Archive for the ‘ಸಿನಿಮಾ’ Category

ಮೀನಾ ಕುಮಾರಿ ಕಾಂಪ್ಲೆಕ್ಸ್ ನಿಮಗಿದೆಯಾ…!!!
meena-feb12

ಮೀರಾ ಕುಮಾರಿ ಗೊತ್ತಲ್ವಾ? ಬಹಳ ಸಣ್ಣ ಪ್ರಾಯದಲ್ಲೇ ತೀರಿಕೊಂಡ ಹಿಂದಿ ಚಿತ್ರರಂಗದ ‘ಟ್ರ್ಯಾಜಿಡಿ ಕ್ವೀನ್’ ಎಂದೇ ಖ್ಯಾತಿ ಪಡೆದ ಅಭಿನೇತ್ರಿ, ಕವಯಿತ್ರಿ ಕೂಡಾ. ಈಕೆಯ ನಿಜ ನಾಮಧೇಯ ಮಹಜಬೀನ್ ಬಾನೋ. ಅದು ಸರಿ… ಏನಿದು ಮೀನಾ ಕುಮಾರಿ ಕಾಂಪ್ಲೆಕ್ಸ್? ಹಿಂದಿ ಚಿತ್ರ “ಮಟರೂ ಕಿ ಬಿಜಲೀ ಕಾ ಮಂಡೋಲಾ” ಇದರ ಪ್ರಸ್ತಾಪ ಬರುತ್ತೆ. ಅದರಲ್ಲಿ ಮಟರೂ ಬಿಜಲಿಯ ಬಳಿ ಮಾತನಾಡುತ್ತಾ ಬಿಜಲಿಗೆ “ಮೀನಾ ಕುಮಾರಿ ಕಾಂಪ್ಲೆಕ್ಸ್” ಇದೆ ಅಂತ ಹೇಳುತ್ತಾನೆ. ಕುತೂಹಲಕ್ಕೆಂದು ನೆಟ್ ಜಾಲಾಡಿದಾಗಲೇ ಅನಿಸಿದ್ದು… ಸಿನೆಮಾ/ಜೀವನ ಎರಡರಲ್ಲೂ ಮೀನಾ ಕುಮಾರಿ ಈ ಕಾಂಪ್ಲೆಕ್ಸಿಗೆ ಬಲಿಯಾಗಿದ್ದಾಳಾ ಅಂತ.

ಮೊದಲೇ ಹೇಳಿದ ಹಾಗೆ ಬಾಲಿವುಡ್ಡಿನ ದುರಂತ ನಾಯಕಿಯ ಪಾತ್ರಗಳಿಗೆ ಹೆಸರುವಾಸಿಯಾದ ಮೀನಾ ಕುಮಾರಿ ನಟಿಸಿದ ಅನೇಕ ಚಿತ್ರಗಳಲ್ಲಿ ಈಕೆಯದು ವಿಷಾದವನ್ನೇ ಉಸಿರಾಡುವ ತರಹದ ಪಾತ್ರಗಳು; ಅದನ್ನು ತೆರೆಯ ಮೇಲೆ ಸಾಕ್ಷಾತ್ಕರಿಸುವಲ್ಲಿ ಮೀನಾ ಕುಮಾರಿಯದು ಮನಮಿಡಿಯುವ ಪಾತ್ರ ಮಗ್ನತೆ. ದುಃಖವನ್ನೇ ಹಾಸಿ ಹೊದ್ದುಕೊಂಡು ಅದರಲ್ಲೇ ಖುಷಿಯನ್ನು ಕಾಣುವಂತಹ ವೈರುಧ್ಯ ಆ ಪಾತ್ರಗಳ ಟ್ರೇಡ್ ಮಾರ್ಕ್. ಇದೊಂತರ ಖುಷಿಯಲ್ಲಿದ್ದಾಗಲೂ ಯಾವುದ್ಯಾವುದೋ ಹಳೆಯ ಗಾಯವನ್ನು ಕೆದರಿಕೊಳ್ಳುವ (ಯೋಗರಾಜ್ ಭಟ್ ಶೈಲಿಯಲ್ಲಿ ಹೇಳೋದಾದ್ರೆ…’ಕೆರೆಯೋಕೆ ಹುಣ್ಣೊಂದು ಇರಬೇಕು ರೀ…’ ಅನ್ನುವ ಮನೋಭಾವ), ಆ ನೋವನ್ನೇ ಆಸ್ವಾದಿಸುವ ಅಥವಾ ಮುಂದೆ ಯಾವ ದುರಂತ ಕಾದಿದೆಯೋ ಎಂದು ಕಳವಳಿಸುವ ಮನೋಭೂಮಿಕೆ. ಒಟ್ಟಿನಲ್ಲಿ ಭೂತ-ಭವಿಷ್ಯಗಳ ಕಳವಳಗಳಲ್ಲಿ ವರ್ತಮಾನಕ್ಕೆ ಮ್ಲಾನತೆಯ ಮುಸುಕು ಹೊದಿಸುವ ಮನಃಸ್ಥಿತಿ. ಈ ಕಾರಣಕ್ಕಾಗಿಯೇ ಆ ಸ್ವಭಾವ ಹೊಂದಿರುವವರಿಗೆ “ಮೀನಾ ಕುಮಾರಿ ಕಾಂಪ್ಲೆಕ್ಸ್” ಇದೆ ಅಂತ ಹೇಳುವುದು.

