Archive for ಅಕ್ಟೋಬರ್, 2008

ಹಿಂದೊಮ್ಮೆ ನನ್ನ ಕುಂದಾಪ್ರ ಕನ್ನಡ ಬ್ಲಾಗ್‌ನಲ್ಲಿ ಚೂರು ಪಾರು ಬರೆದಿದ್ದೆ… ನಮ್ಮೂರಿನ ಈ ಗುಹೆಯ ಕುರಿತು…ನಮ್ಮೂರಿನ ಗುಹೆ ಅಂತ ಹೇಳೋದಲ್ಲ… ನಿಜಕ್ಕೂ ಪ್ರಕೃತಿಯ ಅದ್ಭುತಗಳಲ್ಲಿ ಒಂದು. ಹೆಚ್ಚು ಕಡಿಮೆ 3೦೦-35೦ ಮೀಟರಿಗಿಂತಲೂ ಉದ್ದ ಇರಬಹುದು…ಈ ಗುಹೆ.. ಇಲ್ಲಿಗೆ ಹೋಗಿ ನೋಡೋರಿಗೆ, ಕಮಲಶಿಲೆ ದೇವಸ್ಥಾನಕ್ಕೆ ಹೋದ್ರೆ ಒಬ್ಬ ಮಾರ್ಗದರ್ಶಿಯನ್ನು ಗೊತ್ತು ಮಾಡಿ ಕೊಡುತ್ತಾರೆ.

ಗುಹೆ ಬಗ್ಗೆ ಹೆಚ್ಚು ಹೇಳೋಲ್ಲ… ನನ್ನ ಸ್ನೇಹಿತ .. ಸಂದೇಶ ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದಾಗ ತೆಗೆದ ಕೆಲವು ಫೋಟೋಗಳು ಇಲ್ಲಿವೆ … ಒಮ್ಮೆ ನೋಡಿ… ಬರೀ ಚಿತ್ರ ಮಾತ್ರ ಅಲ್ಲ.. ಪುರುಸೊತ್ತಾದ್ರೆ ಒಮ್ಮೆ ಅಲ್ಲಿಗೇ ಹೋಗಿ ನೋಡಿ….

 

 

 

ನಿಮ್ಮಲ್ಲಿ ಎಷ್ಟು ಜನ ಮಾಲ್ಗುಡಿ ಡೇಸ್ ನೋಡಿದ್ದೀರೋ ಗೊತ್ತಿಲ್ಲ. ನಾನು ಸಣ್ಣವನಿರುವಾಗ (ಬೆಂಗಳೂರು ಭಾಷೆಯಲ್ಲಿ ಹೇಳ್ಬೇಕು ಅಂದ್ರೆ ಚಿಕ್ಕೋನಾಗಿದ್ದಾಗ) ಮಾಲ್ಗುಡಿ ಡೇಸ್ ದೂರದರ್ಶನದಲ್ಲಿ ನೋಡಿದ್ದು ಮಸುಕು ಮಸುಕಾಗಿ ನೆನಪಲ್ಲಿ ಉಳಿದಿದೆ. ದಿ| ಶಂಕರ್‌ನಾಗ್ ನಿರ್ದೇಶನದಲ್ಲಿ ಮೂಡಿಬಂದ ಈ ಧಾರಾವಾಹಿ ಆರ್.ಕೆ.ನಾರಾಯಣ್ ಅವರ ಕೃತಿಯನ್ನಾಧರಿಸಿ ತಯಾರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಶಂಕರ್‌ನಾಗ್ ಪ್ರತಿಭೆಯ ಅತ್ಯುತ್ತಮ ಅಭಿವ್ಯಕ್ತಿಗೆ ಒಂದು ನಿದರ್ಶನ.

