Archive for ಮೇ 12, 2013

ಜೆಡಿಎಸ್ನಾಗೆ ಇದ್ದಿದ್ರೆ ನಾನು… ಗೌಡರ ಮರ್ಜೀಲೇ ಇರಬೇಕಿತ್ತು!! ನನ್ನ ಕುರ್ಚಿಗೂ ಫಿಟ್ಟಿಂಗ್ ಇಡಬೌದಾ :-)

Posted: ಮೇ 12, 2013 in aNaka, anakavaadu, ಅಣಕ, ಅಣಕವಾಡು, ಇತ್ಯಾದಿ..., ಕನ್ನಡ, ಕನ್ನಡ ಅಣಕ, ಕನ್ನಡ ಅಣಕ ಹಾಡು, ಕನ್ನಡ ಚಲನಚಿತ್ರ ಹಾಡು ಅಣಕ, ಕನ್ನಡ ರೀಮಿಕ್ಸ್, ಗಮ್ಮತ್ತಿನ ಹಾಡು, ರಿಮಿಕ್ಸ್, ರೀಮಿಕ್ಸ್, ಸಿನಿಮಾ, ಹಾಗೆ ಸುಮ್ಮನೆ, CM, film, gammaththina haadu, kannada, kannada anakavadu, kannada cinema songs, kannada film song, kannada film song remix, kannada film songs, kannada remix, kannada songs, kannada spoof, karnataka politics, spoof
ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , ,

ಜೆಡಿಎಸ್ನಾಗೆ ಇದ್ದಿದ್ರೆ ನಾನು… ಗೌಡರ ಮರ್ಜೀಲೇ ಇರಬೇಕಿತ್ತು!! ನನ್ನ ಕುರ್ಚಿಗೂ ನನ್ನ ಕುರ್ಚಿಗೂ… ಫಿಟ್ಟಿಂಗ್ ಇಡಬೌದಾ… ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಹಿಂದೆ ಯಾರಾದ್ರೂ… ಬತ್ತಿ ಇಡಬೌದಾ… ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಕಾಂಗೈ ಕೈ ಮೇಲಾಗಿ ಸೀಎಮ್ಮು ಕುರ್ಚಿಯೇರಲು ಸಿದ್ದರಾದ ಸಿದ್ರಾಮಣ್ಣ ‘ಪರಮಾತ್ಮ’ದ ಹಾಡು ಹಾಡುತ್ತಿದ್ದಾರೆ ‘ಯಾವನಿಗ್ ಗೊತ್ತು’ ಧಾಟಿಯಲ್ಲಿ 🙂


ಶ್ಯಾನೆ ಕುಷ್ಯಾತುಸ್ಸಾ… ಇದೇಮೊದಲಾಸರ್ತಿ… ಲಾಭಲಾಭವೋ
ಕೆಪಿಸಿಸಿನಾ… ಹೈಕಮಾಂಡೇನಾ
ಗಾಡು ಬ್ಲೆಸ್ಸೇನಾ… ಆರಾಮಾಗ್ ಸಿಕ್ತು

ನಾನು ಆಗ್ಬೋದು… ಅಂತ ಡೌಟೊಂದು
ಮನ್ಸಲ್ಲಿ ಇತ್ತು… ಮನ್ಸಲ್ಲಿ ಇತ್ತು
ಯಾರ್ನೇ ಕೇಳಿದ್ರೂ… ತುಂಬಾ ಫೈಟಂದ್ರು
ಈಸೀಯಾಗ್ ಸಿಕ್ತು… ಈಸೀಯಾಗ್ ಸಿಕ್ತು

ಸೀಎಮ್ಎಂಬ ಹಾಲಿ… ಪೀಠಕ್ಕೆ ಬಂದು
ನನ್ನ ಕನ್ಸು… ನನ್ಸಾಗ್ಹೋಯ್ತು

ಅಬ್ಬಾ ಸೋತಿದ್ರೆ… ಎಂಡು ಆಗ್ತಿದ್ದೆ
ಈಸೀಯಾಗ್ ಸಿಕ್ತು… ಈಸೀಯಾಗ್ ಸಿಕ್ತು
ಅವ್ರು ಸೋತ್ರಲ್ಲ… ಕೈ ಬೆಂಬಲ
ಈಸೀಯಾಗ್ ಸಿಕ್ತು… ಈಸೀಯಾಗ್ ಸಿಕ್ತು