ಈ ಕುರಿತು ನೆಟ್ ಜಾಲಾಡುವ ತನಕ ನನಗೆ ಮೀನಾ ಕುಮಾರಿ ಸ್ವತಃ ಕವಯಿತ್ರಿ ಅನ್ನುವ ವಿಷಯ ಗೊತ್ತಿರಲಿಲ್ಲ. ಆಕೆಯ ಕೆಲ ಕವಿತೆಗಳನ್ನು ಓದಿದೆ. ಅಲ್ಲೂ ಕೂಡಾ ವಿಷಾದದ ಎಳೆಗಳೇ ಕಾಣಸಿಗುತ್ತವೆ. ದುರಂತ ನಾಯಕಿಯಾದ ಆಕೆಯ ಬದುಕೂ ಕೂಡಾ ಒಂದು ವಿಷಾದ ಗೀತೆಯಂತಿರುವ ವಿಪರ್ಯಾಸದ ಪರಮಾವಧಿಯೆಂದರೆ ಅಭಿನೇತ್ರಿಯಾಗಿ ಅಷ್ಟೆಲ್ಲಾ ಮೆರೆದಾಡಿದ ಆಕೆ ‘ಲಿವರ್ ಸಿರೋಸಿಸ್’ನಿಂದ ಅಸುನೀಗಿದಾಗ ಆಸ್ಪತ್ರೆಯ ಬಿಲ್ ಭರಿಸುವಷ್ಟೂ ಹಣ ಇರಲಿಲ್ಲವಂತೆ. ತನ್ನ ದು:ಖ ಮರೆಯಲು ಆಲ್ಕೋಹಾಲ್ ಮೊರೆ ಹೋದ ಈಕೆಯ ಬದುಕು ಪ್ರೇಮ, ವಿವಾಹ ಎಲ್ಲದರಲ್ಲೂ ಕಹಿ ಉಂಡು… ಹಿಡಿಯಷ್ಟು ಪ್ರೀತಿಗಾಗಿ ಹಪಹಪಿಸಿ ಮೂವತ್ತೊಂಬತ್ತು ವರ್ಷಕ್ಕೇ ಈ ಲೋಕಕ್ಕೇ ಗುಡ್ ಬಾಯ್ ಹೇಳಿದ ಈಕೆ ನಿಜಕ್ಕೂ ದುರಂತ ನಾಯಕಿ. ಆಕೆಯ ಎರಡು ಕವಿತೆಗಳಲ್ಲಿ ಆಕೆಯ ಮನದಾಳದ ತಳಮಳ ಮಡುಗಟ್ಟಿರುವುದನ್ನು ಕಾಣಬಹುದು

ಕೃಪೆ: http://www.poemhunter.com

ಕವಿತೆ 1
Ye rat ye tanhai
____________

ye rat ye tanhai
ye dil k dharakne ki awaz
ye sannata

ye dubte taron ki
khamosh gazalkhwani
ye waqt ki palkon par
soti hui wirani
jazbat-e-muhabbat ki
ye akhri angrai
bajti hui har janib
ye maut ki shahnai

sab tum ko bulate hain
pal bhar ko tum aa jao
band hoti meri ankhon main
muhabbat ka
ik Khwab saja jao

ಕವಿತೆ 2

Tukre tukre din biitaa, dhajjii dhajjii raat milii
________________________________
tukre tukre din biitaa, dhajjii dhajjii raat milii
jiskaa jitnaa aaNchal thaa, utnii hii saugaat milii

jab chaahaa dil ko samjheN, hansne kii aavaaz sunii
jaise ko’ii kahtaa ho, le phir tujh ko maat milii

maateN kaisii, ghaateN kyaa, chalte rahnaa aaTh pahar
dil saa saathii jab paayaa, be-chainii bhii saath milii

 

‘ವಿಕ್ಟರಿ’ಯ ಯೋಗರಾಜ್ ಭಟ್ರ ಕಿಕ್-(ಸ್ಟೋ)ರೀ ಹಾಡು ಇಲ್ಲಿ IT ಉದ್ಯೋಗಿಯ ‘ಹಿಸ್-ಸ್ಟೋರಿ’ ಆಗಿದೆ 🙂


ಯಾವತ್ತೂ ಕೆಲ್ಸಾ… ಕ್ಲೈಂಟು ಪಿಸಾಚಿ ಅಲ್ವಾ?
ಟೀ..ಮ್ ಮ್ಯಾನೇಜರ್ಸು ಅಂತೂ… ಸೊಳ್ಳೇ ತಿಗಣೆ… ಎಲ್ಲಾ … ಸೊಳ್ಳೇ ತಿಗಣೆ… ಎಲ್ಲಾ…

ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು
ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು

ಬಾಸ್ತುಂಬಾ ಜೋರು… ಕ್ಲೈಂಟಂದ್ರೆ ದೇವ್ರು
ಬಾಸ್ತುಂಬಾ ಜೋರು… ಕ್ಲೈಂಟಂದ್ರೆ ದೇವ್ರು

ನಿಜ್ವಾಗ್ಲೂ… ನಿಜ್ವಾಗ್ಲೂ… ನಿಜ್ವಾಗ್ಲೂ ಜೋರು ಡೆಡ್ಲೈನ್ ಪ್ರೆಷರು
ಡೆಡ್ಲೈನ್ ಪ್ರೆಷರು… ಡೆಡ್ಲೈನ್ ಪ್ರೆಷರು
ಡೆಡ್ಲೈನ್ ಪ್ರೆಷರು… ಡೆಡ್ಲೈನ್ ಪ್ರೆಷರು

ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು
ಕಟ್ಟು ಮಾಡವ್ರೇ… ನಮ್ ಹೈಕು…ಉ

ಕೆಲಸಾ…ಮಾಡದೇ ಇದ್ರೂ ಉಗಿತಾರೆ
ಸ್ವಲುಪಾ… ತಪ್ಪಾದ್ರೂನೂ ಉಗಿತಾರೆ
ಮುಚ್ಕೊಂಡೇ ಇರ್ತೀನ್ ನಾನು…ಉಗದ್ರೂನೇ
ಕೆಲಸಾ… ಕೆಲಸಾ…ಕೆಲಸಾ…ಕೆಲಸಾ

ಕೋಡಿಗ್-ಕೋಡೇ ಬದಲಾಯ್ಸು
ಕೋಡಿಗ್-ಕೋಡೇ ಬದಲಾಯ್ಸು
ಎಂಡು ಆದ ಮೇಲೆ…ಸಾವಿರಾರು ಚೇಂಜು

ಮಾಡಿ ಫ್ರೀಜು ದಯವಿಟ್ಟು
ಹೇ ಮಾಡಿ ಫ್ರೀಜು ದಯವಿಟ್ಟು
ಡೆಲಿವರಿ ಟೈಮಲ್ಲೂ…ಕೇಳಬೇಡಿ ಚೇಂಜಸು

ಕಂಪನಿ ಒಳ್ಳೇದು…ಡ್ಯೂಟಿ ತುಂಬಾ ಕಷ್ಟದ್ದು
ಹಿಂಗೆ ದುಡಿಯೋದು…ತಮ್-ಹೆಲ್ತ್ಗೆ ಕೆಟ್ಟದ್ದು

ವರ್ಷಕ್ಕೆ ಮೂರು… ಕಂಪನೀಗೆ ಹಾರು
ವರ್ಷಕ್ಕೆ ಮೂರು… ಕಂಪನೀಗೆ ಹಾರು

ನಿಜ್ವಾಗ್ಲೂ…ಗುರುವೇ… ನಿಜ್ವಾಗ್ಲೂ… ನಿಜ್ವಾಗ್ಲೂ ಓಲ್ದು ಕಂಪ್ನೀನೆ ಬೆಟ್ರು
ಕಂಪ್ನೀನೆ ಬೆಟ್ರು… ಕಂಪ್ನೀನೆ ಬೆಟ್ರು
ಕಂಪ್ನೀನೆ ಬೆಟ್ರು… ಕಂಪ್ನೀನೆ ಬೆಟ್ರು

ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು…ಉ

ಹೈಕು-ಭಡ್ತಿ ಎರಡೂ
ಅವ್ಳಿ-ಜವ್ಳಿ ಇದ್ದಂಗೆ
ಅಪ್ರೈಸಲ್ಲು ಇತ್ಯಾದಿ
ಮೂಗಿಗ್ ತುಪ್ಪ ಹಚ್ದಂಗೆ

ಟ್ಯಾಕ್ಸು ಹೋದ್ರೆ ಅದೇ ಸ್ಯಾಲ್ರಿ
ಹೆಸ್ರು ಬದಲು ಹಳೇ ಡ್ಯೂಟಿ
ಹೊಸ ಟೀಮು ಅದೇ ಕ್ಲೈಂಟು
ಕಿತ್ತೋಗಿರೋ ಹಳೇ ಬಾಸು

ಅದೇ ಪ್ರೆಷರ್ ದಿನಾ ಲೇಟು
ವೀಕೆಂಡಲ್ಲೂ ನೈಟು-ಔಟು
ಕ್ಲೈಂಟು ಕಾಲ್ಸು ಮಧ್ಯೆ ಮೀಟಿಂಗ್
ಮೀಟಿಂಗಲ್ಲಿ ಬಾಸಿನ್ ಲೆಕ್ಚರ್

ಗೋಳು ಎಲ್ಲಾ ಯಾರ ಹತ್ರ ಹೇಳಲಿ?
ಪ್ರೋಮೋಶನ್ನೇ ಇಲ್ದೇ ಹಿಂಗೇ ಸಾಯಲೇ?

ಸಿಕ್ಕಲ್ವೆ ಬೇರೆ… ನೌಕ್ರಿ ಆಫರ್ರು
ಬಿಟ್ಟು ಹೋಗೋಕೆ… ಮನ್ಸ್-ಮಾಡಿ ಚೂರು

ನಿಜ್ವಾಗ್ಲೂ…ನಿಜ..ವಾಗ್ಲೂ… ನಿಜ್ವಾಗ್ಲೂ ಹುಡ್ಕಿದ್ರೆ ಬೇಜಾನೈತೆ ಆಫರು
ಬೇಜಾನೈತೆ ಆಫರು… ಬೇಜಾನೈತೆ ಆಫರು
ಬೇಜಾನೈತೆ ಆಫರು… ಬೇಜಾನೈತೆ ಆಫರು

ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು
ಹೇ…ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು
ಕಟ್ಟು ಮಾಡವ್ರೇ… ನಮ್ ಹೈ….ಕು…ಉ

___________________________________________________________
ಮೂಲ ಹಾಡು ‘ವಿಕ್ಟರಿ’ ಚಿತ್ರಕ್ಕೆ ಯೋಗರಾಜ್ ಭಟ್ ಬರೆದ ‘ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು’

ಯಾವತ್ತೂ ಮನ್ಸಾ…. ಒಂಟಿ ಪಿಸಾಚಿ ಅಲ್ಲ
ಬಾ..ರ್ ಸಪ್ಲೈಯರಿಗಿಂತ… ಒಳ್ಳೇ ಗೆಳೆಯಾ…ಇಲ್ಲಾ… ಒಳ್ಳೇ ಗೆಳೆಯಾ… ಇಲ್ಲಾ….

ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು
ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು

ಕಣ್ತುಂಬಾ ನೀರು… ಬಾಯ್ತುಂಬಾ ಬೀರು
ಕಣ್ತುಂಬಾ ನೀರು… ಬಾಯ್ತುಂಬಾ ಬೀರು

ನಿಜ್ವಾಗ್ಲೂ… ನಿಜ್ವಾಗ್ಲೂ… ನಿಜ್ವಾಗ್ಲೂ ಬಾರು ಗಂಡ್ಮಕ್ಳ ತವರು
ಗಂಡ್ಮಕ್ಳ ತವರು…ಗಂಡ್ಮಕ್ಳ ತವರು
ಗಂಡ್ಮಕ್ಳ ತವರು…ಗಂಡ್ಮಕ್ಳ ತವರು

ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು
ಒದ್ದು ಓಡ್ಸವ್ಳೇ… ನಮ್ ವೈಫು…ಉ

ಕುಡುಕಾ…ಕುಡಿದೇ ಇದ್ರೂ ಕುಡುಕಾನೇ
ಕುಡುಕಾ…ಕುಡ್ಕೊಂಡಿದ್ರೂ ಕುಡುಕಾನೇ
ಕುಡ್ಕೊಂಡೇ ಇರ್ತೀನ್ ನಾನು…ಕುಡುಕಾನೇ
ಕುಡುಕಾ… ಕುಡುಕಾ…ಕುಡುಕಾ…ಕುಡುಕಾ

ಊರಿಗ್-ಊರೇ ಸುಡುಗಾಡು
ಊರಿಗ್-ಊರೇ ಸುಡುಗಾಡು
ಎಣ್ಣೇ ಅಂಗ್ಡಿ ಒಂದೇ…ಸಾವಿಲ್ಲದ ಪ್ಲೇಸು

ಬಾರು ಬಾಗ್ಲು ದಯವಿಟ್ಟು
ಹೇ ಬಾರು ಬಾಗ್ಲು ದಯವಿಟ್ಟು
ಟ್ವೆಂಟಿಫೋರು ಹವರ್ಸು…ಮುಚ್ಚಬೇಡಿ ಪ್ಲೀಸು

ಕುಡುಕ್ರು ಒಳ್ಳೇವ್ರು…ಎಣ್ಣೆ ತುಂಬಾ ಕೆಟ್ಟದ್ದು
ಡೈಲಿ ಕುಡಿಯೋದು…ತಮ್-ತಮ್ಗೇ ಬಿಟ್ಟಿದ್ದು

ದುಃಖಕ್ಕೆ ನೀರು…ಕುಡಿತಾರೆ ಯಾರು
ದುಃಖಕ್ಕೆ ನೀರು…ಕುಡಿತಾರೆ ಯಾರು

ನಿಜ್ವಾಗ್ಲೂ…ಗುರುವೇ… ನಿಜ್ವಾಗ್ಲೂ… ನಿಜ್ವಾಗ್ಲೂ ಬಿಲ್ಲು ಕಟ್ಟೋನೇ ದೇವ್ರು
ಕಟ್ಟೋನೇ ದೇವ್ರು…ಕಟ್ಟೋನೇ ದೇವ್ರು
ಕಟ್ಟೋನೇ ದೇವ್ರು…ಕಟ್ಟೋನೇ ದೇವ್ರು

ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು…ಉ

ಲವ್ವು-ನೋವು ಎರಡೂ
ಅವ್ಳಿ-ಜವ್ಳಿ ಇದ್ದಂಗೆ
ಮದುವೆ-ಮಕ್ಳು ಇತ್ಯಾದಿ
ಹಾವು ಬಿಟ್ಟುಕೊಂಡಂಗೆ

ಮನೆಗೋದ್ರೆ ಅದೇ ಹೆಂಡ್ತಿ
ಹಸ್ರು ಕಲರ್ ಹಳೇ ನೈಟಿ
ಬ್ಯಾಂಕು ಸಾಲ ಕಾರು ಗ್ಯಾಸು
ಮನೆ ಬಾಡ್ಗೆ ಮಕ್ಳು ಫೀಸು

ಅದೇ ಕುಕ್ಕರ್ ಅನ್ನ ಸಾರು
ಮಕ್ಳ ಕೈಲಿ ಪ್ಲಾಸ್ಟಿಕ್ ಕಾರು
ಮಿಡಲ್ ಕ್ಲಾಸು ಹಳೇ ಸ್ಕೂಟರ್
ಯಾವಾಗಂದ್ರೆ ಆವಾಗ್ ಪಂಕ್ಚರ್