 

ಮಾಲ್ಗುಡಿ ಡೇಸ್ ನೋಡೋದನ್ನು ತಪ್ಪಿಸಿಕೊಂಡವರಿಗೆ ಮತ್ತು ಅದನ್ನು ನೋಡಿ ಮತ್ತೊಮ್ಮೆ ಮೆಲುಕು ಹಾಕಿ ಸವಿಯಲು ಬಯಸುವವರಿಗೆ ಒಂದು ಸಿಹಿ ಸುದ್ದಿ. ಅದರ ಎಲ್ಲಾ ಎಪಿಸೋಡುಗಳ ಸಿ.ಡಿ.ಗಳು ಈಗ ಲಭ್ಯ. ಒಟ್ಟು ಎಂಟು ಸಂಪುಟ, ಹದಿನೆಂಟು ಸಿ.ಡಿ.ಯಲ್ಲಿ ಲಭ್ಯವಿರುವ 54 ಭಾಗಗಳ ಈ ಸಂಪುಟಗಳ ಒಟ್ಟು ಬೆಲೆ 612 ರೂಪಾಯಿ. ತೀರಾ ಬೇಜಾರೆನ್ನಿಸಿದಾಗಲೋ ಅಥವಾ ದಿನಕ್ಕೊಂದು ಭಾಗದಂತೆ ನೋಡ್ತೀರಿ ಅಂದ್ರೂ ಭರ್ತಿ ಎರಡು-ಮೂರು ತಿಂಗಳಿಗಾಗೋ ಸರಕು. ಅಲ್ಲದೆ ಅದನ್ನು ನೋಡಿದಾಗ ಸಿಕ್ಕುವ ಖುಶಿಗೆ ಬೆಲೆಕಟ್ಟೋಕೆ ನಂಗಂತೂ ಸಾಧ್ಯವಾಗಲ್ಲ. ನಾನಂತೂ ಈಗಾಗ್ಲೆ ಹತ್ತು ಎಪಿಸೋಡನ್ನು ಗುಳುಂ ಸ್ವಾಹಾ ಮಾಡಿ ಮುಂದಿನ ಭಾಗ ಯಾವಾಗ ನೋಡೋದು ಅನ್ನೋ ಲೆಕ್ಕಾಚಾರದಲ್ಲಿ ಇದ್ದೇನೆ. ಮತ್ಯಾಕೆ ತಡ? ಹತ್ತಿರದ ಸಿ.ಡಿ. ಅಂಗಡಿಯನ್ನೊಮ್ಮೆ ಜಾಲಾಡಿ ಬನ್ನಿ… ಭಿನ್ನವಾದ ಲೋಕವೊಂದರಲ್ಲಿ ಕಳೆದು ಹೋಗೋಕೆ ಸಿದ್ಧತೆ ಮಾಡಿಕೊಳ್ಳಿ. ಇಷ್ಟೊಳ್ಳೆಯ ಸಂಗ್ರಹವವನ್ನು ಯೋಗ್ಯ ಬೆಲೆಯಲ್ಲಿ ಒದಗಿಸಿ ಕೊಟ್ಟ ಬಿಗ್ ಹೋಮ್ ವಿಡಿಯೋಕ್ಕೆ ಒಂದು ಧನ್ಯವಾದ ನನ್ನ ಪರವಾಗಿ…ನಿಮ್ಮೆಲ್ಲರ ಪರವಾಗಿ… ಹಾಗೆ ಇಷ್ಟೊಳ್ಳೆ ಕೃತಿ ಬರೆದ ಆರ್.ಕೆ.ನಾರಾಯಣ್, ಅದನ್ನು ಅದ್ಭುತವಾಗಿ ದೃಶ್ಯಮಾಧ್ಯಮಕ್ಕೆ ತಂದ ಶಂಕರ್‌ನಾಗ್‌ಗೂ ಕೂಡಾ ಒಂದು ದೊಡ್ಡ ಥ್ಯಾಂಕ್ಸು….

ಹನಿ ಹನಿ ಸೇರಿ ಸಾಗರವಾಗಿ….

