ಕವಿತೆ ಎಂದು ಹೆಸರಿಟ್ಟೆ…ನಿಟ್ಟುಸಿರಿಟ್ಟೆ !!

Posted: ನವೆಂಬರ್ 3, 2009 in ಆಪ್ತಸ್ವರ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ
ಟ್ಯಾಗ್ ಗಳು:, ,

ಮನಸಿನ ಪುಟಗಳ ನಡುವೆ
ಖಾಲಿ ಹಾಳೆಗಳಿವೆ ಕೆಲವು..
ನೀ ಬರೆಯದೇ ಹೋದ
ಒಲವಿನ ಸಾಲುಗಳವು…
————————————
ನಿನ್ನ ನೆನಪುಗಳಿಂದ
ನನ್ನಲಿ ಮೂಡಿದ ಸಂಚಲನಗಳ ಸಂಕಲಿಸಿ
ಕವಿತೆ ಎಂದು ಹೆಸರಿಟ್ಟೆ…
ನಿಟ್ಟುಸಿರಿಟ್ಟೆ !!
————————————-
ಈ ಹನಿಗಳೆಲ್ಲ ನನ್ನವಲ್ಲ ಗೆಳತಿ,
ನೀನೇ ಬರೆಸಿದ್ದು…ಮತ್ತು ನೀನೇ ಬರಿಸಿದ್ದು                             
ನಾನೋ ಬರಿ ನೆಪಮಾತ್ರದವ
ಬರೆದಿದ್ದು ಮತ್ತು ಭರಿಸಿದ್ದು !!
————————————
ನಾನೇ ಬಯಸಿ ಪಡೆದರೆ ಅದು
ದಿವ್ಯ ಏಕಾಂತ…
ನೀನಿಲ್ಲದ ಒಂಟಿತನದಲಿ ಅನಿಸೋದು
ಈ ಬದುಕು ಏಕಂತ?
————————————
ಬರೆದು ಬರಿದಾಗಿಹೆನು ನಾ,
ಬರಿದೆ ನೆನಪಾಗುತಿಹೆ ನೀ,
ಬರದೆ ಹೋದರಿನ್ನು ನೀ,
ಬರದ ಬಯಲಂತೆ  ನಾ
—————————————-

ಟಿಪ್ಪಣಿಗಳು
 1. ವಾಣಿ ಶೆಟ್ಟಿ ಹೇಳುತ್ತಾರೆ:

  🙂
  ಇಲ್ಲಿ ತನಕ ಯಾರ್ಯಾರದ್ದೋ ಎಷ್ಟೆಷ್ಟೂ ಬರಹಗಳನ್ನು ಓದಿದ್ದೆ ..ಮೆಚ್ಚಿದ್ದೆ..ಎಷ್ಟೇ ಇಷ್ಟ ಆದರೂ ಸೂಪರ್, ತುಂಬಾ ಇಷ್ಟ ಆಯ್ತು, ಪದೇ ಪದೇ ಓದಿಕೊಂಡೆ …ಇಷ್ಟೇ..ಇದಕಿಂತ ಜಾಸ್ತಿ ಹೊಗಳೋಕೆ ಆಗ್ತಿರಲಿಲ್ಲ…extra ಬರೆಯೋಕೆ ಇಷ್ಟವೂ ಆಗ್ತಿರಲಿಲ್ಲ…
  today let me be a very frank….

  ನಿಮ್ಮ ಬ್ಲಾಗಲ್ಲಿ ಓದಿರೋದಕ್ಕಿಂತ ಓದದೆ ಇರೋದೇ ಜಾಸ್ತಿ ಇದೆ ಇನ್ನೂ ..ಈಗ ಹಾಗೆ ಸುಮ್ನೆ ಕಣ್ಣಾಡಿಸ್ತಿದ್ದೆ.. “”ಕವಿತೆ ಎಂದು ಹೆಸರಿಟ್ಟೆ…ನಿಟ್ಟುಸಿರಿಟ್ಟೆ !!””…ಈ ಹೆಸರನ್ನು ನೋಡಿದೆ..ಸುಸ್ತಾಗಿಬಿಟ್ಟೆ ..ಅಧ್ಬುತ ವಾದ ಶೀರ್ಷಿಕೆ…ಇದರ ೫ ಹನಿಗಳಂತೂ awesome..ಇಷ್ಟ ಪಡದೆ ಇರೋಕೆ ಸಾಧ್ಯಾನೆ ಇಲ್ಲ ಯಾರಿಗೂ………. …ಮತ್ತೆ ಏನ್ ಬರೀಬೇಕೋ ಗೊತ್ತಾಗ್ತಿಲ್ಲ……………………………………….

 2. satish javaregowda ಹೇಳುತ್ತಾರೆ:

  your poem is beautiful

 3. ಪ್ರದೀಪ್ ಹೇಳುತ್ತಾರೆ:

  ಎಂದಿನಂತೆ.. ಭಾವಪೂರಿತವಾಗಿ, ಚೆನ್ನಾಗಿರುವ ಹನಿಗಳು… 🙂

 4. Yogeesh ಹೇಳುತ್ತಾರೆ:

  ಶೈಲಿ ಏನೋ ಹೊಸತಾಗಿದೆ… ಚೆನ್ನಾಗಿದೆ ಹನಿಗವಿತೆಗಳು

 5. svatimuttu ಹೇಳುತ್ತಾರೆ:

  ಚೆನ್ನಾಗಿದೆ…… ಸರ್..
  -ಇಂಚರ(ಸ್ವಾತಿಮುತ್ತು)

 6. ವಿಜಯರಾಜ್ ಕನ್ನಂತ ಹೇಳುತ್ತಾರೆ:

  thankx goutam and ಶೆಟ್ಟರು.. 🙂

 7. goutam hegde ಹೇಳುತ್ತಾರೆ:

  olleya putta putta kavanagalu. muddagive:)

 8. ಶೆಟ್ಟರು (Shettaru) ಹೇಳುತ್ತಾರೆ:

  ವಿಜಯ್,

  ಎಲ್ಲೋ ಒಂದು ಕಡೇ ಜಯಂತ ಕಾಯ್ಕೀಣಿ ನೇನಪಾಗ್ತಾರೆ.

  -ಶೆಟ್ಟರು

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s