ನಿನ್ನೆಯಿಂದಲೇ… ನಿನ್ನೆಯಿಂದಲೇ… ಫೈರಿಂಗು ಶುರುವಾಗಿದೆ…

Posted: ಫೆಬ್ರವರಿ 10, 2009 in aNaka
ಟ್ಯಾಗ್ ಗಳು:, , , , , ,

ಆರ್ಥಿಕ ಕುಸಿದ ಹಿನ್ನೆಲೆಯಲ್ಲಿ, ಕೆಲ್ಸ ಕಳೆದುಹೋಗುವ ಭೀತಿಯಲ್ಲಿ ಮಿಲನ ಚಿತ್ರದ ನಿನ್ನಿಂದಲೇ… ನಿನ್ನಿಂದಲೇ… ಹಾಡನ್ನು ಹೀಗೆ ಹಾಡಿದ್ರೆ ಹೇಗಿರುತ್ತೆ…?

ಇದಕ್ಕೆ ನಾನು ಇಟ್ಟ ಟೈಟಲ್ – ಪುನರ್ಮಿಲನ… ಅಂದ್ರೆ ಮಿಲನದ ರಿಮೇಕು ಅಂತ 🙂

 

ನಿನ್ನೆಯಿಂದಲೇ… ನಿನ್ನೆಯಿಂದಲೇ…

ಫೈರಿಂಗು ಶುರುವಾಗಿದೆ…

ನಿನ್ನೆಯಿಂದಲೇ… ನಿನ್ನೆಯಿಂದಲೇ…

ಭಯವೊಂದು ಮನೆಮಾಡಿದೆ…

 

ಎದೆಯಲ್ಲಿ ಏನೇನೋ ಕೋಲಾಹಲ…

ಕಣ್ಣೆದುರಲ್ಲೇ ಫೈರಿಂಗು ನಡೆವಾಗಲೇ

ಐ.ಟಿ. ಸಿಟಿಯಲ್ಲಿ ಕೆಲ್ಸ ಹೋಗುವ ಸಂಭವ

ನಾ ನಿಂತಲ್ಲೇ ಬೆವರಾದೆ ನಿನ್ನೆಯಿಂದಲೇ…

 

ನಿನ್ನೆಯಿಂದಲೇ… ನಿನ್ನೆಯಿಂದಲೇ…||

 

ಮನೆಸಾಲದ ಬಾಕಿ… ತೀರ್ಸಿಲ್ಲ ಇನ್ನೂ…

ಕಾರ್ ಲೋನು ತುಂಬುವ ದಾರಿಯೇನು…?

ಶೇರ್ಸ್‌ನಲ್ಲಿ ಹಣ ಹಾಕಿ ಬೀದಿಗೆ ಬಂದೆ…

ಕೆಲ್ಸ ಹೋದ್ರೆ ಮುಂದೆ ಗತಿಯೇನು…?

 

ದುಡ್ಡಿಲ್ಲದೇ… ಕೆಲಸವಿಲ್ಲದೇ… ಮುಖವೀಗ ಕಳೆಗುಂದಿದೆ…

 

ನಿನ್ನೆಯಿಂದಲೇ… ನಿನ್ನೆಯಿಂದಲೇ…||

 

ಯಾವ್ ಕಂಪ್ನಿಗ್ ಹೋದ್ರು ಕೆಲ್ಸ ಖಾಲಿ ಇಲ್ಲ…

ಆರ್ಥಿಕ ಕುಸಿತದ ಪರಿಣಾಮ…

ಚಳಿಜ್ವರ ನಡುಕ ಶುರುವಾಗ್ತದಿಲ್ಲಿ…

ಕೆಡ್ತಂದ್ರೆ ಅಮೇರಿಕದ ಹವಮಾನ…

 

