Archive for ಮೇ, 2011

ಜೋಗಯ್ಯ ಚಿತ್ರದ ತಗಲಾಕ್ಕಂಡೆ ಹಾಡಿನ ಧಾಟಿಯಲ್ಲಿ ಒಂದು ಅಣಕ..

ಕೆಂಪೇಗೌಡ್ರೂರಲಿ…ಸೀಎಮ್ಮಿನ ಚೇರಲಿ

ಡಿಕ್ಟೇಟರ್ ಸ್ಟೈಲಲಿ…ಕೂರುತಿದ್ದೆ

ಸಿಕ್ಸ್ಟೀನೈನ್ ಏಜಲಿ…ಸಿಕ್ಸ್ಟೀನು ರೇಂಜಲಿ

ಸಫಾರಿ ಸೂಟಲಿ…. ಬೀಗುತಿದ್ದೇ….

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ರೆಡ್ಡಿ-ರಾಮಣ್ಣನ ಕೈಲಿ ತಗಲ್ಹಾಕ್ಕಂಡೇ

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ನಮ್ ಪಾರ್ಟಿ ಅಲ್ಪರ  ಕೈಲೀ… ತಗಲ್ಹಾಕ್ಕೊಂಡೇ..

 

ನಾನು ಗಾಜನೂರಿನ ಪಕ್ಕದೂರೋನು..ಶಿಕಾರಿ ಪುರ ಕ್ಷೇತ್ರದೊಳಗೆ ಗೆದ್ದು ಬಂದೋನು..

 

ಯಾವಾಗ್ಲು ಜಗ್ಳ ನಿಮ್ದು.. ಬೆನ್ನ್ಹಿಂದೇ ಇರಿಯೋಕೆ..

ರೆಸಾರ್ಟು ಸೇರಿಕೊಂಡ್ರೆ ಬೆನ್ನ್ಹಿಂದೆ ಬತ್ತೀನೇ..

 

ಕೆಆರ್ ಪುರದ ಖೆಡ್ಡಾದೊಳಗೆ, ಡಿನೋಟಿಫೈ ಮಾಡುವಾಗ ತಗಲ್ಹಾಕ್ಕಂಡೇ…

ನಿಮ್ಮಾಣೆ ನಾನು..

ದೇವನಳ್ಳಿ ಗಲ್ಲಿಯೊಳಗೆ, ಕಟ್ಟಾ ಸೈಟು ಹೊಡೆವಾಗ ತಗಲ್ಹಾಕ್ಕಂಡೇ…

 

ಮೀಡ್ಯಾದೋರು ನನ್ನನ್ ಫಾಲೋ… ಮಾಡೋದ್ಯಾಕೋ…

ನಾನಂಥವನಲ್ಲ…ನಾನಂಥವನಲ್ಲ…

ನನ್ನ ಸ್ಕ್ಯಾಮುಗಳನು ಎದುರಿಟ್ಕೊಂಡು…ದೂರೋದ್ಯಾಕೋ..

ಛೆ…ನಾನಂತೋನಲ್ಲ…

 

ನಮ್ಮಣ್ಣ ಅಂತಾರೋ…. ನಿಮ್  ಶಿಷ್ಯ ಅಂತಾರೋ..

ಬೆನ್ ಹಿಂದೆ ಮಾತ್ರ… ಬ್ಯಾರೇನೋ…

 

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಬಳ್ಳಾರಿ ಧಣಿಗಳ ಕೈಲಿ ತಗಲ್ಹಾಕ್ಕಂಡೇ..

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಗೌಡ್ರು-ಕುಮಾರಣ್ಣನ ಕೈಲಿ ತಗಲ್ಹಾಕ್ಕಂಡೇ…

 

ಇವರ್ಯಾಕೇ ನನ್ನ… ಹಿಂಗ್ಕಾಡ್ತಾರೋ…

 

ಮಾಜಿ ಪಿಎಮ್ ತಂಟೇಗ್ಹೋಗಿ…ನೈಸ್ ರೋಡ್ ಸ್ಕ್ಯಾಮಿನಲ್ಲಿ… ತಗಲ್ಹಾಕ್ಕಂಡೇ..

ವಿಜ್ಜಿ-ರಾಘು ಹೆಸ್ರಿನಲಿ..ಲ್ಯಾಂಡು-ಡೀಲು ಮಾಡುವಾಗ.. ತಗಲ್ಹಾಕ್ಕಂಡೇ..