ಇದೆ ಮೊನ್ನೆ ಎಂಟ್ನೆ ತಾರೀಕ್… ಮಧ್ಯಾಹ್ನ
ನೋಡುತ್ತಾ ಕೂತ್ಕೊಂಡಿದ್ದೆ… ರಿಸಲ್ಟ್-ನಾ
ಯಡ್ಡಿಜೀಗೆ ಹೇಳ್ಬೇಕೊಂದು… ಥ್ಯಾಂಕ್ಸನ್ನ
ಕ್ಯಾಂಡಿಡೇಟು ಅನಿಸಿಕೊಂಡೆ… ಪಕ್ಕಾ ನಾ

ದೇವೇಗೌಡ್ರ ಪಕ್ಷ… ನಮ್-ಹತ್ರಕ್ಕೂ ಇಲ್ರೀ
ಬೀಜೆಪಿಗೆ ಮಾತ್ರ… ಒಳ್ಳೇ ಪಾಠ ಕಣ್ರೀ
ದಾಟಿಯಾದ ಮೇಲೆ… ಮೆಜಾರ್ಟಿ ಸಂಖ್ಯೆ
ರಾಜ್ಯಾಧಿಕಾರ… ನಮ್ದಾಗ್ಹೋಯ್ತು

ಸ್ವಂತಾ ಪಾರ್ಟೀಲೇ… ಫೈಟು ಆಗ್ತಿತ್ತು
ಆದರೂನೂ ಗೆಲ್ತು… ಆದರೂನೂ ಗೆಲ್ತು
ವೋಟು ಹಾಕೋರ್ಗೂ… ಬೇರೆ ಚಾಯ್ಸಿತ್ತಾ
ಅದಕೇನೇ ಗೆಲ್ತು… ಅದಕೇನೇ ಗೆಲ್ತು

ಭಿನ್ನಮತ ಯಾವಾಗ್ ಹೆಂಗೋ… ಗೊತ್ತಿಲ್ಲ
ಎಲ್ಲಾರ್ನೂ ಮಂತ್ರಿ ಮಾಡೋ… ಕಾಗಲ್ಲಾ
ಗುಟ್ಟಾಗಿ ಯಡ್ಡಿ ಸಾಥ್… ಇದ್ಯಲ್ಲಾ
ಮುಂದೆ ಗೊತ್ತಾಗುತ್ತೆ ನಮ್ಮ… ಬಂಡ್ವಾಳ

ಮತ್ತೆ ಗೆದ್ದು ಬಂದು… ಅಸೆಂಬ್ಲೀಲೊಂದು ವಿಕ್ಟರಿ
ತುಂಬಾ ಒಳ್ಳೇ ಕೆಲಸ… ಮಾಡೋಕೈತೆ ಕಣ್ರಿ
ಜೆಡಿಎಸ್ನಾಗೆ… ಇದ್ದಿದ್ರೆ ನಾನು
ಗೌಡರ ಮರ್ಜೀಲೇ… ಇರಬೇಕಿತ್ತು

ನನ್ನ ಕುರ್ಚಿಗೂ… ಫಿಟ್ಟಿಂಗ್ ಇಡಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಹಿಂದೆ ಯಾರಾದ್ರೂ… ಬತ್ತಿ ಇಡಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

_________________________________________
ಮೂಲ ಹಾಡು: ‘ಪರಮಾತ್ಮ’ ಚಿತ್ರದ ‘ಯಾವನಿಗ್ ಗೊತ್ತು… ಯಾವನಿಗ್ ಗೊತ್ತು’
ಕೃಪೆ: kannadalyrics.com

ನಾನೇ ಜೀನಿಯಸ್ಸಾ… ಹ್ರುದೆಸೀರಿಸೇಲಾತಿ… ಲಬಬಾವೂ
ಎಬಿಸೀಡಿನಾ… ಆಲೂಗಡ್ದೆನಾ
ಗೋಡೆ ಹಲ್ಲೀನಾ… ಯಾವಾನಿಗ್ ಗೊತ್ತು

