ಈದಿ ಅಮಿನ್ ಅನ್ನೋ ನರಹಂತಕನ ಬಗ್ಗೆ ಬರೆಯುವ ಸಿದ್ಧತೆಯಲ್ಲಿ….

Posted: ಡಿಸೆಂಬರ್ 11, 2008 in ವಿಚಾರ
ಟ್ಯಾಗ್ ಗಳು:, ,

ಮೊತ್ತ ಮೊದಲನೆಯದಾಗಿ ವಿಜಯಕರ್ನಾಟಕಕ್ಕೆ ಒಂದು ಧನ್ಯವಾದ ಹೇಳ್ಬೇಕು. ಕಳೆದ ಆದಿತ್ಯವಾರದ ಸಾಪ್ತಾಹಿಕ ವಿಜಯದಲ್ಲಿ ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್ ಅನ್ನೋ ಚಿತ್ರ ಆವತ್ತು ರಾತ್ರಿ 11.25ಕ್ಕೆ ಸ್ಟಾರ್ ಮೂವೀಸ್‌ನಲ್ಲಿ  ಬರುತ್ತದೆ… ಈದಿ ಅಮಿನ್ ಕುರಿತಾದ ಚಿತ್ರವದು…ತುಂಬಾ ಚೆನ್ನಾಗಿದೆ ಅಂತೆಲ್ಲಾ ವಿವರಣೆ ಇತ್ತು… ರವಿ ಬೆಳಗೆರೆ ಹಿಂದೊಮ್ಮೆ ಕಂಪಾಲಾಗೆ ಹೋಗಿ ಬಂದಿದ್ದಾಗ ಹಾಯ್ ಬೆಂಗಳೂರ್‌ನಲ್ಲಿ ಬರೆದ ಲೇಖನಳಲ್ಲಿ ಈದಿ ಅಮೀನ್ ಬಗ್ಗೆ ಓದಿದ್ದೆ. ಆಮೇಲೆ ಈದಿ ಅಮಿನ್ ಒಂದು ಡಾಕ್ಯುಮೆಂಟರಿ ತರಹದ ಸಿ.ಡಿ. ಯನ್ನು ಕೂಡಾ ನೋಡಿದ್ದೆ. ಮೊನ್ನೆ ರಾತ್ರಿ ಹನ್ನೊಂದುವರೆಗೆ ಚಿತ್ರ ನೋಡಿದೆ ಮೇಲೆ ಯಾಕೋ ಈದಿ ಅಮಿನ್ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆನಿಸಿತ್ತು. ಅವನ ಅಷ್ಟೂ ಕ್ರೌರ್ಯದ ಕತೆಗಳು ಒಂದು ಕಡೆಯಾದರೆ, ಆಫ್ರಿಕಾ…ಅದರಲ್ಲೂ ಉಗಾಂಡಾವನ್ನು ಒಂದು ಬಲಿಷ್ಟ ಶಕ್ತಿಯನ್ನಾಗಿ, ಅಭಿವೃದ್ದಿಯ ಹಾದಿಯಲ್ಲಿ ಮುನ್ನಡೆಸಬೇಕೆಂಬ ಅವನ ಅದಮ್ಯ ಹಂಬಲ. ಅವನು ಹಿಡಿದ ಹಾದಿ ತಪ್ಪಾಗಿರಬಹುದು… ಆದರೆ ಅಫ್ರಿಕಾ..ಉಗಾಂಡಾದ ಕುರಿತು ಅವನು ಕಂಡ ಕನಸು, ಜನರಲ್ಲಿ ಹುಟ್ಟಿಸಿದ ಭರವಸೆ-ವಿಶ್ವಾಸ ಇವೆಲ್ಲವನ್ನು ಮೆಚ್ಚೋಣವೇ ಅನ್ನುವಷ್ಟರಲ್ಲೇ… ಈ ಹಾದಿಯಲ್ಲಿ ಅವನು ಉರುಳಿಸಿದ ಹೆಣಗಳು ಕಾಲ್ತೊಡರಿಕೊಂಡಂತಾಗುತ್ತದೆ; ನೆತ್ತರ ವಾಸನೆಗೆ ವಾಕರಿಕೆ ಉಮ್ಮಳಿಸಿಕೊಂಡು ಬರುತ್ತದೆ…

 

