ಇದು ಮನಸಿನ ಮರ್ಮರದ ಇನ್ನೂರನೇ ಪೋಸ್ಟು….
ಓದಿ ಮೆಚ್ಚಿದ ಪ್ರತಿಕ್ರಿಯಿಸಿದ ಪ್ರೀತಿ ತೋರಿಸಿದ ಎಲ್ಲರಿಗೂ ಕೃತಜ್ಞತೆಗಳು….
ಈ ಐಪಿಎಲ್ ನಲ್ಲಿ ಇನ್ನೂರು ದಾಟುವ ಎಲ್ಲಾ ತಂಡಗಳಿಗೂ ಈ ಪೋಸ್ಟು ಅರ್ಪಣೆ… ಸಮರ್ಪಣೆ…
ಮಾಡಿದರು ಹಿಂದಿಯಲಿ ರಿಯಾಲಿಟಿ ಶೋಸು
ಬಾಚಿಕೊಂಡರು ಎರಡೂ ಕೈತುಂಬಾ ಕಾಸು
ಕನ್ನಡದವರೂ ತೊಟ್ಟು ಈಗ ಅದೇ ಶೂಸು
ಮಾಡ್ತಾ ಇದ್ದಾರಲ್ಲ ಕನ್ನಡದ ಬಿಗ್ ಬಾಸು
ನೋಡ್ತಾರಂತ ಏನು ಮಾಡಿದ್ರೂ ವೀವರ್ಸು
ಕಾಣ್ತಾನೆ ಇಲ್ಲ ಹೆಚ್ಚಿನವರಲ್ಲಿ ಮ್ಯಾನರ್ಸು
ಯಾವ್ ಸೀಮೆ ಸೆಲೆಬ್ರಿಟಿ ಜಯಲಕ್ಷ್ಮಿ ನರ್ಸು
ಕಾವಿ ಧರಿಸಿದ ಅಂಡೆ ಪಿರ್ಕಿಗಳೂ ಸ್ಟಾರ್ಸು
ಹೇಳೋಕೇನೋ ಈ ಶೋ… ರಿಯಾಲಿಟಿ
ಟಿ.ಆರ್.ಪಿ.ಯೇ ಇವರ … ಪ್ರಯಾರಿಟಿ
ಇದ್ದುದ್ರಲ್ಲಿ ಬೆಟರು ಸುದೀಪನ ವಾಯ್ಸು
ಮಿಕ್ಕಂತೆ ಅಲ್ಲಿ… ಬರಿ ಗಲಾಟೆ ನಾಯ್ಸು
ಈ ಟೀವಿ-ಗಿಂತ ಆ ಟಿವಿಯೇ ಲೇಸು…
ಜ್ಞಾನದ ಜೊತೆಗೆ ಸ್ವಲ್ಪ ಟೈಮ್-ಪಾಸು
ಸದ್ಯ ಈ ತಲೆನೋವಿಗೆ ಬೇಕಿಲ್ಲ ಪಿಲ್
ಸರ್ಯಾಗಿ ಎಂಟು ಗಂಟೆಗಿದೆ ಐಪಿಎಲ್… 🙂
Great Job vijay. Keep it up….
ದ್ವಿಶತಕಕ್ಕಾಗಿ ಅಭಿನಂದನೆಗಳು.
FB ಗೆ ಬರುವ ಮೊದಲೆ ನಿಮ್ಮ ಬ್ಲಾಗಿನ ಅಭಿಮಾನಿಯಾಗಿದ್ದೆ.
ಚಂದವಾಗಿ ಬರೆಯುತ್ತೀರಿ
ಹೀಗೆಯೇ ಬರೆಯುತ್ತಿರಿ.
ನಾನು ಮೊದಲು ನೋಡಿದ ನಿಮ್ಮ ಪೋಷ್ಟು ಕೂಕಂಬುಕೆ ಮರವಂತೇ ಬೀಚು. ಕೊಂಗಾಟದ ಕುಂದಾಪ್ರ ಬ್ಲಾಗಿಂದ.
ದ್ವಿಶತಕಕ್ಕಾಗಿ ಅಭಿನಂದನೆ.
FB ಗೆ ಬರುವ ಮೊದಲೆ ನಿಮ್ಮ ಬ್ಲಾಗಿನ ಅಭಿಮಾನಿಯಾಗಿದ್ದೆ.
ಚಂದವಾಗಿ ಬರೆಯುತ್ತೀರಿ
ಹೀಗೆಯೇ ಬರೆಯುತ್ತಿರಿ.
ನಾನು ಮೊದಲು ನೋಡಿದ ನಿಮ್ಮ ಪೋಷ್ಟು ಕೂಕಂಬುಕೆ ಮರವಂತೇ ಬೀಚು. ಕೊಂಗಾಟದ ಕುಂದಾಪ್ರ ಬ್ಲಾಗಿಂದ.