ಏನು ಮಾಡೋದು… ಒಂಟಿ ಹೂವೊಂದು
ರೋಡಲ್ಲಿ ಸಿಕ್ತು… ರೋಡಲ್ಲಿ ಸಿಕ್ತು
ಏನು ಹೇಳೋದು… ಇಂಥಾ ಟೈಮಲ್ಲಿ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಎದೆಯಂಬ ಖಾಲಿ… ಡಬಕ್ಕೆ ಒಂದು
ಸಣ್ಣ ಕಲ್ಲು… ಬಿದ್ದಂಗಾಯ್ತು

ಡಬ್ಬ ಯಾತಕ್ಕೆ… ಸೌಂಡು ಮಾಡುತ್ತೊ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಇವ್ಳು ಸಿಕ್ತಾಳ… ಕೈ ಕೊಡ್ತಾಳ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಅದು ಯಾವ್ದೋ ಒಂಟಿ ಹಕ್ಕಿ… ಸದ್ದನ್ನಾ
ಕೇಳುತ್ತಾ ಮಲ್ಕೊಂಡಿದ್ದೆ… ಮಧ್ಯಾಹ್ನ
ಕಾಲ್ ಕೇಜಿ ಪ್ರೀತಿಗೊಂದು… ಪದ್ಯಾನಾ
ಬರೆದಿಟ್ಟು ಕೆರೆದುಕೊಂಡೆ… ಗಡ್ಡಾನಾ

ಕಾಳಿದಾಸ ಕಾವ್ಯ… ನಮಪ್ಪನ್ನ ಕೇಳ್ರಿ
ಕಾಲಿ ಹಾಳೆಗಿಂತ… ಒಳ್ಳೆ ಕಾವ್ಯ ಇಲ್ರಿ
ಹೃದಯದ ಮೇಲೆ… ಹೈ-ಹೀಲ್ಡು ಹಾಕಿ
ರಾಜಕುಮಾರಿ… ನಿಂತಂಗಾಯ್ತು

ಇಂಥಾ ಟೈಮಲ್ಲಿ… ಹಾಡು ಬೇಕಿತ್ತಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ದೇವ ದಾಸಾನೂ… ಎಣ್ಣೆ ಬಿಟ್ಟಿದ್ನಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಕನಸಲ್ಲಿ ಯಾಕೊ ಯಾವ್ದೂ… ಸಾಲಲ್ಲ
ಮೋಡಾನ ಮುದ್ದು ಮಾಡೋ… ಕಾಗಲ್ಲಾ
ಚಿಟ್ಟೆಗೆ ಚಡ್ಡಿ ಹಾಕೋ… ಕಾಗ್ಲಿಲ್ಲ
ನಿಮ್ಗೆ ಗೊತ್ತಲ್ವಾ ನಾನು… ಮುಟ್ಟಾಳ

ಮತ್ತೆ ಮತ್ತೆ ಬಂತು… ಎದೆಯಲ್ಲೊಂದು ಲಹರಿ
ತುಂಬಾ ಒಳ್ಳೆ ಕನ್ನಡ… ಮಾತಾಡ್ಬಿಟ್ಟೆ ಕಣ್ರಿ
ಮೂಗು ಬೊಟ್ಟಾಗಿ… ಹುಟ್ಟಿದ್ರೆ ನಾನು
ಇವಳ ಮೂತೀಲೆ… ಇರಬೌದಿತ್ತು

ನನ್ನ ಆಸೆಗೂ… ಮೀನಿಂಗ್ ಇರಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು… ತಿಂಡಿ ಸಿಗಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

‘ಗೊಂಬೆಗಳ Love’ ಚಿತ್ರದ ‘ಪ್ರೇಮವೇ ಜೀವ… ಪ್ರೇಮವೇ ದೈವ’ ಧಾಟಿಯಲ್ಲಿ ಒಂದು ಭ್ರಷ್ಟ್ರ ಗೀತೆ… v-ಚಿತ್ರ ಗೀತೆ…ಹಾಗೇ ಸುಮ್ಮನೆ 🙂