ಬಾಳು ಅಂದ್ರೆ ಏನು ಅಂತ ಹೇಳಲೇ
ಮೆಡಿಸನ್ನೇ ಇಲ್ದೇ ಇರೋ ಖಾಯಿಲೇ

ಇಲ್ಲಿಲ್ಲ ಯಾರೂ…ಔಷ್ದಿ ಕೋಡೋರು
ಬಿಟ್ಟುಕೊಂಡೋರು…ಬಿಟ್ಟೇಳಿ ಚೂರು

ನಿಜ್ವಾಗ್ಲೂ…ನಿಜ..ವಾಗ್ಲೂ… ನಿಜ್ವಾಗ್ಲೂ ಕುಡುಕ್ರೇ ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು…ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು…ಸಮಾಜಕ್ಕೆ ಡಾಕ್ಟ್ರು

ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು
ಹೇ…ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು
ಒದ್ದು ಓಡ್ಸವ್ಳೇ… ನಮ್ ವೈ….ಫು…ಉ

‘ಪರಮಾತ್ಮ’ ಚಿತ್ರದ ‘ಪರವಶನಾದೆನು…ಅರಿಯುವ ಮುನ್ನವೇ’ ಧಾಟಿಯಲ್ಲಿ ‘ಯಡ್ಡಿಮಾತ್ಮ’ನ ಗೋಳು ‘ಕರವಶನಾದೆನು… ಚುನಾವಣೆ ಮುನ್ನವೇ’

 

ಕರವಶನಾದೆನು… ಚುನಾವಣೆ ಮುನ್ನವೇ
ಭಾಜಪವ-ಸೇರಲೀ ಹೇಗೆ… ಕರೆಯದೆ ನನ್ನನೇ

ಬಿಡೋಕಿಂತ ಮುಂಚೆ ನನ್ನಾ… ತಡಿಬಾರದಿತ್ತೆ ನೀವು
ಹಿಂದಾದುದಾ… ಮರೆತ್ಬಿಟ್ಟು ಬಾ… ಒಂದಾಗುವಾ
ಲೋಕಸಭೆ ವಿನ್ನಿಗೆ

ಕರವಶನಾದೆನು… ಚುನಾವಣೆ ಮುನ್ನವೇ
ಭಾಜಪವ-ಸೇರಲೀ ಹೇಗೆ… ಕರೆಯದೆ ನನ್ನನೇ

ಕಾಂಗೈ ಪಾಲಿಗಂತೂ ನಾನು… ನಿರುಪಯೋಗಿಯಾದೆನು
ಇನ್ನು ನಾವು ಸೇರಬೇಕು… ಜಂಟಿಯಾಗಿ ಸಾಗಲು

ಹೂ…ಅರಳಿಸೋ ಶಕ್ತಿಯ
ಲೋಕ-ಸಭೆಯಲಿ ತುಂಬಬಲ್ಲೆ
ನನ್ನಾ…ಬಂಡಾಯವನ್ನು
ಮರ್ತುಬಿಡಿ ನಾವೀಗ… ಫ್ರೆಂ…ಡ್ಸ…ಲ್ವೇ

ಯಾರೇನೇ ಅಂದರೂನೂ… ನನಗಿಲ್ಲ ಚಿಂತೆ ಏನೂ
ಪಾರ್ಟಿಯಲ್ಲಿಯ… ಬಿಕ್ಕಟ್ಟನು… ಬದಿಗಿಟ್ಟರೇ
ಗೆಲುವದು ನಮ್ಮದೇ

ಕರವಶನಾದೆನು… ಚುನಾವಣೆ ಮುನ್ನವೇ
ಭಾಜಪವ-ಸೇರಲೀ ಹೇಗೆ… ಕರೆಯದೆ ನನ್ನನೇ

ಕಾಂಗೈಯನು ನಂಬಿ ಕೆಟ್ಟಿರುವೆನು… ನಿಮ್ಮಾತ ಕೇಳದೇ
ಪಕ್ಷವು ಸೋಲು ಕಂಡಿರಲು ಈ… ನಿರ್ಧಾರವು ಮೂಡಿದೆ

ನನ್ನಾ ಮಾತನೇ… ಇನ್ಮುಂದೆ ಕೇಳಬೇಕು
ಸೇರಿಸಿ ಬೇಗಾ…. ಫೈಟು ನಿಲ್ಸೋಣ ಸಾಕು

ಸಹವಾಸ ದೋಷದಿಂದ…. ಮನೆ ತೊರೆದು ಹೋದೆ ನಾನು
ನನಗಾಗಿಯೇ… ಕಾದಿಟ್ಟಿರಿ… ಸೀಟೊಂದನು
ಮರಳುವೆ ಗೂಡಿಗೆ

ಕರವಶನಾದೆನು… ಚುನಾವಣೆ ಮುನ್ನವೇ
ಭಾಜಪವ-ಸೇರಲೀ ಹೇಗೆ… ಕರೆಯದೆ ನನ್ನನೇ

ಮೂಲ ಹಾಡು: ‘ಪರಮಾತ್ಮ’ ಚಿತ್ರದ ‘ಪರವಶನಾದೆನು… ಅರಿಯುವ ಮುನ್ನವೇ’
ಕೃಪೆ: kannadamoviesongslyricsinkannada.blogspot.in

ಪರವಶನಾದೆನು… ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ… ಪ್ರಣಯಕು ಮುನ್ನವೇ

ಇದಕಿಂತ ಬೇಗ ಇನ್ನೂ… ಸಿಗಬಾರದಿತ್ತೆ ನೀನು
ಇನ್ನಾದರೂ… ಕೂಡಿಟ್ಟುಕೊ… ನೀ ನನ್ನನು
ಕಳೆಯುವ ಮುನ್ನವೇ

