ಭಾವ ಬಿಂದಿಗೆಯಲಿ ತುಂಬಿಟ್ಟ ನಿನ್ನ ನೆನಪುಗಳು
ಸೋರಿ ಹೋಗುತಿವೆ ಸದ್ದಿಲ್ಲದಂತೆ…
ಒಮ್ಮೆ ಕಣ್ಣ ಹನಿಗಳಾಗಿ…
ಒಮ್ಮೊಮ್ಮೆ ಹನಿ ಕವಿತೆಗಳಾಗಿ…
———————————————-
ಬರೆಯಕೂಡದು ಅಂದುಕೊಂಡರೂ
ಬರೆಸಿಕೊಳ್ಳುವ ಕವಿತೆಗಳೇ ಹೀಗೆ..
ಎಷ್ಟು ಮರೆಯಬೇಕೆಂದುಕೊಂಡರೂ
ಆವರಿಸಿಕೊಳ್ಳುವ ನಿನ್ನ ನೆನಪಿನ ಹಾಗೆ..!!
———————————————-
ನನ್ನೆದೆಯ ಕೊಳದೊಳಗೆ ಜಿನುಗೋ ನಿನ್ನ ನೆನಪುಗಳಿಂದ
ಹರಿಯುತಿಹುದು ಭಾವದೊಂದು ಬತ್ತದಾ ತೊರೆ…
ಒಮ್ಮೊಮ್ಮೆ ನೆನಪುಗಳ ಮಹಾಪೂರ ಬಂದಾಗ,
ಕಣ್ಣ ಕೊಳ ತುಂಬಿ ಅತ್ತಿದ್ದೂ ಖರೇ..!!
——————————————–
ಮನಸೆಂಬ ಗ್ರಂಥಿಗೆ ಅಂಗಡಿಯೊಳಗೆ
ನಿನ್ನ ನೆನಪುಗಳ ಸುವಾಸನೆ
ಕನಸೆಂಬ ಕನ್ನಡಿಯೊಳಗೆ
ನಿನ್ನ ಪ್ರತಿ-ಬಿಂಬದ ಆವಾಹನೆ
——————————-
nimma blog nodidde ivattu… nimma kavanagaLu thumbaane chennagive… yella haNigaLu manasige thampannu yerachitu jotege kaLedu hoda kelavu nenapugaLannu hekki tandithu….
ತುಂಬಾ ಚೆನ್ನಾಗಿವೆ ಸಾರ್! 🙂
thumba chennagidhe kavana….