Archive for ಏಪ್ರಿಲ್ 30, 2011

ನನ್ನೆದೆಯ ‘ಬ್ಲಾಗ್-ಸ್ಪಾಟ’ ನ್ನು

ನಿನ್ನ ಪ್ರೀತಿಯ ವರ್ಡ್ – ಪ್ರೆಸ್ ಮಾಡಿದೆ…

ಇಂಪ್ರೆಸ್ ಮಾಡಿದೆ!!
——————————————–

ನಿನ್ನ ನಿರಾಕರಣದ

ಸುತ್ತಿಗೆಯೇಟಿಗೆ

ನನ್ನೆದೆಯಲಿ ನೆಟ್ಟು ಹೋದ

ನೆನಪಿನ ಮೊಳೆಗಳು

ಚುಚ್ಚುತಲೇ ಇವೆ…

ಬಿಟ್ಟೂ ಬಿಡದೇ

ಕ್ಷಮಿಸೋಣವೆಂದು ನಾ

ಹೆಣಗಿದೆ ಏಸೋ

ಕ್ಷಮಿಸು…

ನಾ ಆಗಲಾರೆ ಯೇಸು… 🙂

——————————————–