Archive for ಮೇ 9, 2013

ಶಿವ್-ಮೊಗ್ಗ ನಗರಾ… ಸೋತವ್ನೇ ಈಶ್ವರಾ (ಕಡ್ಡಿಪುಡಿ – ಸೌಂದರ್ಯ ಸಮರಾ…) ಅಣಕ :-)

Posted: ಮೇ 9, 2013 in aNaka, anakavaadu, ಅಣಕ, ಅಣಕವಾಡು, ಕನ್ನಡ, ಕನ್ನಡ ಅಣಕ, ಕನ್ನಡ ಅಣಕ ಹಾಡು, ಕನ್ನಡ ಚಲನಚಿತ್ರ ಹಾಡು ಅಣಕ, ಕನ್ನಡ ರೀಮಿಕ್ಸ್, ಗಮ್ಮತ್ತಿನ ಹಾಡು, ರೀಮಿಕ್ಸ್, ಸಿನಿಮಾ, ಹಾಗೆ ಸುಮ್ಮನೆ, film, gammaththina haadu, kannada, kannada film song, kannada film songs, spoof, yaDiyoorappa
ಟ್ಯಾಗ್ ಗಳು:, , , , , , , , , , , , , , , , , , , , , , , , , , ,

ಸೋತು ಸುಣ್ಣವಾದ ಈಶ್ವರಪ್ಪ ಹಳೇ ದೋಸ್ತು ಯಡ್ಯೂರಪ್ಪನ ಬಳಿ ‘ಮರಳಿ ಬಾ… ನಮ್ಮತ್ರವೇ’ ಅಂತಾ ‘ಕಡ್ಡಿಪುಡಿ’ ಚಿತ್ರದ ‘ಸೌಂದರ್ಯ ಸಮರಾ…ಸೋತವನೇ ಅಮರ’ ಶೈಲಿನಾಗೆ ಹೀಂಗ್ ಕರೆದ್ರೆ ಎಂಗೆ? 🙂

 

ಶಿವ್-ಮೊಗ್ಗ ನಗರಾ… ಸೋತವ್ನೇ ಈಶ್ವರಾ
ಶಿವ್-ಮೊಗ್ಗ ನಗರಾ… ಸೋತವ್ನೇ ಈಶ್ವರಾ

ಹಗೆಯಸಾಧಿಸಿ ಸೋಲ್ಸಿದ್ರು
ಯಡ್ಡೀ… ಇಲ್ಲಿ
ಹಳೆಯದನು ಮರೆತು
ಮರಳಿ ಮನೆಗೆಬನ್ನಿ
ಮುನಿಸು ತೊರೆದುಬನ್ನಿ

ಮರಳಿಗೂಡಿಗೆ ಬರಲು ಸದಾ…ಆಗ್ರಹ ನಂದೂರೀ
ಆದ ಜಗಳ ಮರೆತೇರೀ… ಅತಿ ಶೀಘ್ರ ಬಂದ್ಸೇರೀ
ಮುಳುಗುತಿದೆ ಸೋಲಾಗಿ… ಇದು ಎಲ್ಲರಾ ಕಳಕಳಿ

ನೀ ಗೆದ್ದೆ… ನಾ ಬಿದ್ದೆ ಸೋಲ್… ಪಕ್ಷಕೆ ಹೊಸದೇನು
ಮೂರು ಸೀಎಂಗಳಾ ಕಂಡಾ… ಒದ್ದ ಚತುರ ಪ್ರಜೆಯೂ
ನೆಟ್ಟ ಗಿಡ ನೀವೇ..ಯಲ್ವಾ…. ಬಾಡಿದೆ ತಾವ್ರೇ ಹೂವೂ

ಕಟ್ಟುವ ದುಡಿದು ಒಟ್ಟಾಗಿ ಎಲ್ಲರೂ
ಕೊರಳಿಗೆ ಉರುಳೂ ಕವಿದಿದೆ ಮುಗಿಲೂ…ಊಊಊ…ಊಊಊ

ಶಿವ್-ಮೊಗ್ಗ ನಗರಾ… ಸೋತವ್ನೇ ಈಶ್ವರಾ
ಶಿವ್-ಮೊಗ್ಗ ನಗರಾ… ಸೋತವ್ನೇ ಈಶ್ವರಾ

ಹಗೆಯಸಾಧಿಸಿ ಸೋಲ್ಸಿದ್ರು
ಯಡ್ಡೀ… ಇಲ್ಲಿ
ಹಳೆಯದನು ಮರೆತು
ಮರಳಿ ಮನೆಗೆಬನ್ನಿ
ಮುನಿಸು ತೊರೆದುಬನ್ನಿ

