ಕಲಾಕ್ಷೇತ್ರಕ್ಕೆ ಈ ಭಾನುವಾರ (ಏಪ್ರಿಲ್ 24) ತಪ್ಪದೆ ಬರ್ತೀರಿ ಅಲ್ವಾ?
ನೆಪ ಹೇಳದೆ ಬಂದ್ಬಿಡಿ… ಅಷ್ಟೆ!!
ಯಾಕಂದ್ರೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಮಣಿಕಾಂತ್ ಬರೆದ ಮುದ್ದಾದ ಪುಸ್ತಕವೊಂದು ಆವತ್ತು ಬಿಡುಗಡೆಯಾಗಲಿದೆ…
ಪುಸ್ತಕದಷ್ಟೇ ಮುದ್ದಾದ ಹೆಸರೊಂದನ್ನು ಮಣಿ ತಮ್ಮ ಪುಸ್ತಕಕ್ಕೆ ಕೊಟ್ಟಿದ್ದಾರೆ…”ಅಮ್ಮ ಹೇಳಿದ 8 ಸುಳ್ಳುಗಳು…”
ಆವತ್ತು ಪ್ರಕಾಶ್ ರೈ, ರವಿ ಬೆಳಗೆರೆ, ಕೃಷ್ಣೇಗೌಡ್ರು ಎಲ್ಲಾ ಬರ್ತಾರೆ…
ಜೊತೆಗೆ ಉಪಾಸನ ತಂಡದ ಇಂಪಾದ ಗಾಯನ ಕೂಡಾ ಇದೆ…
ತಪ್ಪದೆ ಎಲ್ಲರೂ ಬನ್ನಿ… ನಿಮ್ಮ ಸ್ನೇಹಿತರಿಗೊ ಹೇಳಿ ಅವರನ್ನೂ ಕರೆತನ್ನಿ