ಪರವಶನಾದೆನು… ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ… ಪ್ರಣಯಕು ಮುನ್ನವೇ

ನಿನ್ನ ಕಣ್ಣಿಗಂತು ನಾನು… ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು… ಪ್ರೇಮಯೋಗಿಯಾಗಲು

ಹೂ… ಅರಳುವ ಸದ್ದನು
ನಿನ್ನ ನಗೆಯಲಿ… ಕೇಳಬಲ್ಲೆ
ನನ್ನ… ಏಕಾಂತವನ್ನು
ತಿದ್ದಿಕೊಡು ನೀನೀಗ… ನಿಂ… ತ… ಲ್ಲೆ

ನಾನೇನೇ ಅಂದರೂನೂ… ನನಗಿಂತ ಚೂಟಿ ನೀನು
ತುಟಿಯಲ್ಲಿಯೇ… ಮುಚ್ಚಿಟ್ಟುಕೊ… ಮುತ್ತೊಂದನೂ
ಕದಿಯುವ ಮುನ್ನವೇ

ಪರವಶನಾದೆನು… ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ… ಪ್ರಣಯಕು ಮುನ್ನವೇ

ಕನಸಲಿ ತುಂಬ ಕೆಟ್ಟಿರುವೆನು… ನಿನ್ನನು ಕೇಳದೇ
ರೆಕ್ಕೆಯ ನೀನೆ ಕಟ್ಟಿರಲು ಈ… ಹೃದಯವು ಹಾರಿದೆ

ನನ್ನಾ ಕೌತುಕ… ಒಂದೊಂದೆ ಹೇಳಬೇಕು
ಆಲಿಸುವಾಗ… ನೋಡು ನನ್ನನ್ನೆ ಸಾಕು

ಸಹವಾಸ ದೋಷದಿಂದ… ಸರಿಹೋಗಬಹುದೆ ನಾನು
ನನಗಾಗಿಯೇ… ಕಾದಿಟ್ಟುಕೊ… ಹಟವೊಂದನೂ
ಕೆಣಕುವ ಮುನ್ನವೇ

ಪರವಶನಾದೆನು…ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ…ಪ್ರಣಯಕು ಮುನ್ನವೇ….

ಸ್ಪಾಟಿನಲ್ಲಿ ಫಿಕ್ಸು ಮಾಡಿ ಝೀರೋಗಳಾದ ಕ್ರಿಕೆಟ್ ಹೀರೋಗಳು ‘ದೆವ್ವ ತಾ ಮನುಷ್ಯ’ ರ ಗೆಟಪ್ಪಲ್ಲಿ ‘ದೇವತಾ ಮನುಷ್ಯ’ ಚಿತ್ರದ ‘ಹೃದಯದಲಿ ಇದೇನಿದು…’ ಹಾಡಿನ ಸ್ಟೈಲಲ್ಲಿ ಹಾಡ್ತಾ ಇದ್ದಾರೆ ‘ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ’ 🙂

 

ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ
ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ

ಕಳ್ಳಾಟವನು ಪೊಲೀಸರು ಹಿಡ್ದು
ಮೋಸದಾಟಕೆ ಶಿಕ್ಷೆ ಪಡೆದು
ಜೈಲಿನಲ್ಲಿ ಕಂಬಿ ಎಣ್ಸೋ ಕೆಲ್ಸ ನಮ್ಗೆ ಈಗ

ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ
ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ

ಕಳ್ಳಾಟವನು ಪೊಲೀಸರು ಹಿಡ್ದು
ಮೋಸದಾಟಕೆ ಶಿಕ್ಷೆ ಪಡೆದು
ಜೈಲಿನಲ್ಲಿ ಕಂಬಿ ಎಣ್ಸೋ ಕೆಲ್ಸ ನಮ್ಗೆ ಈಗ

ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ

ಝಣ್ ಎನ್ನುವಾ
ಕಾಸಿನ ಎಂಜಲು ಆಸೆಗೆ
ಸೇಲ್ ಆದೆವು
ಬುಕ್ಕಿಯ ಆಮಿಷ ಮಾತಿಗೆ

ಈ ಫ್ಯಾನ್ಸು… ಉಗಿಯುತಿರೆ
ಕ್ರಿಕೆಟ್ ಬದುಕು… ಮುಗಿದೋಯಿತೆ
ಮಾಡುವುದೆನೀಗಾ…?

ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ

ಫಿಕ್ಸ್ ಸ್ಪಾಟಲಿ
ಆಟಕೆ ಮಾಡಿದ ದ್ರೋಹಕೆ
ಗ್ರೇಟ್ ನಾಯಕ
ದ್ರಾವಿಡಿಗೆ ಮಾಡಿದ ಮೋಸಕೆ

ಮೈ ಬೆವರಿ… ಒದ್ದೆಯಾಗೆ
ಬೀಸಿಸಿಐ … ಹೊರಹಾಕೆ
ನಮ್ಕತೆ ಗೋವಿಂದಾ…

ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ
ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ

ಕಳ್ಳಾಟವನು ಪೊಲೀಸರು ಹಿಡ್ದು
ಮೋಸದಾಟಕೆ ಶಿಕ್ಷೆ ಪಡೆದು
ಜೈಲಿನಲ್ಲಿ ಕಂಬಿ ಎಣ್ಸೋ ಕೆಲ್ಸ ನಮ್ಗೆ ಈಗ

ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ
ಟವೆಲಿನಲಿ ಇದೇನಿದು… ಸಿಗ್ನಲೊಂದು ನೀಡಿದೆ