 

ಸಿದ್ಧ್ರಾಮಯ್ಯ ಉಗ್ದು ನನ್ನ ಉಪ್ಪಾಕ್ತಾರೇ…

ಟಿವಿ ಮುಂದೆ ಡೈಲಾಗ್ ಹೊಡೆದು ನಗ್ತಿರ್ತಾರೇ..

ಕಳಕೊಂಡೇ ಕಳಕೊಂಡೇ…ಮರ್ಯಾದೇ ಕಳಕೊಂಡೇ…

ಹುಡುಕೋದು ಎಲ್ಲಿ…ಇನ್ನು ನಾ

 

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಬಾಯ್ಬಡುಕ ರೇಣುಕ ಕೈಲಿ ತಗಲ್ಹಾಕ್ಕೊಂಡೇ…

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಸಂಪಂಗಿ ನುಂಗಣ್ಣನ ಕೈಲಿ ತಗಲ್ಹಾಕ್ಕಂಡೇ…

 

ಕೆಂಪೇಗೌಡ್ರೂರಲಿ…ಸೀಎಮ್ಮಿನ ಸೀಟಲಿ

ಡಿಕ್ಟೇಟರ್ ಸ್ಟೈಲಲಿ…ಕೂರುತಿದ್ದೆ

ಸಿಕ್ಸ್ಟೀನೈನ್ ಏಜಲಿ…ಸಿಕ್ಸ್ಟೀನು ರೇಂಜಲಿ

ಸಫಾರಿ ಸೂಟಲಿ…. ಬೀಗುತಿದ್ದೇ….

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಗೌರ್ನರ್ ಆದೇಶದ ಕೈಲಿ ತಗಲ್ಹಾಕ್ಕಂಡೇ…

ತ..ತ..ತ..ತ ತಗಲ್ಹಾಕ್ಕಂಡೇ… ನಾನು….ತಗಲ್ಹಾಕ್ಕಂಡೇ ನಾನು

ಸರ್ಕಾರ ರಕ್ಷಿಸೋದ್ರಲ್ಲೇ ತಗಲ್ಹಾಕ್ಕಂಡ್ ಬಿಟ್ನಲ್ಲಪ್ಪೋ ……

ಮೂಲ ಹಾಡು (ಜೋಗಯ್ಯ ಚಿತ್ರದಿಂದ)

ಕೆಂಪೇಗೌಡ್ರೂರಲಿ, ಸಂಪಂಗಿ ಕೇರಿಲಿ,

ಕಬಿಲ್ಡಿಂಗ್ ಸ್ಕೂಲಲಿ…ಓದುತಿದ್ದೆ…

ಸಿಕ್ಸ್ಟೀಸು ಇಸ್ವಿಲಿ..ಸಿಕ್ಸ್ಟೀನು ಏಜಲಿ

ಸಿಕ್ಸೋ ಕ್ಲಾಕ್ ಟೈಮಲಿ… ಹೋಗುತಿದ್ದೇ..

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಚೂರಿ ಚಿಕ್ಕಣ್ಣನ ಕೈಲಿ ತಗಲ್ಹಾಕ್ಕಂಡೇ

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಮಿನುಗು ತಾರೆ ಕಲ್ಪನ ಕೈಲಿ ತಗಲ್ಹಾಕ್ಕಂಡೇ

 

ಇವ ಗಾಜನೂರಿನ ಗಂಡು ಕಣಮ್ಮೋ…ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ..

 

ಮಾವಾನ ಮಗ್ಳಾ ನೀನು..ಹಿಂದ್ಹಿಂದೇ ಬರೋಕೆ

ಅತ್ತೇಯ ಮಗಳಂದ್ಕೋ.. ನಿನ್ನ್ಹಿಂದೇ ಬತ್ತೀನಿ

 

ಶ್ರೀರಾಂಪುರದ ಅಡ್ಡದೊಳಗೆ ಅಂದರ್-ಬಾಹರ್ ಆಡುವಾಗ ತಗಲ್ಹಾಕ್ಕಂಡೇ

ನಿನ್ನಾಣೇ ನಾನು…

ಗೋರಿಪಾಳ್ಯ ಗಲ್ಲಿಯೊಳಗೆ ನೈಂಟಿ ಹೊಡ್ಯೋಕ್ ಹೋಗುವಾಗ ತಗಲ್ಹಾಕ್ಕಂಡೇ

 

ಪೊರ್ಕಿ ಹಂಗೇ ನನ್ನ ಫಾಲೋ… ಮಾಡೋದ್ಯಾಕೋ…

ನಾನವನಲ್ಲ….ನಾನವನಲ್ಲ…

ತಿನ್ನೋ ಹಂಗೇ ದುರುಗುಟ್ಕೊಂಡು… ನೋಡೋದ್ಯಾಕೋ…

ಛೇ…ನಾನಂಥೋನಲ್ಲ..

