ಬ್ಲಾಗಿಗೆ ವರುಷ ತುಂಬಿದ್ದಷ್ಟೇ ಸಾಧನೆ….!!!

Posted: March 25, 2009 in ಇತ್ಯಾದಿ...

ಅಂತೂ ಇಂತೂ ಕುಂಟುತ್ತಾ, ಎಡವುತ್ತಾ ಬ್ಲಾಗಿಗೆ ನಿನ್ನೆ ಒಂದು ವರ್ಷ ತುಂಬಿತು. ಒಂದು ವರ್ಷದಲ್ಲಿ ಸಾಧಿಸಿದ್ದೇನು ಅಂತ ಲೆಕ್ಕ ಹಾಕೋಕೆ ಹೋದ್ರೆ ವರ್ಷ ತುಂಬಿದ್ದು ಬಿಟ್ರೆ ಬೇರೆ ಎಂತದೂ ಕಾಣ್ತಾ ಇಲ್ಲ. ಕಡಿದು ಕಟ್ಟೆ ಹಾಕಿದ್ದು ಏನೇನೂ ಇಲ್ಲ. ಇನ್ನೂ ಅಂಬೆಗಾಲಿಕ್ಕುತಾ ಈಗಷ್ಟೇ ನಡೆಯಲು ಕಲಿಯುತ್ತಿರುವ ನನ್ನಂತವನನ್ನೂ ಈ ಬ್ಲಾಗ್ ಲೋಕ ಹರಸಿದೆ. ಆದರೂ ಎಲ್ಲಕ್ಕಿಂತ ಹೆಚ್ಚಿನ ಖುಷಿಯ ಸಂಗತಿಯೆಂದರೆ ಅನೇಕರ ಪರಿಚಯ ಮಾಡಿ ಕೊಟ್ಟಿದೆ ಈ ಬ್ಲಾಗ್ ಲೋಕ. ಕೆಲವೊಮ್ಮೆ ಬರೆದ ಬರಹಗಳು ನನಗೆ ತೃಪ್ತಿ ನೀಡಿದೆ. ನೀವು ಸುಳ್ಳು ಸುಳ್ಳೇ ಹೊಗಳಿದ್ದು ಕೇಳಿ ಹಿಗ್ಗಿ ಹೀರೆಕಾಯಿ ಆಗಿದ್ದೂ ಉಂಟು. 365 ದಿನಗಳ ಈ ಪಯಣದಲ್ಲಿ 140ಕ್ಕೂ ಹೆಚ್ಚು ಬರಹಗಳನ್ನು ನನ್ನಂತಹ ಪರಮ ಸೋಂಬೇರಿಯ ಕೈಲಿ ಬರೆಸಿದೆಯೆಂದ್ರೆ ಅದು ಬ್ಲಾಗಮ್ಮನ ಮಹಿಮೆಯೇ ಸರಿ. ಈಗ ಸ್ವಲ್ಪ ಕೆಲಸದ ಒತ್ತಡದ ಕಾರಣದಿಂದ ಪೋಸ್ಟ್ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ… ಹಾಗಂತ ಬರೆಯೋ ಆಸಕ್ತಿ ಒಂದಿನಿತೂ ಕುಂದಿಲ್ಲ ಅನ್ನೋದನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬರೆದು ಸಾಬೀತು ಪಡಿಸುವ ‘ಭೀಕರ’ ಕ್ರಮದ ಮೂಲಕ ನಿಮ್ಮ ಮೇಲೆ ಮುರಿದುಕೊಂಡು ಬೀಳಲಿದ್ದೇನೆ. ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ. ಅದು ನನ್ನ ತೊದಲು ನುಡಿಯಂತಹ ಬರವಣಿಗೆಗೆ ಒಂದು ಸ್ಪಷ್ಟ ರೂಪ ಕೊಡುವಂತಹ ಸಲಹೆಯಾಗಿರಲಿ ಅನ್ನೋದು ನನ್ನ ಕೋರಿಕೆ. ಹಾಗಾಗಿ ನಿರ್ಭಿಡೆಯಿಂದ ನಿಮ್ಮ ಅಭಿಪ್ರಾಯ ತಿಳಿಸಿ. ಒಂದೆರಡು ಸಾಲು ಗೀಚಿದರೆ ನಾನು ಧನ್ಯ…ಸಧ್ಯಕ್ಕೆ ಇಷ್ಟು ಸಾಕು. ಮತ್ತೊಮ್ಮೆ ಹೊಸ ಬರಹದೊಂದಿಗೆ ಶೀಘ್ರವೇ ನಿಮ್ಮ ಮುಂದಕ್ಕೆ ಬರಲಿದ್ದೇನೆ… ಹಾಗಾಗಲಿ ಅಂತ ಹಾರೈಸುತ್ತೀರಲ್ಲಾ?

Advertisements
Comments
 1. Yogeesh Adiga says:

  heege geechutta iru

 2. ಇಂತಿ
  ನಿಮ್ಮ ಲೇಖನಕ್ಕಾಗಿ ಕಾಯುತ್ತಿರುವ…..
  – ಪ್ರದೀಪ್

 3. ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು… As Minchulli said, Quality is important that quantity. All the best and keep blogging

 4. minchulli says:

  ಎಷ್ಟು ಬರೆದಿರಿ ಅನ್ನೋದಕ್ಕಿಂತ ಎಷ್ಟು ಚೆಂದ ಬರೆದಿರಿ ಅನ್ನೋ ಲೆಕ್ಕಾಚಾರ ಹಾಕಿ ಹೊಟ್ಟೆಕಿಚ್ಚು ಪಡುತ್ತಾ ಇದ್ದೇನೆ… happy birthday

 5. Pramod says:

  Cool… keep going 🙂

 6. Vikas Hegde says:

  ವಿಜ್,

  ಶುಭಾಶಯಗಳು..

  ಅದೇನೋ ಅರ್ಥವಾದಷ್ಟೆ ಕವಿತೆ ಅಂತಾರಲ್ಲ ಹಾಗೆ ಮಾಡಿದ್ದೇ ಸಾಧನೆ ಅಂದ್ಕೊಂಡು ಬರೀತಾ ಹೋಗ್ತಾ ಇರದಷ್ಟೆ. ಇಷ್ಟು ದಿನ ನಿನ್ನ ಬರಹಗಳು ಖುಷಿ ಕೊಟ್ಟಿವೆ. ಬೇರೆ ಬೇರೆ ವಿಷಯಗಳನ್ನು ತಿಳಿಸಿಕೊಟ್ಟಿವೆ. thanx..

  happy blogging. 🙂

 7. Sushrutha says:

  Shubhashaya Vijay..

 8. Kallare says:

  Vijay Ji,

  ಬ್ಲಾಗ್ ಮರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು…. 🙂

 9. ವಿಜಯ್ ಸರ್,
  ನಿಮ್ಮ ಬ್ಲಾಗ್ ಮರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು….
  ನಮ್ಮ ಪಾಲಿಗೆ ನಿಮ್ಮ ಬತ್ತಳಿಕೆಯಿಂದ ಇನ್ನಷ್ಟು ಮತ್ತಷ್ಟು ಉತ್ತಮ ಬರಹಗಳು ಹರಿದು ಬರಲಿ.
  ನಿಮಗೆ ಒಳ್ಳೆಯದಾಗಲಿ….

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s