ಬರಹ… ನೂರು ನೂರು ಬರಹ….. ಶತಕದ ಸಂಭ್ರಮ

Posted: ಸೆಪ್ಟೆಂಬರ್ 23, 2008 in ನೆನಪುಗಳ ಮಾತು ಮಧುರ..
ಟ್ಯಾಗ್ ಗಳು:, , ,

ಮನಸಿನ ಮರ್ಮರದಲ್ಲಿ ನಾನು ಬರೆಯುತ್ತಿರುವ ನೂರನೇ ಲೇಖನವಿದು. ಸರಿಯಾಗಿ ಆರು ತಿಂಗಳ ಹಿಂದೆ ಮಾರ್ಚ್ 24ರಂದು ಮನಸಿನ ಗರ್ಭದಲ್ಲಿದ್ದ ಮಾತುಗಳು ಶಿಶುವೊಂದು ಅಕ್ಷರರೂಪದಲ್ಲಿ ಬ್ಲಾಗಿನಂಗಳದಲ್ಲಿ ಜನ್ಮತಾಳಿತ್ತು. ಆರು ತಿಂಗಳೆಂದರೆ ಮಗು ಅಂಬೆಗಾಲಿಡಲು ಶುರು ಮಾಡುವ ಮುಂಚಿನ ಕಾಲ. ಈ ಅವಧಿಯಲ್ಲಿ ಮಗು ತೆವಳುತ್ತಾ, ಹೊರಳಾಡುತ್ತಾ ನೂರು ಲೇಖನಗಳ ಹೊಸ್ತಿಲು ದಾಟಿದ್ದಕ್ಕೆ ಇವತ್ತು ಪಾಯಸ ಮಾಡಬೇಕೋ ಏನೋ

 

ನೂರು ಲೇಖನಗಳನ್ನೇನೋ ಬರೆದದ್ದಾಯ್ತು. ಮಕ್ಕಳು ಏನು ಮಾಡಿದ್ರು ಚೆಂದ ಅನ್ನುತ್ತಾರಲ್ಲ ಆ ರೀತಿ ನಿಮ್ಮಲ್ಲನೇಕರು ನನ್ನ ಬರವಣಿಗೆಯ ಶಿಶುವಿನ ಬಾಲಲೀಲೆಗಳನ್ನು ಮೆಚ್ಚಿದ್ದೀರಿ. ಬ್ಲಾಗ್ ಲೋಕದ ದಿಗ್ಗಜರ ಎಡೆಯಲ್ಲಿಯೂ ನನ್ನ ಬ್ಲಾಗಿಗೂ ಒಂಚೂರು ಜಾಗ ಕೊಟ್ಟಿದ್ದೀರಿ. ನಿಮ್ಮ ಮೆಚ್ಚುಗೆಯ ಚಪ್ಪಾಳೆಯನ್ನು ಪ್ರತಿಕ್ರಿಯೆಗಳ ರೂಪದಲ್ಲಿ ನೀಡಿ ಹುರಿದುಂಬಿಸಿದ್ದೀರಿ. ಈ ಪ್ರೋತ್ಸಾಹ ಮುಂದೆಯೂ ಜಾರಿಯಲ್ಲಿರುವ ವಿಶ್ವಾಸ ನನಗಿದೆ. ನಾನು ಇಷ್ಟೆಲ್ಲ ಬರೆಯುತ್ತೇನೆಂದು ಎಣಿಸಿರಲಿಲ್ಲ ಮುಂತಾದ ಕ್ಲೀಷೆಯ ಮಾತುಗಳೆಲ್ಲ ಬದಿಗಿರಲಿ ಬಿಡಿ. ಬ್ಲಾಗಿನಲ್ಲಿ ನಿಮಗೇನು ಇಷ್ಟವಾಯ್ತು, ಏನು ಇಷ್ಟವಾಗಲಿಲ್ಲ, ಏನೇನು ವಿನೂತನ ಪ್ರಯೋಗಗಳನ್ನು ಮಾಡಬಹುದು, ಯಾವ ರೀತಿಯ ಬರವಣಿಗಳು ಇದ್ದರೆ ಚೆಂದ… ಹೀಗೆ ನಾಲ್ಕು ಮಾತು ಹೇಳಿದ್ರೆ ತುಂಬಾ ಒಳ್ಳೇದಿತ್ತು.

