ನಾಲ್ಕು ಮತ್ತೊಂದು… :-)

Posted: ಏಪ್ರಿಲ್ 2, 2009 in ಮನಸಿನ ಹಾಡು

ಇವತ್ತಿನ ವಿಜಯ ಕರ್ನಾಟಕದಲ್ಲಿ ಸಿಂಪ್ಲಿಸಿಟಿ ಪುಟದಲ್ಲಿ ಬಂದ ನನ್ನ ನಾಲ್ಕು ಹನಿಗಳು…
ಜೊತೆಯಲ್ಲಿ ಮತ್ತೊಂದು ಬೋನಸ್ (?) ಹನಿ…
ಓದಿ ಮೆಚ್ಚಿಕೊಂಡ್ರೆ ಮತ್ತಷ್ಟು ಬರೆದೇನು… ಹುಷಾರ್!! ಈಗ್ಲೇ ಎಚ್ಚರಿಸ್ತಾ ಇದಿನಿ..  🙂

ಕಡಲಿನ ತಲ್ಲಣಕೆ ಸಾಕ್ಷಿ
ದಡಕ್ಕಪ್ಪಳಿಸುವ ತೆರೆಗಳು
ಒಡಲಿನ ತಲ್ಲಣಕೆ ಸಾಕ್ಷಿ
ಕೆನ್ನೆ ಮೇಲಿನ ಕಣ್ಣೀರ ಕರೆಗಳು
——————————-
ಕಾಡುವ ನೆನಪುಗಳ ಮರೆಯಲೆಂದು
ಕಾಡಿಗೆ ಹೋದರೂ
ಕಾಡುತಿವೆ ನೆನಪಾಗಿ ನಿನ್ನ
ಕಾಡಿಗೆ ಕಂಗಳು
——————————-
ನಡುರಾತ್ರಿಯಲೆದ್ದು ಹಟ ಮಾಡಿ
ಅಳುವ ಮಗುವಿನಂತೆ…
ದಿನ ರಾತ್ರಿ ರಚ್ಚೆ ಹಿಡಿದು ಕಾಡುತಿವೆ
ನಿನ್ನ ನೆನಪುಗಳ ಕಂತೆ
———————————
ನಿನ್ನ ನೆನಪು ಎದೆಯ ಕರೆಗಂಟೆಯ
ಅದುಮಿದಾಗ
ಕವಿತೆಯಾಗಿ ಹೊರಬಂತು
ಅಂತರಂಗದನುರಾಗ
—————————————————

ಬಿಟ್ಟು ಹೋದವಳ ಬಿಟ್ಟಿರಲಾಗದಾಗ
ಬಿಟ್ಟೂ ಬಿಡದೆ ನೆನಪಾಗಿ ಬಿಟ್ಟವಳು…
ಬರಿ ನೆನಪೇ ಆಗಿ ಬಿಟ್ಟಳವಳು…
———————————-

ಟಿಪ್ಪಣಿಗಳು
 1. minchulli ಹೇಳುತ್ತಾರೆ:

  ವಿ.ಕ ದಲ್ಲಿ ಓದಿದ್ದೆ, ಕಾಮೆಂಟ್ ಮಾಡಲು ಆಗಿರಲಿಲ್ಲ. ಎಲ್ಲವೂ ಚಂದ ಇದೆ.. ೪+೧…
  ಸ್ನೇಹಪೂರ್ವಕ,
  ಶಮ, ನಂದಿಬೆಟ್ಟ.

 2. Satya ಹೇಳುತ್ತಾರೆ:

  Vijay Sir, all are superb, really I like it very much. That second one wahhhh……

 3. ಪ್ರದೀಪ್ ಹೇಳುತ್ತಾರೆ:

  ಚೆನ್ನಾಗಿವೆ ಸಾರ್ 🙂

 4. mayya ಹೇಳುತ್ತಾರೆ:

  Super Vijay….Olle ide ella !

 5. ಸಂದೀಪ್ ಕಾಮತ್ ಹೇಳುತ್ತಾರೆ:

  ಆಹಾ ಎಲ್ಲವೂ ಚೆನ್ನಾಗಿವೆ!

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s