ಬ್ಲಾಗ್ ಪರ್ಸನಲ್ ಡೈರಿಯಾ?… ಒಂದು ಅನಿಸಿಕೆ

Posted: ಅಕ್ಟೋಬರ್ 3, 2008 in ನೆನಪುಗಳ ಮಾತು ಮಧುರ..
ಟ್ಯಾಗ್ ಗಳು:,

ಕನಸಿನರಮನೆ ಬ್ಲಾಗಿನಲ್ಲಿ ನಟೇಶ್ ಬಾಬುರವರು ತೋಚಿದಂತೆ ಗೀಚಲು ಬ್ಲಾಗ್ ಏನು ಪರ್ಸನಲ್ ಡೈರಿಯಾ ಅಂತ ಪ್ರಶ್ನೆ ಕೇಳಿದ್ದಾರೆ. ಈ ಕುರಿತು ನನಗೆ ತೋಚಿದ ಒಂದಿಷ್ಟು ಇಲ್ಲಿ ಗೀಚಿದ್ದೇನೆ. ಒಪ್ಪಿಸಿಕೊಳ್ಳಿ.

 

ನಾನಂತೂ ಹೆಚ್ಚು ಕಡಿಮೆ ಹಾಗೇ ಬರೆಯುವವನು. ತೋಚಿದ್ದು ಗೀಚಿದ್ದೇ ಹೆಚ್ಚು. ನನಗೆ ಆಸಕ್ತಿ ಹುಟ್ಟಿಸಿದ ಪ್ರತಿಯೊಂದರ ಬಗ್ಗೆ.. ನನಗೆ ತಿಳಿದಿದ್ದನ್ನು ಹಂಚಿಕೊಳ್ಳುವಂತೆ ಬರೆದಿದ್ದೇನೆ. ನಿಮ್ಮ ಪ್ರಕಾರ ತುಂಬಾ ಗಂಭೀರವಾಗಿ ಸಾಮಾನ್ಯರಿಗೆ ಅರ್ಥವೇ ಆಗದ ಹಾಗೆ ( ಕೆಲವೊಮ್ಮೆ ಬರೆದ ಅವರಿಗೂ ಅರ್ಥ ಆಗಿರೋದು ಅಷ್ಟರಲ್ಲೆ ಇದೆ ಬಿಡಿ) ಬರೆಯೋರಷ್ಟೇ… ಬ್ಲಾಗ್‌ನಲ್ಲಿ ಬರೆಯಬೇಕಾ? ವಿಷಯ ವೈವಿಧ್ಯ ಇರಬೇಕು. ಒಪ್ಪಿಕೊಳ್ಳೋಣ. ಆದ್ರೆ ಭಾವನೆಗಳು, ನೆನಪುಗಳು, ಕನಸು, ಕನವರಿಕೆಗಳು ಇವುಗಳಲ್ಲಿ ವೈವಿಧ್ಯ, ಮಾಹಿತಿ, ಅನುಭವ , ಜ್ಞಾನ ಇಲ್ಲ ಅಂತ ನಿಮ್ಮ ಅಭಿಪ್ರಾಯಾನಾ?

 

ಈಗ ನೀವು ಹೇಳಿರುವ ವಿಷಯಗಳನ್ನೇ ನೋಡೋಣ. ಬ್ಲಾಗು ಅಪ್‌ಡೇಟ್ ಮಾಡಲು ಸಮಯವಿಲ್ಲದವರು ಬ್ಲಾಗಿಗೆ ಬೀಗ ಹಾಕಬೇಕೆನ್ನುತ್ತೀರಿ. ಎಲ್ಲರಿಗೂ ದಿನಾ ಅಥವ ವಾರಕ್ಕೊಂದು ಸಲ ಬ್ಲಾಗ್ ಬರೆಯಲು ಪುರುಸೊತ್ತು ಸಿಗಬೇಕೆಂದೇನಿಲ್ಲವಲ್ಲ. ಸಮಯ ಸಿಕ್ಕಾಗ ಬರೆಯುವ ಉತ್ಸಾಹ ಬಂದಾಗ ಬರೆಯುವುದು ಯಾವ ರೀತಿಯಲ್ಲಿ ತಪ್ಪು? ಇಂತಾ ದಿನವೇ ಇಂತಿಷ್ಟು ದಿನಕ್ಕೇ ಬ್ಲಾಗ್ ಉಪ್‌ಡೇಟ್ ಆಗಲು ಅವೇನು ನಿಯತಕಾಲಿಕಗಳಲ್ಲಿ ಬರುವ ಅಂಕಣಗಳೆನಲ್ಲ.

