovu ಹೇಳುತ್ತಾರೆ:

  ಹೊಳೆಯುತಿಲ್ಲ..:(
  ಆದರೆ ಕ್ಲೂ ಕೊಡದೇ ಹೋದರೆ ಹೇಗೆ?

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s