 

ನಮ್ಮಣ್ಣ ಬಂಟಾನೋ… ನಮ್ ಏರ್ಯಾ ಗೊತ್ತೇನೋ…

ನನ್ ಹಿಂದೇ ಬಿದ್ರೇ… ಮ್ಯಾರೇಜೋ…

 

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಬಂಗಾರಿ ಭಾರತಿ ಕೈಲಿ ತಗಲ್ಹಾಕ್ಕಂಡೇ

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಬೀದಿ ಬಸವಣ್ಣನ ಕೈಲಿ ತಗಲ್ಹಾಕ್ಕಂಡೇ

 

ಇವನ್ಯಾರ ಮಗನೋ..ಹೀಂಗವ್ನಲ್ಲ…..

 

ಮಾಜಿ ಡವ್ವು ಮದುವೇಗ್ಹೋಗಿ ಧಾರೆ ಹುಯ್ಯೋ ಟೈಮಿನಲ್ಲಿ.. ತಗಲ್ಹಾಕ್ಕಂಡೇ

ಅಣ್ಣಮ್ಮನ ಜಾತ್ರೆಯಲಿ ಡಂಕಣಕ ಹಾಕುವಾಗ.. ತಗಲ್ಹಾಕ್ಕಂಡೇ

 

ವಜ್ರಮುನಿಯ ಲುಕ್ಕು ಕೊಟ್ಟು… ಕಾಳ್ಹಾಕ್ತಾನೋ…

ಅಣ್ಣಾವ್ರಂಗೆ ಸ್ಟೈಲಾಗ್ ನಡೆದು… ನಗ್ತಿರ್ತಾನೋ…

ಕಳಕೊಂಡೇ.. ಕಳಕೊಂಡೇ.. ನನ್ನೇ ನಾ ಕಳಕೊಂಡೇ..

ಹುಡುಕೋದು ಎಲ್ಲಿ….ನನ್ನೆನಾ…

 

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಬಾಯ್ಬಡುಕು ಮಂಜುಳ ಕೈಲಿ ತಗಲ್ಹಾಕ್ಕಂಡೇ

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ರೌಡಿ ರಂಗಣ್ಣನ ಕೈಲಿ ತಗಲ್ಹಾಕ್ಕಂಡೇ

 

ಕೆಂಪೇಗೌಡ್ರೂರಲಿ, ಸಂಪಂಗಿ ಕೇರಿಲಿ,

ಕಬಿಲ್ಡಿಂಗ್ ಸ್ಕೂಲಲಿ…ಓದುತಿದ್ದೆ…

ಸಿಕ್ಸ್ಟೀಸು ಇಸ್ವಿಲಿ..ಸಿಕ್ಸ್ಟೀನು ಏಜಲಿ

ಸಿಕ್ಸೋ ಕ್ಲಾಕ್ ಟೈಮಲಿ… ಹೋಗುತಿದ್ದೇ..

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಜೋಗಿ ಮಾದೇಶನ ಕೈಲಿ ತಗಲ್ಹಾಕ್ಕಂಡೇ

ತಗಲ್ಹಾಕ್ಕಂಡೇ ನಾನು….ತಗಲ್ಹಾಕ್ಕಂಡೇ ನಾನು

ಗಂಡ್ಬೀರಿ ರಕ್ಷಿತ ಕೈಲಿ ತಗಲ್ಹಾಕ್ಕಂಡ್ ಬಿಟ್ನಲ್ಲಪ್ಪೋ….

ಅನುವಾದ-ಭಾವಾನುವಾದ ನನಗೆ ಬರುತ್ತೆ ಅನ್ನೋದು ಅನುಮಾನ..