 

ಅಷ್ಟಕ್ಕೂ ಕನ್ನಡದಲ್ಲಿ ವಿಷಯ ವೈವಿಧ್ಯವಿರುವ ಅನೇಕ ಒಳ್ಳೆಯ ಬ್ಲಾಗುಗಳಿವೆ. ಸ್ವಲ್ಪ ಹುಡುಕಿ ನೋಡಿ. ಒಂದೆರಡು ಉದಾಹರಣೆ ಹೇಳಬೇಕಂದ್ರೆ ಚೇತನ ತೀರ್ಥಹಳ್ಳಿ , ಸಂದೀಪ್ ಕಾಮತ್ ಅವರ ಕಡಲತೀರ, ನಾವುಡರ ಚೆಂಡೆಮದ್ದಳೆ, ಸುಧನ್ವ ಬ್ಲಾಗ್ – ಚಂಪಕಾವತಿ, ನಗೆ ಬರಹಗಳ ನಗೆನಗಾರಿ, ರಾಜೇಶ್ ನಾಯ್ಕ್ ಅವರ ಅಲೆಮಾರಿ, ವೇಣುವಿನೋದ್ ಅವರ ಮಂಜು ಮುಸುಕಿದ ದಾರಿಯಲ್ಲಿ, ವಿಕಾಸವಾದ, ಪ್ರಮೋದ್ ಅವರ ಕುಂಚ ಪ್ರಪಂಚ… ಹೀಗೆ ಪಟ್ಟಿ ಮಾಡುತ್ತಾ ಹೋದ್ರೆ ಬಹಳ ಬಹಳ ವೈವಿಧ್ಯ ಇರುವ ಕನಿಷ್ಟ ನೂರಾದರೂ ಬ್ಲಾಗ್ ನಿಮಗೆ ಸಿಕ್ಕೇ ಸಿಗುತ್ತೆ. ಹುಡುಕುವ ತಾಳ್ಮೆ ಬೇಕಷ್ಟೇ. ಇಲ್ಲಿ ಕೊಟ್ಟಿರೋದು ನಾನು ಓದುವ ನಾನಿಷ್ಟದ ಬ್ಲಾಗ್‌ಗಳಲ್ಲಿ ಕೆಲವು ಬ್ಲಾಗ್‌ಗಳ ಉದಾಹರಣೆ ಮಾತ್ರ… ಇನ್ನು ನನ್ನ ಕಣ್ಣಿಗೆ ಬೀಳದ ಅದೆಷ್ಟೋ ಒಳ್ಳೆಯ ಬ್ಲಾಗ್‌ಗಳು ಇರಬಹುದು ಅಲ್ವೆ?

