Archive for the ‘TV’ Category

ಹಳೇ ಧಾರಾವಾಹಿಗಳು… ಹೊಸ ನೆನಪುಗಳ ಧಾರೆ…
——————————————————-

ಈಗ ಮೆಗಾ ಧಾರಾವಾಹಿಗಳ ಕಾಲ… ಸೀ-ರಿಯಲ್ಲು, ‘saw’ ರಿಯಾಲಿಟಿ ಶೋಗಳ ಗರಗಸದ ಕುಯ್ತ ನೋಡಿ ಬೇಸತ್ತಿರುವಾಗ ಹಳೆಯ ಧಾರಾವಾಹಿಗಳ ನೆನಪು ಎಷ್ಟು ಮಧುರ ಅನ್ನಿಸಿಬಿಡುತ್ತೆ… ಆಷಾಡದ ಮಳೆಯಂತೆ ಎಂದೂ ಮುಗಿಯದೇನೋ ಅನ್ನಿಸುವ’ ಮೇಘ ಧಾರೆ’ಯ ‘ಮೆಗಾ ಧಾರಾ’ವಾಹಿಗಳ ನಡುವೆ ಅಂದಿನ ಧಾರಾವಾಹಿಗಳ ನೆನೆದರೆ ಮನಸಿನ ಮೂಲೆಯಲಿ ಹೇಳಲಾಗದ ಕಚಗುಳಿ…

ಈಗ ನಾನು ಧಾರವಾಹಿ ನೋಡೋಲ್ಲ… ನಾ ಆಸಕ್ತಿಯಿಂದ ನೋಡಿದ ಕೊನೆ ಧಾರಾವಾಹಿ ‘ಮಂಥನ’… 🙂

ಶ್ರೀನಿಧಿ ಅವರ ಬ್ಲಾಗ್ ಬರಹಕ್ಕೆ ಪ್ರತಿಕ್ರಿಯೆಯಾಗಿ ಬರೆದ ಈ ನೆನಪುಗಳ ಮಾತು…ಎಂದೂ ಮಗಿಯಬಾರದು ಎನಿಸುವ ಒಂದು ಧಾರಾವಾಹಿ…

ಬೆಂಗಳೂರು ದೂರದರ್ಶನದ ಕೆಲವು ಹಳೆಯ ಧಾರಾವಾಹಿಗಳು… ನನ್ನ ಅಚ್ಚುಮೆಚ್ಚಿನವು … ಬಹುತೇಕರ ಅಚ್ಚುಮೆಚ್ಚಿನದಾಗಿದ್ದವು ಅನ್ಸುತ್ತೆ…

ನಿಮ್ಮ ಫೇವರೆಟ್ ಇನ್ನೂ ಯಾವ್ದಾದ್ರೂ ಇದ್ರೆ ಈ ಪಟ್ಟಿಗೆ ಸೇರಿಸಿ…
ಬದುಕು ಜಟಕಾ ಬಂಡಿ …

ಬದುಕು ಜಟಕಾ ಬಂಡಿ ನಮ್ಮ ಬದುಕು ಜಟಕಾ ಬಂಡಿ…
ಇದೆ ನೆಲವು ನಮ್ಮ ಹಾಸಿಗೆಯಣ್ಣ ಆಸರೆ ನಮಗಣ್ಣ…
( ಭಾನುವಾರ ಬೆಳಗ್ಗೆ ಬರ್ತಾ ಇತ್ತು.. ಸಂಕೇತ್ ಕಾಶಿ, ನಾಗೇಂದ್ರ ಷಾ ಇವರನ್ನು ನಾನು ಮೊದಲು ನೋಡಿದ್ದು ಇದರಲ್ಲೇ ಅಂತ ನೆನಪು )

ಸಬೀನಾ
(ಭಾನುವಾರ ಬೆಳಿಗ್ಗೆ ಬರ್ತಾ ಇತ್ತು… ನಮಸ್ಕಾರ ನಮಸ್ಕಾರ ಹೋಗಿ ಬರುವೆನು… ಅಂತ ಧಾರಾವಾಹಿ ಮುಗಿಯುವಾಗ ಹಾಡು ಬರ್ತಾ ಇತ್ತು…ಸಬೀನಾ ಡಿಶ್ ವಾಶ್ ಪೌಡರ್ ಬರೋಕೂ ಮುಂಚೆ ಬರ್ತಿತ್ತು..:-))

