ಹನಿ ಹನಿ ಸೇರಿ ಸಾಗರವಾಗಿ….

Posted: ಅಕ್ಟೋಬರ್ 16, 2008 in ಮನಸಿನ ಹಾಡು
ಟ್ಯಾಗ್ ಗಳು:

ಇವೆಲ್ಲವೂ ಇವತ್ತಿನ(16 ಅಕ್ಟೋಬರ್) ವಿಜಯಕರ್ನಾಠಕದಲ್ಲಿ ‘ಹನಿ ಹನಿ’ಯಲ್ಲಿ ಬಂದಂತ ನನ್ನ ಹನಿಗಳು…..

ಸತ್ತು ಹೋದ
ಸಂಬಂಧವ
ನೆನೆಯೋದ್ಯಾಕೆ ಅಂತಿರಾ?
ಸತ್ತವರು
ಬದುಕಿ ಬಂದ
ಪವಾಡಗಳಿವೆ ನಂಬ್ತೀರಾ?
—————————

ಆಕಳಿಕೆ ಬಂದಾಗಲೆಲ್ಲ
ಯಾರೋ ನೆನಪಿಸಿಕೊಂಡರು
ಅಂತಾರೆ…
ಅಯ್ಯೋ.. ನಿಂಗಂತೂ
ದಿನವಿಡೀ ಆಕಳಿಸೋದೇ
ಹಂಗಾರೆ

—————————

ನಿನ್ನೇ ನಾನ್ಯಾಕೆ ಆರಿಸಿದ್ದು
ಅಂತ ಕೇಳಿದ್ದೆ ನೀನೊಮ್ಮೆ
ಈಗ ನಿನ್ನ ನೆನಪಾದಾಗಲೆಲ್ಲ
ನನ್ನೇ ನಾ ಕೇಳೋದು ಅದನ್ನೇ

———————

ನಮ್ಮ ಪ್ರೀತಿಯ ಕೊಲೆಗಾರಳು
ನೀನೇ ಆದರೂ
ನನಗೇಕೆ
ನಿನ್ನ ನೆನಪಲಿ ನರಳುವ
ಜೀವಾವಧಿ ಶಿಕ್ಷೆ?

ಟಿಪ್ಪಣಿಗಳು
 1. prakavi ಹೇಳುತ್ತಾರೆ:

  “ನಿನ್ನೇ ನಾನ್ಯಾಕೆ ಆರಿಸಿದ್ದು
  ಅಂತ ಕೇಳಿದ್ದೆ ನೀನೊಮ್ಮೆ
  ಈಗ ನಿನ್ನ ನೆನಪಾದಾಗಲೆಲ್ಲ
  ನನ್ನೇ ನಾ ಕೇಳೋದು ಅದನ್ನೇ”

  ನಿಮ್ಮ ಈ ಕವಿತೆಯು ಮನಸ್ಸನ್ನು ತಟ್ಟಿದೆ! ಇದರಲ್ಲಿ, ಹಾಸ್ಯ, ನೋವು ಎರಡು ಬೆರೆತಂತೆ ತೋರುತ್ತಿದೆ! 🙂

 2. neelihoovu ಹೇಳುತ್ತಾರೆ:

  ನಮ್ಮ ಪ್ರೀತಿಯ ಕೊಲೆಗಾರಳು
  ನೀನೇ ಆದರೂ
  ನನಗೇಕೆ
  ನಿನ್ನ ನೆನಪಲಿ ನರಳುವ
  ಜೀವಾವಧಿ ಶಿಕ್ಷೆ?

  ಇದು ಚೆನ್ನಾಗಿದೆ.. ವಿ.ಕ. ಓದಲಾಗದ ನಮಗೆ ನಿಮ್ಮ ಬ್ಲಾಗಿಗೆ ಹಾಕಿದ್ದು ಇಷ್ಟವಾಯಿತು..

 3. ಗುರುಪ್ರಸಾದ ಸಿ. ಎಂ ಹೇಳುತ್ತಾರೆ:

  ಕಳೆದು ಹೋದದನ್ನು ಅಳೆದಳೆದು ನೆನವುದೇಕೆ? ಯಾಕೆಂದರೆ ನಿಮ್ಮ ನೆನಪಿನಲ್ಲಿ ಮರುಕಳುಹಿಸುವುದು ನಮ್ಮ ನೆನಪುಗಳು!
  ಏನೆ ಆಗಲಿ ನಿಮ್ಮ ಹನಿಗವಿತೆಗಳು ನಮಗೆ ಬಹಳಷ್ಟು ಹಿಡಿಸಿದೆ

 4. ಭಾಗ್ವತ್ರು ಹೇಳುತ್ತಾರೆ:

  “ನಿನ್ನ ನೆನಪಲಿ ನರಳುವ
  ಜೀವಾವಧಿ ಶಿಕ್ಷೆ?”

  ನಾನ್ ಅವತ್ತೇ ಅಂದ್ಕಂಡೆ, ನಮ್ ಕನ್ನಂತ್ರಿಗೆ ಯಾರೋ ಕೈ ಕೊಟ್ಟಿರ್ ಇರ್ಕ್ ಅಂತ:-) ಅಲ್ಲ, ಇಂಥಾ ಗನಾ ಮಾಣಿಗೆ ಕೈ ಕೊಡುದ್ ಅಂದ್ರೆ!!!! 🙂 ಹೋಯ್, ನೀವೆಂತ ಮಂಡೆಬಿಸಿ ಮಾಡ್ಕಂಬೇಡಿ, ಅಕಾ?

 5. saagari ಹೇಳುತ್ತಾರೆ:

  naanu paper nalli odidde. tumbaa ishta aagittu. adu neeve anta ivatt gottaaytu.

  ನಮ್ಮ ಪ್ರೀತಿಯ ಕೊಲೆಗಾರಳು
  ನೀನೇ ಆದರೂ
  ನನಗೇಕೆ
  ನಿನ್ನ ನೆನಪಲಿ ನರಳುವ
  ಜೀವಾವಧಿ ಶಿಕ್ಷೆ?

  idu nanna favourite hani. baritaa iri.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s