ಅಣ್ಣಾವ್ರ ಸ್ಮರಣೆಗೊಂದು ಹಾಡುಗಳ ರಸಪ್ರಶ್ನೆ…

Posted: ಏಪ್ರಿಲ್ 22, 2009 in ನೆನಪುಗಳ ಮಾತು ಮಧುರ..
ಟ್ಯಾಗ್ ಗಳು:, , ,

ಮೊನ್ನೆ ಹನ್ನೆರಡನೇ ತಾರೀಕಿಗೆ ಅಣ್ಣಾವ್ರು ಇಲ್ಲವಾಗಿ ಮೂರು ವರ್ಷ ಕಳೆಯಿತು. ನಾಡಿದ್ದು 24ರಂದು ಅಣ್ಣಾವ್ರ ಜನ್ಮದಿನ. ಈ ಸಂದರ್ಭದಲ್ಲಿ ಅಣ್ಣಾವ್ರು ನಟಿಸಿದ/ಹಾಡಿದ/ನಟಿಸಿಹಾಡಿದ ಹಾಡುಗಳನ್ನು ನೆನಪಿಸಿಕೊಳ್ಳುವ ಮೂಲಕ ಆ ಮಹಾನ್ ಚೇತನಕ್ಕೆ ನಮಿಸುವ ಒಂದು ಪ್ರಯತ್ನ ಇಲ್ಲಿದೆ. ಇಲ್ಲಿರುವ ಹತ್ತು ಪ್ರಶ್ನೆಗಳು ತೀರಾ ಸುಲಭವಾಗಿವೆನಿಮಗೆಲ್ಲರಿಗೂ ಉತ್ತರ ಖಂಡಿತವಾಗಿಯೂ ಗೊತ್ತಿರುತ್ತದೆ

 

1.          ಸಂಪತ್ತಿಗೆ ಸವಾಲು ಹಾಕುತ್ತಾ ಅಣ್ಣಾವ್ರು ಎಮ್ಮೆ ಸವಾರಿ ಮಾಡುತ್ತಿರುವ ಈ ಹಾಡನ್ನು ಎಂದಿಗಾದ್ರೂ ಮರೆಯಲಾದೀತೆ?

2.          ದೇವತಾ ಮನುಷ್ಯ ಇಲ್ಲಿ ಮಗಳು ಸುಧಾರಾಣಿಯೊಂದಿಗೆ ರಾಘವೇಂದ್ರರ ಸ್ತುತಿಸುತ್ತಿದ್ದಾರೆ

3.          ಅಶ್ವಮೇಧ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ ರೌದ್ರಾವತಾರಕ್ಕೆ ಮೆರುಗನ್ನಿತ್ತ ಅಣ್ಣಾವ್ರ ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲೊಂದು

4.          ಈ ನಾಡಲ್ಲಿ ಹುಟ್ಟಿದ ನಾವು ಧನ್ಯ ಅನ್ನಿಸುವಂತೆ ಮಾಡುವ ಈ ಹಾಡು ನಾಡಗೀತೆಗೆ ಪರ್ಯಾಯವೇನೋ ಅನ್ನಿಸುವಷ್ಟು ಜನಪ್ರಿಯ

5.          ಬಹಾದ್ದೂರ್ ಗಂಡಾಗಿ ಸೊಕ್ಕಿದ ರಾಜಕುಮಾರಿ ಜಯಂತಿಯ ಪೊಗರಿಳಿಸುವ ಈ ಮುತ್ತಿನಂತಹ ಹಾಡು

6.          ಏನೇ ಆದರೂ…. ಸದಾ ನಗುತಾ ನಲಿಯುತ್ತಿರು ಅನ್ನುವ ಅರ್ಥ ಕೊಡುವ ಈ ಗೀತೆ ಜೀವನೋತ್ಸಾಹದ ಪಾಠ ಹೇಳ್ತಾ ಇದೆ

7.          ಗಂಧದ ಗುಡಿಯ ಶೀರ್ಷಿಕೆ ಗೀತೆಯಲ್ಲಿ ಕಾಡಲ್ಲಿ ಪ್ರಾಣಿಗಳ ಜೊತೆ ಖುಷಿಯಿಂದ ನಲಿಯುವ ರಾಜ್ಕುಮಾರ್ ನೋಡೋಕೆ ಎರಡು ಕಣ್ಣು ಸಾಲದು

8.          ಭಕ್ತ ಕುಂಬಾರದಲ್ಲಿ ಭಕ್ತಿಯ ಪರಾಕಾಷ್ಟೆಯಲ್ಲಿ ತನ್ಮಯನಾಗಿ ಮಗುವನ್ನೇ ತುಳಿದರೂ ತಿಳಿಯದಷ್ಟು ಮೈಮರೆವಿನಲ್ಲಿ ಹಾಡುವ ಹಾಡು

9.          ಕುರುಬ ಕಾಳಿಮಾತೆಯ ಅನುಗ್ರಹಕ್ಕೆ ಪಾತ್ರನಾಗಿ ಕಾಳಿದಾಸನಾಗುವ ಮೊದಲು ಕುರಿಗಳನ್ನು ಮೇಯಿಸಲು ಹೊರಡುವಾಗ ಹಾಡುವ ಈ ಹಾಡು ಭಾರೀ ಜನಪ್ರಿಯ