ಅಂಕಲ್ ಇಲ್ಲಪ್ಪ

ಎಳೆಯರ ಗೆಲುವು
( ಎಳೆಯರ ಗೆಲುವು…ಓಹೋ ಎಳೆಯರ ಗೆಲುವು.. ಎಳೆಯರು ನಾವೆಲ್ಲಾ..ಗೆಳೆಯರು ನಾವೆಲ್ಲಾ…)

ಅಸಾಧ್ಯ ಅಳಿಯ ( ಅಸಾಧ್ಯ ಅಳಿಯ ಇವನು.. ಇವನೆಂತ ನಕ್ಷತ್ರಿಕನು…),

ಸರಿಗಮ ವಿಜಿ ರೇಖಾದಾಸ್ ಅಭಿನಯದ ‘ಎಲ್ಲರಂತಲ್ಲ ನನ್ನ ಗಂಡ ‘

ಸೀತಾಪತಿ ಸಿಟಿ ಲೈಫ್

ಎಡವಟ್ಟಣ್ಣಯ್ಯ…(ಏನೋ ಮಾಡಲು ಹೋಗಿ ಎಡವಟ್ಟಾಗಿ… ಕೊನೆಗೆ ಅದರಿಂದಲೇ ಒಳ್ಳೆಯದಾಗುವ ಕಥೆಗಳು)

ಡಿಸ್ಕೊರಾಗ… ಆದಿತಾಳ (ಮಹಾಲಕ್ಷ್ಮಿ..ಆಹಾ…ಅಂತ ಕಟ್ಟು ಕೊಂಕಿಸೋದು ನೆನ್ಪಿದ್ಯಾ?)

ಸ್ವರ ಸಂಪದ…(ಟೈಟಲ್ ಸಾಂಗ್ ಸೂಪರ್)

ಸ್ವಯಂವಧು

ರಾಗ ಲಹರಿ( ವಿಜಯ್ ಕಾಶಿ-ವಿನಯ ಪ್ರಸಾದ್ ಅಂತ ನೆನಪು) ಹೈಸ್ಕೂಲಲ್ಲಿ ಇದ್ದಾಗ ನನ್ ಫ್ರೆಂಡ್ ಮಂಜುನಾಥ ಮೂಡುಬಗೆ ಇದನ್ನ ಹಾಗಲಹುಳಿ… ಅಂತ ಕಿಚಾಯಿಸ್ತಿದ್ದ…

ಚಕ್ರ (ಮೋಡಕೆ ಮೋಡ.. ಬೆರೆತರೆ ನೋಡು… ತುಂತುರು ಹೂಹಾಡು…)

ಕ್ಷಮಯಾ ಧರಿತ್ರಿ (ಭೂಮಿ ನೀನು ಸಹನೆಯಲಿ… ಬೆಂಕಿ ನಿನ್ನ ಉಸಿರಿನಲಿ… ಯಾರಿಗೆ ಹೋಲಿಸಲೇ… ಕ್ಷಮಯಾ ಧರಿತ್ರಿ ಎನ್ನಲೇ )

ಚಿಗುರು…ಅಲ್ಲೊಂದು ಚಿಗುರು..ಇಲ್ಲೊಂದು ಚಿಗುರು…

ಇಂಚರ ( ಬಹುಶಃ ಸಂಜಯ್ ಮತ್ತು ರಾಜೇಶ್ ಮೊದಲು ಈ ಧಾರವಾಹಿನಲ್ಲೇ ಕಿರುತೆರೆಗೆ ಬಂದಿದ್ದು ಇರಬೇಕು.. ಶನಿವಾರ ಆರು ಮೂವತ್ತಕ್ಕೆ ಬರ್ತಾ ಇತ್ತು ಅಂತ ನೆನಪು… ಸಂಜಯ್ ಕೊಲೆಯಾಗುತ್ತೆ ಅಂತ ನೆನಪು…)

ಗುಡ್ಡದ ಭೂತ (ಡೆನ್ನಾನ…ಡೆನ್ನಾನ…ಡೆನ…ಡೆನ…ಡೆನ್ನಾನ…. ಗುಡ್ದಾದ ಭೂತ ಉಂಡುಗೇ…)

