Archive for the ‘ಕನ್ನಡ ಧಾರವಾಹಿ’ Category

ಒಂದು ಡಬ್ಬಾ ಹಾಡು…. ಎಲ್ಲಾ ಡಬ್ಬಾಗಳಿಗೆ ಅರ್ಪಣೆ ‘ದಂಡ-ಪಿಂಡಗಳು’ ಧಾರಾವಾಹಿಯ ಶೀರ್ಷಿಕೆ ಗೀತೆ ‘ದಂಡ ಪಿಂಡಗಳು…ಇವರು… ದಂಡ ಪಿಂಡಗಳು’ ಧಾಟಿಯಲ್ಲಿ

ಡಬ್ಬಾ ಯಾತಕ್ಕೇ… ಸೌಂಡು ಮಾಡುತ್ತೋ… ಯಾವಾಳಿಗ್ ಗೊತ್ತು 😉

_____________________________________________


ದಂಡ ಪಿಂಡ ಇವ್ಳು
ಖಂಡಿತಾ… ದಂಡ ಪಿಂಡ ಇವ್ಳು

ದಂಡ ಪಿಂಡ ಇವ್ಳು
ಖಂಡಿತಾ… ದಂಡ ಪಿಂಡ ಇವ್ಳು
ಸುಮ್ನೇ… ನ್ಯೂಸೆನ್ಸ್… ಹಂಗಾಮ ಮಾಡಿ
ಸುಮ್ನೇ… ನ್ಯೂಸೆನ್ಸ್… ಹಂಗಾಮ ಮಾಡಿ
ಗಾಸಿಪ್ಪನೇ ಮಾಡುವಾ… ಇವ್ಳು ಸುಪನಾತಿ
ಗಾಸಿಪ್ಪನೇ ಮಾಡುವಾ… ಇವ್ಳು ಮಿಟಕ್ಲಾಡಿ
ರಗಳೇ ಮಾಡಿ ಉಗಿಸಿಕೊಳ್ಳೋ… ನಾಸ್ಟೀ ಲೇಡಿ ಇವ್ಳು… ಥೋ… ಥೋ…

ದಂಡ ಪಿಂಡ ಇವ್ಳು
ಖಂಡಿತಾ… ದಂಡ ಪಿಂಡ ಇವ್ಳು

ಆಕ್ಟಿಂಗ್ ಮಾಡೋಕೆ… ಇವಳಿಗೆ ಬರಲ್ಲ
ಆಕ್ಟಿಂಗ್ ಮಾಡೋಕೆ… ಇವಳಿಗೆ ಬರಲ್ಲ
ಗಾಸಿಪ್ ಮಾಡದಿದ್ರೆ… ಉಂಡಿದ್ದೇ ಅರ್ಗೋಲ್ಲಾ
ಗಾಸಿಪ್ ಮಾಡದಿದ್ರೆ… ಉಂಡಿದ್ದೇ ಅರ್ಗೋಲ್ಲಾ
ಫುಲ್ಲು ಫುಲ್ಲು… ಗುಲ್ಲೇ ಗುಲ್ಲು
ಎಲ್ಲೂ ಸಲ್ಲದ ಒಂಥರಾ ಕೊರಾಜಿ-ಇವ್ಳು… ಥೋ…ಥೋ

ದಂಡ ಪಿಂಡ ಇವ್ಳು
ಖಂಡಿತಾ… ದಂಡ ಪಿಂಡ ಇವ್ಳು

ಕಲೆಯನು ಅರಿಯಲು… ಯೋಗ್ಯತೆ ಇಲ್ಲಾ
ಕಲೆಯನು ಅರಿಯಲು… ಯೋಗ್ಯತೆ ಇಲ್ಲಾ
ಕಡಿವಾಣವು…. ಇವ್ಳ ನಾಲ್ಗೆಗೇ ಇಲ್ಲಾ
ಕಡಿವಾಣವು… ಇವ್ಳ ನಾಲ್ಗೆಗೇ ಇಲ್ಲಾ
ಮಿಂಚಿ ತೋರಿಸೋದಕ್ಕೆ… ಟ್ಯಾಲೆಂ…ಟಿಲ್ಲಾ
ನಾನ್-ಸೆನ್ಸ್ ಮಾತಾಡ್ಲು… ಯಾವ ಹೊತ್ತೂ-ಗೊತ್ತೂ… ಇಲ್ಲಾಆಆ

