ಆರಂಭ ಶೂರತ್ವ ಅಲ್ಲವೇ ಅಲ್ಲ ಅನ್ನುವ ಭರವಸೆ ಕೊಡುತ್ತಾ…

Posted: ನವೆಂಬರ್ 28, 2008 in ಹಾಗೆ ಸುಮ್ಮನೆ

ಮೊದಲನೆಯದಾಗಿ ಮುಂಬೈನಲ್ಲಿ ಮಡಿದ ಆತ್ಮಗಳಿಗೊಂದು ಮೌನ ನಮನ. ಯಾರ ಮೇಲಿನದೋ ಜಿದ್ದಿಗೆ, ಯಾವುದೋ ಹತಾಶೆಗೆ ಇನ್ಯಾರನ್ನೋ ಬಲಿ ತೆಗೆದುಕೊಳ್ಳುವ ಭಯೋತ್ಪಾದಕನೆಂಬ ಹುಂಬನೆ ನಿನಗೊಂದು ದೊಡ್ಡ ನಮಸ್ಕಾರ… ದೂರದಿಂದಲೇ…

 

ಯಾಕೋ ಈ ತಿಂಗಳು ಲೇಖನಿ ಅಷ್ಟಾಗಿ ಓಡಲೇ ಇಲ್ಲ. ತೆಂಡುಲ್ಕರ್ ತರಹ ನಂಗೂ ವಯಸ್ಸಾಗ್ತಾ ಬಂತಾ ಅಂತ

ಆದ್ರೆ ಒಂದು ಸಮಾಧಾನ ಅಂದ್ರೆ ಅವನ ತರಹ ನೀನು ರೆಟೈರಾಗು ಸಾಕು ಅಂತ ಉಪದೇಶ ಮಾಡೋರು ಯಾರೂ ಇಲ್ಲ ಬಿಡಿ.

 

ಈ ತಿಂಗಳು ಬರೆದದ್ದು ಕಡಿಮೆ ಆದ್ರೂ ಓದಿದ್ದು ಸ್ವಲ್ಪ ಜಾಸ್ತೀನೆ… ಪುಸ್ತಕ ಸಂತೆಯಲ್ಲಿ, ಅಂಕಿತದಲ್ಲಿ ಕೊಂಡ ಪುಸ್ತಕಗಳೆಲ್ಲ ಮುಗಿದು, ಅಗ್ನಿ ಶ್ರೀಧರ್, ಬೆಳಗೆರೆಯ ಕೆಲವು ಪುಸ್ತಕಗಳ ಮರು ಓದೂ ಮುಗಿತು. ಅದ್ರಲ್ಲಿ ಬೆಳಗೆರೆ ಕನ್ನಡಾನುವಾದ ಮಾಡಿರೋ ಟೈಮ್ಪಾಸ್ ಅನ್ನೋ ಪ್ರೋತಿಮಾ ಬೇಡಿಯ ಜೀವನ ಚರಿತ್ರೆಯ ಪುಸ್ತಕ ಪರಿಚಯ.., ಮತ್ತೊಂದೆರಡು ಹನಿಗಳು, ಇನ್ನೊಂದು ಸರ್ಪ್ರೈಸ್ ಲೇಖನ ಇವೆಲ್ಲ ಡಿಸೆಂಬರ್ ಮೊದಲಲ್ಲಿ ಬರೀಲೇ ಬೇಕು ಅಂದ್ಕೊಂಡಿರೋ ಕೆಲ ಲೇಖನಗಳ ಪಟ್ಟಿ… ಅದಕ್ಕೆ ಹೊಸದಾಗಿ ಪಟ್ಟಿಯ ಮೊದಲಲ್ಲಿ ಸೇರಿಕೊಂಡಿದೆ ಭಯೋತ್ಪಾದನೆಯ ಕರಿನೆರಳಿನ ಕುರಿತು ಒಂದು ಮನಸ್ಸಿನ ದುಗುಡಗಳನ್ನು ಹೊರಚೆಲ್ಲುವ ಒಂದು ಬರಹ. ಇವತ್ತೇ ಬರೀಬೇಕು ಅಂದ್ಕೊಂಡೆ.. ಆದ್ರೆ ಬರೆಯೋಕೆ ಕೂತ್ರೆ ಟಿ.ವಿ. ಯ ದೃಶ್ಯಗಳೇ ಕಣ್ಮುಂದೆ ಬಂದಂತಾಗಿ ಬರೆಯೋಕೆ, ಮನಸ್ಸಿನಲ್ಲಿರೋದನ್ನೆಲ್ಲಾ ಹೊರಗೆಳೆಯೋಕೆ ಸಾಧ್ಯವಾಗ್ತಾ ಇಲ್ಲ.

 

ಇನ್ನು ಕುಂದಾಪ್ರ ಬ್ಲಾಗಲ್ಲೂ ಮುಂಚೆ ಭರವಸೆ ನೀಡಿದಂತೆ ಕನಿಷ್ಟ ವಾರಕ್ಕೊಂದು ಪೋಸ್ಟ್ ಮಾಡೋ ನಿರ್ಧಾರ ಮಾಡಿದೀನಿ…

ಯಾಕಂದ್ರೆ ನಂದು ಆರಂಭಶೂರತ್ವವಾಯ್ತಾ ಅನ್ನೋ ಸಂಶಯ ನಂಗೇ ಬಂದ್ರೆ ಕಷ್ಟ ನೋಡಿ… ಹಾಗಾಗದು ಅನ್ನುವುದು ಭರವಸೆ.

ಟಿಪ್ಪಣಿಗಳು
  1. ನೀಲಾಂಜಲ ಹೇಳುತ್ತಾರೆ:

    ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

  2. ರಂಜಿತ್ ಹೇಳುತ್ತಾರೆ:

    ಮತ್ತಷ್ಟು ಸೆಂಚುರಿ ಹೊಡೆಯುವ ಇರಾದೆ ವ್ಯಕ್ತಪಡಿಸ್ತಿದ್ರೆ, ರಿಟೈರ್ ಆಗೊಕ್ಕೆ ಯಾರು ಹೇಳ್ತಾರೆ…

    ನಮ್ಮ ಮನದ ಟ್ರೋಫಿ ಗೆಲ್ಲಲು ಇನ್ನೂ ಬಹಳ ಸ್ಕೋರುಗಳು, ಸೆಂಚುರಿಗಳು ಬರಬೇಕು ಅಂತ (ಇನ್ನಷ್ಟು ಬರೀರಿ ಎಂಬಾಸೆಯಿಂದ) ಕೆಣಕುತ್ತ ನಿಮ್ಮ ಸರ್‍ಪ್ರೈಸ್ ಲೇಖನಕ್ಕೆ ಕಾಯುತ್ತಿದ್ದೇನೆ…

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s