 

ನನಗನ್ನಿಸುವ ಪ್ರಕಾರ ಬರೆಯುವ ಆಸಕ್ತಿ ಇದ್ದೂ ಅವಕಾಶ ಸಿಗದೆಯೋ ಇನ್ಯಾವ ಕಾರಣಕ್ಕೋ ಬರವಣಿಗೆ ಮುಂದುವರಿಸಲು ಸಾಧ್ಯವಾಗದ ಅನೇಕರಿಗೆ ತಮ್ಮ ಅನಿಸಿಕೆ, ವಿಚಾರ, ಚಿಂತನೆ, ಭಾವನೆಗಳ ಅಭಿವ್ಯಕ್ತಿಗೆ ಬ್ಲಾಗ್‌ಪ್ರಪಂಚ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಇನ್ನೊಬ್ಬರ ಮನಸ್ಸಿಗೆ ವಿನಾಕಾರಣ ನೋವಾಗುವಂತಹ ಬರಹಗಳನ್ನು ಬರೆಯಬಾರದು. ಅದು ಬಿಟ್ಟರೆ ಮಾಹಿತಿ, ಕನಸು, ನೆನಪು, ಕತೆ, ವಿಚಾರ, ಹನಿ, ಚರ್ಚೆ… ಹೀಗೆ ಏನು ಬೇಕಾದ್ರೂ ಬರೆಯಬಹುದು ಅನ್ನೋದು ನನ್ನ ಅನಿಸಿಕೆ. ಚೆನ್ನಾಗಿದ್ರೆ ಓದ್ತಾರೆ. ಆದ್ರೆ ಚೆನ್ನಾಗಿರೋದೆ ಬರೆಯುವ ಪ್ರಯತ್ನ, ಹುಮ್ಮಸ್ಸು ಇದ್ದರೆ ಸಾಕು. ನನ್ನ ಅಭಿಪ್ರಾಯ ಸರಿ ಅಂತ ನಾನು ವಾದ ಮಾಡ್ತಾ ಇಲ್ಲ. ಯಾಕೆಂದ್ರೆ ಎಷ್ಟೇ ಆದ್ರೂ ನಾನೂ ಒಬ್ಬ ತೋಚಿದ್ದು ಗೀಚುವವನು…ಇಲ್ಲಿ ಮಾಡಿದ್ದೂ ಅದನ್ನೇ. ಇದನ್ನು ಬ್ಲಾಗ್ ಬರಹವೆಂದು ಒಪ್ಪಿಕೊಳ್ಳಲೇಬೇಕೆಂಬ ಯಾವ ಒತ್ತಾಯವೂ ಇಲ್ಲ ಬಿಡಿ.  

ಟಿಪ್ಪಣಿಗಳು
 1. Chitra karkera ಹೇಳುತ್ತಾರೆ:

  ನಾನೂ ನಿಮ್ ತರದೋಳೇ..ತೋಚಿದ್ದನ್ನು ಗೀಚೊಳು. ನಾವು ಬರೆದದ್ದು ಮತ್ತೊಬ್ರಿಗೆ ಇಷ್ಟವಾಗಬೇಕೆಂಬುದೇನಿಲ್ಲ..ನೋವಾಗದಿದ್ರೆ ಸಾಕು. ಒಂದು ರೀತೀಲಿ ಪರ್ಸನಲ್ ಡೈರಿಯೇ…ನಿಮ್ ಅನಿಸಿಕೆ ಸರಿನೇ ಇದೆ ಸರ್.
  -ಚಿತ್ರಾ

 2. ನವಿಲಗರಿ ಹೇಳುತ್ತಾರೆ:

  ನಮ್ ನಮ್ಮ ಭಾವನೆಗಳನ್ನ ನಾವಿಲ್ಲಿ ಬರಿತೀವಿ..ಇದೆಲ್ಲವನ್ನು ಯಾವ್ ಪೇಪರಿಗೆ ಅಂತ ಕಳಿಸೋದು? ತುಂಬ ದೊಡ್ ದೊಡ್ಡೋರು ಕೆಮ್ಮಿದ್ದು ಸೀನಿದ್ದು ನಕ್ಕಿದ್ದು ಅತ್ತಿದ್ದು ಎಲ್ಲದನ್ನು ಪೇಪರಿನಲ್ಲಿ ಹಾಕೋತಾರೆ..ನಮಗಂತ ಪುಣ್ಯ ಇಲ್ವೆ? ಇಲ್ಲಿ ಬರಿಯೋರೆಲ್ಲ ವರ್ಲ್ಡ್ ಪೇಮಸ್ಸು ಅಗಬೇಕು ಅಂತ ಉದ್ದೇಶದಿಂದೇನು ಬಂದಿರೋದಿಲ್ಲ..ಬರ್ದಿರೋದು ೪ ಜನರಿಗಿಷ್ಟವಾದರೇ ಅಷ್ಟೇ ಸಾಕಪ್ಪ…..