ಆದ್ರೂ ಒಂದ್ ಕೈ ನೋಡೇ ಬಿಡೋಣ ಅಂತ ಶೋರ್ ಚಿತ್ರದ “ಇಕ್ ಪ್ಯಾರ್ ಕಾ ನಗ್ಮಾ ಹೈ” ಹಾಡಿಗೆ ಕೈ ಇಟ್ಟಿದ್ದೇನೆ.. ಪಾಪ ಇನ್ನು ಹಾಡಿನ ಗತಿ 🙂

ಒಂದು ಪ್ರೇಮ ಪಲ್ಲವಿಯ ಪಲುಕಿದು…ಭಾವ ಲಹರಿಯ ಝರಿಯಿದು…

ಬಾಳಿನರ್ಥ..ಬೇರೇನಲ್ಲ…ನನ್ನ ನಿನ್ನ ಕಥೆಯೇ ಎಲ್ಲಾ

ಒಂದು ಪ್ರೇಮ ಪಲ್ಲವಿಯ ಪಲುಕಿದು….||

ಏನೋ ಗಳಿಸಲೆಂದು ಕಳಕೊಂಡು…ಕಳೆದುಕೊಂಡು ಮತ್ತೆ ಗಳಿಸಲೆಂದು..

ಬಾಳಿನರ್ಥದ ಸಾರ…ಬಂದು ಹೋಗೋ ನಡುವೆ ವ್ಯಾಪಾರ…

ಎರಡು ಕ್ಷಣಗಳ ಬಾಳಿಂದ…ಕದ್ದು ಬಾಳಬೇಕಿದೆ ಖುಷಿಯಿಂದ..

ಬಾಳಿನರ್ಥ..ಬೇರೇನಲ್ಲ…ನನ್ನ ನಿನ್ನ ಕಥೆಯೇ ಎಲ್ಲಾ

ಒಂದು ಪ್ರೇಮ ಪಲ್ಲವಿಯ ಪಲುಕಿದು….||

ನೀ ನದಿಯ ಧಾರೆಯಾದರೆ….ದಂಡೆ ನಾ – ನಿನ್ನ ತಬ್ಬಿದಾ ಧರೆ,

ನೀಡು ನೀ ನನಗಾಸರೆ…ನಾನಿಹೆನಲ್ಲ ನಿನಗಾಸರೆ

ಕಣ್ಣ ನಡುವೆ ಒಂದು ಕಡಲು…ಬಯಕೆಯ ನೀರಿಂದ ತುಂಬಿದೆ ಒಡಲು

ಬಾಳಿನರ್ಥ..ಬೇರೇನಲ್ಲ,..ನನ್ನ ನಿನ್ನ ಕಥೆಯೇ ಎಲ್ಲಾ

ಒಂದು ಪ್ರೇಮ ಪಲ್ಲವಿಯ ಪಲುಕಿದು….||

ಬಿರುಗಾಳಿಯೇ ಬರಲಿ ಬಿಡು…ಬಂದು ಮರಳೋದು ಖಚಿತ ಬಿಡು

ಈ ಮೋಡಗಳ ಆಟ ಎಷ್ಟೊತ್ತು .. ದ್ರವಿಸಿ ಮಳೆಯಾಗಿ ಸುರಿಯೆ ಮುಗಿದೋಯ್ತು

ಬಾಳಿನರ್ಥ..ಬೇರೇನಲ್ಲ,..ನನ್ನ ನಿನ್ನ ಕಥೆಯೇ ಎಲ್ಲಾ

ಒಂದು ಪ್ರೇಮ ಪಲ್ಲವಿಯ ಪಲುಕಿದು….||

ಮೂಲ ಗೀತೆ ಇಲ್ಲಿದೆ…
ಇಕ್ ಪ್ಯಾರ್ ಕಾ ನಗಮಾ ಹೈ…ಮೌಜೋಂ ಕಿ ರವಾನಿ ಹೈ
ಜಿಂದಗೀ ಔರ್ ಕುಚ್ ಭೀ ನಹಿ…ತೇರಿ ಮೇರಿ ಕಹಾನಿ ಹೈ

ಇಕ್ ಪ್ಯಾರ್ ಕಾ ನಗಮಾ ಹೈ…||

ಕುಚ್ ಪಾಕರ್ ಖೋನಾ ಹೈ…ಕುಚ್ ಖೋಕರ್ ಪಾನಾ ಹೈ
ಜೀವನ್ ಕಾ ಮತಲಬ್ ತೊ…ಆನಾ ಔರ್ ಜಾನಾ ಹೈ
ದೋ ಪಲ್ ಕೆ ಜೀವನ್ ಸೆ…ಎಕ್ ಉಮ್ರ್ ಚುರಾನಿ ಹೈ
ಜಿಂದಗೀ ಔರ್ ಕುಚ್ ಭೀ ನಹಿ…ತೇರಿ ಮೇರಿ ಕಹಾನಿ ಹೈ

