ಎಷ್ಟು ಕೂಡಿ ಕಲೆತರೂ..ಅರ್ಥವಾಗದ ವನಿತೆಯ ಹಾಗೆ !!!

Posted: ಜೂನ್ 24, 2010 in ಆಪ್ತಸ್ವರ, ಕವನ, ಕವಿತೆ, ನೆನಪುಗಳ ಮಾತು ಮಧುರ.., ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ
ಟ್ಯಾಗ್ ಗಳು:, , , ,

ಈ ಮೂರು ಮತ್ತೊಂದು ಹನಿಗಳು ಇವತ್ತಿನ ವಿಜಯಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ಪ್ರಕಟವಾಗಿವೆ

———————————————————————-

ಪ್ರಶ್ನೆಗಳು ಪ್ರಶ್ನೆಗಳಾಗಿಯೇ

ಬದುಕಿರಲಿ ಬಿಡು ಗೆಳತಿ

ಸುಳ್ಳು ಸಮರ್ಥನೆಗಳ ನೆಪದಲಿ

ಅವುಗಳ ಉತ್ತರ ಕ್ರಿಯೆ

ಆಗೋದು ಬೇಡ

———————————-

ಎಷ್ಟು ಕೂಡಿ ಕಳೆದರೂ

ತಾಳೆಯಾಗದ ಈ ಗಣಿತವೇ ಹೀಗೆ,

ಎಷ್ಟು ಕೂಡಿ ಕಲೆತರೂ

ಅರ್ಥವಾಗದ ವನಿತೆಯ ಹಾಗೆ !!

———————————-

ಪರೀಕ್ಷೆಯಲಿ ಬಿಟ್ಟ ಸ್ಥಳ ತುಂಬೋದು

ಎಷ್ಟು ಸುಲಭ ಅನ್ನಿಸುತ್ತಿತ್ತು

ಅದರ ಕಷ್ಟ ಗೊತ್ತಾಗಿದ್ದು

ನೀ ಬಿಟ್ಟು ಹೋದ ಮೇಲೇನೇ !!

————————-

ಬಾಳಿನ ಪುಟದ ಸಾಲಿನಲಿ ನೀ

ಅಲ್ಪ ವಿರಾಮದಂತೆ ಬಂದೆ,

ಆಶ್ಚರ್ಯ ಚಿನ್ಹೆಯಂತೆ

ಎದ್ದು ಹೊರಟು ಹೋದೆ!

ಪೂರ್ಣ ವಿರಾಮ ಹೇಗೆ ಅನ್ನೋದಷ್ಟೇ

ಈಗ ಉಳಿದಿರುವ ಪ್ರಶ್ನೆ

ಟಿಪ್ಪಣಿಗಳು
  1. venuvinod ಹೇಳುತ್ತಾರೆ:

    ಮಾರ್ಮಿಕವಾದ ಸಾಲುಗಳು..

  2. ಪ್ರಸಾದ್ ಹೇಳುತ್ತಾರೆ:

    ಎಲ್ಲ ಕವನಗಳು ತುಂಬಾ ಚೆನ್ನಾಗಿವೆ.

  3. Pramod ಹೇಳುತ್ತಾರೆ:

    ಚೆನ್ನಾಗಿದೆ:)

  4. Shashi Jois ಹೇಳುತ್ತಾರೆ:

    ಕನ್ನಂತರೆ,
    ಬೆಳಿಗ್ಗೇನೆ ಪಪೆರ್ನಲ್ಲಿ ನೋಡಿದೆ ನಿಮ್ಮ ಕವಿತೆಯನ್ನು…….ಚೆನ್ನಾಗಿದೆ……..ಕೊನೆಯ ಹನಿಯ ಬಗ್ಗೆ ಚೂರು ಸಂದೇಹ .ವನಿತೆಯರು ಕೂಡಿ ಕಳೆದರು ಅರ್ಥ ವಾಗದವರಾ!!!!!! ಹ್ಹಾ ಹ್ಹಾ

Leave a reply to ಪ್ರಸಾದ್ ಪ್ರತ್ಯುತ್ತರವನ್ನು ರದ್ದುಮಾಡಿ