ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ !!! (ನನ್ ಮೇಲೆ… ನನ್ನ ಅಣಕ)

Posted: ಏಪ್ರಿಲ್ 12, 2013 in aNaka, anakavaadu, ಅಣಕ, ಅಣಕವಾಡು, ಗಮ್ಮತ್ತಿನ ಹಾಡು, ಹಾಗೆ ಸುಮ್ಮನೆ, gammaththina haadu, kannada film songs
ಟ್ಯಾಗ್ ಗಳು:, , , , , , , , , , ,

ಪೋಸ್ಟು ಹಾಕಿ ಬೇರೆಯವರನ್ನು ತಗಲ್ಹಾಕಿಸೋ(ಟ್ಯಾಗ್ ಮಾಡೋ) ನನ್ನ ಮೇಲೆ ಒಂದು ಅಣಕ… ಟ್ಯಾಗ್ ಮಾಡೋ ಎಲ್ಲಾ… ‘ಟ್ಯಾಗ’ರಾಜರಿಗೆ ಅರ್ಪಣೆ 🙂
ಈ ಸಲ ನನ್ನ ಮೇಲೆ ಒಂದು ಅಣಕ ಬರೆಯೋಣ ಅಂತ… 🙂
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ…ಹಾಲಲ್ಲಾದರು ಹಾಕು… ನೀರಲ್ಲಾದರೂ ಹಾಕು ಧಾಟಿಯಲ್ಲಿ ಅಣಕ… 🙂

ಯಾಕಂದ್ರೆ ಯಡ್ಡಿ ಮೇಲೆ ಅಣಕದ ಮೇಲೆ ಅಣಕ ಬರ್ದಿದ್ದಕ್ಕೆ… ಅವ್ರು ಶ್ಯಾನೆ ಬ್ಯಾಸ್ರ ಮಾಡ್ಕೊಂಡವ್ರೆ… 😀

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ
ವಾಲಲ್ಲಿ ಮರೆಮಾಡಿ… ಟ್ಯಾಗನ್ನು ತೆಗೆದಾಕಿ… ಕ್ಲೀನಾಗಿಡುವೆ ಟ್ಯಾಗವೇಂದ್ರ

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ
ವಾಲಲ್ಲಿ ಮರೆಮಾಡಿ… ಟ್ಯಾಗನ್ನು ತೆಗೆದಾಕಿ… ಕ್ಲೀನಾಗಿಡುವೆ ಟ್ಯಾಗವೇಂದ್ರ
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ

ಫೋಟೋವನ್ನಾದರು ಹಾಕು… ವೀಡ್ಯೋವನ್ನಾದರು ಹಾಕು… ಟ್ಯಾಗವೇಂದ್ರ
ಫೋಟೋವನ್ನಾದರು ಹಾಕು… ವೀಡ್ಯೋವನ್ನಾದರು ಹಾಕು … ಟ್ಯಾಗವೇಂದ್ರ
ಫೋಟೋನ ಶೇರ್ ಮಾಡಿ … ವೀಡ್ಯೋನ ಲೈಕ್ ಮಾಡಿ… ಫ್ರೆಂಡಾಗಿರುವೆ… ಟ್ಯಾಗವೇಂದ್ರ

ಚಿತ್ರದಲ್ಲೇ ತಳುಕಿಸು… ಕಮೆಂಟಲ್ಲೇ ಗುರುತಿಸು… ಟ್ಯಾಗವೇಂದ್ರ
ಕಮೆಂಟಲ್ಲಿ ರಾಂಗಾಗಿ… ಮೆಸೆಜಲ್ಲಿ ಕೂಲಾಗಿ… ತೆಗೆಯೆನುತ ಹೇಳ್ವೆ… ಟ್ಯಾಗವೇಂದ್ರ

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ…

ಟ್ಯಾಗುಗಳೇ ಬೇಡೆಂದು… ಎಂದೂ ಹೇಳೆನು ನಾನು… ಟ್ಯಾಗವೇಂದ್ರ
ಟ್ಯಾಗುಗಳೇ ಬೇಡೆಂದು… ಎಂದೂ ಹೇಳೆನು ನಾನು… ಟ್ಯಾಗವೇಂದ್ರ
ಸುಮ್ನೆ ಮಾಡ್ಬೇಡಿ ಟ್ಯಾಗ… ಸೇರ್ಸೋ ಮೊದಲೇ ಗುಂಪು
ನನ್ನ ಕೇಳೋ… ಟ್ಯಾಗವೇಂದ್ರ