ಕಾಂಗ್ರೆಸಿನ ಜೊತೆಗೇ… ಒಳಗೆ ಗುಟ್ಟಾಗಿ ನೋಂದಣಿ
ಕಮಲ ಮಾನಾ ಹೋಗಿದೆ… ಹೊತ್ತು ಸೋಲ ಸರಣಿ

ಮರೆತು ಹಳೆ ಮೈತ್ರಿಯಾ… ಕೂಡದು ಇಂಥ ಕೋಪಾ
ನಾಳೆ ಲೋಕ್ಸಭೆ ಕಾಳಗಾ… ಕಳೆವ ಕೈಯ್ಯಾ ಶಾಪಾ

ಮಣ್ಣು… ಮಣ್ ಮುಕ್ಕಿದೆವೋ… ವಿರೋಧದ ಅಲೆಯೋ
ಸತ್ತು… ಹಣ್ಣಾಗಿದೆ ದೇಶ… ಕಾಂಗ್ರೆಸಿನಾ ಕೊಲೆಯೋ

ದ್ವೇ..ಷ ಮರ್ತು ಬಾ … ವಿದ್ವೇಷ ಮರ್ತು ಬಾ
ದ್ವೇ..ಷ ಮರ್ತು ಬಾ … ವಿದ್ವೇಷ ಮರ್ತು ಬಾ

ಶಿವ್-ಮೊಗ್ಗ ನಗರಾ… ಸೋತವ್ನೇ ಈಶ್ವರಾ
ಶಿವ್-ಮೊಗ್ಗ ನಗರಾ… ಸೋತವ್ನೇ ಈಶ್ವರಾ

ಹಗೆಯಸಾಧಿಸಿ ಸೋಲ್ಸಿದ್ರು
ಯಡ್ಡೀ… ಇಲ್ಲಿ
ಹಳೆಯದನು ಮರೆತು
ಮರಳಿ ಮನೆಗೆಬನ್ನಿ
ಮುನಿಸು ತೊರೆದುಬನ್ನಿ

ಮೂಲ ಹಾಡು: ಕಡ್ಡಿಪುಡಿ ಚಿತ್ರದ ‘ಸೌಂದರ್ಯ ಸಮರಾ…ಸೋತವನೇ ಅಮರ’ ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ವಿ.ಹರಿಕೃಷ್ಣ ಗಾಯನ: ಸೋನು ನಿಗಂ
ಕೃಪೆ: kannadalyrics.com

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಅಮಲುಗಣ್ಣಿಗೆ ಇವಳು ಸದಾ… ಸುಂದರ ಗಾಂಧಾರಿ
ಅದ ತಿಳಿದ ಮದನಾರೀ… ಅತಿ ವಿರಹಿ ವ್ಯಾಮೋಹಿ
ಸುಡುತಿರುವ ಸಾರಂಗೀ… ಮೃದು ಮಧುರಾ ಮಹಕಾಳಿ

ಈ ಒದ್ದೆ ಈ ಮುದ್ದೆ ಕೋಲ್…ಮಿಂಚಿನಾ ಹೆಸರೇನು
ನೂರು ನರಕವಾ ಕಂಡ… ಮುದ್ದು ಚತುರ ಸಖಿಯೂ
ನಟ್ಟ ನಡು ಬೀದಿಯಲ್ಲಿ…. ಬಿರಿದ ಡೇರೆ ಹೂವೂ
ಸಿಕ್ಕರು ಸಿಗಳು ಇದ್ದರು ಇರಳು
ಇವಳದೆ ಹಗಲೂ ಇವಳದೆ ಇರುಳೂ…ಊಊಊ

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಕಾಮನೆಯ ಜೇನಿಗೆ… ಕವಣೆ ಬೀಸಿದ ರಮಣಿ
ಮುಗಿಲ ಮಾನಾ ತೆಗೆದಾ… ಕೊಬ್ಬಿ ನಿಂತ ಧರಣಿ

ರಸಿಕ ನಿಶ ರಾತ್ರಿಯ… ಕುರುಡು ಬೀದಿ ದೀಪಾ
ತಾರೆ ಬೆಳಕಿಗೆ ಇವಳ… ಹೊಳೆವ ಮೈಯ್ಯ ಶಾಪಾ

ಕಣ್ಣು… ಕಣ್ ನೈದಿಲೆಯೋ… ಮಾತ್ಸರ್ಯ ಸೆಲೆಯೋ
ಉಕ್ಕು… ಉನ್ಮಾದದ ದೇಹ… ಮನ್ಮಥನಾ ಬಲೆಯೋ

ದೇಹ ದೇಗುಲಾ… ಈ ದೇಹ ದೇಗುಲಾ
ದೇಹ ದೇಗುಲಾ… ಈ ದೇಹ ದೇಗುಲಾ

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

Advertisements