 

ಬ್ಲಾಗೊಂದರಲ್ಲಿ ನೂರು ಬರಹಗಳು ಬರುವುದು ತೀರಾ ಹೇಳಿಕೊಳ್ಳುವಂತ ಮಹತ್ಸಾಧನೆಯೇನೂ ಅಲ್ಲವೆಂಬ ಸ್ಪಷ್ಟ ಅರಿವು ನನಗಿದೆ. ಆದರೆ ಬದುಕಲ್ಲಿ ಹೀಗೆ ಸಣ್ಣ-ಪುಟ್ಟ ಸಂಭ್ರಮಗಳನ್ನು ಆಸ್ವಾದಿಸಿ ಖುಷಿಯಾಗಿರಲು ನಯಾ ಪೈಸಾ ಖರ್ಚಿಲ್ಲದಿರುವಾಗ ನಿಮ್ಮೊಂದಿಗೆ ಈ ಸಂಭ್ರಮವನ್ನು ಹಂಚಿಕೊಳ್ಳೋ ಆಸೆಯಿಂದ ಇದನ್ನೆಲ್ಲ ಬರೆಯಲು ಹೊರಟೆ. ಅಲ್ಲದೆ ಇಲ್ಲಿನ ಲೇಖನಗಳು ಎಷ್ಟು ಮಾಹಿತಿಪೂರ್ಣವಾಗಿವೆ, ಮುದನೀಡುವಂತಿದೆ ಅನ್ನೋದೆ ಯಶಸ್ಸಿನ ನಿಜವಾದ ಮಾನದಂಡ ಎಂಬ ಎಚ್ಚರಿಕೆ ಕೂಡಾ ಇದೆ. ಹಾಗಾಗಿ ನಿಮಗನ್ನಿಸಿದ್ದನ್ನು ನೇರವಾಗಿ, ಯಾವ ಸಂಕೋಚವು ಇಲ್ಲದೆ ತಿಳಿಸಿದರೆ, ಹಾಗೆ ಬರೆಯುವಂತೆ ಪ್ರಯತ್ನವನ್ನು ಮಾಡುವ ಉತ್ಸಾಹವಂತೂ ನನ್ನಲ್ಲಿದೆ.

 

ಈ ಪಯಣದಲ್ಲಿ ಇನ್ನೂ ಹೆಚ್ಚು ಹೆಚ್ಚು ಬರೆಯುವಂತೆ ಪ್ರೋತ್ಸಾಹ ನೀಡಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ವಿಶೇಷವಾಗಿ ನನ್ನ ಬರವಣಿಗೆಯನ್ನು ಮೆಚ್ಚಿ ಪ್ರತಿಕ್ರಿಯೆಯನ್ನು ನೀಡಿದ ಭಾಗ್ವತ್ರು, ವಿಕಾಸ್, ಸುಶ್ರುತ, ಹರೀಶ್ಸೋಮು,  ಶ್ರೀನಿಧಿ, ಚೇತನಾ, ಟೀನಾ, ನೀಲಾಂಜಲ, ಮಾಲಾರಾವ್, ನಾವಡ, ಮಣಿಕಾಂತ್, ರಂಜಿತ್, ಸಂದೀಪ್ ಕಾಮತ್, ಚಿತ್ರಾ, ಸುನಾಥ್, ಅರೇಹಳ್ಳಿ ರವಿ, ಗಣೇಶ್, ಶಾನಿ, ಶಂಕರ್, ಜೋಮನ್, ವಿಶಾಲ್,  ಭೀಮೇಶ್, ಸಂತು, ವಿಶಾಲಮತಿ, ಹೊಳ್ಳ, ಶಿಶಿರ, ರಾಜಣ್ಣ, ಮಯ್ಯ, ಯೊಗೀಶ, ಗುರುಪ್ರಸಾದ್, ಗುರು, ಸುನಿಲ್, ರಘು, ಸುಹಾಸ್, ವಿಮಲ ನಾವುಡ, ಯೋಗಾನಂದ, ಶ್ರೀಪ್ರಕಾಶ್, ಸತ್ಯ, ಲಕ್ಷ್ಮಿಕೃಷ್ಣ, ಅನುಪಮ, ಆನಂದ್,ಶ್ರೀರಾಮ್, ವಿನಯ ಉಡುಪ, ಯು.ಎನ್.ಶೆಟ್ಟಿ, ಲೊಡ್ಡೆ, ಯಶೋದ, ಉಶಾರಾಣಿ,ಸ್ವಾಮಿ, ವಿಘ್ನೇಶ್, ರವೀಂದ್ರ ಭಟ್, ವಿಜಯ್ ಕುಮಾರ್, ಜಗದೀಶ್…..ಹೀಗೆ ಪಟ್ಟಿ ಇನ್ನೂ ಉದ್ದಕ್ಕಿರುವುದರಿಂದ ಸರ್ವರಿಗೂ… ಹಾಗೂ ವರ್ಡ್‌ಪ್ರೆಸ್‌ನ ಸರ್ವರ್ಗೂ ನನ್ನ ಧನ್ಯವಾದ.