ಗಾಂಧಿಯ ತತ್ವ… ಗಾಂಧಿಯ ಧ್ಯೇಯ
ಕೊಂದವ್ರೆ ಭ್ರಷ್ಟ… ಪುಡಾರಿಗಳು
ಸ್ಕ್ಯಾಮಿನ ಮಾರ್ಗ… ಮೋಸವೇ ಎಲ್ಲವೂ
ನುಂಗವ್ರೇ ಎಷ್ಟೋ… ಕಾಳಧನವು

ತಿಂದದ್ದೇ ಆಗ… ತಿಂದದ್ದೇ ಈಗ
ಆದರಾಗ… ಹಾಗು ಇದರಾಗ
ಮೋಸದ ಜಾಲ… ತೆಗೆಯೇ ಈಗ
ಮುಗಿತೀಗ… ಮುಂದೆ ಜೈಲು ಯೋಗ

ಗಾಂಧಿಯ ತತ್ವ… ಗಾಂಧಿಯ ಧ್ಯೇಯ
ಕೊಂದವ್ರೆ ಭ್ರಷ್ಟ… ಪುಡಾರಿಗಳು

ನೀನು ಬಿಚ್ಚದಿರು… ನಾನು ಹೇಳೆನು
ದೊಚುತಲಿ ಬಾಳುವ
ದೊಂಬರಾಟ ಸಾಗಲಿ… ಗುಪ್ತ ಆಗಿಯೇ
ಹಣ ಸೂರೆ ಗೈಯುವ

ಇನ್ನು ಮರು ಆಯ್ಕೆ ಆಗೆವು
ಇದು ಕೊನೆ ಟರ್ಮು ಹಾಗಾಗಿ
ಇರೊ ಪ್ರತಿಯೊಂದು ಸ್ಕೀಮಿನಲೂ
ಕೋಟಿ ಕೋಟಿ ನಮ್ಮದಾಗಲಿ
ಐಟಿ ದಾಳಿಯ ವೇಳೆಯೂ… ಹೊರಗೇ ಬೀಳದದು

ಸ್ಕ್ಯಾಮು ಮಾಡುತಿರೋ… ಪಕ್ಷ ಎಲ್ಲವೇ
ಸೇರಿಕೊಂಡು ದೋಚುವ
ಎಲ್ಲ ಶಾಸಕರ ಬಾ… ಕೇಳಿ ನೋಡುವ
ಹಂಚಿಕೊಂಡು ಮುಕ್ಕುವ

ಬಿಡು ಜನರೇನೇ ಹೇಳಲಿ
ಬಿಡು ಅವರೆಷ್ಟೇ ಉಗ್ಯಲಿ
ಏನ ಕಿಸಿಯೋಕೆ ಸಾಧ್ಯವೆ
ನಮ್ಮ ಹಣತಿಂಬ ಕುಂಡಲಿ
ನಮ್ಮ ಗೆಲ್ಲಿಸಿ ಕಳ್ಸಿದ… ಪ್ರಜೆಯೇ ಹಲುಬಲಿ

ಗಾಂಧಿಯ ತತ್ವ… ಗಾಂಧಿಯ ಧ್ಯೇಯ
ಕೊಂದವ್ರೆ ಭ್ರಷ್ಟ… ಪುಡಾರಿಗಳು
ಸ್ಕ್ಯಾಮಿನ ಮಾರ್ಗ… ಮೋಸವೇ ಎಲ್ಲವೂ
ನುಂಗವ್ರೇ ಎಷ್ಟೋ… ಕಾಳಧನವು

ತಿಂದದ್ದೇ ಆಗ… ತಿಂದದ್ದೇ ಈಗ
ಆದರಾಗ… ಹಾಗು ಇದರಾಗ
ಮೋಸದ ಜಾಲ… ತೆಗೆಯೇ ಈಗ
ಮುಗಿತೀಗ… ಮುಂದೆ ಜೈಲು ಯೋಗ

