ಹಾಗೆ(ಯ್ಕು) ಸುಮ್ಮನೆ…

Posted: ಮಾರ್ಚ್ 9, 2009 in ಮನಸಿನ ಹಾಡು

ಇವತ್ತಿನ (ಮಾರ್ಚ್ 9, 2009) ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ನನ್ನ ಕೆಲವು ಹಾಯ್ಕುಗಳು ಬಂದಿವೆ…ನೀವು ನೋಡಿಲ್ಲವಾದ್ರೆ ಇಲ್ಲಿವೆ ನೋಡಿ

ನಿನ್ನ ನೆನಪಿಂದ ಹೊಳೆಯುತ್ತಿದ್ದ
ಕಣ್ಣುಗಳೇ ಈಗ
ನಿನ್ನ ನೆನಪಿಂದಲೇ
ಹೊಳೆಯಾಗುತ್ತಿವೆ
—————————-
ನನ್ನ ತೋಳ ತೆಕ್ಕೆಯೊಳಗೆ
ಹುದುಗಿ ಕುಳಿತಿದ್ದ ಹುಡುಗಿ,
ಯಾವ ತೋಳದ ತೆಕ್ಕೆಯೊಳಗೆ
ಕುಳಿತಿರುವಳೋ ಈಗ ಅಡಗಿ
—————————-
ಅವಳ ಕುರಿತು ಕಟ್ಟಿದ
ಕವನ ಶಾಯರಿಗಳಿಗೆ ಲೆಕ್ಕವೇ ಇಲ್ಲ
ಬೇಸರದ ಸಂಗತಿಯೆಂದರೆ
ಅವಳಿಗೂ ಇದ್ಯಾವುದೂ ಲೆಕ್ಕಕ್ಕೇ ಇಲ್ಲ
——————————-
ಅಂದು ಮಳೆಯಾಗಿ
ಭೋರ್ಗರೆಯದೇ ಹೋದ ತಪ್ಪಿಗೆ,
ಇಂದು ಹನಿಹನಿಯಾಗಿ ಸುರಿದು
ಭಾವಗಳ ತಪ್ಪೊಪ್ಪಿಗೆ
——————————
ನನ್ನ ಹನಿಗಳಿಗೇ
ಯಾವ ಹೆಸರಿನ ಹಂಗೂ ಇಲ್ಲ
ಕಣ್ಣ ಹನಿಗಳಿಗೇಕೆ
ನಿನ್ನ ನೆನಪಿನ ಹಂಗು
——————————
ಮದುವೆ ದಲ್ಲಾಳಿಗಳ ಬಳಿಯಿರೋ
ಜಾತಕ ಫೋಟೋಗಳ ಲಿಸ್ಟಲಿ,
ಸಾಫ್ಟ್ವೇರ್ ತಂತ್ರಜ್ಞರೀಗ
ಕುಳಿತಿದ್ದಾರೆ ಲಾಸ್ಟಲಿ

ಟಿಪ್ಪಣಿಗಳು
 1. Balaji ಹೇಳುತ್ತಾರೆ:

  ಯಾಕೆ ಸ್ವಾಮೀ ? ವಿರಹ ಹಾಗೂ ವಿಷಾದ ಗಳೇ ತುಂಬಿವೆ ಇಲ್ಲಿ ??? ಆದರೂ ಚೆನ್ನಾಗಿವೆ.

  ಬಾಲಾಜಿ

 2. manjunath ಹೇಳುತ್ತಾರೆ:

  ಒಳ್ಳೆ ಹನಿಗಳು ….ಇನು ಹೆಚ್ಹಿನ ಹನಿಗಳು ತಮ್ಮಿಂದ ಹುದುರಲಿ …:)

 3. ರಂಜಿತ್ ಹೇಳುತ್ತಾರೆ:

  ಬ್ಲಾಗಿನ ಹುಟ್ಟುಹಬ್ಬದ ಶುಭಾಶಯಗಳು..

  happy blogging!

 4. ಕಂಡಕ್ಟರ್ ಕಟ್ಟಿಮನಿ 45E ಹೇಳುತ್ತಾರೆ:

  ಎಲ್ಲಾ ಹನಿಗಳು ಮೆಚ್ಚುಗೆಯನ್ನು ಪಡೆದರು.೫ನೇ ಹನಿಮಾತ್ರ ಮನಕಲುಕಿತು….ಪ್ಲಿಸ್ ಕಂಟಿನಿವ್..

 5. Rajesh Manjunath ಹೇಳುತ್ತಾರೆ:

  ವಿಜಯ್ ಸರ್,
  ಸಕತ್ತಾಗಿವೆ ಹಾಯ್ಕುಗಳು…
  ಕೊನೆಯ ನಾಲ್ಕು ಸಾಲಂತೂ ನಮ್ಮ ಇಂದಿನ ಅವಸ್ಥೆಗೆ ಕನ್ನಡಿ ಹಿಡಿದಂತಿವೆ… 🙂
  ನಿಮ್ಮ ಬ್ಲಾಗಿನ ಕೊಂಡಿ ಸಾಗಿಸುತ್ತಿದ್ದೇನೆ 😀

 6. Nandan ಹೇಳುತ್ತಾರೆ:

  thumbaane channagide sir.

 7. ರಂಜಿತ್ ಹೇಳುತ್ತಾರೆ:

  ಎಲ್ಲವೂ ಬಹಳ ಚೆನ್ನಾಗಿದೆ ಸರ್.

 8. ಗುರುಪ್ರಸಾದ್ ಸಿ. ಎಂ ಹೇಳುತ್ತಾರೆ:

  ಹಾಯ್ಕುಗಳ ಬಗ್ಗೆ ಮಾಹಿತಿ ಕೊಡಿ

 9. pavankir ಹೇಳುತ್ತಾರೆ:

  Gud Vijay Raj..

  Tumba dinavaagittu..nimma blog ge comment madade…idarartha odutta iralilla antha alla…

  idannella naanu ninne paper nalli odidde..matte ellarigoo namma vijayaraj baredaddu antha torsidde…really its gud…thanks for hanigavana’s

 10. ಪ್ರದೀಪ್ ಹೇಳುತ್ತಾರೆ:

  ತುಂಬಾ ಚೆನ್ನಾಗಿವೆ ಸಾರ್! 🙂

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s