ಕವಿತೆ ಕುಡಿಯೊಡಯಬೇಕು
ಕಾನನದಿ ಕವಿದ ಕತ್ತಲೆಯೊಳಗೆ
ಕಣ್ದೆರೆದು
ರಾತ್ರಿ ಮೊಗ್ಗಾಗಿದ್ದ ಮಲ್ಲಿಗೆ
ಮುಂಜಾವದ ಮಂಜಲಿ
ಮೆಲ್ಲನೆ ಮುಗುಳ್ನಕ್ಕಂತೆ…
ನಟ್ಟಿರುಳ ನಿದ್ದೆಯಲ್ಲಿಯೂ
ನೆಪವಿಲ್ಲದೆ ನಿನ್ನ
ನಗೆಯ ನೆನಪಾದಂತೆ…
ಬಲವಂತಕೆ ಬಸಿರ ಬಗೆದರೆ
ಬಿಡುಗಡೆಯಲ್ಲವದು…
ಭ್ರೂಣ ಹತ್ಯೆ
ವ್ಯತ್ಯಾಸ ಇಷ್ಟೇ…
ಒಲುಮೆಯ ತುದಿಬೆರಳ
ಸ್ಪರ್ಶದ ನವಿರು ಪುಳಕ
ತೆವಲು-ತೀಟೆಗೆ ತಡಕಾಡುವ
ಕರಗಳ ಚಳಕ
ಕವಿತೆ ಇಲ್ಲಿ ಎಲ್ಲ ಮಜಲನ್ನು ದಾಟಿ ಕುಡಿಯೊಡೆದಿದೆ … ಕೆಲವೊಂದು ಸಾಲು ಕಾಡುತ್ತದೆ …