ಮೂಲ ಹಾಡನ್ನು ಬಹುತೇಕ ಹಾಗೇ ಅಳಿಸಿಕೊಂಡು… ಅಲ್ಲಲ್ಲಿ ‘ಸ್ಪಾಟ್ ಫಿಕ್ಸ್’ ಮಾಡಿ ಹೆಣೆದ ಅಣಕ 🙂
‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’ ಧಾಟಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಅಣಕ ‘ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ’
VIDEO
ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್
ಬುಕ್ಕಿ ಮಾರ್ಕೆಟ್ಟು… ಸೇಲಾದೋರ… ರೇಟ್ ಏನಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್
ಕೆಲವೊಮ್ಮೆ… ಪ್ಲೆಯರ್ಸ್-ನಾ … ಕೊಂಡಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಬೆಟ್ಟಿಂಗು… ಕಳ್ಕೋ ಬೇಕಾಯ್ತದೆ
ಫಿಕ್ಸಿಂಗ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಚೆಂಡ್ ಚೆಂಡ್ ಚೆಂಡ್ ಚೆಂಡ್
ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್
ಇಂತಾ ಓವರಲ್ಲಿ … ನಿಮ್ಗೆಷ್ಟು ರನ್ ಬೇಕು
ಕೊಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಬಾಲನ್ನು… ನೋಬಾಲು ಹಾಕೋಕೆ
ಎಷ್ಟ್ ಲಕ್ಷ ನಂಗೆ… ಕೊಡ್ತ್ರಿ ಸ್ವಾಮೀ
ನ…ಮ್ಮಾ ಸ್ಪಾಟ್ ಫಿಕ್ಸು… ದಂ…ಧೆ ಹಿಂಗೇನೇ
ಮ್ಯಾ…ಚಿನಲ್ಲೀ ಕ್ಯಾಚು… ಡ್ರಾ…ಪು… ಸುಮ್ನೇನೆ
ಸಂಜ್ಞೆ ಸನ್ನೇಲಿ… ಕಾಸು ಸ್ಪಾಟ್ ಆಯ್ತದೆ
ಪ್ರತೀ ಬಾಲಿನಲಿಯೂ… ಲಕ್ಷ್-ಲಕ್ಷಾ ಸಿಗ್ತದೆ
ಈಜಿ ದುಡ್ಡಿಗೆ… ಆಸೆ ಪಟ್ರೆ… ಜೈಲ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್
ಒಂದು ಬಾಲನ್ನು… ಮಾಡಿದರೆ ಸ್ಪಾಟು
ಕೈ ತುಂಬಾ ಕಾಸುಗಳ… ಕೊಡುತಾರೇ
ಫ್ರಾಂಚೈಸಿ ಕೊಡೆಯಾ… ಒಳಗಡೆ ಸುಮ್ನೆ
ನಮ್ಮ ಬುಕ್ ಮಾಡಿ ಯಾರೋ… ಸಿಗ್ಸುತಾರೆ
ಮೂ…ರೇ ಘಂಟೆಯಷ್ಟೇ… ಮ್ಯಾ…ಚು ಆದರೇ
ಆ…ರೂ ಬಾಲಿನಲ್ಲಿ… ಕ್ರೋ…ರು ಬಾಚ್ತಾರೆ
ಬುಕ್ಕೀಸ್ಗೆ ಟೈಮಲ್ಲಿ ಸೈನು… ಬೇಕಾಯ್ತದೆ
ಪ್ಲೆಯರ್ಸು ಸಿಗ್ನಲ್ಸು… ಕಲೀ ಬೇಕಾಯ್ತದೆ
ಇಂಥಾ ಬೆಗ್ಗರ್ಸು… ಆಟಾಡೋದು… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್
______________________________________________
ಮೂಲ ಹಾಡು: ‘ಬಚ್ಚನ್’ ಚಿತ್ರದ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’
ಸಾಹಿತ್ಯ : ಯೋಗರಾಜ್ ಭಟ್
ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು… ಚೂಡಿದಾರೂ… ರೇಟ್ ಏನಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಕೆಲವೊಮ್ಮೆ… ಕೆಲವೊಂದು… ತಿಳಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಮರ್ಯಾದೆ… ಕಳ್ಕೋ ಬೇಕಾಯ್ತದೆ
ಜನರಲ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಇಂಟರ್-ನೆಟ್ಟಲ್ಲಿ… ಇಡ್ಲಿ ನಾ ಡವ್ನ್-ಲೋಡ್
ಮಾಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಪ್ರಶ್ನೇಗೆ… ಉತ್ತರ ಸಿಗದೇ
ಸತ್ತ್ ಹೋದಾ ನನ್ನಾ… ಹಳೇ ಪ್ರೇಮೀ
ನ…ನ್ನಾ ಪ್ರೀತಿ ಪಾಠಾ… ಸ್ವ…ಲ್ಪಾ ಹಿಂಗೇನೇ
ಸ್ಕೂ…ಲಿನಲ್ಲೀ ಲಾಸ್ಟು… ಬೆಂ…ಚು… ನಿಮ್ದೇನೇ
ಸಂಜೇ ಟೈಮಲ್ಲಿ… ಕ್ಲಾಸು ಸ್ಟಾರ್ಟ್ ಆಯ್ತದೆ
ಬರೀ ಹುಡುಗರಿಗೆ… ಪ್ರವೆಸಾ ಇರ್ತದೆ
ಎಜುಕೇಸನ್ನೇ… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ವಿಂಡೋ ಕರ್ಟನ್ನು… ತೆಗೆದರೆ ಸಾಕು
ಕೈ ಕೊಟ್ಟ ಹುಡುಗರೇ… ಕಾಣುತಾರೇ
ಕಾಫಿಡೇ ಕೊಡೆಯಾ… ಕೆಳಗಡೆ ಸುಮ್ನೆ
ನಮ್ಗೆ ಫ್ರೆಶ್ ಆಗಿ ಯಾರೋ… ಸಿಗುತಾರೆ
ಮೂ…ರೂ ಘಂಟೆಯಲ್ಲಿ… ಪ್ಯಾ…ರೂ ಆದರೇ
ಆ…ರೂ ಘಂಟೆಗೆಲ್ಲಾ… ಬೋ…ರೂ ಆಯ್ತದೆ
ಲೇಡೀಸ್ಗೆ ಲವ್ವಲ್ಲಿ… ಟೈಮು… ಬೇಕಾಯ್ತದೆ
ಗಂಡಸ್ರು ಪೇಷೆನ್ಸು… ಕಲೀ ಬೇಕಾಯ್ತದೆ
ತುಂಬಾ ಅರ್ಜೆಂಟು… ಆರೋಗ್ಯಕ್ಕೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
Like this: Like ಲೋಡ್ ಆಗುತ್ತಿದೆ...