 

ನನ್ನ ಎರಡೂ ಬ್ಲಾಗ್ ಬಗ್ಗೆ ಬರೆದ ಕೆಂಡಸಂಪಿಗೆ, ನನ್ನ  ‘ಕುಂದಾಪ್ರ ಕನ್ನಡ’ ಬ್ಲಾಗ್ ಪರಿಚಯಿಸಿದ ಅವಧಿ, ಕನ್ನಡ ಪ್ರಭ ಗಳಿಗೆ ನೂರರ ಸಂಭ್ರಮದ ಸಾವಿರ ನಮನ

 

ಈ ಬರಹ ಬರೆಯುವ ಹೊತ್ತಿನಲ್ಲಿ ಇಲ್ಲಿನ ಬರಹಗಳು 5989ಕ್ಕೂ ಹೆಚ್ಚು ಸಲ ಓದಲ್ಪಟ್ಟಿವೆ. ಇದು ಇನ್ನೂ ಹೆಚ್ಚು ಜನರನ್ನು ಮುಂಬರುವ ದಿನಗಳಲ್ಲಿ ತಲುಪುತ್ತದೆ ಎನ್ನುವ ನಿರೀಕ್ಷೆ, ತಲುಪಬೇಕೆಂಬ ಆಸೆ ಎರಡೂ ಇದೆ.

 

ಮುಗಿಸುವ ಮುನ್ನ ನನ್ನ ನೂರು ಬರಹಗಳಲ್ಲಿ ನನಗೆ ಇಷ್ಟವಾದ / ತೃಪ್ತಿಕೊಟ್ಟ ಹತ್ತು ಬರಹಗಳು ಮತ್ತು ಇಲ್ಲಿಯ ತನಕ ಹೆಚ್ಚು ಮಂದಿ ಒದಿ ಇಷ್ಟಪಟ್ಟ ಹತ್ತು ಬರಹಗಳ ಪಟ್ಟಿಯೊಂದನ್ನು ನಿಮ್ಮ ಮುಂದಿರಿಸುತ್ತಿದ್ದೇನೆ. ಈ ತನಕ ನೀವು ಓದಿರದಿದ್ದಲ್ಲಿ ಓದಿ.. ಹೇಗಿದೆ ಹೇಳಿ.

 

ನನ್ನಿಷ್ಟದ ಬರಹಗಳು

ಮಾಧವಿಹೊರಟಳು ಕಾನನಕೆ

ಮೂಕಜ್ಜಿಯ ಕನಸು.. ಮೂಕವಾಯ್ತು ಮನಸು

ಮತ್ತೆ ನೆನಪಾಯಿತು ಕಮಲಶಿಲೆ ಹಬ್ಬ

ನಿರೀಕ್ಷೆಯಲ್ಲಿನ ಸುಖ ನಿಜದಲ್ಲಿಲ್ಲ !!

ಕಂಚಿನ ಕಂಠದೊಡನೆ ಮಿಂಚಿನ ಸಂವಾದ – ಭಾಗವತ ಹೊಸಂಗಡಿ ರವೀಂದ್ರ ಶೆಟ್ಟಿ ಅವರೊಂದಿಗೆ

ನಂಬಿಕೆದ್ರೋಹ ಅನ್ನೋದು ರಿಲೇಟಿವಾ?

ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?

ಬೇಕೇ ಹೇಳಿಈ ಪರಿಯ ದ್ವೇಷ…?

