ಹಾಡುಗಳ ಹುಟ್ಟು.. ಹುಟ್ಟಿನ ಹಿಂದಿರುವ ಗುಟ್ಟು…
ಹಾಡಿನೋಳಗಡಗಿಹ ಭಾವ… ನಗೆ ಸಾಲಿನ ಹಿಂದಿರುವ ನೋವ..
ಹೀಗೆ ಪ್ರತಿಯೊಂದು ಕಾಡುವ ಹಾಡಿನ ಹುಟ್ಟಿನ ಜಾಡು ಹುಡುಕುತ್ತಾ ಹೊರಟ ಮಣಿಕಾಂತ್ ಬರೆದ ಪದ್ಯಗಳ ಕುರಿತಾದ ಹೃದ್ಯ ಗದ್ಯ ಸಂಕಲನ.. ಸಧ್ಯದಲ್ಲೇ ನಿಮ್ಮ ಕೈ ಸೇರಲಿದೆ…
ಹೊತ್ತಗೆ ಬಿಡುಗಡೆಯಾಗುವ ಹೊತ್ತಿನಲ್ಲಿ ಚಿತ್ರನಟ ರಮೇಶ್ ನಿಮ್ಮೊಟ್ಟಿಗೆ ಇರ್ತಾರೆ…ಪುಸ್ತಕ ಬಿಡುಗಡೆಯನ್ನು ಕೂಡ ಅವ್ರೆ ಮಾಡ್ತಾರೆ…
ಪುಸ್ತಕದ ಬಗ್ಗೆ ಅನಂತ್ ಚಿನಿವಾರರ ಮಾತಿನ ಚಿನಕುರಳಿಯಿದೆ….
ಮಣಿಯ ಬರಹಗಳಿಗೆ ಸದಾ ಪ್ರೋತ್ಸಾಹ ನೀಡುವ ವಿಶ್ವೇಶ್ವರ್ ಭಟ್ ಈ ಸಂಭ್ರಮದಲ್ಲಿ ಜೊತೆಗಿರ್ತಾರೆ…
ಮತ್ತೇನಿದೆ ಅಂತೀರಾ? ಏನಿಲ್ಲ ಅಂತ ಕೇಳಿ…ಹಾಡಿನ ಮತ್ತಿನಲಿ ಮುಳುಗಿ ಏಳಿ… ಅಷ್ಟೇ…!!
ಇಡೀ ಸಮಾರಂಭ ಹಾಡುಗಳ ಹಬ್ಬ…!!!
ಹಾಡಿನ ರಥಬೀದಿಯಲ್ಲಿ ಹಾಡು ಹಬ್ಬದ ತೇರು ಎಳೆಯೋರು ಯಾರ್ಯಾರು?
ಕಸ್ತೂರಿ ಶಂಕರ್ , ಅರ್ಚನ ಉಡುಪ, ಸುನಿತಾ, ಮಂಗಳ, ಪಂಚಮ ಹಳಿಬಂಡಿ, ಸುಂದರ್, ಜಯಪಾಲ್… ಮುಂತಾದ ನಾದೋಪಾಸಕರು
ಎಲ್ಲಾ ಸರಿ… ಹಬ್ಬ ಯಾವಾಗ ಗೊತ್ತೆ? ಜನವರಿ ತಿಂಗಳ ಹತ್ತನೇ ತಾರೀಕು ಭಾನುವಾರ ಬರುತ್ತೆ…
ಇಂತಾ ಹಾಡು ಹಬ್ಬ ತಪ್ಪಿಸಿಕೊಂಡರೆ ಮತ್ತೆ ಬೇಕಂದ್ರೆ ಸಿಗುತ್ತೆ?
ಮತ್ಯಾಕೆ ತಡ.. ನಿಮ್ಮ ಡೈರಿಯಲ್ಲಿ ( ಈಗ ಡೈರಿ ಎಲ್ಲಿ ಬಿಡಿ ಅಂತೀರಾ… ನಿಮ್ಮ ಮೊಬೈಲಿನಲ್ಲಿ ಅಂತಾನೆ ಇಟ್ಕೊಳ್ಳಿ ) ಗುರುತು ಹಾಕ್ಕೊಳ್ಳಿ ಇವತ್ತೇ..
ಜಾತ್ರೆ ನಡೆಯೋ ಪ್ರಾಂಗಣ …. ರವೀಂದ್ರ ಕಲಾಕ್ಷೇತ್ರದ ಸಭಾಂಗಣ…
ಹಾಡಿನ ಜಾತ್ರೆ ಶುರುವಾಗೋ ಹೊತ್ತು… ಬೆಳಿಗ್ಗೆ ಹತ್ತೂ ಮೂವತ್ತು….
ಪುಸ್ತಕ ಬಿಡುಗಡೆಯ ನೆಪದಲ್ಲಿ ಸುಮಧುರ ಹಾಡುಗಳ ಕೇಳೋಣ ಅಂತ… ಕರೆಯುತ್ತಿದ್ದಾರೆ ನನ್ನ ಗೆಳೆಯ ಮಣಿಕಾಂತ
thanx. i wil b der.