ಮುಂದೊಂದು ದಿನ ಕನ್ನಡ ಕವಿತೆ ಹೀಗಿರಬಹುದೇನೋ..
ನಾನೆಷ್ಟು ಪೋಸ್ಟಿದರು ನೀ ಕಮೆಂಟಲೇ ಇಲ್ಲ
ನಾನೆಷ್ಟು ಬ್ಲಾಗಿದರೂ ನೀ ಬಾಗ್ಲು ತೆಗಿಲಿಲ್ಲ
ನಾನೆಷ್ಟು ಪಿಂಗಿದರೂ ನೀ ಪಿಂಗ್-ಬ್ಯಾಕಲೆ ಇಲ್ಲ
ನಾನೆಷ್ಟು ಪೋಕಿದರೂ ನೀ ನೀಕಲೆ ಇಲ್ಲ
ನಾನೆಷ್ಟು ಟ್ವೀಟಿದರೂ ನೀ ಚಾಟಲೆ ಇಲ್ಲ
ನಾನೆಷ್ಟು ಮೆಯ್ಲಿದರೂ ನೀ ರಿಪ್ಲೈಸಲೇ ಇಲ್ಲ
ನಾನೆಷ್ಟು ಕಾಲಿದರೂ ನೀ ಪಿಕ್ಕಲೆ ಇಲ್ಲ
ನಾನೆಷ್ಟು ಎಸ್ಸೇಮೆಸ್ಸಿದರೂ ನಿನ್ನ ಮೆಸ್ಸೇಜೆ ಇಲ್ಲ
ಹುಡುಗಿ ನಿನ್ನ ಹುಡುಕಿ(ಸರ್ಚಿ) ನಾ ಅಲೆಯದ ಸೈಟುಗಳೇ ಇಲ್ಲ
ಆರ್ಕುಟ್, ಫೇಸ್ಬುಕ್,ಟ್ವೀಟರ್,ಗೂಗಲ್ ಪ್ಲಸ್ಸಿನಲಿ ನೀ ಸಿಗಲಿಲ್ಲ
ಅಕೌಂಟ್ ಓಪನ್ ಆಗ್ಲೇ ಒಂದ್ ವೀಕೂ ಆಗಲಿಲ್ಲ
ನನ್ನ ಹಾರ್ಟಿನ ನೆಟ್ವರ್ಕ್ನನಿಂದ ಆಗ್ಲೇ ಲಾಗೌಟ್ ಆದೆಯಲ್ಲ 🙂
ಈಗಾಗಲೇ ಮುಕ್ಕಾಲುವಾಸಿ ಹಾಗೆಯೇ ಆಗಿದೆ… ವರ್ಡ್ ಪ್ರೆಸ್ಸ್ ನಲ್ಲಿ ಬ್ಲಾಗುಗಳ ಕಣ್ಣಾಡಿಸಿ ನೋಡಿ… 😛
ಆದರೆ, ಮಿತ್ರರೇ! ಕನ್ನಡದ ಕೊಲೆಯಾಗದಂತೆ ನಾವು, ನೀವು ಕಾಪಾಡೋಣ… 🙂
Sooopper