ಭಡ್ತಿ ಇಲ್ದಿದ್ರೂ… ಸಂಬ್ಳ ಕಟ್ಟಾದ್ರೂ… ಕೆಲ್ಸ ಉಳಿದ್ರೆ ಸಾಕಾಗಿದೆ…

ನಿನ್ನೆಯಿಂದಲೇ… ನಿನ್ನೆಯಿಂದಲೇ…||

ಟಿಪ್ಪಣಿಗಳು
 1. M G Harish ಹೇಳುತ್ತಾರೆ:

  ವಿಜಯ್.. ಇದು ಇಮೇಲ್ ಅಲ್ಲಿ ಕೂಡ ಬಂದಿತ್ತು! ಯಾರೋ ಈ ಹಾಡನ್ನು ಕಾಪಿ ಮಾಡಿ ಬ್ಲಾಗಿನ ಲಿಂಕನ್ನೂ ಹಾಕಿ ಕಳ್ಸಿದ್ರು.. ಇಂದಿನ ಪರಿಸ್ಥಿತಿಗೆ ಹೊಂದುವ ಕವಿತೆ! ಸಖತ್ತಾಗಿದೆ.

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  pratikriye neeDida ellarigoo dhanyavaada…
  nimma e reetiya protsaahave nanna mundina baravanigege aahaara

 3. neelanjana ಹೇಳುತ್ತಾರೆ:

  ಹ್ಹೆ ಹ್ಹೆ ಚೆನ್ನಾಗಿದೆ!

  ಯಾವಾಗಲೂ, ಇನ್ಮುಂದ್ಯಾವಾಗಲೂ
  ಹೀಗೇನೇ ಆಗೋದಿದೆ
  ಜಗವೆಲ್ಲ ಒಂದೇ ಮನೆ ಆದಾಗಲೇ
  ಇದಕೆ ಮುನ್ನುಡಿ ಬರೆದಾಗಿದೇ!

 4. Anil H.S ಹೇಳುತ್ತಾರೆ:

  Superb… Well you dont have to worry if you lose your job. You can become a lyricist in Kannada movies.

 5. satya ಹೇಳುತ್ತಾರೆ:

  ಚಳಿಜ್ವರ ನಡುಕ ಶುರುವಾಗ್ತದಿಲ್ಲಿ…

  ಕೆಡ್ತಂದ್ರೆ ಅಮೇರಿಕದ ಹವಮಾನ…

  These lines sounds very good, I like it.

 6. Sushrutha ಹೇಳುತ್ತಾರೆ:

  hahahahahha! 😀
  nija nija..

 7. ranjith ಹೇಳುತ್ತಾರೆ:

  ಮನೆಸಾಲದ ಬಾಕಿ… ತೀರ್ಸಿಲ್ಲ ಇನ್ನೂ…

  “ಕಾರ್ ಲೋನು ತುಂಬುವ ದಾರಿಯೇನು…?

  ಶೇರ್ಸ್‌ನಲ್ಲಿ ಹಣ ಹಾಕಿ ಬೀದಿಗೆ ಬಂದೆ…

  ಕೆಲ್ಸ ಹೋದ್ರೆ ಮುಂದೆ ಗತಿಯೇನು…?

  ದುಡ್ಡಿಲ್ಲದೇ… ಕೆಲಸವಿಲ್ಲದೇ… ಮುಖವೀಗ ಕಳೆಗುಂದಿದೆ…”

  sUper!!!:):)

 8. ಗುರುಪ್ರಸಾದ ಸಿ. ಎಂ. ಹೇಳುತ್ತಾರೆ:

  ನಿಮ್ಮಿಂದಲೇ ನಿಮ್ಮಿಂದಲೇ ಭಯವೊಂದು ಶುರುವಾಗಿದೆ.

  ಮರೆತೋದ ಕಹಿಯಾದ ಸತ್ಯವನ್ನು ಈಗ ಕೇಳಿ ಭೂಮಿ ಕುಸಿದಂತಿದೆ…………………

ನಿಮ್ಮದೊಂದು ಉತ್ತರ ಗುರುಪ್ರಸಾದ ಸಿ. ಎಂ. ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s