ಈ ಪ್ರಕಾರವಾಗಿ… ಕಾರಣ ಇಲ್ಲದೆ… ಕಿರಿಕ್ ಮಾಡ್ತಾಳೆ
ಒಟ್ಟಲ್ಲಿ ಇವಳಿಗೆ ಯೋಗ್ಯತೆಯೇ ಇಲ್ಲಾ

ದಂಡ ಪಿಂಡ ಇವ್ಳು
ಖಂಡಿತಾ… ದಂಡ ಪಿಂಡ ಇವ್ಳು

ಹಾಂ…ದಂಡ ಪಿಂಡ ಇವ್ಳು
ಖಂಡಿತಾ… ದಂಡ ಪಿಂಡ ಇವ್ಳು

ಸುಮ್ನೇ… ನ್ಯೂಸೆನ್ಸ್… ಹಂಗಾಮ ಮಾಡಿ
ಸುಮ್ನೇ… ನ್ಯೂಸೆನ್ಸ್… ಹಂಗಾಮ ಮಾಡಿ
ಗಾಸಿಪ್ಪನೇ ಮಾಡುವಾ… ಇವ್ಳು ಸುಪನಾತಿ
ಗಾಸಿಪ್ಪನೇ ಮಾಡುವಾ… ಇವ್ಳು ಸುಪನಾತಿ
ರಗಳೇ ಮಾಡಿ ಉಗಿಸಿಕೊಳ್ಳೋ… ನಾಸ್ಟೀ ಲೇಡಿ ಇವ್ಳು… ಥೋ… ಥೋ…

ದಂಡ ಪಿಂಡ ಇವ್ಳು
ಖಂಡಿತಾ… ದಂಡ ಪಿಂಡ ಇವ್ಳು

_____________________________________________
ಮೂಲ ಹಾಡು ‘ದಂಡಪಿಂಡಗಳು’ ಧಾರಾವಾಹಿಯ ಶೀರ್ಷಿಕೆ ಗೀತೆ ‘ದಂಡ ಪಿಂಡಗಳು…ಇವರು… ದಂಡ ಪಿಂಡಗಳು’
ಕೃಪೆ: kannadalyrics.com

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

BA, BSc, BCom ಮಾಡಿ
BA, BSc, BCom ಮಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಎಲ್ಲರ ಕೈಲೂ ಉಗಿಸಿಕೊಳ್ಳೊ… ವೇಸ್ಟು ಬಾಡಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ದಿವಾನ್ ಚಾಕರಿ… ಇವರಿಗೆ ಸಿಗಲ್ಲ
ದಿವಾನ್ ಚಾಕರಿ… ಇವರಿಗೆ ಸಿಗಲ್ಲ
ಜವಾನ್ ಚಾಕರಿಗೆ… ಇವರೇ ಹೋಗಲ್ಲ
ಜವಾನ್ ಚಾಕರಿಗೆ… ಇವರೇ ಹೋಗಲ್ಲ
ಅಲ್ಲೂ ಇಲ್ಲ… ಇಲ್ಲೂ ಇಲ್ಲ
ಎಲ್ಲೂ ಇಲ್ಲದ ಅಂತರ ಪಿಶಾಚಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಪರ್ಸಂಟೇಜು ತೆಗೆಯಲು… ಯೋಗ್ಯತೆ ಇಲ್ಲಾ
ಪರ್ಸಂಟೇಜು ತೆಗೆಯಲು… ಯೋಗ್ಯತೆ ಇಲ್ಲಾ
ರಿಸರ್ವೇಷನ್ನು… ಇವರ ಜಾತಿಗೆ ಇಲ್ಲಾ
ರಿಸರ್ವೇಷನ್ನು… ಇವರ ಜಾತಿಗೆ ಇಲ್ಲಾ
ಲಂಚ ಕೊಡುವುದಕ್ಕೆ… ದುಡ್ಡೇ… ಇಲ್ಲಾ
ಇನ್-ಫ್ಲುಯೆನ್ಸು ಮಾಡಲು… ಯಾವ ಮಿನಿಸ್ಟ್ರೂ… ಗೊತ್ತಿಲ್ಲಾ..ಆಆ

ಈ ಪ್ರಕಾರವಾಗಿ… ಯಾವುದು ಇಲ್ಲದೆ… ಕೆಲಸ ಸಿಗಲ್ಲ
ಒಟ್ಟಲ್ಲಿ ಇವರಿಗೆ ಭವಿಷ್ಯವೇ ಇಲ್ಲಾ

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಆ ದಂಡ ಪಿಂಡಗಳು
ಇವರು… ದಂಡ ಪಿಂಡಗಳು