ಇಕ್ ಪ್ಯಾರ್ ಕಾ ನಗಮಾ ಹೈ…||

ತೂ ಧಾರ್ ಹೈ ನದಿಯಾ ಕಿ…ಮೈ ತೇರಾ ಕಿನಾರ ಹೂಂ
ತು ಮೇರಾ ಸಹಾರಾ ಹೈ… ಮೈ ತೇರಾ ಸಹಾರಾ ಹೂಂ
ಆಂಖೋಂ ಮೆ ಸಮಂದರ್ ಹೈ…ಆಶಾವೋಂ ಕಾ ಪಾನಿ ಹೈ
ಜಿಂದಗೀ ಔರ್ ಕುಚ್ ಭೀ ನಹಿ…ತೇರಿ ಮೇರಿ ಕಹಾನಿ ಹೈ

ಇಕ್ ಪ್ಯಾರ್ ಕಾ ನಗಮಾ ಹೈ…||

ತೂಫಾನ್ ತೊ ಆನಾ ಹೈ…ಆಕರ್ ಚಲೇ ಜಾನಾ ಹೈ
ಬಾದಲ್ ಹೈ ಯೆ ಕುಚ್ ಪಲ್ ಕಾ…ಚಾಕರ್ ಡಲ್ ಜಾನಾ ಹೈ
ಪರಚಾಯಿಯಾ ರೆಹ್ ಜಾತಿ…ರೆಹ್ ಜಾತಿ ನಿಶಾನಿ ಹೈ

ಜಿಂದಗೀ ಔರ್ ಕುಚ್ ಭೀ ನಹಿ…ತೇರಿ ಮೇರಿ ಕಹಾನಿ ಹೈ

ಇಕ್ ಪ್ಯಾರ್ ಕಾ ನಗಮಾ ಹೈ…||


(ಸಂಜು ಮತ್ತು ಗೀತಾ….ಸೇರಬೇಕು ಅಂತ… ಹಾಡಿನ ಧಾಟಿಯಲ್ಲಿ , ಯಡ್ಯೂರಪ್ಪ ತಮ್ಮ ಗೋಳು ತೋಡಿಕೊಳ್ಳುವ ರೀತಿಯ ಒಂದು ಅಣಕ)

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು
ರೆಡ್ಡಿ ಬ್ರದರ್ಸಗಿಂತ…ಇವ್ರೆ ದೊಡ್ಡ ಕಂಟಕ…ಉರುಳೋದ್ರೆ ಖುರ್ಚಿ.. ಮುಂದೆ ಏನು?
ಮೊನ್ನೆ ಎಲ್ಲಾ ಸೀಟನ್ನು… ಗೆದ್ವಿ ಆದ್ರೂ ನಿಮ್ದೇನು
ಎಲ್ಲಾ ಶಾಸಕರ ಪತ್ರ..ನೀಡುವೆ ನಿಮ್ಮ ವಶಕಿನ್ನು
ನಾಳೆಯಾಗಲಿ ನಾಡಿದ್-ನಾ ದಿಲ್ಲಿ,, ಸೇರುವೆ
ನೋಡಬಾರದೆ ನೋಡಬಾರದೆ ನಮ್ ಬಲವ?

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ಬೀಜೇಪಿಗೊಂದು… ಕಾಂಗ್ರೇಸ್ಸಿಗೊಂದು
ರೂಲ್ಸಂತೆ ಇಂದು..ಸರಿಯೇನು ನಿಮ್ದು
ಏನಾಗಲಿ..ನಮ್ಮ ಗವರ್ನರು ನೀವ್
ನಿಮ್ಮ ದಿಲ್ಲಿ ದರ್ಬಾರು… ಬೇಗ ಕೊನೆಯಾಗಲಿ

ಇಡಿಯ ದೇಶದಲ್ಲಿ…ದೊಡ್ಡ ಸುದ್ದಿಯಾದ್ರಿ ನಿನ್ನೆ
ವಿರೋಧಪಕ್ಷದ ರೀತಿ…. ನೀವು ನಮ್ಗೆ ಕೊಟ್ರಿ ಕೈನಾ
ಇತಿಹಾಸದ… ಪುಟಕಾಣದ… ನಿಲುವೇ. ನಿಮ್ಮದೇ..?
ನಾಳೆಯಾಗಲಿ… ನಾಡಿದ್-ನಾ ದಿಲ್ಲಿ,, ಸೇರುವೆ
ನೋಡಬಾರದೆ… ನೋಡಬಾರದೆ ನಮ್ ಬಲವ?