ಹೀಗೆ ಒಂದು ರೀತಿಯಲ್ಲಿ ವಿರೋಧಾಭಾಸಗಳ ಮೊತ್ತದಂತಿರುವ ಅವನ ಬಗ್ಗೆ ನಾನು ಓದಿದ್ದು… ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್ ಚಿತ್ರದ ಕುರಿತು ಒಂದಿಷ್ಟು ಬರೆಯಬೇಕೆನಿಸಿದೆ… ಒಂದು ಲೇಖನದಲ್ಲಿ ಪೂರ್ತಿ ಬರೆಯೋದು ಕಷ್ಟವೆನ್ನಿಸುತ್ತದೆ… ಹಾಗಾಗಿ ಎರಡು-ಮೂರು ಭಾಗಗಳಲ್ಲಿ ನಾನು ಓದಿದ್ದು..ಕಂಡದ್ದು..ನನಗನ್ನಿಸಿದ್ದು ಇವೆಲ್ಲವನ್ನೂ ಹೇಳಬೇಕೆನ್ನಿಸಿದೆ… ಮುಂದಿನ ಲೇಖನದಲ್ಲಿ ಈದಿ ಅಮೀನ್ ಕುರಿತು ಒಂದಿಷ್ಟು ಮಾಹಿತಿ ಹಿಡಿದುಕೊಂಡು ಬರುತ್ತೇನೆ… ಓದೋಕೆ ನೀವೆಲ್ಲಾ ಸಿದ್ಧ ಅನ್ನೋದಾದ್ರೆ ಮಾತ್ರ…

 

ಕಳೆದ ಕೆಲವು ದಿನಗಳಿಂದ ಬ್ಲಾಗ್‌ನ್ನು ಸಾಧ್ಯವಾದಷ್ಟು ಭಿನ್ನವಾಗಿಸಬೇಕೆಂದು ಪ್ರಯತ್ನಿಸುತ್ತಾ ಇದ್ದೇನೆ. ಡಕ್ವರ್ತ್-ಲೂಯೀಸ್ ಕುರಿತಾದ ವಿವರಣೆ ಈ ದಿಸೆಯಲ್ಲಿ ನಾನು ಮಾಡಿದ ಒಂದು ಪುಟ್ಟ ಪ್ರಯೋಗ. ಮಾಮೂಲಿ ಚಿತ್ರ ವಿಮರ್ಶೆ, ಹನಿಗಳು..ಪುಸ್ತಕ…ಇವೆಲ್ಲದ ಮಧ್ಯೆ ಒಂದಿಷ್ಟು ವಿಶಿಷ್ಟ ವಿಷಯಗಳೂ ಇರಲಿ ಅಂತ… ನಿಮಗೆ ಖಂಡಿತಾ ಇಷ್ಟವಾಗಲಿವೆ ಅನ್ನುವ ಭರವಸೆಯೊಂದಿಗೆ… ಮುಂದಿನ ಲೇಖನದಲ್ಲಿ ಈದಿ ಅಮಿನ್ ಬಗ್ಗೆ ಬರೆಯುವ ಸಿದ್ದತೆಯಲ್ಲಿರುವೆ 

ಟಿಪ್ಪಣಿಗಳು
  1. Tony ಹೇಳುತ್ತಾರೆ:

    dear sir
    you can watch – THE RAISE N FALL OF EDI AMIN,in this you can see what things you missed in the last king………,
    take care

  2. vikas hegde ಹೇಳುತ್ತಾರೆ:

    ಒಳ್ಳೇ ಸಿನೆಮಾ ಅದು. ನನಗೂ ಅದನ್ನ ನೋಡಿದ ಮೇಲೆ ಈದಿ ಅಮೀನ್ ಬಗ್ಗೆ, ಉಗಾಂಡಾ ಬಗ್ಗೆ, ಅದರ ಇತಿಹಾಸದ ಬಗ್ಗೆ, ಆ ಪ್ಲೇನ್ ಹೈಜಾಕ್ ಬಗ್ಗೆ ತಿಳ್ಕಳ್ಳೋ ಆಸಕ್ತಿ ಬಂದಿದ್ದು.

    ನೀವು ಇನ್ನೂ ಮಾಹಿತಿ ಒದಗಿಸಿಕೊಡ್ತೀನಿ ಅಂತಿದಿರಾ… ಕಾಯ್ತಿದಿನಿ..

  3. ವಿಜಯರಾಜ್ ಕನ್ನಂತ ಹೇಳುತ್ತಾರೆ:

    sandeep & chitra

    mundian somavaaradinda bareeta idini

  4. Chitra karkera ಹೇಳುತ್ತಾರೆ:

    ಕಾಯುತ್ತಿದ್ದೇವೆ..ತಡವೇಕೆ ಬರಲಿ…..
    -ಚಿತ್ರಾ

  5. NilGiri ಹೇಳುತ್ತಾರೆ:

    ಬರೀರಿ ಸರ್ 🙂

ನಿಮ್ಮ ಅನಿಸಿಕೆ ಹೇಳಿ