ಮೇಯರ್ ಮುತ್ತಣ್ಣ ಚಿತ್ರದ ಹಳ್ಳಿಯಾದರೇನು ಶಿವ ….ದಿಲ್ಲಿಯಾದರೇನು ಶಿವ ಕೇಳಿದ್ದಿರಲ್ವಾ?
ಈಗಿನ ಹಗರಣಗಳ ಸರಮಾಲೆ ಕಂಡಿದ್ರೆ…ಅಣ್ಣಾವ್ರು ಬಹುಷಃ ಹೀಗೆ ಹಾಡ್ತಾ ಇದ್ರೇನೋ…
ಯಡ್ಡಿಯಾದರೆನು ಶಿವ… ರೆಡ್ಡಿಯಾದರೇನು ಶಿವ
ಇವರೆಲ್ಲಾ ಒಂದೇ ಶಿವ… ಎಲ್ಲಾ ತಿಂದವ್ರೇ ಶಿವ
ಇವರೆಲ್ಲಾ…. ತಿಂದವ್ರೇ ಶಿವ
ಎಲ್ಲಾ ಸಂಪತ್ತು ಕದ್ದೇ…ಎಲ್ಲರಿಗೂ ಲಂಚಾ ಕೊಟ್ಟೇ..
ಎಲ್ಲಾ ಸಂಪತ್ತು ಕದ್ದೇ…ಎಲ್ಲರಿಗೂ ಲಂಚಾ ಕೊಟ್ಟೇ..
ದೋಚಿಕೊಂಡು ಬಾಚುತಿರುವರೋ… ದುರಾಸೆ ಜನ… ಹಗರಣ ಮಾಡುತಿರುವರೋ
ಜನಹಿತವ ಮರೆತು…ಸ್ವಜನರನು ಪೊರೆದು.. ಅನ್ಯಾಯ ಮಾಡುತಿರುವರೋ
ಯಡ್ಡಿಯಾದರೆನು ಶಿವ… ರೆಡ್ಡಿಯಾದರೇನು ಶಿವ
ಇವರೆಲ್ಲಾ ಒಂದೇ ಶಿವ… ಎಲ್ಲಾ ತಿಂದವ್ರೇ ಶಿವ
ಇವರೆಲ್ಲಾ…. ತಿಂದವ್ರೇ ಶಿವ
2G ಯಲ್ಲಿ ಬಿದ್ದರೇನು…ಗಣಿಯಲಿ ಕದ್ದರೇನು
2G ಯಲ್ಲಿ ಬಿದ್ದರೇನು…ಗಣಿಯಲಿ ಕದ್ದರೇನು
ಸಾವಿರಾರು ಕೋಟಿ ತಿಂದಿರಿ….ನಿಮ್ಮನ್ನು…ಮನ್ನಿಸಲು ಸಾಧ್ಯವೇನು?
ದೇಶವನ್ನು ಮಾರಿ…ಲಾಭಿಗಳಿಗೆ ಲಾಭಮಾಡಿ …ಕೈತುಂಬಾ ಕಾಸು ಪಡೆವರೋ
ಯಡ್ಡಿಯಾದರೆನು ಶಿವ… ರೆಡ್ಡಿಯಾದರೇನು ಶಿವ
ಇವರೆಲ್ಲಾ ಒಂದೇ ಶಿವ… ಎಲ್ಲಾ ತಿಂದವ್ರೇ ಶಿವ
ಇವರೆಲ್ಲಾ ಒಂದೇ ಶಿವ… ಎಲ್ಲಾ ತಿಂದವ್ರೇ ಶಿವ
ಇವರೆಲ್ಲಾ…. ತಿಂದವ್ರೇ ಶಿವ
sakkathagyte shiva 🙂
thanks 🙂
he is good song for