‘ಮಾಲ್ಗುಡಿ ಡೇಸ್’ ಸಿ.ಡಿ. ಸಿಗುತ್ತೆ ಗೊತ್ತಾ?

Posted: ಅಕ್ಟೋಬರ್ 21, 2008 in ನೆನಪುಗಳ ಮಾತು ಮಧುರ..
ಟ್ಯಾಗ್ ಗಳು:, , ,

ನಿಮ್ಮಲ್ಲಿ ಎಷ್ಟು ಜನ ಮಾಲ್ಗುಡಿ ಡೇಸ್ ನೋಡಿದ್ದೀರೋ ಗೊತ್ತಿಲ್ಲ. ನಾನು ಸಣ್ಣವನಿರುವಾಗ (ಬೆಂಗಳೂರು ಭಾಷೆಯಲ್ಲಿ ಹೇಳ್ಬೇಕು ಅಂದ್ರೆ ಚಿಕ್ಕೋನಾಗಿದ್ದಾಗ) ಮಾಲ್ಗುಡಿ ಡೇಸ್ ದೂರದರ್ಶನದಲ್ಲಿ ನೋಡಿದ್ದು ಮಸುಕು ಮಸುಕಾಗಿ ನೆನಪಲ್ಲಿ ಉಳಿದಿದೆ. ದಿ| ಶಂಕರ್‌ನಾಗ್ ನಿರ್ದೇಶನದಲ್ಲಿ ಮೂಡಿಬಂದ ಈ ಧಾರಾವಾಹಿ ಆರ್.ಕೆ.ನಾರಾಯಣ್ ಅವರ ಕೃತಿಯನ್ನಾಧರಿಸಿ ತಯಾರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಶಂಕರ್‌ನಾಗ್ ಪ್ರತಿಭೆಯ ಅತ್ಯುತ್ತಮ ಅಭಿವ್ಯಕ್ತಿಗೆ ಒಂದು ನಿದರ್ಶನ.

 

ಮಾಲ್ಗುಡಿ ಡೇಸ್ ನೋಡೋದನ್ನು ತಪ್ಪಿಸಿಕೊಂಡವರಿಗೆ ಮತ್ತು ಅದನ್ನು ನೋಡಿ ಮತ್ತೊಮ್ಮೆ ಮೆಲುಕು ಹಾಕಿ ಸವಿಯಲು ಬಯಸುವವರಿಗೆ ಒಂದು ಸಿಹಿ ಸುದ್ದಿ. ಅದರ ಎಲ್ಲಾ ಎಪಿಸೋಡುಗಳ ಸಿ.ಡಿ.ಗಳು ಈಗ ಲಭ್ಯ. ಒಟ್ಟು ಎಂಟು ಸಂಪುಟ, ಹದಿನೆಂಟು ಸಿ.ಡಿ.ಯಲ್ಲಿ ಲಭ್ಯವಿರುವ 54 ಭಾಗಗಳ ಈ ಸಂಪುಟಗಳ ಒಟ್ಟು ಬೆಲೆ 612 ರೂಪಾಯಿ. ತೀರಾ ಬೇಜಾರೆನ್ನಿಸಿದಾಗಲೋ ಅಥವಾ ದಿನಕ್ಕೊಂದು ಭಾಗದಂತೆ ನೋಡ್ತೀರಿ ಅಂದ್ರೂ ಭರ್ತಿ ಎರಡು-ಮೂರು ತಿಂಗಳಿಗಾಗೋ ಸರಕು. ಅಲ್ಲದೆ ಅದನ್ನು ನೋಡಿದಾಗ ಸಿಕ್ಕುವ ಖುಶಿಗೆ ಬೆಲೆಕಟ್ಟೋಕೆ ನಂಗಂತೂ ಸಾಧ್ಯವಾಗಲ್ಲ. ನಾನಂತೂ ಈಗಾಗ್ಲೆ ಹತ್ತು ಎಪಿಸೋಡನ್ನು ಗುಳುಂ ಸ್ವಾಹಾ ಮಾಡಿ ಮುಂದಿನ ಭಾಗ ಯಾವಾಗ ನೋಡೋದು ಅನ್ನೋ ಲೆಕ್ಕಾಚಾರದಲ್ಲಿ ಇದ್ದೇನೆ. ಮತ್ಯಾಕೆ ತಡ? ಹತ್ತಿರದ ಸಿ.ಡಿ. ಅಂಗಡಿಯನ್ನೊಮ್ಮೆ ಜಾಲಾಡಿ ಬನ್ನಿ… ಭಿನ್ನವಾದ ಲೋಕವೊಂದರಲ್ಲಿ ಕಳೆದು ಹೋಗೋಕೆ ಸಿದ್ಧತೆ ಮಾಡಿಕೊಳ್ಳಿ. ಇಷ್ಟೊಳ್ಳೆಯ ಸಂಗ್ರಹವವನ್ನು ಯೋಗ್ಯ ಬೆಲೆಯಲ್ಲಿ ಒದಗಿಸಿ ಕೊಟ್ಟ ಬಿಗ್ ಹೋಮ್ ವಿಡಿಯೋಕ್ಕೆ ಒಂದು ಧನ್ಯವಾದ ನನ್ನ ಪರವಾಗಿ…ನಿಮ್ಮೆಲ್ಲರ ಪರವಾಗಿ… ಹಾಗೆ ಇಷ್ಟೊಳ್ಳೆ ಕೃತಿ ಬರೆದ ಆರ್.ಕೆ.ನಾರಾಯಣ್, ಅದನ್ನು ಅದ್ಭುತವಾಗಿ ದೃಶ್ಯಮಾಧ್ಯಮಕ್ಕೆ ತಂದ ಶಂಕರ್‌ನಾಗ್‌ಗೂ ಕೂಡಾ ಒಂದು ದೊಡ್ಡ ಥ್ಯಾಂಕ್ಸು….