ಕ್ಯಾಪ್ಟನ್ ಬಲರಾಮ್ ( ನವೀನ್ ವಿಚಿತ್ರವಾಗಿ ಡ್ಯಾನ್ಸ್ ಮಾಡ್ತಾ ಇದ್ದ ಟೈಟಲ್ ಸಾಂಗ್…)

ಅಜಿತನ ಸಾಹಸಗಳು( ಷೆರ್ಲಾಕ್ ಹೋಮ್ಸ್ ಕತೆಗಳ ಕನ್ನಡ ಅವತರಣಿಕೆ… ರಾಜಾರಾಂ ಅಜಿತ್ ಪಾತ್ರ ನೆನಪಲ್ಲಿ ಚಿರಸ್ಥಾಯಿ)

ತಿರುಗು ಬಾಣ…(ನಾಗಾಭರಣ ಅಭಿನಯ ನಿರ್ದೇಶನದ..ಸೂಪರ್ ಕುತೂಹಲ ಕಥೆ…ಕೊಲೆಯೊಂದು ಮಾಡಿ ಮುಚ್ಚಿಹಾಕುವ ಕಥೆ… ಬಾನಿನ ಸೂರಿನ ಕೆಳಗೆ… ಭೂಮಿಯ ಆಸರೆ ಒಳಗೆ… ಮನುಕುಲ ಮಮತೆಯ ಮರೆತಾಗ… ತಿರುಗುಬಾಣ …ತಿರುಗುಬಾಣ (ಸಾಹಿತ್ಯ ತಪ್ಪಿದೆಯೇನೋ ಗೊತ್ತಿಲ್ಲ)

ಆಫೀಸಾಯಣ….

ನಂಬರ್ ೬೭-ಹ್ಯಾರಿಸ್ ರಸ್ತೆ ( ಇದಂತೂ ಸಕ್ಕತ್ ಸಸ್ಪೆನ್ಸ್ ಆಗಿತ್ತು…)

ಕ್ರೇಜಿ ಕರ್ನಲ್ (ರಮೇಶ್ ಭಟ್ರ.. ಹೆಹೆ ಹಹಾ… ನೆನ್ಪಿದ್ಯಾ)

ಬಾಳು ಬೆಳಗಿತು- (ಜಗದಾ ನೋಟ ಸಹಿಸಿ… ಒಲವ ಹಣತೆ ಉರಿಸಿ, ಬಾಳು ಬೆಳಗಿತು… ನುಡಿ ಬಾಣವೆಲ್ಲ ಸಹಿಸಿ… ಮನವೀಗ ಬೆಂದಿತು.. ಕರ್ಪೂರದಂತೆ ಉರಿದ ಬದುಕೇ ಧನ್ಯವೂ…)

ವಿಜೇತಾ (ಅನುರಾಗ ರಾಗ..ಸ್ವರವಾಗಿ ಹಾಡಿ ವಿರಹ…ವಿಜೇ…ತಾ…ಅಂತೇನೋ ಶೀರ್ಷಿಕೆ ಗೀತೆ ಇತ್ತು)

ಸಾಧನೆ( ಮಂಜು ಹೆಗಡೆ… v4 ad ಏಜೆನ್ಸಿ… ಸುರೇಶ್ ನಿರ್ದೇಶನದ ಸೂಪರ್ ಧಾರಾವಾಹಿ) ಕಾಲ ಮುಂದೆ ನಾವು ಹಿಂದೆ ಜೂಟಾಟ ಜೂಟಾಟ… ಹುಟ್ಟು ಸಾವು ಎರಡರ ಮಧ್ಯೆ…. ಬಾಳೆಂಬ ಪರದಾಟ …