BA, BSc, BCom ಮಾಡಿ
BA, BSc, BCom ಮಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಎಲ್ಲರ ಕೈಲೂ ಉಗಿಸಿಕೊಳ್ಳೊ… ವೇಸ್ಟು ಬಾಡಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಬಿ.ಜೆ.ಪಿ. ಯಿಂದ ಗುಳೆ ಹೊಂಟು ಹೋಗಿ, ಕೆ.ಜೆ.ಪಿ ಪಕ್ಷ ಕಟ್ಟಿದ ಮೇಲೆ, ‘ನಿಮ್-ಹಿಂದೆ’ ನಾವಿದೀವಿ… ಅಂದೋರೆಲ್ಲಾ ‘ಬೆನ್-ಹಿಂದೆ’ ಚೂರಿ ಹಾಕಿ, ಕೈ ಕೊಟ್ಟಿದ್ದು ನೋಡಿ ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ ಹಾಡು ಯಡ್ಡಿ ಬಾಯಲ್ಲಿ ಕೇಳಿ ‘ಗುಳೆ ಹೊಂಟು ಹೋದ ಮೇಲೆ…’ 🙂

 

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಮಾಡುವುದು ಏನು… ಉಳಿದುಹೋಗಿದೆ?
ಸಾಯಲಿ ಏನು… ತಿಳಿಯದಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಹಾವೇರೀಲಿ ಆಣೆ ಮಾಡಿ
ಬರುವೆ ಅಂದೋರ
ನಿಲುವು ಬೇರೆ ಆಯಿತೇ
ಯಾಕೆ ನಂತರ

ನಮ್ಮ ಪಾರ್ಟಿಯಲ್ಲಿ ಇಂದು
ಗೆಲ್ಲುವ ಆತುರ
ಒಂದೇ ಸಾರಿ ನೀವ್
ತೋರಿರಿ ಕನಿಕರ

ಬಿಜೆಪಿಯ ನಾಶ… ಮಾಡ ಬೇಕಿದೆ
ಮಾಡಲಿ ಹೇಗೆ… ತಿಳಿಯದಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಇನ್ನು ತಡವ ಮಾಡದೆ
ಪಾರ್ಟಿಯ ಸೇರ್ರಣ್ಣ
ನಿಮ್ಮ ಹಟವ ತೋರದೆ
ಮನಸು ಮಾಡ್ರಣ್ಣ

ಗಡುವು ದೂರವೇನಿಲ್ಲ
ಹತ್ತಿರ ಬಂತಣ್ಣ
ನೀವು ಬಾರದೆ
ಏತಕೋ ತಲ್ಲಣ

ಭರವಸೆ ಎಲ್ಲಾ… ಕಳೆದು ಹೋಗಿದೆ
ಎಲೆಕ್ಷನು ಸೋಲು… ಖಾತ್ರಿಯಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಮಾಡುವುದು ಏನು… ಉಳಿದುಹೋಗಿದೆ?
ಸಾಯಲಿ ಏನು… ತಿಳಿಯದಾಗಿದೆ

ಮೂಲ ಹಾಡು: ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ (ಸಾಹಿತ್ಯ: ಜಯಂತ ಕಾಯ್ಕಿಣಿ)
ಕೃಪೆ: http://kn.wikisource.org/wiki/

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ನೋವಿನಲ್ಲಿ ಜೀವ ಜೀವ
ಅರಿತ ನಂತರ
ನಲಿವು ಬೇರೆ ಏನಿದೆ
ಏಕೆ ಅಂತರ

ನಿನ್ನ ಹಾಡಿನಲ್ಲಿ ಇಂದು
ಬೆರೆವ ಕಾತರ
ಒಂದೇ ಸಾರಿ ನೀ
ಕೇಳೆಯ ಈ ಸ್ವರ

ಮನಸಲ್ಲಿ ಚೂರು… ಜಾಗ ಬೇಕಿದೆ
ಕೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ
ಕನಸೆ ಜೀವನ
ಸಣ್ಣ ಹಠವ ಮಾಡಿದೇ
ಹೃದಯ ಈ ದಿನ

ಎದೆಯ ದೂರವಾಣಿಯ
ಕರೆಯ ರಿಂಗಣ
ಕೇಳು ಜೀವವೇ
ಏತಕೀ ಕಂಪನ

ಹೃದಯವು ಇಲ್ಲೆ… ಕಳೆದು ಹೋಗಿದೆ
ಹುಡುಕಲೇ ಬೇಕೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