10)         ಅಭಿಮಾನಿ ದೇವರುಗಳೇ ಅಂತಲೇ ವಿನಯದಿಂದ ಜನರನ್ನು ಪ್ರೀತಿಸುವ ಅಣ್ಣವ್ರುಅವರಿಂದಲೇ ನಾನು ಮೇಲೆ ಬಂದೆಅವ್ರು ನನ್ನ ಬೆನ್ನ ಹಿಂದೆ ಇದ್ರೆ ಯಾವ ಹೋರಾಟಕ್ಕೂ ಮುನ್ನುಗ್ಗಲು ತಯಾರು ಅನ್ನುತ್ತಿದ್ದಾರೆ

ಉತ್ತರ ನಿಮಗೆ ಗೊತ್ತಿರೋದೆ ಆಗಿರೋದ್ರಿಂದ… ಎಲ್ರೂ ಉತ್ತರ ಕೊಟ್ಟೇ ಕೊಡ್ತೀರ ಬಿಡಿ…

ಟಿಪ್ಪಣಿಗಳು
 1. satya ಹೇಳುತ್ತಾರೆ:

  Noorakke nooru satya. Annavrige samana annavru maatra

 2. Yogeesh Adiga ಹೇಳುತ್ತಾರೆ:

  1. yaare koogadali… oore horadali…

  2. hallalladaru haaku… neeralladaru haaku… raaghavendra…

  3. ಅಶ್ವಮೇಧ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ ರೌದ್ರಾವತಾರಕ್ಕೆ ಮೆರುಗನ್ನಿತ್ತ ಅಣ್ಣಾವ್ರ ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲೊಂದು

  4. huttidare… kannada nadli huttabeku…

  5. muttinantha maatondu gottenamma… ninanage gottenamma…

  6. ಏನೇ ಆದರೂ…. ಸದಾ ನಗುತಾ ನಲಿಯುತ್ತಿರು ಅನ್ನುವ ಅರ್ಥ ಕೊಡುವ ಈ ಗೀತೆ ಜೀವನೋತ್ಸಾಹದ ಪಾಠ ಹೇಳ್ತಾ ಇದೆ… – gottilla

  7. naavaduva nudiye kannada nudi… sirigannada nudi… naviruva tanave gandhada gudi… shree gandhada gudi…

  8. hari namave chenda… ada nambiko kanda…
  not remembering exactly… guessing here…

  9. belli moodito… koli koogito

  10) janarinda naanu mele bande…

 3. ರೂpaश्री ಹೇಳುತ್ತಾರೆ:

  ಒಂದೊಳ್ಳೆ ರಸಪ್ರಶ್ನೆ:))

  1. ಯಾರೆ ಕೂಗಾಡಲಿ ಊರೆ ಹೋರಾಡಲಿ ಎಮ್ಮೆ ನಿನಗೆ ಸಾಟಿ ಇಲ್ಲ

  2. ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ

  3. ಹೃದಯ ಸಮುದ್ರ ಕಲುಕಿ ಉಕ್ಕಿದೆ ದ್ವೆಶದ ಬೆಂಕಿ

  4. ಹುಟ್ಟಿದರೆ ಕನ್ನಡನಾಡಲ್ಲ್ ಹುಟ್ಟಬೇಕು
  5. ಮುತ್ತಿನಂತ ಮಾತೊಂದು ಗೊತ್ತೇನಮ್ಮ…

  6. ನಗುತಾ ನಗುತಾ ಬಾಳೂ ನೀನು ನೂರು ವರುಷ…

  7. ನಾವಾಡುವ ನುಡಿಯೇ ಕನ್ನಡ ನುಡಿ

  8. ನಾನು ನೀನು ನೆಂಟರಯ್ಯ

  9. ಬೆಳ್ಳಿ ಮೂಡಿತು ಕೋಳಿ ಕೂಗಿತು
  10) ಜನರಿಂದ ನಾನು ಮೇಲೆ ಬಂದೆ…ಜನರಿದ್ದರೆ ನನ್ನ ಬೆನ್ನ ಹಿಂದೆ

 4. guru ಹೇಳುತ್ತಾರೆ:

  ೧. ಯಾರೆ ಕೂಗಾಡಲಿ ಊರೆ ಹೋರಾಡಲಿ
  ೨. ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು
  ೩. ಹೃದಯ ಸಮುದ್ರ ಕಲಕಿ
  ೪. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
  ೫. ಮುತ್ತಿನಂಥ ಮಾತೊಂದು ಗೊತ್ತೆನಮ್ಮ
  ೬. ನಗು ನಗುತ ನಲಿ ನಲಿ ಏನೆ ಆಗಲಿ
  ೭. ನಾವಾಡುವ ನುಡಿಯೆ ಕನ್ನಡ ನುಡಿ
  ೮. ನಾನು ನೀನು ನೆಂಟರಯ್ಯ
  ೯. ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
  ೧೦. ಜನರಿಂದ ನಾನು ಮೇಲೆ ಬ್ಂದೆ, ಜನರನ್ನೆ ನನ್ನ ದೇವರೆಂದೆ

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s