Archive for ಆಗಷ್ಟ್, 2011

ಶಂಕರ್ ನಾಗ್ ಅವರು….. ಸಂತೋಶ್ ಹೆಗ್ಡೆಯವರ ಕೆಲಸ ಮೆಚ್ಚಿ……ಸಂತೋಷಕ್ಕೆ ಹಾಡು ಸಂತೋಷಕ್ಕೆ ಅನ್ನೋ ಗೀತಾ ಚಿತ್ರದ ಗೀತೆ ಹೀಗೆ ಹಾಡ್ತಿದ್ದಾರೆ ನೊಡಿ…..

ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….
ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….

ದುಡಿದು…. ನ್ಯಾಯಕ್ಕೆ ದುಡಿದು
ಹಣಿದು…. ಭ್ರಷ್ಟರ ಹಣಿದು………… ಬಂದ್ರಂತೆ……………….

ಸಂತೋಶ್ ಹೆಗ್ಡೆ….. ನಮ್ಮ ಸಂತೋಶ್ ಹೆಗ್ಡೆ

ಲೂಟಿಯ ಬಗ್ಗು ….ಬಡಿಯುವಂತೆ
ಢೋಂಗಿಯನ್ನು…. ಹಿಡಿಯುವಂತೆ | 2 ಸಲ|

ಸ್ಕ್ಯಾಮು ಲೀಕು….. ಆಗುವಂತೆ
ನಾಡ ಮಂದಿ…. ಮೆಚ್ಚುವಂತೆ
ಮೈನ್ಸು ಲಾಭಿ…. ಕರಗುವಂತೆ…………………

ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ

ಅಬ್ಬಾಬ್ಬಾ..ಅಬ್ಬಾ…

ಯೆಡ್ಡಿಯೇನು ರೆಡ್ಡಿಯೇನು
ಮೋಸ ಮಾಡಲು ಬೇಧವೇನು | 2 ಸಲ |

ಎಲ್ಲ ಲೂಟಿ…. ಮಾಡಿದಾಗ
ಗಣಿಯ ವರದಿ…. ಬರೆದು ನೀವು
ಕುರ್ಚಿ ಬಿಡಿಸಿ………….. ಓಡ್ಸಿದ್ರೇನು…………………

ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….
ಸಂತೋಶ್ ಹೆಗ್ಡೆ…. ನಮ್ಮ ಸಂತೋಶ್ ಹೆಗ್ಡೆ….

ದುಡಿದು…. ನ್ಯಾಯಕ್ಕೆ ದುಡಿದು
ಹಣಿದು…. ಭ್ರಷ್ಟರ ಹಣಿದು………… ಬಂದ್ರಂತೆ…….

ಸಂತೋಶ್ ಹೆಗ್ಡೆ….. ನಮ್ಮ ಸಂತೋಶ್ ಹೆಗ್ಡೆ

Advertisements

‘ಸತ್ಯ ಈಸ್ ಇನ್ ಲವ್’ ಚಿತ್ರದ ‘ಟೈಟಲ್ ಸಾಂಗ್’ ಹಾಡ್ತಾ ಇರೋದು ಸ್ಕ್ಯಾಮ್ ಗುರು ಸಾಕ್ಷಾತ್ ಮಾಜಿ ಸಿ.ಎಮ್ ಯಡಿಯೂರಪ್ಪ 🙂

ವೀಡಿಯೋ ಜೊತೆಗೆ ಓದಿ ನೋಡಿ… ಇನ್ನೂ ಮಜಾ ಇರುತ್ತೆ 🙂

ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಹೊರ ಹೋದೆನು… ಹೊರ ಹೋದೆನು… ಮೊನ್ನೆ ತಾನೇ
ನನ್ನ ಡೀಲಿಗೆ… ನನ್ನ ಗಾದಿಗೆ… ಮುಳ್ಳಾದ್ರು ಹೆಗ್ಡೆ

ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್
ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್

ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಹೊರ ಹೋದೆನು… ಹೊರ ಹೋದೆನು… ಮೊನ್ನೆ ತಾನೇ

ದೋಚಿದೆ ಬಾಚಿದೆ… ನಾ ಲೂಟಿಯ ಮಾಡಿದೆ
ಡೆಲ್ಲಿಗೂ ಹೋಗಿದೆ… ಎಮ್ಮೆಲ್ಲೆ ಪಾಲೂ ಇದೆ
ಲ್ಯಾಂಡಲೂ ಮೈನ್ಸಲೂ… ಗುಟ್ಟಾಗಿ ಗಂಟ್‌ಮಾಡಿದೆ
ಆಯಿತು ಮುಗೀತು… ಈ ಸುದ್ದಿ ಲೀಕಾಗಿದೆ

ಯಾವ್ದ್ಯಾವ್ದೋ ದಂಧೆ… ಎಷ್ಟೆಷ್ಟೋ ತಿಂದೆ
ನನಗೀಗ… ಜೈಲಿಗೋಗೋ… ಕಾಲ ಬಂದಿತಾ?

ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಹೊರ ಹೋದೆನು… ಹೊರ ಹೋದೆನು…. ಮೊನ್ನೆ ತಾನೇ
ಹೊರ ಹೋದೆನು… ಹೊರ ಹೋದೆನು…. ಮೊನ್ನೆ ತಾನೇ
ನನ್ನ ಡೀಲಿಗೆ… ನನ್ನ ಗಾದಿಗೆ… ಮುಳ್ಳಾದ್ರು ಹೆಗ್ಡೆ

ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್
ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್

ಸುಮ್ಮನೇ ಸುಮ್ಮನೇ… ನನ್ನೇತಕೆ ದೂರುವೆ
ಕೇಂದ್ರ ಸರ್ಕಾರವೇ… ಹಗರಣದ ತೌರ್-ಮನೆ
ಸ್ವಲ್ಪವೇ… ಸ್ವಲ್ಪವೇ… ಈ ರಾಜ್ಯವ ದೋಚಿದೆ
ಅದಕೆ… ಮೊನ್ನೆನೆ… ನಾ ಕುರ್ಚಿ ಬಿಟ್ಟಾಗಿದೆ

ಆ ದೇವರಾಣೇ… ಸೀಯೆಮ್ಮು ನಾನೇ
ಸದಾನಂದ… ನೆಪ ಮಾತ್ರ… ನನ್ನ ಚೋರಿಯೇ

ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಹೊರ ಹೋದೆನು… ಹೊರ ಹೋದೆನು… ಮೊನ್ನೆ ತಾನೇ

ನನ್ನ ಡೀಲಿಗೆ… ನನ್ನ ಗಾದಿಗೆ… ಮುಳ್ಳಾದ್ರು ಹೆಗ್ಡೆ

ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್
ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್

ಎಸ್.ಪಿ ಭಾರ್ಗವಿ ಯಲ್ಲಿ ದೇವರಾಜ್ ಮಾಲಾಶ್ರಿಗೆ ಹೇಳಿದ ಈ ದೇಶದ ಕಥೆ ಇಷ್ಟೇ ಕಣಮ್ಮೊ….ಹಾಡು ಬೆಂಗಳೂರಿನ ಆಟೋ ಪ್ರಯಾಣಿಕರ ಬಾಯಲ್ಲಿ ಈ ಅಣಕವಾಗಿದೆ…….
ಹಾಡಿನ ವಿಡಿಯೋ ಜೊತೆಗೆ ಕೇಳಿ ಮಜಾ ಮಾಡಿ….

ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ
ಚಂ ಚಕ ಚಂ ಚಂ
ಚಂ ಚಕ ಚಂ ಚಂ
ಚಂ ಚಕ ಚಂ ಚಂ
ಚಂ ಚಕ ಚಂ ಚಂ
ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ
ಈ ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ

ಮೀಟರ್ ಹಾಕೋ ಬದ್ಲು
ಕೇಳ್ತಾರಂತೆ ಡಬ್ಬಲು
ಮೀಟರ್ ಹಾಕೋ ಬದ್ಲು
ಕೇಳ್ತಾರಂತೆ ಡಬ್ಬಲು

ಎಲ್ಲೇ ಹೋಗಿ ಒಂದೇ ತರ
ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ

ಈ ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ

ಚಂ ಚಕ ಚಂ ಚಂ
ಚಂ ಚಕ ಚಂ ಚಂ
ಚಂ ಚಕ ಚಂ ಚಂ
ಚಂ ಚಕ ಚಂ ಚಂ

ಮೀಟರು ಎಷ್ಟೂ… ತೋರಿಸುತ್ತೊ ಅಷ್ಟೇ
ಜಾಸ್ತಿಯೆಂದು ವಾದಮಾಡಬೇಡ….. ತಪ್ಪು…..
ಪ್ರಶ್ನೆ ಅವರ ಕೇಳಬೇಡ…… ತಪ್ಪು……
ಕರೆದಲ್ಲಿ ಬರದೇ…. ಮಾಡ್ತಾರೆ ತರಲೆ
ಯಾಕೆ ಎಂದು ಕೇಳಬೇಡ…….. ತಪ್ಪು
ನಿನ್ನ ಬಾಯನ್ನೇ ತೆರೆಯಬೇಡ……. ತಪ್ಪು
ಸರಿ ಆಟೋ ಹತ್ತು
ತೆಪ್ಪಗ್ ಕಾಸು ಕೊಟ್ಟೂ
ಸರಿ ಆಟೋ ಹತ್ತು
ತೆಪ್ಪಗ್ ಕಾಸು ಕೊಟ್ಟೂ
ಸರಿ ತಪ್ಪು ಗೊತ್ತಿಲ್ದಿರೊ
ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ

ಈ ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ

ಚಂ ಚಕ ಚಂ ಚಂ
ಚಂ ಚಕ ಚಂ ಚಂ

ಕಂಪ್ಲೇಂಟು ಕೊಡ್ತೆ ಹಾ…ಅಂದ್ರೂನೂ ಅಷ್ಟೇ
ಸುಮ್ನೇ ಜಗಳಮಾಡಿ, ಟೈಮು ಹಾಳು…. ಕೇಳು
ಲಂಚ ತಿಂದ ಜನ, ಕೇಳಲಾರ್ರು…..ಗೋಳು
ಮಿನಿಮಮ್ಮು ಮೀಟ್ರು….ಚೇಂಜಿಲ್ಲಾ ರೈಟು

ಶಾಂತಿಇಂದ ಗಾಂಧಿನೋಟು ಕೊಟ್ಟು…. ಹೋಗು
ಚಿಲ್ರೆ ಕೇಳಿ ಚಿಲ್ರೆ ಆಗ್ತಿ ನೀನು ….. ನಂಬು
ಬೇಕಿದ್ರೆ ನೀನು ಹತ್ಕೋ
ಇಲ್ಲ್ದಿದ್ರೆ ತೆಪ್ಪಗ್ ನಿಂತಕೋ..
ಬೇಕಿದ್ರೆ ನೀನು ಹತ್ಕೋ
ಇಲ್ಲ್ದಿದ್ರೆ ತೆಪ್ಪಗ್ ನಿಂತಕೋ..

ಮತ್ತೊಂದ್ ಆಟೋ ಬರೊವರ್ಗೂ

ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ
ಈ ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ

ಮೀಟರ್ ಹಾಕೋ ಬದ್ಲು
ಕೇಳ್ತಾರಂತೆ ಡಬ್ಬಲು
ಮೀಟರ್ ಹಾಕೋ ಬದ್ಲು
ಕೇಳ್ತಾರಂತೆ ಡಬ್ಬಲು

ಎಲ್ಲೇ ಹೋಗಿ ಒಂದೇ ತರ
ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ

ಈ ಆಟೋದ್ ಕತೆ ಇಷ್ಟೆ ಕಣ್ಣಮ್ಮೊ
ಇಲ್ಲ್ ಚರ್ಚೆ ಮಾಡಿ ಲಾಭ ಇಲ್ಲಮ್ಮೊ

ಯಡಿಯೂರಪ್ಪ ಬಣದ ಸದಾನಂದ ಗೌಡ್ರು ಮುಖ್ಯ ಮಂತ್ರಿ ಆದ ಖುಷಿಯಲ್ಲಿ ಮಾಜಿ ಸೀಎಂ ಸಾಹೇಬರು ಕವಿರತ್ನ ಕಾಳಿದಾಸನ ಗೆಟಪ್ಪಿನಲ್ಲಿ..

ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡನ್ನು ಹಿಂಗೆ ಹಾಡ್ತಿದ್ದಾರೆ…

ಕೆಳಗೆ ವೀಡಿಯೊ ಲಿಂಕ್ ಇದೆ ನೋಡಿ…ವೀಡಿಯೊ ನೋಡ್ತಾ ಈ ಹಾಡು ಕೇಳಿ…

ಖುಷಿ ಆದ್ರೆ ನಂಗೊಂದ್ ಮಾತು ಮರೀದೆ ಹೇಳಿ…..

ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..

ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ …||

ಬಣವೆರಡು ಕಮಲದಲಂತೆ…ಮಂತ್ರಿಯಾಗಲು ದೊಂಬಿಯಂತೆ ||೨||
ಶಾಸಕರು ಎಂಪಿಗಳಂತೆ… ಈ ಜಗಳ… ಹೂ-ಬಣ ಸಂತೆ ||೨||
ನೆಡೆಯುತಿದೆ ನಾಟಕದಂತೆ…… ನೆಡೆಯುತಿದೆ ನಾಟಕದಂತೆ ||೨||

ಪಾರ್ಟಿಯೇ ಧರೆಗಿಳಿದಂತೆ
ಈ ಹಂತದಿ… ಸೋಲೆನೂ ಸೋಲೇ ನಾನೂ

ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ…||

ಗವರ್ನಮೆಂಟು ಬೀಳದಂತೆ… ಭಿನ್ನರು ಮೇಲೇಳದಂತೆ
ಇರುವ ಹಳೆ ಕೇಸೆಲ್ಲಾ…ಎನ್-ಕ್ವಾಯರಿ… ಆಗದಿರದಂತೆ ||೨||

ಜೊತೆಯಾಗಿ ನೀವಿರಿ ಸಾಕು…. ಭೂ-ಲೂಟಿ ವರ್ಗದಂಧೆ..
ಈ ರಾಜ್ಯವ…ನುಂಗುವೆ…ನುಂಗ್ವೇ..ನಾನು.

ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..

ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ …||


——————————————————————-
ಮೂಲ ಕವಿರತ್ನ ಕಾಳಿದಾಸ… (ಕೃಪೆ: ಕನ್ನಡ ಲಿರಿಕ್ಸ್.ಕಾಂ )

ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನಾ ಬಯಕೆ ತುಂಬುವೇ
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನಾ ಬಯಕೆ ತುಂಬುವೇ
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ

ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ ||೨||
ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ ||೨||
ನಡೆಯುತಿರೆ ನಾಟ್ಯದಂತೇ ನಡೆಯುತಿರೆ ನಾಟ್ಯದಂತೇ ||೨||
ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು ಸೋತೆ ನಾನೂ