ಬದುಕಿನ ಆಟೋಗ್ರಾಫ್ ತುಂಬೆಲ್ಲಾ ಖಾಲಿ ಹಾಳೆಗಳು..

ಕುವೆಂಪು ಮಲೆನಾಡಿನಲ್ಲಿ ಒಂದು ಸುತ್ತು..

 

ಓದುಗರ ಅಚ್ಚುಮೆಚ್ಚು….

ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?

ತೀರ್ಥಳ್ಳಿ ಸಿಡಿಲು, ಕಾರ್ಕಳ ಗುಡುಗು, ತೊಂಬಟ್ಟು-ಕೊಳಲಿ ಮಿಂಚು

ದಂಗೆಯ ದಿನಗಳು

ಮಾಧವಿಹೊರಟಳು ಕಾನನಕೆ

ಕಂಚಿನ ಕಂಠದೊಡನೆ ಮಿಂಚಿನ ಸಂವಾದ – ಭಾಗವತ ಹೊಸಂಗಡಿ ರವೀಂದ್ರ ಶೆಟ್ಟಿ ಅವರೊಂದಿಗೆ

ಈ ಮಂಡೇ ಯಾಕಾಗಿದೆ

ಯಾದ್ ವಶೇಮ್ – ಯಹೂದಿಗಳ ಇತಿಹಾಸದ ಬೆನ್ಹತ್ತಿ…..

ಮೊಗ್ಗಿನ ಮನಸುಅರಳಿ ನಿಂತ ಸೊಗಸು

ಯಾವ ಸಾಫ್ಟ್ವೇರ್ ಕಂಪೆನಿ ಕರೆಯಿತು

ಸಾಫ್ಟ್ವೇರ್-ಮನೆ .. ಬಗ್ಸ್ ತುಂಬಿದ ಪ್ರತೀ ಕೋಡೂ ಕರಮಾನೇ

 

ಮಗು ಬೆಳೆದರೂ ಸಹ ಮಗು ಮನಸಿನ ಮುಗ್ಧತೆ ಮತ್ತು ಬೆರಗು ಮನಸಿನ ಮರ್ಮರದಿಂದ ಮರೆಯಾಗದು ಅನ್ನೋದನ್ನು ನಿಮಗೆ ನೆನಪಿಸುತ್ತಾ, ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ

                                                            ವಿಜಯ್‌ರಾಜ್ ಕನ್ನಂತ್.

 

ಟಿಪ್ಪಣಿಗಳು
 1. gururaj ಹೇಳುತ್ತಾರೆ:

  congrats kano maga …..
  bardidiya nooru baraha
  ondondu kaddu padeda muttina tharaha…
  nin akshara preethi heege jaariyallirali .

 2. Yogeesha Adiga ಹೇಳುತ್ತಾರೆ:

  baravanige aagali nirantara….
  baduku-baravanigeyali baradirali antara…
  nodoli ninna ‘manasina marmara’ baruva manvantara….

  keep going….
  Adiga

 3. ಶೆಟ್ಟರು (Shettaru) ಹೇಳುತ್ತಾರೆ:

  ನೂರರ ಸಂಭ್ಹ್ರಮಕ್ಕೆ ನಮ್ಮದು ಶುಭಹಾರೈಕೆ, ಆದಷ್ಟು ಬೇಗ ಇನ್ನೂರರ ಸಂಭ್ಹ್ರಮ ಬರಲಿ,

  ಹೀಗೆ ಬರೆಯುತ್ತಾ ಇರಿ

  ಪ್ರೀತಿಯಿರಲಿ
  -ಶೆಟ್ಟರು

 4. ಸಂದೀಪ್ ಕಾಮತ್ ಹೇಳುತ್ತಾರೆ:

  ನೂರರ ಮುಂದೆ ಸೊನ್ನೆಗಳು ಹೀಗೇ ಹೆಚ್ಚುತ್ತುರಲಿ.
  -ಸಂದೀಪ್ ಕಾಮತ್

 5. bala ಹೇಳುತ್ತಾರೆ:

  Congratulations,
  innu heccinadannu nireekshisuttaa.

  preetiyinda,
  Bala

 6. vijayraj ಹೇಳುತ್ತಾರೆ:

  somanna,

  nimma preethi hinge jaari iaralanna,

  nanna akshara preetige sallam heLiddiya…
  ninna preetihya aksharaigaLige nanna salaam 🙂
  200 aagoke innond varshaanaadru bekappa

  shishira,
  thanks kano…

  Guru,
  nimma salahe chennaagide…
  nOdOna… hna idalli ondishtu kavanagalu.. haage naanu first bareda article mookajjiya kanasu… udayavaanili bandittu..