ಗಾಂಧಿಯ ತತ್ವ… ಗಾಂಧಿಯ ಧ್ಯೇಯ
ಕೊಂದವ್ರೆ ಭ್ರಷ್ಟ… ಪುಡಾರಿಗಳು

ಮೂಲ ಹಾಡು ‘ಗೊಂಬೆಗಳ Love’ ಚಿತ್ರದ ‘ಪ್ರೇಮವೇ ಜೀವ… ಪ್ರೇಮವೇ ದೈವ’
ಕೃಪೆ:
kannadalyrics.com

ಪ್ರೇಮವೆ ಜೀವ… ಪ್ರೇಮವೆ ದೈವ
ನಂಬಿವೆ ಎಷ್ಟೋ… ಉಸಿರುಗಳು
ಪ್ರೇಮವೆ ಸ್ವರ್ಗ… ಪ್ರೇಮವೆ ಬದುಕು
ತುಂಬಿವೆ ಎಷ್ಟೋ… ಹೆಸರುಗಳು

ತಿಳಿದೆ ಈಗ… ತಿಳಿದೆ ಈಗ
ಆನುರಾಗ… ಇದು ಅನುರಾಗ
ಎದೆಯ ಬೀಗ… ತೆಗೆದೆ ಈಗ
ಶುಭ ಯೋಗ… ಇದು ಶುಭ ಯೋಗ

ಪ್ರೇಮವೆ ಜೀವ… ಪ್ರೆಮವೇ ದೈವ
ನಂಬಿವೆ ಎಷ್ಟೋ… ಉಸಿರುಗಳು

ನೀನು ಮುಟ್ಟದಿರು… ನಾನು ಸೋಕೆನು
ಪ್ರೀತಿಸುತ ಬಾಳುವ
ಉಸಿರಾಟ ಸೋಕಲಿ… ಸಾಕು ಪ್ರೇಮಿಯೆ
ಪ್ರೇಮವಿದು ವೈಭವ

ಇನ್ನು ಮರು ಜನ್ಮ ಯಾತಕೆ
ಇದು ಕೊನೆ ಜನ್ಮವಾಗಲಿ
ಇರೊ ಪ್ರತಿಯೊಂದು ಗಳಿಗೆಯೂ
ಹೊಸ ಹೊಸ ಜನ್ಮವಾಗಲಿ
ಬಿರು ಬಿಸಿಲೋ ಮಳೆಯೋ… ಒಲವು ನಡುಗದು

ಸಾವು ಬಾರದಿರೋ.. ಲೋಕ ಎಲ್ಲಿದೆ
ಹೇಳಿಬಿಡು ಹೋಗುವ
ಎಲ್ಲ ದೇವರನ್ನು ಬಾ… ಕೇಳಿ ನೋಡುವ
ಆಯಸನ್ನು ಬೇಡುವ

ಬಿಡು ಅವನೇನೆ ಮಾಡಲಿ
ಬಿಡು ಅವನಾಟ ಸಾಗಲಿ
ಇನ್ನು ಕಸಿಯೋಕೆ ಸಾಧ್ಯವೆ
ನಮ್ಮ ಒಲವೆಂಬ ಅಂಬಲಿ
ನಮ್ಮ ಕತೆಯ ಬರೆದ… ಶಿವನೆ ನಗುವನು

ಪ್ರೇಮವೆ ಜೀವ… ಪ್ರೇಮವೆ ದೈವ
ನಂಬಿವೆ ಎಷ್ಟೋ… ಉಸಿರುಗಳು
ಪ್ರೇಮವೆ ಸ್ವರ್ಗ… ಪ್ರೇಮವೆ ಬದುಕು
ತುಂಬಿವೆ ಎಷ್ಟೋ… ಹೆಸರುಗಳು

ತಿಳಿದೆ ಈಗ… ತಿಳಿದೆ ಈಗ
ಆನುರಾಗ… ಇದು ಅನುರಾಗ
ಎದೆಯ ಬೀಗ… ತೆಗೆದೆ ಈಗ
ಶುಭ ಯೋಗ… ಇದು ಶುಭ ಯೋಗ

ಪ್ರೇಮವೆ ಜೀವ… ಪ್ರೆಮವೇ ದೈವ
ನಂಬಿವೆ ಎಷ್ಟೋ… ಉಸಿರುಗಳು