  ಬ್ಲಾಗಿಗಳನ್ನು …ಲೇಖಕರು ಕವಿಗಳು ಸಾಹಿತಿಗಳು ಅನ್ನಲಿಕ್ಕೆ ಹಳೆಯ ತಲೆಮಾರಿನವರಿಗೆ ಇಷ್ಟವಿಲ್ಲವ? ಬೇಡ ಬಿಡಿ …ನನ್ನ ಹಾಡು ನನ್ನದು ನನ್ನ ರಾಗ ನನ್ನದು…

 3. vijayraj ಹೇಳುತ್ತಾರೆ:

  ನನಗೆ ತೋಚಿದ ಅನಿಸಿಕೆಗೆ ನೀವು ಗೀಚಿದ ಉತ್ತರ ನೋಡಿ ಖುಷಿ ಆಯ್ತು.
  ಸಂದೀಪ್, ವಿಕಾಸ್, ನೀಲಿ ಹೂವು, ಲಕ್ಷ್ಮಿ, ಸತ್ಯ, ಪ್ರಮೋದ್, ತವಿಶ್ರೀ ಎಲ್ಲರಿಗೂ ದನ್ಯವಾದ.

  ಸಂದೀಪ್, ನೀವು ಹೇಳಿದ್ಡು ನೂರಕ್ಕೆ ನೂರು ಸತ್ಯ…

 4. ಸಂದೀಪ್ ಕಾಮತ್ ಹೇಳುತ್ತಾರೆ:

  ತುಂಬಾ ಒಳ್ಳೆಯ ಅನಿಸಿಕೆ.
  ನನ್ನ ಪ್ರಕಾರ ’ಸಧ್ಯದ ಪರಿಸ್ಥಿತಿಯಲ್ಲಿ’ ನಮಗೆ ತೋಚಿದ್ದನ್ನು ಬ್ಲಾಗ್ ನಲ್ಲಿ ಬರೀಬಹುದು ! ಆದ್ರೆ ಬಹು ಬೇಗ ಬ್ಲಾಗ್ ಗಳಿಗೂ ಕಡಿವಾಣವನ್ನು ಸರಕಾರ ತರುತ್ತದೆ .ಚೈನಾದಲ್ಲೆಲ್ಲ ಕೆಲವು ಸೈಟ್/ಬ್ಲಾಗ್ ಗಳನ್ನು ನೋಡೊ ಹಾಗೆ ಇಲ್ವಂತೆ.
  ಸಧ್ಯದ ಪರಿಸ್ಥಿತಿಯಲ್ಲಿ ಬ್ಲಾಗ್ ಓದೋರ ಸಂಖ್ಯೆ ಕಡಿಮೆ ಇದೆ ,ಹಾಗೆಯೇ ಬ್ಲಾಗ್ ನಿಂದಾಗಿ ಯಾವುದೇ ಅನಾಹುತಗಳಾಗಿಲ್ಲ ಆದ್ದರಿಂದ ಮನಸ್ಸಿಗೆ ತೋಚಿದ್ದು ಬರೀಬಹುದು .
  ಆದ್ರೆ ನಾಳೆ ಬ್ಲಾಗ್ ಲೋಕ ಪ್ರಸಿದ್ಧಿ ಹೊಂದಿ BSNL ನವ್ರು ಸ್ವಲ್ಪ ಶ್ರದ್ಧೆಯಿಂದ ಕಾರ್ಯ ನಿರ್ವಹಿಸ್ ಮನೆ ಮನೆಗೂ ಬೇಗ ಅಂತರ್ಜಾಲ ಸೌಲಭ್ಯ ಒದಗಿಸಿದ್ರೆ ಬ್ಲಾಗ್ ಗಳಿಂದ ಸ್ವಲ್ಪ ಎಡವಟ್ಟಾಗೋ ಸಾಧ್ಯತೆಗಳಿವೆ.
  ಸಂದೀಪ್ ಕಾಮತರ ’ಕಡಲ ತೀರ’ದಲ್ಲಿ ಧರ್ಮದ ಬಗ್ಗೆ ಬರೆದ ಲೇಖನ ಓದಿ ಮಂಗಳೂರಿನಲ್ಲಿ Mr Xhz ಅನ್ನೋರು ’ಒಂದು ಕೋಮಿನ ’ಪ್ರಾರ್ಥನಾ ಮಂದಿರಕ್ಕೆ ಕಲ್ಲೆಸೆದಿದ್ದ್ದಾರೆ! ಅನ್ನೊ ಸುದ್ದಿ ;
  ಅಥವಾ,
  ಬ್ಲಾಗೇಶ್ ರವರ ಬ್ಲಾಗ್ ಓದಿ ಯಾರೋ ಹುಡುಗಿ ಪಕ್ಕದ ಮನೆ ಅಂಕಲ್ ಜೊತೆ ಚೀನಿ ಕಮ್ ಶೈಲಿಯಲ್ಲಿ ಪ್ರೀತಿಸಿ ಓಡಿ ಹೋಗಿದ್ದಾಳೆ ಅನ್ನೋ ಸುದ್ದಿ ಪತ್ರಿಕೆಯಲ್ಲಿ ಬರೋ ತನಕ ನಾವು ’ತೋಚಿದ್ದು ’ ಗೀಚಬಹುದು.
  ಅದಾದ್ ಮೇಲೂ ತೋಚಿದ್ದು ಗೀಚ್ತೀನಿ ಅಂದ್ರೆ ಪರಪ್ಪನ ಅಗ್ರಹಾರ ನೋಡೊದಿಕ್ಕೆ ಒಂದು ಟಿಕೆಟ್ ರೆಡಿ ಮಾಡಿಟ್ಟಿರ್ಬೇಕು.
  ಪರ್ಸನಲ್ ಡೈರಿ ಕೂಡಾ ಪ್ರಾಮಾಣಿಕವದದ್ದು ಅಂತ ಅನ್ನಿಸಲ್ಲ ನಂಗೆ.’ನಾವು ಸತ್ತ ಮೇಲಾದ್ರೂ ನಮ್ಮ ಡೈರೀನ ಯಾರಾದ್ರೂ ಓದ್ತಾರೆ ಅಂತ ಗಮನದಲ್ಲಿಟ್ಟೇ ’ ಜನ ಡೈರಿ ಬರೀತಾರೆ ಅಂತ ನನ್ನ ಅನಿಸಿಕೆ. ನಿಜ ಏನು ಅಂತ ಡೈರಿ ಬರೆಯೋರೇ ಹೇಳ್ಬೇಕು!
  ಬ್ಲಾಗ್ ಬಿಡಿ ಪತ್ರಿಕೆಗಳಲ್ಲಿ ಬರೋದೆ ನಂಗೆ ಕೆಲವೊಂದು ಇಷ್ಟ ಆಗಲ್ಲ ಹಾಗಂತ ಬರೆದಿದ್ದೇ ತಪ್ಪು ಅನ್ನೋಕಾಗುತ್ತಾ??
  ಕೆಲವು ಪ್ರಖ್ಯಾತ ಕಥೆಗಾರರು ಬರೆಯೋ ಕಥೆಗಳಲ್ಲಿ ಬರೀ ಅನೈತಿಕತೆಯೇ ತುಂಬಿರುತ್ತೆ ಹಾಗಂತ ದೂರೋಕಾಗುತ್ತಾ?
  ನಟೆಶ್ ರವರದ್ದೆ ಬ್ಲಾಗ್ ತಗೊಳ್ಳಿ ’ಶಾವಿಗೆ ಜೋಕ್ ’ ಓದಿ ಈಗ ಊಟ ಸೇರೋದೆ ಸಂಶಯ ಆಗ್ತಿದೆ .ಹಾಗಂತ ಓದಿದ ಮೇಲೆ ಅವರನ್ನು ಬಯ್ಯೋಕಾಗುತ್ತಾ??