 7. ಗುರುಪ್ರಸಾದ್ ಸಿ. ಎಂ ಹೇಳುತ್ತಾರೆ:

  ಕಂಪ್ಯೂಟರ್ ಮುಂದೆ ಸದಾ ಕಾಲ ಕೂತು ಕೆಲಸ ಮಾಡುವ ಅನೇಕ ಜನರಿಗೆ ನಿಮ್ಮ ಬ್ಲಾಗ್ ಮರಳುಗಾಡಿನಲ್ಲಿ ನೀರು ಸಿಕ್ಕಂತೆ. ಕನ್ನಂತರವರೆ ನಿಮ್ಮ ಬ್ಲಾಗ್ ನ ಪ್ರಯೋಜನ ಪಡೆದವರು ಹಲವಾರು ಇರಬಹುದು. ಆದರೆ ಎಲ್ಲರೂ ಪ್ರತಿಕ್ರಿಯಿಸಲಾರರು. ಹಾಗಂತ ನೀವು ಬರೆಯುವುದನ್ನು ನಿಲ್ಲಸಬಾರದು ಅಷ್ಟೆ. ಹಾಗೆ ಇಲ್ಲಿನ ಲೇಖನಗಳು ನಿಯಮಿತವಾಗಿ ಯಾವುದಾದರೂ ದಿನ ಪತ್ರಿಕೆಗಳಿಗೆ ಅಥವ ವಾರಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗುವಂತಾದರೆ ಹೆಚ್ಚಿನ ಜನರಿಗೆ ನಿಮ್ಮ ಬರವಣಿಗೆಯ ಪರಿಚಯವಾಗುವುದರಲ್ಲಿ ಸಂಶಯವೇ ಇಲ್ಲ.

  ಧನ್ಯವಾದಗಳೊಂದಿಗೆ,
  ಗುರು

 8. ಶಿಶಿರ ಕನ್ನಂತ ಹೇಳುತ್ತಾರೆ:

  ಅಲ್ಲ ಮಾರಾಯ, ಮೊನ್ನೆ ಮೊನ್ನೆ 72 ಬ್ಲಾಗ್ ಪೋಸ್ಟ್ ಆಯ್ತ್ ಅಂದೆ….ಅಸ್ಟ್ ಬೇಗ್ ಸೆಂಚುರಿ ಹೊಡಿದ್ಯ?
  ಆಯ್ಲಿ….ಒಳ್ಳೆದ್.

 9. navilugari ಹೇಳುತ್ತಾರೆ:

  ಗುರುಗಳೇ..೧೦೦ ಇಷ್ಟು ಬೇಗ? ಲವ್ ಲೆಟ್ರು ಹನಿ ಮಣ್ಣು ಮಸಿ ಲವ್ವು ಪ್ರೀತಿ ಪ್ರೇಮ ಅಂತ ೨ ವರ್ಷದಿಂದ ಮಣ್ಣು ಹೊರುತ್ತಾನೆ ಇದ್ದೀನಿ..ಆದರೆ ೫೦ ಪೋಸ್ಟ್ ಮಾದ್ಲಿಕ್ ಆಗ್ಲಿಲ್ಲ ನನ್ ಹತ್ತಿರ..ನಿಮ್ಮ ೨೦೦ ನೆ ಪೋಸ್ತ್ ಬೇಗ ಬರಲಿ…

  ನಿಮ್ಮ ಅಕ್ಷರ ಪ್ರೀತಿಗೆ ಸಲಾಂ:)

  ಅಕ್ಕರೆಯಿಂದ ನಿಮ್ಮ ಹುಡುಗ
  ಸೋಮ

 10. vijayraj ಹೇಳುತ್ತಾರೆ:

  ವಿಕಾಸ್, ಜಿತೇಂದ್ರ, ಸತ್ಯ, ಮಯ್ಯ, ವಿಜಯ್‌ಕುಮಾರ್, ಅವಧಿ ನಿಮಗೆಲ್ಲರಿಗು ಕೃತಜ್ಞತಾಪೂರ್ವಕ ನಮನ. ನಿಮ್ಮ ಮೆಚ್ಚುಗೆ, ಪ್ರೋತ್ಸಾಹದ ನುಡಿಗಳೇ ನನ್ನ ಉತ್ಸಾಹಕ್ಕೆ ಕಾರಣ. ಹೀಗೆ ಜಾರಿಯಲ್ಲಿರಲಿ ನಮ್ಮ ಈ ಪಯಣ

  ನೀಲಾಂಜಲ, ಜೋಮನ್ – ನೀವು ನಿಮ್ಮ ಮನೆಯಲ್ಲಿ ನನ್ನ ಹೆಸರು ಹೇಳಿಕೊಂಡು ಪಾಯಸ ಮಾಡಿ ತಿನ್ನಿ. ಅದರ ಖರ್ಚು ವೆಚ್ಚಗಳನ್ನು ಇನ್ನಷ್ಟು ಒಳ್ಳೆಯ ಬರಹಗಳನ್ನು ಬರೆದು ತೀರಿಸುತ್ತೇನೆ 🙂

  ಭಾಗ್ವತ್ರೆ, ಇನ್ನೂ ಬಾಲಗೋಪಾಲ, ಕೋಡಂಗಿ ಕೊಣ್ಕಿ ಮುಗ್ದ್ ಒಡ್ಡೋಲ್ಗ ಶುರು ಆಯ್ಕ್ ಅಷ್ಟೆ. ಮಂಗಳ ಪದ್ಯ್ ಬೆಳ್ಗಿನ್ ಜಾಮಕ್ಕಲ್ದೇ. ಇನ್ನೂ ಸುಮಾರ್ ದೂರ್ ಇತ್ತ್ ಬಿಡಿ. ನಿಮ್ದ್ ನೂರ್ ಆಯಿಲ್ಲ ಅಂದೇಳಿ ಬೇಜಾರ್ ಮಾಡ್ಕಾದ್ ಏನಿಲ್ಲ. ನಾ ಬರದ್ ನೂರ್ ಎಲ್ಲಾ ತೂಕ ಹಾಕ್ರು ನೀವ್ ಬರದ್ರ್ ತೂಕಕ್ಕೆ ಸಮ ಆತಿಲ್ಲೆ ಮರ್ರೆ. ಹಾಂಗೆ ನಿಮ್ಮ್ ಕುಂದಾಪ್ರ ಕನ್ನಡ ಕ್ಲಾಸ್ ಸುರು ಮಾಡಿ ಅಂದೇಳಿ ಇನ್ನೊಂದ್ ಸಲ ಕೇಣ್ಕಂತಿದ್ದೆ.

 11. ವಿಕಾಸ್ ಹೆಗಡೆ ಹೇಳುತ್ತಾರೆ:

  ಅರ್ರೆ.. ನೂರು!!

  ಕಂಗ್ರಾಟ್ಸು.. ಹೀಗೆ ಮುಂದುವರೆಯಲಿ ಅಕ್ಷರ ಪಯಣ.
  ಮನಸಿಗೆ ಬಂದ ಎಲ್ಲಾ ಹೊಸ ತರಹದ ಪ್ರಯತ್ನಗಳು ಜಾರಿಯಲ್ಲಿರಲಿ.

  ಖುಷಿ ಹಂಚಿಕೊಂಡದ್ದಕ್ಕೆ thanxu.

 12. ಭಾಗ್ವತ್ರು ಹೇಳುತ್ತಾರೆ:

  ಧನ್ಯವಾದ ಸಮರ್ಪಣೆ ಮುಗೀತಲ್ಲ. ಇನ್ನ್ ಮುಂದಿನ್ ಕಾರ್ಯಕ್ರಮ ಎಂತದ್? ಮತ್ತೆ, ’ಮಂಗಳಂ’ ಹಾಡುದಿಲ್ಲ ಅಲ್ಲಾ?