ಸದಾ ಕಣ್ಣಲ್ಲೇ ಪ್ರಣಯದಾ ಕವಿತೆ ಹಾಡುವೆ

ಗುಡುಗುಗಳು ತಾಳದಂತೇ ಮಿಂಚುಗಳು ಮೇಳದಂತೆ

ಸುರಿವಾ ಮಳೆ ನೀರೆಲ್ಲಾ ಪನ್ನೀರ ಹನಿಹನಿಯಂತೇ ||೨||

ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು ಸೋತೆ ನಾನೂ

ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲೀ ಒಲವಿನಾ ಬಯಕೆ ತುಂಬುವೇ

ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೇ…

ಸುಮ್ಮ ಸುಮ್ಮನೆ ನಗುವ ಸದಾನಂದ ಗೌಡರ ನೆನಪು ಮಾಡ್ಕೋತಾ…

ಉಪೇಂದ್ರರ ಎ ಸಿನೆಮಾದ ಸುಮ್ ಸುಮ್ನೆ ನಗ್ತಾಳೆ….ಧಾಟಿಯಲ್ಲಿ ಓದಿ..ಈ ಅಣಕ..:-)

ಸುಮ್ಸುಮ್ನೆ.. ನಗ್ತಾರೆ…ಎ ಎ
ಹಲ್ಕಿರಿದು ಮಿಂಚ್ತಾರೆ..ಎ ಎ
ಶೆಟ್ರಾದ್ರು… ಹೈಲ್ ಹೈಲು..
ಈಶ್ವರಪ್ಪನ.. ಹಾರ್ಟ್ ಫೈಲು…
ಯಡ್ಡಿಫುಲ್ ಕುಷ್… ಆಗವ್ರೆ..

ಸುಮ್ಸುಮ್ನೆ.. ನಗ್ತಾರೆ…||

ಎರಡನೆ ಇನ್ನಿಂಗ್ಸ್.. ಸ್ಟಾರ್ಟ್ ಆಗೊಯ್ತು
ಯಡ್ಡಿಯು ಸೀಟ್‌ಬಿಟ್…ಹೋಗಾಯ್ತು
ಪಾರ್ಟಿಯ ಶಿಸ್ತು… ಹಾಳಾಗ್ ಹೋಯ್ತು..
ಯಡ್ಡಿಯ ಗೌರ್‌ಮೆಂಟ್… ಹಾಳ್ಮಾಡ್ತು

ಪಾರ್ಟಿಯು ಎರಡು… ಪೀಸ್ ಆಗೋದ್ರೂ
ಪಾಲಿಟಿಕ್ಸು ಆನಾಗಿದೆ…ಎ ಎ

ಸುಮ್ಸುಮ್ನೆ.. ನಗ್ತಾರೆ…ಎ ಎ
ಹಲ್ಕಿರಿದು ಮಿಂಚ್ತಾರೆ..ಎ ಎ
ಶೆಟ್ರಾದ್ರು… ಹೈಲ್ ಹೈಲು..
ಈಶ್ವರಪ್ಪನ.. ಹಾರ್ಟ್ ಫೈಲು…
ಯಡ್ಡಿಫುಲ್ ಕುಷ್ ಆಗವ್ರೆ..:-)

ಗಣಿರೆಡ್ಡಿ ಬ್ಯಾಟ್ರಿ… ವೀಕಾಗ್ ಹೋಯ್ತು
ಸ್ಕ್ಯಾಮುಗಳೆಲ್ಲ… ಲೀಕಾಯ್ತು
ತಪ್ಪುಗಳಿಂದ… ಪಕ್ಷ ಕೆಟ್ಟೊಯ್ತು
ಒಟ್ಟಿಗೆ ಇವ್ರ್ ಮನೆ…. ಹಾಳಾಯ್ತು
ಇಷ್ಟೆಲ್ಲ ಆದ್ರು,…. ಆರ್ ತಿಂಗಳ ನಂತ್ರ…ಮತ್ ಯಡ್ಡಿ ಬರ್ತಾರಂತೆ.. ಎ ಎ !!!