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ನಮ್ಮ್ ಪಾರ್ಟಿಯೋರು… ಒದ್ದಾಡಿ ಹೇಗೋ
ಎಮ್ಮೆಲ್ಲ್ಯೆ ಎಲ್ರೊ..ನಮ್ಮ ಹಿಂದೆ ಬಂದ್ರು
ಪತ್ರ ನೋಡಿದೆ… ಅಳುವೇ ಬರುತಿದೆ
ನಿಮ್ಮ ಹಗೆಯಿಂದಲೇ…ನಮ್ಮ ನಗೆ ನಿಂತಿದೆ
ಎದುರು ಪಾರ್ಟಿ ಸನ್ನೆಗೆ…ನೀವು.. ಕುಣಿಯಬಹುದೆ ಹೀಗೆ
ದೆಹೆಲಿ ಮೇಡಂ ಆಜ್ಞೆಗೆ,,,ನೀವು… ಕಾದು ಕುಳಿತ್ರೆ ಹೇಗೆ
ಉಸಿರಾಡುವ… ಶವವಾಗುವೆ… ನಾ.. ಕುರ್ಚಿ.. ಇಲ್ಲದೆ
ಬೆಂಬಲ ಇದ್ದರೂ.. ಸಸ್ಪೆನ್ಷನು… ತರವೇ
ನಾಳೆ ದಿಲ್ಲಿಗೆ ನಿಮ್ಮಲ್ಲಿಗೆ ನಾ ಬರುವೇ…
ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ಮೂಲ ಹಾಡಿನ ಸಾಹಿತ್ಯ ಇಲ್ಲಿದೆ…

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ.. ನನ್ನ ಸಂಗಾತಿ ನೀ..
ನಿನ್ನ ಈ ಕಣ್ಣಲೀ… ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ… ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ… ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ.. ಪುತ ಕಾಣದ…. ಒಲುಮೆ… ನೀಡುವೇ…
ಮಳೆಯಾ ಹನಿ… ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ತಂಗಾಳಿಯಾಗೋ ಬಿರುಗಾಳಿಯಾಗೋ
ನೀ ಒಮ್ಮೆ ಬಂದು.. ನನ್ನ ಸೋಕಿ ಹೋಗು
ನಿನ್ನ ನೋಡದೇ… ಅಳುವೇ ಬರುತಿದೇ
ನಿನ್ನ ನಗುವಿಲ್ಲದೇ …ಜಗ ನಿಂತಂತಿದೆ..
ನಿದಿರೆ ಬರದ ಕಣ್ಣಿಗೆ… ಬಾರೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ…. ಬಾರೆ ಜೀವ ತುಂಬು ಹಾಗೆ
ಉಸಿರಾಡುವ… ಶವವಾದೆ ನಾ… ನೀನು… ಇಲ್ಲದೇ
ಮಳೆ ನಿಂತರೂ..ಮರದಾ ಹನಿ… ತರವೇ
ಬಾ ಇಲ್ಲಿಗೆ… ನನ್ನಲ್ಲಿಗೆ…. ನನ್ನೊಲವೇ..
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…

ನೆನಪುಗಳ ಬಿಸಿಗಾಳಿ

ಹಗಲಿರುಳು ಬೀಸುತಿದೆ

ನಿನ್ನಾಗಮನದ ಮಂದಾನಿಲವ

ಮನವು ಬಯಸುತ್ತಿದೆ

ಪ್ರತಿಕ್ಷಣದ  ಪ್ರತೀಕ್ಷೆಯಲಿ

ಭಾವ ಬೇಸತ್ತಿದೆ

ಬಾ ಬಿರುಮಳೆಯಾಗಿ…

ಭರವಸೆಯ ಬೇರು ಸಾಯುತ್ತಿದೆ…

ನೀರೇ ಇಲ್ಲದೆ

ಓ ನೀರೆ ನೀನಿಲ್ಲದೆ….!!!