  ಆದ್ರೂ ಅಡ್ಡಿಲ್ಲ ಮರ್ರೆ ನೀವ್. ನಾನ್ ಮೂರ್ ವರ್ಷ ಹಗಲು ರಾತ್ರಿ, ಚಳಿ, ಮಳೆ ಅನ್ನದೇ ಅವಿರತವಾಗಿ, ಅವ್ಯಾಹತವಾಗಿ ಬೆಳಿಗ್ಗೆಯಿಂದ ರಾತ್ರಿವರೆಗೂ ಕಣ್ಣಿಗೆ ಎಣ್ಣೆ ಬಿಟ್ಕಂಡ್ ಬ್ಲಾಗ್ ಕುಟ್ಟಿರೂ ೧೦೦ ಗಡಿ ಮುಟ್ಲಿಲ್ಲ ಇನ್ನೂ…

 13. neelanjala ಹೇಳುತ್ತಾರೆ:

  ಓಹೋ! ನೂರರ ಸಂಭ್ರಮ !!
  ಖುಷಿಯಾಯಿತು ಸ್ವಾಮಿ, ಪಾಯಸ ನನಗೂ ಕಳಿಸಿ

 14. Vijaya Kumar ಹೇಳುತ್ತಾರೆ:

  Congrats. Keep it up.

 15. Mayya ಹೇಳುತ್ತಾರೆ:

  ಆರು ತಿಂಗಳಲ್ಲಿ ನೂರು!
  ಅಧ್ಬುತ ಸಾಧನೆಯ ಶುರು
  ಸಾಗಲಿ ಇದು ತಲೆಮಾರು
  ಬರಲಿ ಸಾಹಿತ್ಯದ ಬೇರು ಮಾರು:)

  Congrats Vijay!!!..Way to go:)

 16. Satya ಹೇಳುತ್ತಾರೆ:

  Wah!, congrats, in this short period you done a great job. Hundred is unbelievable in this short period. Once again I wish congratulation for successfully completing the century.

  CONGRATS

 17. jomon ಹೇಳುತ್ತಾರೆ:

  ವ್ಹಾ.. ನೂರು ಪೋಸ್ಟುಗಳನ್ನು ಕುಟ್ಟಿ ಬಿಟ್ಟಿದ್ದೀರಲ್ಲಾ, ಅಲ್ಲಾ ಮಾರಾಯ್ರೇ ಆರು ತಿಂಗಳಲ್ಲಿ ನೂರು ಲೇಖನಗಳನ್ನು ನೀವು ಹೇಗೆ ಬರೆದಿದ್ದೀರಿ ಎನ್ನುವುದು ನನ್ನ ಕುತೂಹಲ. ನಿಮ್ಮಿಷ್ಟದ ಹಾಗೂ ಓದುಗರ ಇಷ್ಟದ ಲೇಖನಗಳನ್ನು ನೀವು ಪಟ್ಟಿ ಮಾಡಿ ಕೊಟ್ಟಿದ್ದೀರಲ್ಲಾ, ಸಮಯ ಸಿಕ್ಕಿದಾಗ ಅದೆನ್ನೆಲ್ಲಾ ಇನ್ನೊಮ್ಮೆ ಕುಳಿತು ಓದುತ್ತೇನೆ. ಶತಕ ಸಂಭ್ರಮಕ್ಕೆ ಕಂಗ್ರಾಟ್ಸ್.

  ನಿಮ್ಮ ಬರಹಗಳು ಚೆನ್ನಾಗಿದೆ. ಬರಹದೊಳಗಿನ ಪ್ರಾಮಾಣಿಕತೆ ಕೂಡ. ಮಗು ಮನಸಿನ ಮುಗ್ಧತೆ ಮತ್ತು ಬೆರಗು ಮನಸಿನ ಮರ್ಮರ ಕೂಡ ಇಷ್ಟ. ಹೀಗೆಯೇ ಬರೆಯುತ್ತಿರಿ. ನೂರನೇ ಪೋಸ್ಟಿಗೆ ನನ್ನದೂ ಒಂದು ಸಿಹಿ ಶುಭಾಶಯ.

  ಪಾಯಸ ಮಾಡಿದ ನಂತರ ಕರೆಯಿರಿ. [ಪಾರ್ಸಲ್ ಕೂಡ ಕಳುಹಿಸಬಹುದು]

 18. ನಿಮ್ಮ ಬರೆಯುವ ಉತ್ಸಾಹ ಹೀಗೆ ಮುಂದುವರಿಯಲಿ. ಇನ್ನೂ ಹೆಚ್ಚೆಚ್ಚು ಬರೆಯುತ್ತಿರಿ.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s