Archive for ಏಪ್ರಿಲ್ 12, 2013

ಪೋಸ್ಟು ಹಾಕಿ ಬೇರೆಯವರನ್ನು ತಗಲ್ಹಾಕಿಸೋ(ಟ್ಯಾಗ್ ಮಾಡೋ) ನನ್ನ ಮೇಲೆ ಒಂದು ಅಣಕ… ಟ್ಯಾಗ್ ಮಾಡೋ ಎಲ್ಲಾ… ‘ಟ್ಯಾಗ’ರಾಜರಿಗೆ ಅರ್ಪಣೆ 🙂
ಈ ಸಲ ನನ್ನ ಮೇಲೆ ಒಂದು ಅಣಕ ಬರೆಯೋಣ ಅಂತ… 🙂
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ…ಹಾಲಲ್ಲಾದರು ಹಾಕು… ನೀರಲ್ಲಾದರೂ ಹಾಕು ಧಾಟಿಯಲ್ಲಿ ಅಣಕ… 🙂

ಯಾಕಂದ್ರೆ ಯಡ್ಡಿ ಮೇಲೆ ಅಣಕದ ಮೇಲೆ ಅಣಕ ಬರ್ದಿದ್ದಕ್ಕೆ… ಅವ್ರು ಶ್ಯಾನೆ ಬ್ಯಾಸ್ರ ಮಾಡ್ಕೊಂಡವ್ರೆ… 😀

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ
ವಾಲಲ್ಲಿ ಮರೆಮಾಡಿ… ಟ್ಯಾಗನ್ನು ತೆಗೆದಾಕಿ… ಕ್ಲೀನಾಗಿಡುವೆ ಟ್ಯಾಗವೇಂದ್ರ

ಫೋಟೋವನ್ನಾದರು ಹಾಕು… ವೀಡ್ಯೋವನ್ನಾದರು ಹಾಕು… ಟ್ಯಾಗವೇಂದ್ರ
ಫೋಟೋವನ್ನಾದರು ಹಾಕು… ವೀಡ್ಯೋವನ್ನಾದರು ಹಾಕು … ಟ್ಯಾಗವೇಂದ್ರ
ಫೋಟೋನ ಶೇರ್ ಮಾಡಿ … ವೀಡ್ಯೋನ ಲೈಕ್ ಮಾಡಿ… ಫ್ರೆಂಡಾಗಿರುವೆ… ಟ್ಯಾಗವೇಂದ್ರ

ಚಿತ್ರದಲ್ಲೇ ತಳುಕಿಸು… ಕಮೆಂಟಲ್ಲೇ ಗುರುತಿಸು… ಟ್ಯಾಗವೇಂದ್ರ
ಕಮೆಂಟಲ್ಲಿ ರಾಂಗಾಗಿ… ಮೆಸೆಜಲ್ಲಿ ಕೂಲಾಗಿ… ತೆಗೆಯೆನುತ ಹೇಳ್ವೆ… ಟ್ಯಾಗವೇಂದ್ರ

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ…

ಟ್ಯಾಗುಗಳೇ ಬೇಡೆಂದು… ಎಂದೂ ಹೇಳೆನು ನಾನು… ಟ್ಯಾಗವೇಂದ್ರ

ಸುಮ್ನೆ ಮಾಡ್ಬೇಡಿ ಟ್ಯಾಗ… ಸೇರ್ಸೋ ಮೊದಲೇ ಗುಂಪು
ನನ್ನ ಕೇಳೋ… ಟ್ಯಾಗವೇಂದ್ರ

ಎಲ್ಲೇ ಇದ್ದರೂ ನೀ… ಬೇಡಿಕೊಳ್ಳುವೆ ನಾ … ಟ್ಯಾಗವೇಂದ್ರ
ನಿನ್ನಲ್ಲಿ ದಯಮಾಡಿ… ನೀ ನನ್ನ ಟ್ಯಾಗ್-ಮಾಡ್ದೆ… ಉಳಿದರೆ ಸಾಕು… ಟ್ಯಾಗವೇಂದ್ರ

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ
ವಾಲಲ್ಲಿ ಮರೆಮಾಡಿ… ಟ್ಯಾಗನ್ನು ತೆಗೆದಾಕಿ… ಕ್ಲೀನಾಗಿಡುವೆ ಟ್ಯಾಗವೇಂದ್ರ
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ

ಮೂಲ ಹಾಡು ‘ದೇವತಾ ಮನುಷ್ಯ’ ಚಿತ್ರ ಕೃಪೆ: http://kannadahaadulyrics.blogspot.in/

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ… ನೀರಲ್ಲಿ ಮೀನಾಗಿ… ಹಾಯಾಗಿರುವೆ… ರಾಘವೇಂದ್ರ

ಮುಳ್ಳಲ್ಲಾದರು ನೂಕು… ಕಲ್ಲಲ್ಲಾದರು ನೂಕು… ರಾಘವೇಂದ್ರ

ಮುಳ್ಳಲ್ಲಿ ಮುಳ್ಳಾಗಿ… ಕಲ್ಲಲ್ಲಿ ಕಲ್ಲಾಗಿ… ಒಂದಾಗಿರುವೆ… ರಾಘವೇಂದ್ರ

ಬಿಸಿಲಲಲ್ಲೇ ಒಣಗಿಸು… ನೆರಳಲ್ಲೇ ಮಲಗಿಸು… ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ… ನೆರಳಲ್ಲಿ ತಂಪಾಗಿ… ನಗುನಗುತ ಇರುವೆ… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ

ಸುಖವನ್ನೇ ನೀಡೆಂದು… ಎಂದೂ ಕೇಳೆನು ನಾನು… ರಾಘವೇಂದ್ರ

ಮುನ್ನ ಮಾಡಿದ ಪಾಪ… ಯಾರ ತಾತನ ಗಂಟು…
ಮುನ್ನ ಮಾಡಿದ ಪಾಪ… ಯಾರ ತಾತನ ಗಂಟು…
ನೀನೇ ಹೇಳೂ… ರಾಘವೇಂದ್ರ

ಎಲ್ಲಿದ್ದರೇನು ನಾ….. ಹೇಗಿದ್ದರೇನು ನಾ… ರಾಘವೇಂದ್ರ
ನಿನ್ನಲ್ಲಿ ಶರಣಾಗಿ… ನೀ ನನ್ನ ಉಸಿರಾಗಿ… ಬಾಳಿದರೆ ಸಾಕು… ರಾಘವೇಂದ್ರ