  ಹಂಸ ಕ್ಷೀರ ನ್ಯಾಯದ ಥರ ಇರ್ಬೇಕು ಚೆನ್ನಾಗಿದ್ರೆ ತಗೊಳ್ಳಿ ಇಲ್ಲಂದ್ರೆ ಮುಂದೆ ಹೋಗ್ತಾ ಇರಿ !ಅಷ್ಟಕ್ಕೂ ಬ್ಲಾಗ್ ಓದು ಬಿಟ್ಟಿ ತಾನೆ ?? ಬಿಟ್ಟಿ ಬೇಕು ಅದರಲ್ಲೂ ಎಲ್ಲಾ ಚೆನ್ನಾಗಿರ್ಬೇಕು ಅಂದ್ರೆ ಹೆಂಗೆ ಸ್ವಾಮಿ?

 5. ವಿಕಾಸ್ ಹೆಗಡೆ ಹೇಳುತ್ತಾರೆ:

  ಹೌದು, ಕೊನೆ ಪ್ಯಾರಾ ೧೦೦% ನಿಜ.

  ಏ ಬಿಡ್ರಿ ಆ ಬ್ಲಾಗ್ ಗಳಲ್ಲೇನಿರತ್ತೆ ಮಣ್ಣಾಂಗಟ್ಟಿ, ಏನೇನೋ ಬರ್ಕೋತಾರೆ ಎಂಬ ಅಭಿಪ್ರಾಯ ಎಲ್ಲರಿಗೂ ಬರೋದಿರೋ ಹಾಗೆ ಕನ್ನಡ ಬ್ಲಾಗುಗಳನ್ನು ಕಾಪಾಡಿಕೊಳ್ಳಬೇಕು ಅಂತ ನನಗನಿಸುತ್ತೆ. ಆದ್ರೆ ಅದರ ಜೊತೆಗೆ ಈ ಬ್ಲಾಗ್ ಅನ್ನೋದು ಪ್ರತಿಭೆಗಳಿಗೆ ಒಂದು ವೇದಿಕೆಯಾದ್ರೆ ಇನ್ನೂ ಖುಷಿ ಅಲ್ವಾ?

 6. Satya ಹೇಳುತ್ತಾರೆ:

  Super sir what you written is absolutely correct. Blog thumba fill maduvudakintha yava vishayagalinda fill madutheve annodu bahala mukhya.

 7. Pramod ಹೇಳುತ್ತಾರೆ:

  ಕನ್ನಡ ಬ್ಲಾಗ್ಸ್ ಹುಡುಕಲು ಬಲು ಕಷ್ಟ ಏನಿಲ್ಲ.
  http://kn.wordpress.com/
  ಈ ಲಿ೦ಕ್ ನಲ್ಲಿ ಆಗಾಗ ಪ್ರತಿದಿನದ ಬ್ಲಾಗ್ಸ್ ಸಿಗುತ್ತವೆ. 🙂
  ಕನ್ನಡದಲ್ಲೇ ಹುಡ್ಕೋಬೇಕು ಅನ್ಕೊ೦ಡ್ರೆ http://www.kannadasearch.com/ ಇದೆ.