ಎಲ್ಲೇ ಇದ್ದರೂ ನೀ… ಬೇಡಿಕೊಳ್ಳುವೆ ನಾ … ಟ್ಯಾಗವೇಂದ್ರ
ನಿನ್ನಲ್ಲಿ ದಯಮಾಡಿ… ನೀ ನನ್ನ ಟ್ಯಾಗ್-ಮಾಡ್ದೆ… ಉಳಿದರೆ ಸಾಕು… ಟ್ಯಾಗವೇಂದ್ರ

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ
ವಾಲಲ್ಲಿ ಮರೆಮಾಡಿ… ಟ್ಯಾಗನ್ನು ತೆಗೆದಾಕಿ… ಕ್ಲೀನಾಗಿಡುವೆ ಟ್ಯಾಗವೇಂದ್ರ
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ

ಮೂಲ ಹಾಡು ‘ದೇವತಾ ಮನುಷ್ಯ’ ಚಿತ್ರ ಕೃಪೆ: http://kannadahaadulyrics.blogspot.in/

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ… ನೀರಲ್ಲಿ ಮೀನಾಗಿ… ಹಾಯಾಗಿರುವೆ… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ… ನೀರಲ್ಲಿ ಮೀನಾಗಿ… ಹಾಯಾಗಿರುವೆ… ರಾಘವೇಂದ್ರ
ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ

ಮುಳ್ಳಲ್ಲಾದರು ನೂಕು… ಕಲ್ಲಲ್ಲಾದರು ನೂಕು… ರಾಘವೇಂದ್ರ
ಮುಳ್ಳಲ್ಲಾದರು ನೂಕು… ಕಲ್ಲಲ್ಲಾದರು ನೂಕು… ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ… ಕಲ್ಲಲ್ಲಿ ಕಲ್ಲಾಗಿ… ಒಂದಾಗಿರುವೆ… ರಾಘವೇಂದ್ರ

ಬಿಸಿಲಲಲ್ಲೇ ಒಣಗಿಸು… ನೆರಳಲ್ಲೇ ಮಲಗಿಸು… ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ… ನೆರಳಲ್ಲಿ ತಂಪಾಗಿ… ನಗುನಗುತ ಇರುವೆ… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ

ಸುಖವನ್ನೇ ನೀಡೆಂದು… ಎಂದೂ ಕೇಳೆನು ನಾನು… ರಾಘವೇಂದ್ರ
ಸುಖವನ್ನೇ ನೀಡೆಂದು… ಎಂದೂ ಕೇಳೆನು ನಾನು… ರಾಘವೇಂದ್ರ
ಮುನ್ನ ಮಾಡಿದ ಪಾಪ… ಯಾರ ತಾತನ ಗಂಟು…
ಮುನ್ನ ಮಾಡಿದ ಪಾಪ… ಯಾರ ತಾತನ ಗಂಟು…
ನೀನೇ ಹೇಳೂ… ರಾಘವೇಂದ್ರ

ಎಲ್ಲಿದ್ದರೇನು ನಾ….. ಹೇಗಿದ್ದರೇನು ನಾ… ರಾಘವೇಂದ್ರ
ನಿನ್ನಲ್ಲಿ ಶರಣಾಗಿ… ನೀ ನನ್ನ ಉಸಿರಾಗಿ… ಬಾಳಿದರೆ ಸಾಕು… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ… ನೀರಲ್ಲಿ ಮೀನಾಗಿ… ಹಾಯಾಗಿರುವೆ… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ

ಟಿಪ್ಪಣಿಗಳು
 1. Vasudeva Sharma ಹೇಳುತ್ತಾರೆ:

  ಸೊಗಸಾಗಿದೆ… ಟ್ಯಾಗೇಂದ್ರ ರಾಘವೇಂದ್ರ

 2. Narayan ಹೇಳುತ್ತಾರೆ:

  ಯಡ್ಡಿ-ಯಡವಟ್ಟಪ್ಪನ ಮೇಲಿನ ನಿಮ್ಮ ಅಣಕಗಳು ಎಂದಿನಂತೆ ಮುಂದುವರೆಯಲಿ.. 😀

 3. Narayan ಹೇಳುತ್ತಾರೆ:

  ನೀವೇನೋ ಟ್ಯಾಗವೇಂದ್ರ ಅಂತ ಬಳಸಿದ್ರಿ, 😀 ಇಲ್ಲಿ ಯಾರೋ ನೇರವಾಗಿ ರಾಘವೇಂದ್ರ ಅಂತಲೇ ಬಳಸಿದ್ದಾರೆ..! ಇಲ್ಲಿ ನೋಡಿ..
  http://bennemasaladose.blogspot.in/2010/07/online-offline.html

  Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
  Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
  Online ಇದ್ರೆ ಚಾಟ್ ಮಾಡಿ, ಇಲ್ದಿದ್ರೆ ಮೇಲ್ ಮಾಡಿ,
  ಹಾಯಾಗಿರುವೇ ರಾಘವೇಂದ್ರ!!!
  Online ಆದರೂ ಬಾರೋ, Offline ಆದರೂ ಹೋಗೋ, ರಾಘವೇಂದ್ರ ||repeat||
  .
  ಓರ್ಕುಟ್‌ನಲ್ಲಾದರೂ ನೂಕು, ಪೇಸ್‌ಬುಕ್‌ನಲ್ಲಾದರೂ ನೂಕು ರಾಘವೇಂದ್ರ$$$
  ಹಾ ಆ ಹಾ ಆಆ ಹಾಆಆ ಆಆಆಆಆಆ….
  ಓರ್ಕುಟ್‌ನಲ್ಲಾದರೂ ನೂಕು, ಪೇಸ್‌ಬುಕ್‌ನಲ್ಲಾದರೂ ನೂಕು ರಾಘವೇಂದ್ರ$$$
  ಓರ್ಕುಟ್‌ನಲ್ಲಿ ಸ್ಕ್ರಾಪ್‌ ಮಾಡಿ, ಪೇಸಬುಕ್‌ನಲ್ಲಿ ಪೇಸ್ಟ್‌ ಮಾಡಿ,
  ಪ್ರೆಂಡಾಗಿರುವೆ ರಾಘವೇಂದ್ರ!
  .
  ಟ್ಟಿಟ್ಟರ್‌ನಲ್ಲಾದರು ಕಾಯ್ಸು, ಭಜ್‌ನಲ್ಲಾದರೂ ನೋಯ್ಸು, ರಾಘವೇಂದ್ರ!
  ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿ, ಭಜ್‌ನಲ್ಲಿ ಭಜ್‌ ಮಾಡಿ
  ಟಚ್ಚ(Touch)ಲ್ಲೇ ಇರುವೇ ರಾಘವೇಂದ್ರ!

  .
  Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$

  .
  ಫೋನ್‌ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ$$$
  ಹಾ ಆ ಹಾ ಆಆ ಹಾಆಆ ಆಆಆಆಆಆ….
  ಫೋನ್‌ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ!$
  ಮೋಬಯ್ಲಿನಲ್ಲಿರುವ ಬ್ಯಾಲೆನ್ಸು ಯಾರಾ ತಾತನಾ ಗಂಟು!
  ಮಿಸ್ಕಾಲಾದರೂ(missed call) ನೀಡೂ ರಾಘವೇಂದ್ರ.!.

  Online ಆದರೂ ಬಾರೋ, Offline ಆದರೂ ಹೋಗೋ, ರಾಘವೇಂದ್ರ…
  .
  .
  GTalk ಆದರೇನು, Skype ಆದರೇನು! ರಾಘವೇಂದ್ರ$$$$
  ಮೂಲ ಹಾಡನ್ನು ಹಾಳು ಮಾಡಿದೆನೆಂದು ಯಾರೂ ಬಯ್ದೇ ಇದ್ದರೆ ಸಾಕು ರಾಘವೇಂದ್ರ$$$
  .
  .
  .
  Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$ .

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s