ಮಾಯಾಮೃಗ….. ಇದರ ಬಗ್ಗೆ ಹೇಳಲೇ ಬೇಕಾಗಿಲ್ಲ… ಆಲ್ವಾ? ಕನ್ನಡ ಕಿರುತೆರೆಯ ನಂಬರ್ 1 ಧಾರವಾಹಿ…

ಅರ್ಧ ಸತ್ಯ

ಚಂದ್ರ ಬಿಂಬ

ಡಿಡಿ ನ್ಯಾಷನಲ್ ನಲ್ಲಿ ಬರ್ತಾ ಇದ್ದ ಮುಂಗೇರಿಲಾಲ್ ಕೆ ಹಸೀನ್ ಸಪ್ನೆ…, ಹೋನಿ ಅನಹೊನಿ, ಅಲಿಫ್ ಲೈಲಾ, ತೆನಾಲಿ ರಾಮ, ಮಾಲ್ಗುಡಿ ಡೇಸ್, ಚಂದ್ರಕಾಂತ, ಉಡಾನ್, ಕೊನೆಗೆ ಶಕ್ತಿಮಾನ್…. 🙂
ಜಾನೆ ಕಹಾಂ ಗಯೇ ಓ ದಿನ್… 🙂 😦

ಈ ಬರಹ ಬರೆಯಲು ಪ್ರೇರಣೆ ಕೊಟ್ಟಿದ್ದು ಶ್ರೀನಿಧಿ ಡಿ.ಎಸ್ ಬ್ಲಾಗಿನ ಬರಹ

http://shree-lazyguy.blogspot.in/2008/11/blog-post_18.html

Advertisements

ಇದು ಮನಸಿನ ಮರ್ಮರದ ಇನ್ನೂರನೇ ಪೋಸ್ಟು….

ಓದಿ ಮೆಚ್ಚಿದ ಪ್ರತಿಕ್ರಿಯಿಸಿದ ಪ್ರೀತಿ ತೋರಿಸಿದ ಎಲ್ಲರಿಗೂ ಕೃತಜ್ಞತೆಗಳು….

ಈ ಐಪಿಎಲ್ ನಲ್ಲಿ ಇನ್ನೂರು ದಾಟುವ ಎಲ್ಲಾ ತಂಡಗಳಿಗೂ ಈ ಪೋಸ್ಟು ಅರ್ಪಣೆ… ಸಮರ್ಪಣೆ…

images (1)images26-sudeep-big-boss600

 

ಮಾಡಿದರು ಹಿಂದಿಯಲಿ ರಿಯಾಲಿಟಿ ಶೋಸು

ಬಾಚಿಕೊಂಡರು ಎರಡೂ ಕೈತುಂಬಾ ಕಾಸು

ಕನ್ನಡದವರೂ ತೊಟ್ಟು ಈಗ ಅದೇ ಶೂಸು

ಮಾಡ್ತಾ ಇದ್ದಾರಲ್ಲ ಕನ್ನಡದ ಬಿಗ್ ಬಾಸು

ನೋಡ್ತಾರಂತ ಏನು ಮಾಡಿದ್ರೂ ವೀವರ್ಸು

ಕಾಣ್ತಾನೆ ಇಲ್ಲ ಹೆಚ್ಚಿನವರಲ್ಲಿ ಮ್ಯಾನರ್ಸು

ಯಾವ್ ಸೀಮೆ ಸೆಲೆಬ್ರಿಟಿ ಜಯಲಕ್ಷ್ಮಿ ನರ್ಸು

ಕಾವಿ ಧರಿಸಿದ ಅಂಡೆ ಪಿರ್ಕಿಗಳೂ ಸ್ಟಾರ್ಸು

ಹೇಳೋಕೇನೋ ಈ ಶೋ… ರಿಯಾಲಿಟಿ

ಟಿ.ಆರ್.ಪಿ.ಯೇ ಇವರ … ಪ್ರಯಾರಿಟಿ

ಇದ್ದುದ್ರಲ್ಲಿ ಬೆಟರು ಸುದೀಪನ ವಾಯ್ಸು

ಮಿಕ್ಕಂತೆ ಅಲ್ಲಿ… ಬರಿ ಗಲಾಟೆ ನಾಯ್ಸು

ಈ ಟೀವಿ-ಗಿಂತ ಆ ಟಿವಿಯೇ ಲೇಸು…

ಜ್ಞಾನದ ಜೊತೆಗೆ ಸ್ವಲ್ಪ ಟೈಮ್-ಪಾಸು

ಸದ್ಯ ಈ ತಲೆನೋವಿಗೆ ಬೇಕಿಲ್ಲ ಪಿಲ್

ಸರ್ಯಾಗಿ ಎಂಟು ಗಂಟೆಗಿದೆ ಐಪಿಎಲ್… 🙂