ಯಾವ ಮೋಹನ ಮುರಳಿ… ಧಾಟಿಯಲ್ಲಿ ಸಾಫ್ಟ್-ವೇರಿಗನ ಹಾಡು-ಪಾಡು ( ಹೊಸಾ ವರ್ಶನ್ 🙂 )
ಮೊದಲೊಮ್ಮೆ ಬರೆದಿದ್ದೆ, ಅದನ್ನು ಮೂಲ ಸಾಹಿತ್ಯಕ್ಕೆ ಅನುಗುಣವಾಗಿ ಪರಿಷ್ಕರಿಸಿ ತಿದ್ದಿ ತೀಡಿದ ಹಾಡು 🙂
ಯಾವ ಸಾಫ್ಟ್ವೇರ್ ಕಂಪನಿ ಕರೆಯಿತು… ಬೆಂಗಳೂರಿಗೆ ನಿನ್ನನು
ಯಾವ ಸಂಬಳದಾಸೆ ಕುಕ್ಕಿತು… ನಿನ್ನ ಆಸೆಯ ಕಣ್ಣನು
ಯಾವ ಸಾಫ್ಟ್ವೇರ್ ಕಂಪನಿ ಕರೆಯಿತು… ಬೆಂಗಳೂರಿಗೆ ನಿನ್ನನು
ಯಾವ ಸಂಬಳದಾಸೆ ಕುಕ್ಕಿತು… ನಿನ್ನ ಆಸೆಯ ಕಣ್ಣನು
ಫೋಮು ಹಾಸಿಗೆ ಟೀವಿ ಫ್ರಿಜ್ಜಿದೆ…
ಏ.ಸಿ, ತಂಪಿನ ರೂಮಿದೆ
ಫೋಮು ಹಾಸಿಗೆ ಟೀವಿ ಫ್ರಿಜ್ಜಿದೆ…
ಏ.ಸಿ, ತಂಪಿನ ರೂಮಿದೆ
ಬರಿದೆ ತುಂಬಿಹೆ ಮನೆಯ ಒಳಗೆ
ಆಫೀಸು ಅಲ್ಲವೆ ನಿಮ್ಮನೆ
ಯಾವ ಸಾಫ್ಟ್ವೇರ್ ಕಂಪನಿ ಕರೆಯಿತು… ಬೆಂಗಳೂರಿಗೆ ನಿನ್ನನು
ಯಾವ ಸಂಬಳದಾಸೆ ಕುಕ್ಕಿತು… ನಿನ್ನ ಆಸೆಯ ಕಣ್ಣನು
ಹೊಸೂರ್ ರೋಡಿನ ಆಚೆ ಎಲ್ಲೋ…
ನಿನ್ನ ಕಂಪನಿ ಬೇಸಿದೆ
ಟ್ರಾಫಿಕ್ ಜಾಮಿನಲಿ ಸಿಲುಕಿಕೊಂಡಿಹ…
ನಿನ್ನ ಬರುವಿಕೆ ಕಾದಿದೆ
ಯಾವ ಸಾಫ್ಟ್ವೇರ್ ಕಂಪನಿ ಕರೆಯಿತು… ಬೆಂಗಳೂರಿಗೆ ನಿನ್ನನು
ಯಾವ ಸಂಬಳದಾಸೆ ಕುಕ್ಕಿತು… ನಿನ್ನ ಆಸೆಯ ಕಣ್ಣನು
ವಿವಶನಾದನು ಜಾಣ… ಹ್ಮಾ…
ವಿವಶನಾದನು ಜಾಣ…
ಪರದೇಶಿಯ ಜೀತ ಜೀವನ…
ವಿವಶನಾದನು ಜಾಣ…
ಪರದೇಶಿಯ ಜೀತ ಜೀವನ…
ಸೃಜನಶೀಲತೆಯ ಬಿಟ್ಟು ಕೆರಿಯರ-ಏಳಿಗೆ
ದುಡಿಮೆಯೇ ಜೀವನಾ
ಯಾವ ಸಾಫ್ಟ್ವೇರ್ ಕಂಪನಿ ಕರೆಯಿತು… ಬೆಂಗಳೂರಿಗೆ ನಿನ್ನನು
ಯಾವ ಸಂಬಳದಾಸೆ ಕುಕ್ಕಿತು… ನಿನ್ನ ಆಸೆಯ ಕಣ್ಣನು
(ಗೋಪಾಲಕೃಷ್ಣ ಅಡಿಗರ ಕ್ಷಮೆ ಕೋರಿ)
——————————————————————————-
ಮೂಲ ಹಾಡು ‘ಅಮೇರಿಕಾ ಅಮೇರಿಕಾ’ ಚಿತ್ರದ ‘ಯಾವ ಮೋಹನ ಮುರಳಿ ಕರೆಯಿತು…’
ಕೃಪೆ: kannadalyrics.com
ಸಾಹಿತ್ಯ: ಗೋಪಾಲ ಕೃಷ್ಣ ಆಡಿಗ
ಯಾವ ಮೋಹನ ಮುರಳಿ ಕರೆಯಿತು… ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು… ನಿನ್ನ ಮಣ್ಣಿನ ಕಣ್ಣನು
ಯಾವ ಮೋಹನ ಮುರಳಿ ಕರೆಯಿತು… ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು… ನಿನ್ನ ಮಣ್ಣಿನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ…
ಬಾಹು ಬಂಧನ ಚುಂಬನ
ಹೂವು ಹಾಸಿಗೆ ಚಂದ್ರ ಚಂದನ…
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ…
ಕರಣ ಗಣದೀ ರಿಂಗಣ
ಯಾವ ಮೋಹನ ಮುರಳಿ ಕರೆಯಿತು… ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು… ನಿನ್ನ ಮಣ್ಣಿನ ಕಣ್ಣನು
ಸಪ್ತ ಸಾಗರದಾಚೆ ಎಲ್ಲೊ…
ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಲ ಮೂಕ ಮರ್ಮರ…
ಇಂದು ಇಲ್ಲಿಗೂ ಹಾಯಿತೇ
ಯಾವ ಮೋಹನ ಮುರಳಿ ಕರೆಯಿತು…ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು…ನಿನ್ನ ಮಣ್ಣಿನ ಕಣ್ಣನು
ವಿವಶವಾಯಿತು ಪ್ರಾಣ… ಹ್ಮಾ…
ವಿವಶವಾಯಿತು ಪ್ರಾಣ…
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ…
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ…
ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು… ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು… ನಿನ್ನ ಮಣ್ಣಿನ ಕಣ್ಣನು
I think next time you can use our National anthem or Suprabhata to write your own song.
Song has a meaning….it has its own copy rights…. (Dont worry….Gopalkrishna Adiga sir wont do anything to you…) Song has a soul…..You can twist some Item songs of movies…… But please dont twist good songs … It will represent our culture…. our language…..
ok.. adakke kshame keliddeenalla… dont worry i do respect.. there is no problem i see in taking the tune and write my own words for that… its not dishonouring anybody…
ok.. adakke kshame keliddeenalla …… I feel its like killing the person and asking him sorry.For you there is no difference between a good song and an Item song. few years back, a lyricist told, now a days many are spoiling the song lyrics by using bad words, some are rewriting it……. If possible, write your own song, Dont copy other songs…
see, my intention is not to spoil the original song, with due respect I take the tune of the original song and write my write-up, I do have all respect to original poet/author. if you feel I cant write my own, ok let me honor your view point and agree i cant write my own. Opinions differ, one cant judge another by their own view point…
anyways… I respect your view point and let me very frankly make my point clear that i don’t intend to insult original’s creativity and have lot of respect towards them.
This is purely for humour, just like cartoonists drawing funny lines Vijayaraj Kannanth has done a similar job reflecting the ironies of daily life and also recent happenings on the political landscape. Let him continue regaling us with his parody songs (ಅಣಕುಗಳು)
Ok…fine…. May be our point of view differs. So…. if possible i will enjoy ur songs… Talebisi illa marayre.. 🙂
Dhankanaka… Sooooooooooooooper guru 🙂
ಥ್ಯಾಂಕ್ಸ್ ಗುರೂ… 🙂
ನೀವು ಸಿನೆಮ ಹಾಡುಗಳನ್ನು ಜೀವನಕ್ಕೆ ಒಗ್ಗಿಸುವ ಶೈಲಿಗೆ ಶರಣು!
ಹೌದು.. ಶ್ರೀಕರ್ ಹೇಳಿಕೆಗೆ 100% ಸಹಮತವಿದೆ… 😀
dhanyavaada 🙂
thank u ಶ್ರೀಕರ್ 🙂