____________________________________________________
ಮೂಲ ಹಾಡು: ‘ದೇವತಾ ಮನುಷ್ಯ’ ಚಿತ್ರದ ‘ಹೃದಯದಲಿ ಇದೇನಿದು… ನದಿಯೊಂದು ಓಡಿದೆ’
ಕೃಪೆ: kannadalyrics.com

ಹೃದಯದಲಿ ಇದೇನಿದು… ನದಿಯೊಂದು ಓಡಿದೆ
ಹೃದಯದಲಿ ಇದೇನಿದು… ನದಿಯೊಂದು ಓಡಿದೆ

ಕಲಕಲನೆ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ

ಹೃದಯದಲಿ ಇದೇನಿದು… ನದಿಯೊಂದು ಓಡಿದೆ
ಹೃದಯದಲಿ ಇದೇನಿದು… ನದಿಯೊಂದು ಓಡಿದೆ

ಕಲಕಲನೆ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ

ಹೃದಯದಲಿ ಇದೇನಿದು… ನದಿಯೊಂದು ಓಡಿದೆ

ಸುoಯ್ ಎನ್ನುತಾ
ಬೀಸುವ ತಣ್ಣನೆ ಗಾಳಿಗೆ
ಗುoಯ್ ಎನ್ನುವಾ
ದುಂಬಿಯ ಹಾಡಿನ ಮೋಡಿಗೆ

ಈ ಮನಸು… ಕುಣಿಯುತಿದೆ
ಹೊಸ ಕನಸು… ಕೆಣಕುತಿದೆ
ಮಾಡುವುದೇನೀಗಾ…

ಹೃದಯದಲಿ ಇದೇನಿದು… ನದಿಯೊಂದು ಓಡಿದೆ

ಘಮ್ ಎನ್ನುವಾ
ತಾವರೆ ಹೂವಿನ ಕಂಪಿಗೆ
ಘುಮ್ ಎನ್ನಿಸಿ
ತನುವಲಿ ಓಡುವಾ ಮಿಂಚಿಗೆ

ಮೈ ಬಿಸಿಯು… ಏರುತಿದೆ
ಈ ಬೆಸುಗೆ… ಹೇಳುತಿದೆ
ತುಂಬಿತು ಆನಂದಾ…

ಹೃದಯದಲಿ ಇದೇನಿದು… ನದಿಯೊಂದು ಓಡಿದೆ
ಹೃದಯದಲಿ ಇದೇನಿದು… ನದಿಯೊಂದು ಓಡಿದೆ

ಕಲಕಲನೆ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ

ಹೃದಯದಲಿ ಇದೇನಿದು… ನದಿಯೊಂದು ಓಡಿದೆ
ಹೃದಯದಲಿ ಇದೇನಿದು… ನದಿಯೊಂದು ಓಡಿದೆ

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ? ಅಲ್ಲಲ್ಲಿ ‘ಸ್ಪಾಟ್ ಫಿಕ್ಸ್’ ಮಾಡಿ ಹೆಣೆದ ಅಣಕ :-)

Posted: ಮೇ 17, 2013 in aNaka, anakavaadu, ಅಣಕ, ಅಣಕವಾಡು, ಇತ್ಯಾದಿ..., ಕನ್ನಡ, ಕನ್ನಡ ಅಣಕ, ಕನ್ನಡ ಅಣಕ ಹಾಡು, ಕನ್ನಡ ಚಲನಚಿತ್ರ ಹಾಡು ಅಣಕ, ಕನ್ನಡ ರೀಮಿಕ್ಸ್, ಕ್ರಿಕೆಟ್, ಕ್ರಿಕೆಟ್ ಫಿಕ್ಸಿಂಗ್, ಗಮ್ಮತ್ತಿನ ಹಾಡು, ರಿಮಿಕ್ಸ್, ರೀಮಿಕ್ಸ್, ಸಿನಿಮಾ, ಸ್ಪಾಟ್ ಫಿಕ್ಸಿಂಗ್, ಹಾಗೆ ಸುಮ್ಮನೆ, cricket, film, gammaththina haadu, IPL, IPL 2013, kannada, kannada anakavadu, kannada film song remix, kannada remix, kannada spoof
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಮೂಲ ಹಾಡನ್ನು ಬಹುತೇಕ ಹಾಗೇ ಅಳಿಸಿಕೊಂಡು… ಅಲ್ಲಲ್ಲಿ ‘ಸ್ಪಾಟ್ ಫಿಕ್ಸ್’ ಮಾಡಿ ಹೆಣೆದ ಅಣಕ 🙂

‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’ ಧಾಟಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಅಣಕ ‘ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ’

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

ಬುಕ್ಕಿ ಮಾರ್ಕೆಟ್ಟು… ಸೇಲಾದೋರ… ರೇಟ್ ಏನಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

ಕೆಲವೊಮ್ಮೆ… ಪ್ಲೆಯರ್ಸ್-ನಾ … ಕೊಂಡಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಬೆಟ್ಟಿಂಗು… ಕಳ್ಕೋ ಬೇಕಾಯ್ತದೆ

ಫಿಕ್ಸಿಂಗ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಚೆಂಡ್ ಚೆಂಡ್ ಚೆಂಡ್ ಚೆಂಡ್

