Archive for ಅಕ್ಟೋಬರ್ 7, 2008

ಪ್ರಶಾಂತ ಕೊಳದ ಮೇಲೆ

ಕಲ್ಲು ಚಿಮ್ಮಿಸಿ

ಅದು ಕುಪ್ಪಳಿಸುವುದ ಕಂಡು

ಖುಷಿಪಡುವವರಿಗೆ

ಕೇಳಿಸಿದರೂ ಅರ್ಥವಾದೀತೇ….

ಕೊಳದ ಆಂತರ್ಯದಲಿ

ಉದ್ಭವಿಸುವ ತಳಮಳಗಳು…

ಅಲೆಅಲೆಯಾಗಿ ದಡಕ್ಕಪ್ಪಳಿಸುವ

ನಿಟ್ಟುಸಿರಿನಂತಹ ನಿರರ್ಥಕ ಸದ್ದುಗಳು…