ಆರು ಹಿತವರು ನಿನಗೆ ಈ ಮೂವರೊಳಗೆ …ಶೆಟ್ಟರೋ ಗೌಡರೋ… ಇಲ್ಲ ಅನಂತ ಕುಮಾರೋ

Posted: ಆಗಷ್ಟ್ 2, 2011 in aNaka, ಅಣಕ

(ಪುರಂದರ ದಾಸರ ಕ್ಷಮೆ ಕೋರಿ )

ಆರು ಹಿತವರು ನಿನಗೆ ಈ ಮೂವರೊಳಗೆ
ಶೆಟ್ಟರೋ ಗೌಡರೋ… ಇಲ್ಲ ಅನಂತ ಕುಮಾರೋ

ದಿಲ್ಲಿಯಿಂದ ಕಳಿಸಿದ ಗಣ್ಯರನು ಕರೆತಂದು
ಯಡ್ಡಿ ಮನೆಗೆ ಅವರ ಕಾರಲಿ ರವಾನಿಸಿ
ಭಿನ್ನವಿಲ್ಲದೇ ಪಕ್ಷ ಸೂಚಿಸಿರುವ ವ್ಯಕ್ತಿಯ
ಕುರ್ಚಿಯಲಿ ಕೂಡಿಸಲು ಕಸರತ್ತು ಬಿಜೆಪಿಯಲಿ

ಮುನ್ನ ಶತಕೋಟಿ ಬೆಲೆಬಾಳುವವಾರಾಳಿದ ನಾಡನು
ತನ್ನ 120 ಶಾಸಕರ ಒಲಿಸಿ
ಭಿನ್ನರನು ಮನೆಗಟ್ಟಿ ಪಾರ್ಟಿ ಮಾಡಲುಗಟ್ಟಿ
ನಿನ್ನೆಯಿಂದ ಅಶೋಕದಲಿ ಚರ್ಚೆ ಮಾಡುತಿಹರು…

ಅಸ್ಥಿರದ ಕುರ್ಚಿಯಿದು ನೆಚ್ಚಿ ನೀ ಕೆಡಬೇಡ
ಪಕ್ಷದಲಿ ನಿನ್ನೆ ಕಂಡ್ಯ ಯಡ್ಡಿಕುರ್ಚಿಯಿಮ್ ಕಿತ್ತೊಗೆದು..
ಶಿಸ್ತೀನಿಂ ಸರಕಾರ ನಡೆಸಲಾಗದಿರೇ
ಕಿತ್ತೊಗೆಯುವರು ಮುಂದೆ ನೆನಪಿರಲಿ ನಾಯಕ

—————————————–

ಮೂಲ :ಪುರಂದರ ದಾಸರು
ಕೃಪೆ:http://kannadahaadulyrics.blogspot.com

ಹಾಡು: ಆರು ಹಿತವರು ನಿನಗೆ

ಆರು ಹಿತವರು ನಿನಗೆ ಮೂರು ಮಂದಿಗಳೊಳಗೆ
ನಾರಿಯೋ ಧಾರುಣಿಯೋ ಬಲು ಧನದ ಸಿರಿಯೋ

ಅನ್ಯರಲಿ ಜನಿಸಿದ ಅಂಗನೆಯ ಕರೆತಂದು
ತನ್ನ ಮನೆಗೆ ಅವಳ ಯಜಮಾನಿಯೆನಿಸಿ
ಭಿನ್ನವಿಲ್ಲದ ಅರ್ಧ ದೇಹಯೆನಿಸುವ ಸತಿಯು
ಕಣ್ಣಿನಲಿ ನೋಡಲು ಅಂಜುವಳು ಕಾಲವಶದಿ

ಮುನ್ನ ಶತಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನ ಅಸುವಳಿಯೇ ಹೊರಗೆ ಹಾಕುವರು

ಅಸ್ಥಿರದ ದೇಹವಿದು ನೆಚ್ಚಿ ನೀ ಕೆಡಬೇಡ
ಸ್ವಸ್ಥ್ಯದಲಿ ನೆನೆ ಕಂಡ್ಯ ಹರಿಪಾದವ ಚಿತ್ತದೊಳು
ಶುದ್ಧಿಯಿಂ ಪುರಂದರ ವಿಠಲನೇ
ಉತ್ತಮೋತ್ತಮ ಎಂದು ಸುಖಿಯಾಗು ಮನುಜ

Advertisements
ಟಿಪ್ಪಣಿಗಳು
  1. sukhesh ಹೇಳುತ್ತಾರೆ:

    ಪುಂಖಾನು ಪುಂಖ ಬರುದ್ರೂ quality ಕಮ್ಮಿ ಆಗಲ್ವಲ್ಲ ಮಾರ್ರೆ 🙂

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s