ನನ್ನ ಒಗಟಿಗೆ ಉತ್ತರ…

Posted: ಸೆಪ್ಟೆಂಬರ್ 26, 2008 in ಹಾಗೆ ಸುಮ್ಮನೆ
ಟ್ಯಾಗ್ ಗಳು:, ,

ಈ ವಾರದ ಶುರುವಿನಲ್ಲಿ ಒಂದು ಒಗಟು ಪೋಸ್ಟ್ ಮಾಡಿದ್ದೆ. ನಿಮ್ಮಲ್ಲಿ ಕೆಲವರು ಉತ್ತರ ನೀಡಲು ಪ್ರಯತ್ನ ಪಟ್ಟರೂ ಸರಿ ಉತ್ತರ ಹೇಳಿದ್ದು ಇಬ್ಬರು. ಅವರಲ್ಲಿ ಪವನ್ ಮಾತ್ರ ಸಮರ್ಪಕ ವಿವರಣೆಯೊಂದಿಗೆ ಸರಿ ಉತ್ತರ ನೀಡಿದ್ದಾರೆ. ನೀಲಗಿರಿ ಅವರು ಉತ್ತರ ಕೊಟ್ಟಿದ್ದರೂ ಅನುಮಾನದಲ್ಲಿ ಹೇಳಿದ್ದಾರೆ.

 

ನಿಮ್ಮ ಉತ್ತರಗಳು ಹಾಗೂ ಸರಿಯುತ್ತರ ಕೆಳಗಿದೆ ನೋಡಿ…

 

 ಕತ್ತಲೆ ಮನೆಯೊಳಗಿದ್ದಾತನ ಕೊಂದಾತನ ಅಗ್ರಜನ ಪಿತನ ವಾಹನದಂತೆ ಇದ್ದೀಯಲ್ಲೋ..

ಸರಿಯುತ್ತರ ಕೋಣ

ಹೇಗೆ ಅಂತ ಕೇಳ್ತೀರಾ?

 

ಕತ್ತಲೆ ಮನೆಯೊಳಗಿದ್ದಾತಕೀಚಕ

ಕೀಚಕನ ಕೊಂದಾತ – ಭೀಮ

ಭೀಮನ ಅಗ್ರಜ ಧರ್ಮರಾಯ

ಅವನ ಪಿತ ಯಮ

ಯಮನ ವಾಹನ ಕೋಣ

 

ರಂಜಿತ್

ಹೊಳೆಯುತಿಲ್ಲ.. L ಆದರೆ ಕ್ಲೂ ಕೊಡದೇ ಹೋದರೆ ಹೇಗೆ?

 

ಸುಶ್ರುತ ದೊಡ್ಡೇರಿ

ನಂಗೊತ್ತು ಆದ್ರೆ ಹೇಳೊಲ್ಲ J

 

ನೀಲಗಿರಿ

ಎಮ್ಮೆ ಅಥವಾ ಕೋಣ ಇರಬಹುದಾ??!!

 

ಪವನ್

ಕತ್ತಲೆ ಕೋಣೆಯಲ್ಲಿದ್ದವನು ಕೀಚಕ. ಅವನನ್ನು ಕೊಂದವನು ಭೀಮ. ಅವನ ಅಗ್ರಜ ಧರ್ಮರಾಯ. ಅವನ ಪಿತ ಯಮ. ಯಮನ ವಾಹನ ಕೋಣ. ಸರೀನಾ?

 

ಅನುಪಮ

 ಗರುಡ ಇರಬಹುದೇ?

 

ಶಿಶಿರ ಕನ್ನಂತ

ಗೂಬೆಇರಬಹುದೇ?

 

ನವಿಲುಗರಿ ಸೋಮು

ಹಂದೀನಾ ಗುರುಗಳೇ?

 

ವಿಕಾಸ್

ಕತ್ತಲೆ ಮನೆಯಾವುದು ಅಂತ ಗೊತ್ತಾಗ್ತಿಲ್ಲ!

ಅದು ಗೊತ್ತಾದ್ರೆ ಉತ್ರ ಗೊತ್ತಾದಂಗೆ.

 

ಉತ್ತರಿಸಲು ಯತ್ನಿಸಿದ ಎಲ್ಲರಿಗೂ ಧನ್ಯವಾದ. ಸರಿ ಉತ್ತರ ನೀಡಿದ ಪವನ್ ಮತ್ತು ನೀಲಗಿರಿಯವರಿಗೆ ಅಭಿನಂದನೆಗಳು

ನಿಮ್ಮಲ್ಲೂ ಈ ತರಹದ ಒಗಟು ಇದ್ದರೆ ಹಂಚಿಕೊಳ್ಳಿ. ಎಲ್ಲ ಸೇರಿ ಬಿಡಿಸೋಣ.

ಟಿಪ್ಪಣಿಗಳು
 1. SUSHMITHA u ಹೇಳುತ್ತಾರೆ:

  utara emme hege heli

 2. Pavan kumar ಹೇಳುತ್ತಾರೆ:

  *ಹರನ ಹಾರನ ಆಹಾರದ ಪುತ್ರನ ಮಿತ್ರನ ಶತೃವಿನ ತಂಗಿಯ ಹೆಸರೇನು?*
  ಈ ಒಗಟನ್ನು ಬಿಡಿಸಿ ಉತ್ತರಿಸಿರಿ.

 3. Ramesh ಹೇಳುತ್ತಾರೆ:

  Harana harana aaharana putrana mithrana shthruvina thangiya hesarenu

 4. Ravi..... ಹೇಳುತ್ತಾರೆ:

  ನನ್ನ ಹೆಸರು ರವಿ…. ನಾನಿರುವದು ಮುಂಬೈನಲ್ಲಿ….

  ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನು ಯಾರು?

 5. Ravi..... ಹೇಳುತ್ತಾರೆ:

  ee vagatigu uttara heli

  Harana Haarana Aaharana Pujyana Vairiya Tamma yaru?????????

 6. M G Harish ಹೇಳುತ್ತಾರೆ:

  ಸರಿ ಉತ್ತರ ತಿಳಿಸಿದ್ದಕ್ಕೆ ಧನ್ಯವಾದಗಳು 🙂

 7. ವಿಜಯರಾಜ್ ಕನ್ನಂತ ಹೇಳುತ್ತಾರೆ:

  harish… adu utra emme ne….
  adanna naanu avrige mail maadi confirm maadkondiddini

 8. M G Harish ಹೇಳುತ್ತಾರೆ:

  ಗಿರಿಜಾ ಅವರೇ, ಕುಂತಿಭೋಜನ ಮಗಳು ಕುಂತಿ.. ಆಕೆಗೆ ಮೂರು/ನಾಲ್ಕು/ಐದು/ಆರು ಮಕ್ಕಳು.. ಯಾರ ಅಪ್ಪನ ವಾಹನದ ಮಹಾರಾಣಿ ಬೇಕು ನಿಮಗೆ? ಯುಧಿಷ್ಠಿರ ಅಂತ ಅಂದ್ಕೊಂಡ್ರೆ ಎಮ್ಮೆ ಇರಬಹುದು…

 9. nilgiri ಹೇಳುತ್ತಾರೆ:

  ಸರಿ, ಈಗ ಈ ಒಗಟು ಬಿಡಿಸಿ ನೋಡೋಣ!;)

  ” ಕುಂತಿಭೋಜನ ಮಗಳ ಮಗನ ಹೆತ್ತಪ್ಪನ ಹೊತ್ಕೊಂಡೋಡಾಡೋನ ಮಹಾರಾಣಿ ಯಾರು??”

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s