ಟಿಪ್ಪಣಿಗಳು
 1. ಶಿಶಿರ ಕನ್ನಂತ ಹೇಳುತ್ತಾರೆ:

  i can source u full series 6GB

 2. Yogeesha Adiga ಹೇಳುತ್ತಾರೆ:

  naanu cinema dalli swalpa weeku… ondu prashne… ashtolle actor matte cinema ge natanaagi barlillya???

 3. chetana chaitanya ಹೇಳುತ್ತಾರೆ:

  OhO gottu…
  monne innU miThaivala Jaganna episode nODide CD li 🙂

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  pramod,

  Thanks for the info…..

  Sandeep,

  nangoo master manju amdre thumbaa ishta…

  ava(n)ru eega Kheni ya Nice project nalli yeno officer aagiddare… recently Suvarna chanel reality show nalli avru bandidru

 5. ಸಂದೀಪ್ ಕಾಮತ್ ಹೇಳುತ್ತಾರೆ:

  ನಂಗೆ ಮಾಸ್ಟರ್ ಮಂಜುನಾಥ್ ಅಂದ್ರೆ ತುಂಬಾ ಇಷ್ಟ 🙂

 6. Pramod ಹೇಳುತ್ತಾರೆ:

  ಫ್ರೀಯಾಗಿ ನೋಡ್ಬೆಕು ಅ೦ತಾ೦ದ್ರೆ ಇಲ್ಲಿದೆ ಲಿ೦ಕು, streaming ಸ್ಪೀಡು ಜಾಸ್ತಿ ಬೇಕಷ್ಟೆ 🙂
  http://www.veoh.com/channels/malgudidays

  http://in.youtube.com/results?search_query=malgudi+days&page=1 ( 39 episodes )
  ಆದಿತ್ಯವಾರ(ಬೆ೦ಗಳೂರಿನ ಭಾನುವಾರ) ಬೆಳಗ್ಗೆ Colorsಲ್ಲಿ ‘Malgudi days marathon’ ಬರ್ತಾ ಇದೆ 🙂

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s