ಸುಮ್ಸುಮ್ನೆ.. ನಗ್ತಾರೆ…ಎ ಎ
ಹಲ್ಕಿರಿದು ಮಿಂಚ್ತಾರೆ..ಎ ಎ
ಶೆಟ್ರಾದ್ರು… ಹೈಲ್ ಹೈಲು..
ಈಶ್ವರಪ್ಪನ.. ಹಾರ್ಟ್ ಫೈಲು…
ಯಡ್ಡಿಫುಲ್ ಕುಷ್ ಆಗವ್ರೆ..:-)

೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦-೦
ಮೂಲ ಹಾಡು ಇಲ್ಲಿದೆ
ಕೃಪೆ: ಕನ್ನಡ ಲಿರಿಕ್ಸ್.ಕಾಂ

ಸುಮ್‍ಸುಮ್ನೆ ನಗ್ತಾಳೆ..ಎ..ಎ
ಝುಮ್‍ಝುಮ್ನೆ ಮಿಂಚ್ತಾನೆ..ಎ..ಎ
ಯೌವನವೆ ಐಲ್ ಐಲು
ಹೃದಯಗಳ ಬ್ರೇಕ್ ಫೇಲು
ಆಕ್ಸಿಡೆಂಟ್ ಆಗ್ ಹೋಗಿದೆ
ಸುಮ್‍ಸುಮ್ನೆ ನಗ್ತಾಳೆ..ಎ..ಎ
ಝುಮ್‍ಝುಮ್ನೆ ಮಿಂಚ್ತಾನೆ..ಎ..ಎ

ಹಾರ್ಟ್ ಅನ್ನೊ ಇಂಜಿನ್ ಸೀಜ್ ಆಗೋಯ್ತು
ಬುದ್ಧಿಯ ಹೆಲ್ಮೆಟ್ ಹಾರೋಯ್ತು
ಪ್ರಾಯದ ಗ್ಲಾಸು ಚೂರಾಗೋಯ್ತು
ಲಜ್ಜೆಯ ಬಾನೆಟ್ ಹಾರೋಯ್ತು
ಬಾಡಿಗಳೆರಡು ಕ್ರ್ಯಾಶಾಗಿ ಹೋದ್ರು
ಲವ್ ಲೈಟ್ಸು ಆನಾಗಿದೆ

ಸುಮ್‍ಸುಮ್ನೆ ನಗ್ತಾಳೆ..ಎ..ಎ
ಝುಮ್‍ಝುಮ್ನೆ ಮಿಂಚ್ತಾನೆ..ಎ..ಎ
ಯೌವನವೆ ಐಲ್ ಐಲು
ಹೃದಯಗಳ ಬ್ರೇಕ್ ಫೇಲು
ಆಕ್ಸಿಡೆಂಟ್ ಆಗ್ ಹೋಗಿದೆ

ಮನಸೆಂಬ ಬ್ಯಾಟ್ರಿ ವೀಕಾಗ್ ಹೋಯ್ತು
ಮಾತುಗಳೆಲ್ಲ ಆಫಾಯ್ತು
ಅಪ್ಪುಗೆಯಿಂದ ಆಕ್ಸೆಲ್ ಕಟ್ಟಾಯ್ತು
ಮುತ್ತಿಗೆ ನೂರು ಜ್ಯಾಮಾಯ್ತು
ಇಷ್ಟೆಲ್ಲ ಆದ್ರು
ಡೆಕ್ಕಲ್ಲಿ ಮಾತ್ರ ಲವ್ ಸಾಂಗು ಬರ್ತಾ ಇದೆ..ಎ..ಎ

ಸುಮ್‍ಸುಮ್ನೆ ನಗ್ತಾಳೆ..ಎ..ಎ
ಝುಮ್‍ಝುಮ್ನೆ ಮಿಂಚ್ತಾನೆ..ಎ..ಎ
ಯೌವನವೆ ಐಲ್ ಐಲು
ಹೃದಯಗಳ ಬ್ರೇಕ್ ಫೇಲು
ಆಕ್ಸಿಡೆಂಟ್ ಆಗ್ ಹೋಗಿದೆ
ಸುಮ್‍ಸುಮ್ನೆ ನಗ್ತಾಳೆ..ಎ..ಎ
ಝುಮ್‍ಝುಮ್ನೆ ಮಿಂಚ್ತಾನೆ..ಎ..ಎ