ಗಮ್ಯವೆತ್ತಲೋ… ಗುರಿ ಯಾವುದೋ
ಗೊತ್ತಿಲ್ಲ… ಓಡುತ್ತಿದ್ದೇವೆ
ಮುಗ್ಗರಿಸಿ ಬಿದ್ದರೂ ಸಾವರಿಸಿಕೊಂಡೆದ್ದು
ಮತ್ತೆ ಓಡುತ್ತಿದ್ದೇವೆ
ಕಾಲಕ್ಕೆ ತಕ್ಕಂತೆ ಕೋಲ… ಬೆಂಕಿ ಹಚ್ಚಿದ ಬಾಲ
ದಿಕ್ಕೆಟ್ಟು ಓಡುತ್ತಿದ್ದೇವೆ
ಸಂಬಂಧ-ಬಂಧ ಅನುರಾಗ ಅನುಬಂಧ
ಧಿಕ್ಕರಿಸಿ ಓಡುತ್ತಿದ್ದೇವೆ
ಸ್ಪರ್ಧೆಯೋ ಜಿದ್ದೋ…ಅರಿಯದೆಯೋ ಅರಿತಿದ್ದೋ
ಒಟ್ಟಾರೆ ಓಡುತ್ತಿದ್ದೇವೆ
ಗೆಲ್ಲುವುದೆಂಬುದೇ ಇಲ್ಲ, ಬರಿ ಮೈಲಿಗಲ್ಲುಗಳೇ ಎಲ್ಲ
ದಾಟಿ ಮುನ್ನುಗ್ಗಿ… ಓಡುತ್ತಿದ್ದೇವೆ
ಕೊನೆಯಿಲ್ಲದ ಈ ಓಟ… ಕೊನೆಯ ನಿಲ್ದಾಣದ ತನಕ
ನಿಲ್ಲದೇ ಓಡುತ್ತಿದ್ದೇವೆ
Advertisements
ತುಂಬಾ ಚೆನ್ನಾಗಿದೆ. ನಿಜವಾಗಲು ಜೀವನ ಒಂದು ಅರ್ಥವಿಲ್ಲದ ವ್ಯರ್ಥ ಓಟವೋ ಎಂಬತೆ ಕೆಲವೊಮ್ಮೆ ಅನಿಸದಿರದು..
Hi,
Kavithe sogasagide!!!
Lyrics chennagide… liked it