  ತೋಚಿದ್ದು ಗೀಚುವುದರಿ೦ದ, ವೈವಿಧ್ಯಮಯ ಬ್ಲಾಗ್ಸ್ ಇರಲು ಸಾಧ್ಯ

 8. ತವಿಶ್ರೀ ಹೇಳುತ್ತಾರೆ:

  ನನ್ನ ಅನಿಸಿಕೆಯಂತೆ ಮನದಲ್ಲಿ ಮೂಡಿದ ಚಿಂತನೆಯನ್ನು ತಕ್ಷಣ ಬರಹದಲ್ಲಿ ಇಡದಿದ್ದರೆ, ನಂತರ ಅದೇ ಚಿಂತನೆ ಬರುವುದು ಕಷ್ಟ – ಹಾಗಾಗಿ ಅದನ್ನು ಕರಡು ಪ್ರತಿಯಂತೆ ಒಂದೆಡೆ ಇಡುವುದು ಸರಿ. ಈಗೀಗ ಲೇಖನಿಯ ಬರಹ ಕಡಿಮೆ ಆಗಿ, ಕೀಲಿಮಣೆಯ ಬರಹವೇ ಹೆಚ್ಚಾಗಿ ರೂಢಿಯಾಗುತ್ತಿದೆ. ಇಷ್ಟಕ್ಕೂ ಬ್ಲಾಗ್ ಎಂಬುದು ನಮ್ಮ ಮನೆ ತಾನೆ! ಮನೆಯೊಳಗೆ ಇದೇ ರೀತಿಯಲ್ಲಿ ದಿರಿಸು ಧರಿಸಿರಬೇಕೆಂಬ ನಿಯಮವಿಲ್ಲ. ಹಾಗೇನಾದರೂ ಒಳ್ಲೆಯ ಬರಹ ಅನ್ನಿಸಿದರೆ, ಇ-ಪತ್ರಿಕೆಯಲ್ಲಿ ಪ್ರಕಟವಾಗಲಿ.

  ನಿಮ್ಮ ಅನಿಸಿಕೆ ಸರಿಯಿದೆಯೆಂದು ನನಗೆ ತೋರುತ್ತಿದೆ

  ಯಾರು ಓದಲಿ ಎಂದು ನಾನು ಬರೆಯುವುದಿಲ್ಲ
  ಬರೆಯುವುದು ಅನಿವಾರ್ಯ ಕರ್ಮ ಎನಗೆ (ಕವಿವರೇಣ್ಯರ ಕ್ಷಮೆ ಕೋರಿ ನಕಲಿಸುತ್ತಿರುವೆ)

  ಗುರುದೇವ ದಯಾ ಕರೊ ದೀನ ಜನೆ

 9. Lakshmi Shashidhar ಹೇಳುತ್ತಾರೆ:

  nija, blog ondu tharaa personal diary ne….neevu heLidante bhaavanegaLa abhivyaktige ondu oLLe vEdike.

 10. neelihoovu ಹೇಳುತ್ತಾರೆ:

  ಸರ್,
  ಬಹಳ ಚೆನ್ನಾಗಿ ಹೇಳಿದಿರಿ.
  ನನ್ನಲ್ಲೂ ತುಂಬಾ ಗೊಂದಲಗಳಿದ್ದವು. ಭಾವುಕ ಸಾಹಿತ್ಯವೆಲ್ಲಾ ನಿಷ್ಪ್ರಯೋಜಕವಾ ಅಂತ ಅನುಮಾನ ಪಟ್ಟು ಬರಹಗಳಿಗೆ ಸ್ವಲ್ಪ ಬ್ರೇಕ್ ನೀಡಿದ್ದೆ. ಈಗ ಗೊಂದಲಗಳೆಲ್ಲವೂ ತೊಡೆದು ಹೋದವು ಬಿಡಿ.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s