Posted: ಅಕ್ಟೋಬರ್ 16, 2008 in ಮನಸಿನ ಹಾಡು
ಟ್ಯಾಗ್ ಗಳು:

ಇವೆಲ್ಲವೂ ಇವತ್ತಿನ(16 ಅಕ್ಟೋಬರ್) ವಿಜಯಕರ್ನಾಠಕದಲ್ಲಿ ‘ಹನಿ ಹನಿ’ಯಲ್ಲಿ ಬಂದಂತ ನನ್ನ ಹನಿಗಳು…..

ಸತ್ತು ಹೋದ
ಸಂಬಂಧವ
ನೆನೆಯೋದ್ಯಾಕೆ ಅಂತಿರಾ?
ಸತ್ತವರು
ಬದುಕಿ ಬಂದ
ಪವಾಡಗಳಿವೆ ನಂಬ್ತೀರಾ?
—————————

ಆಕಳಿಕೆ ಬಂದಾಗಲೆಲ್ಲ
ಯಾರೋ ನೆನಪಿಸಿಕೊಂಡರು
ಅಂತಾರೆ…
ಅಯ್ಯೋ.. ನಿಂಗಂತೂ
ದಿನವಿಡೀ ಆಕಳಿಸೋದೇ
ಹಂಗಾರೆ

—————————

ನಿನ್ನೇ ನಾನ್ಯಾಕೆ ಆರಿಸಿದ್ದು
ಅಂತ ಕೇಳಿದ್ದೆ ನೀನೊಮ್ಮೆ
ಈಗ ನಿನ್ನ ನೆನಪಾದಾಗಲೆಲ್ಲ
ನನ್ನೇ ನಾ ಕೇಳೋದು ಅದನ್ನೇ

———————

ನಮ್ಮ ಪ್ರೀತಿಯ ಕೊಲೆಗಾರಳು
ನೀನೇ ಆದರೂ
ನನಗೇಕೆ
ನಿನ್ನ ನೆನಪಲಿ ನರಳುವ
ಜೀವಾವಧಿ ಶಿಕ್ಷೆ?

ಪ್ರಶಾಂತ ಕೊಳದ ಮೇಲೆ

ಕಲ್ಲು ಚಿಮ್ಮಿಸಿ

ಅದು ಕುಪ್ಪಳಿಸುವುದ ಕಂಡು

ಖುಷಿಪಡುವವರಿಗೆ

ಕೇಳಿಸಿದರೂ ಅರ್ಥವಾದೀತೇ….

ಕೊಳದ ಆಂತರ್ಯದಲಿ

ಉದ್ಭವಿಸುವ ತಳಮಳಗಳು…

ಅಲೆಅಲೆಯಾಗಿ ದಡಕ್ಕಪ್ಪಳಿಸುವ

ನಿಟ್ಟುಸಿರಿನಂತಹ ನಿರರ್ಥಕ ಸದ್ದುಗಳು…

ನಂಗೆ ಗೊತ್ತೇ ಇರ್ಲಿಲ್ಲ ಕಣ್ರಿ…

ನಾನು ಬ್ಲಾಗು ಶುರು ಮಾಡಿದ ಸ್ವಲ್ಪ ದಿನದಲ್ಲೇ ನನ್ನ ಬ್ಲಾಗು ಮನಸಿನ ಮರ್ಮರ ಕನ್ನಡ ಪ್ರಭದ ನೆಟ್ ವರ್ಶನ್ ನಲ್ಲಿ ಕಾಣಿಸಿಕೊಂಡಿತ್ತು. ಕುಂದಾಪ್ರ ಕನ್ನಡ ಬ್ಲಾಗು ಆಗಷ್ಟ್ ನಲ್ಲಿ ಸಾಪ್ತಾಹಿಕದ ಬ್ಲಾಗ್ ಬುಟ್ಟಿಲಿ ಬಂದಿತ್ತು… ಎರಡಕ್ಕೂ ಸೇರಿಸಿ ಒಂದು ಧನ್ಯವಾದ ಹೇಳ್ತೇನೆ ಆಗ್ದಾ..?

ಮನಸಿನ ಮರ್ಮರ

http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20080417102531&nDate=4/17/2008

ಕುಂದಾಪ್ರ ಕನ್ನಡ

http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20080823050346&nDate=