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

ಇಂತಾ ಓವರಲ್ಲಿ … ನಿಮ್ಗೆಷ್ಟು ರನ್ ಬೇಕು
ಕೊಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಬಾಲನ್ನು… ನೋಬಾಲು ಹಾಕೋಕೆ
ಎಷ್ಟ್ ಲಕ್ಷ ನಂಗೆ… ಕೊಡ್ತ್ರಿ ಸ್ವಾಮೀ

ನ…ಮ್ಮಾ ಸ್ಪಾಟ್ ಫಿಕ್ಸು… ದಂ…ಧೆ ಹಿಂಗೇನೇ
ಮ್ಯಾ…ಚಿನಲ್ಲೀ ಕ್ಯಾಚು… ಡ್ರಾ…ಪು… ಸುಮ್ನೇನೆ

ಸಂಜ್ಞೆ ಸನ್ನೇಲಿ… ಕಾಸು ಸ್ಪಾಟ್ ಆಯ್ತದೆ
ಪ್ರತೀ ಬಾಲಿನಲಿಯೂ… ಲಕ್ಷ್-ಲಕ್ಷಾ ಸಿಗ್ತದೆ

ಈಜಿ ದುಡ್ಡಿಗೆ… ಆಸೆ ಪಟ್ರೆ… ಜೈಲ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

ಒಂದು ಬಾಲನ್ನು… ಮಾಡಿದರೆ ಸ್ಪಾಟು
ಕೈ ತುಂಬಾ ಕಾಸುಗಳ… ಕೊಡುತಾರೇ
ಫ್ರಾಂಚೈಸಿ ಕೊಡೆಯಾ… ಒಳಗಡೆ ಸುಮ್ನೆ
ನಮ್ಮ ಬುಕ್ ಮಾಡಿ ಯಾರೋ… ಸಿಗ್ಸುತಾರೆ

ಮೂ…ರೇ ಘಂಟೆಯಷ್ಟೇ… ಮ್ಯಾ…ಚು ಆದರೇ
ಆ…ರೂ ಬಾಲಿನಲ್ಲಿ… ಕ್ರೋ…ರು ಬಾಚ್ತಾರೆ

ಬುಕ್ಕೀಸ್ಗೆ ಟೈಮಲ್ಲಿ ಸೈನು… ಬೇಕಾಯ್ತದೆ
ಪ್ಲೆಯರ್ಸು ಸಿಗ್ನಲ್ಸು… ಕಲೀ ಬೇಕಾಯ್ತದೆ

ಇಂಥಾ ಬೆಗ್ಗರ್ಸು… ಆಟಾಡೋದು… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

______________________________________________

ಮೂಲ ಹಾಡು: ‘ಬಚ್ಚನ್’ ಚಿತ್ರದ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’

ಸಾಹಿತ್ಯ : ಯೋಗರಾಜ್ ಭಟ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು… ಚೂಡಿದಾರೂ… ರೇಟ್ ಏನಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಕೆಲವೊಮ್ಮೆ… ಕೆಲವೊಂದು… ತಿಳಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಮರ್ಯಾದೆ… ಕಳ್ಕೋ ಬೇಕಾಯ್ತದೆ

ಜನರಲ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಇಂಟರ್-ನೆಟ್ಟಲ್ಲಿ… ಇಡ್ಲಿ ನಾ ಡವ್ನ್-ಲೋಡ್
ಮಾಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಪ್ರಶ್ನೇಗೆ… ಉತ್ತರ ಸಿಗದೇ
ಸತ್ತ್ ಹೋದಾ ನನ್ನಾ… ಹಳೇ ಪ್ರೇಮೀ

ನ…ನ್ನಾ ಪ್ರೀತಿ ಪಾಠಾ… ಸ್ವ…ಲ್ಪಾ ಹಿಂಗೇನೇ
ಸ್ಕೂ…ಲಿನಲ್ಲೀ ಲಾಸ್ಟು… ಬೆಂ…ಚು… ನಿಮ್ದೇನೇ

ಸಂಜೇ ಟೈಮಲ್ಲಿ… ಕ್ಲಾಸು ಸ್ಟಾರ್ಟ್ ಆಯ್ತದೆ
ಬರೀ ಹುಡುಗರಿಗೆ… ಪ್ರವೆಸಾ ಇರ್ತದೆ

ಎಜುಕೇಸನ್ನೇ… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ವಿಂಡೋ ಕರ್ಟನ್ನು… ತೆಗೆದರೆ ಸಾಕು
ಕೈ ಕೊಟ್ಟ ಹುಡುಗರೇ… ಕಾಣುತಾರೇ
ಕಾಫಿಡೇ ಕೊಡೆಯಾ… ಕೆಳಗಡೆ ಸುಮ್ನೆ
ನಮ್ಗೆ ಫ್ರೆಶ್ ಆಗಿ ಯಾರೋ… ಸಿಗುತಾರೆ

ಮೂ…ರೂ ಘಂಟೆಯಲ್ಲಿ… ಪ್ಯಾ…ರೂ ಆದರೇ
ಆ…ರೂ ಘಂಟೆಗೆಲ್ಲಾ… ಬೋ…ರೂ ಆಯ್ತದೆ

ಲೇಡೀಸ್ಗೆ ಲವ್ವಲ್ಲಿ… ಟೈಮು… ಬೇಕಾಯ್ತದೆ
ಗಂಡಸ್ರು ಪೇಷೆನ್ಸು… ಕಲೀ ಬೇಕಾಯ್ತದೆ

ತುಂಬಾ ಅರ್ಜೆಂಟು… ಆರೋಗ್ಯಕ್ಕೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್