Posts Tagged ‘ಅನುವಾದ’

ಅನುವಾದ-ಭಾವಾನುವಾದ ನನಗೆ ಬರುತ್ತೆ ಅನ್ನೋದು ಅನುಮಾನ..

ಆದ್ರೂ ಒಂದ್ ಕೈ ನೋಡೇ ಬಿಡೋಣ ಅಂತ ಶೋರ್ ಚಿತ್ರದ “ಇಕ್ ಪ್ಯಾರ್ ಕಾ ನಗ್ಮಾ ಹೈ” ಹಾಡಿಗೆ ಕೈ ಇಟ್ಟಿದ್ದೇನೆ.. ಪಾಪ ಇನ್ನು ಹಾಡಿನ ಗತಿ 🙂

ಒಂದು ಪ್ರೇಮ ಪಲ್ಲವಿಯ ಪಲುಕಿದು…ಭಾವ ಲಹರಿಯ ಝರಿಯಿದು…

ಬಾಳಿನರ್ಥ..ಬೇರೇನಲ್ಲ…ನನ್ನ ನಿನ್ನ ಕಥೆಯೇ ಎಲ್ಲಾ

ಒಂದು ಪ್ರೇಮ ಪಲ್ಲವಿಯ ಪಲುಕಿದು….||

ಏನೋ ಗಳಿಸಲೆಂದು ಕಳಕೊಂಡು…ಕಳೆದುಕೊಂಡು ಮತ್ತೆ ಗಳಿಸಲೆಂದು..

ಬಾಳಿನರ್ಥದ ಸಾರ…ಬಂದು ಹೋಗೋ ನಡುವೆ ವ್ಯಾಪಾರ…

ಎರಡು ಕ್ಷಣಗಳ ಬಾಳಿಂದ…ಕದ್ದು ಬಾಳಬೇಕಿದೆ ಖುಷಿಯಿಂದ..

ಬಾಳಿನರ್ಥ..ಬೇರೇನಲ್ಲ…ನನ್ನ ನಿನ್ನ ಕಥೆಯೇ ಎಲ್ಲಾ

ಒಂದು ಪ್ರೇಮ ಪಲ್ಲವಿಯ ಪಲುಕಿದು….||

ನೀ ನದಿಯ ಧಾರೆಯಾದರೆ….ದಂಡೆ ನಾ – ನಿನ್ನ ತಬ್ಬಿದಾ ಧರೆ,

ನೀಡು ನೀ ನನಗಾಸರೆ…ನಾನಿಹೆನಲ್ಲ ನಿನಗಾಸರೆ

ಕಣ್ಣ ನಡುವೆ ಒಂದು ಕಡಲು…ಬಯಕೆಯ ನೀರಿಂದ ತುಂಬಿದೆ ಒಡಲು

ಬಾಳಿನರ್ಥ..ಬೇರೇನಲ್ಲ,..ನನ್ನ ನಿನ್ನ ಕಥೆಯೇ ಎಲ್ಲಾ

ಒಂದು ಪ್ರೇಮ ಪಲ್ಲವಿಯ ಪಲುಕಿದು….||

ಬಿರುಗಾಳಿಯೇ ಬರಲಿ ಬಿಡು…ಬಂದು ಮರಳೋದು ಖಚಿತ ಬಿಡು

ಈ ಮೋಡಗಳ ಆಟ ಎಷ್ಟೊತ್ತು .. ದ್ರವಿಸಿ ಮಳೆಯಾಗಿ ಸುರಿಯೆ ಮುಗಿದೋಯ್ತು

ಬಾಳಿನರ್ಥ..ಬೇರೇನಲ್ಲ,..ನನ್ನ ನಿನ್ನ ಕಥೆಯೇ ಎಲ್ಲಾ

ಒಂದು ಪ್ರೇಮ ಪಲ್ಲವಿಯ ಪಲುಕಿದು….||

ಮೂಲ ಗೀತೆ ಇಲ್ಲಿದೆ…
ಇಕ್ ಪ್ಯಾರ್ ಕಾ ನಗಮಾ ಹೈ…ಮೌಜೋಂ ಕಿ ರವಾನಿ ಹೈ
ಜಿಂದಗೀ ಔರ್ ಕುಚ್ ಭೀ ನಹಿ…ತೇರಿ ಮೇರಿ ಕಹಾನಿ ಹೈ

ಇಕ್ ಪ್ಯಾರ್ ಕಾ ನಗಮಾ ಹೈ…||

ಕುಚ್ ಪಾಕರ್ ಖೋನಾ ಹೈ…ಕುಚ್ ಖೋಕರ್ ಪಾನಾ ಹೈ
ಜೀವನ್ ಕಾ ಮತಲಬ್ ತೊ…ಆನಾ ಔರ್ ಜಾನಾ ಹೈ
ದೋ ಪಲ್ ಕೆ ಜೀವನ್ ಸೆ…ಎಕ್ ಉಮ್ರ್ ಚುರಾನಿ ಹೈ
ಜಿಂದಗೀ ಔರ್ ಕುಚ್ ಭೀ ನಹಿ…ತೇರಿ ಮೇರಿ ಕಹಾನಿ ಹೈ

ಇಕ್ ಪ್ಯಾರ್ ಕಾ ನಗಮಾ ಹೈ…||

ತೂ ಧಾರ್ ಹೈ ನದಿಯಾ ಕಿ…ಮೈ ತೇರಾ ಕಿನಾರ ಹೂಂ
ತು ಮೇರಾ ಸಹಾರಾ ಹೈ… ಮೈ ತೇರಾ ಸಹಾರಾ ಹೂಂ
ಆಂಖೋಂ ಮೆ ಸಮಂದರ್ ಹೈ…ಆಶಾವೋಂ ಕಾ ಪಾನಿ ಹೈ
ಜಿಂದಗೀ ಔರ್ ಕುಚ್ ಭೀ ನಹಿ…ತೇರಿ ಮೇರಿ ಕಹಾನಿ ಹೈ

ಇಕ್ ಪ್ಯಾರ್ ಕಾ ನಗಮಾ ಹೈ…||

ತೂಫಾನ್ ತೊ ಆನಾ ಹೈ…ಆಕರ್ ಚಲೇ ಜಾನಾ ಹೈ
ಬಾದಲ್ ಹೈ ಯೆ ಕುಚ್ ಪಲ್ ಕಾ…ಚಾಕರ್ ಡಲ್ ಜಾನಾ ಹೈ
ಪರಚಾಯಿಯಾ ರೆಹ್ ಜಾತಿ…ರೆಹ್ ಜಾತಿ ನಿಶಾನಿ ಹೈ

ಜಿಂದಗೀ ಔರ್ ಕುಚ್ ಭೀ ನಹಿ…ತೇರಿ ಮೇರಿ ಕಹಾನಿ ಹೈ

ಇಕ್ ಪ್ಯಾರ್ ಕಾ ನಗಮಾ ಹೈ…||


			

ಇದೂ ಕೂಡಾ ಇನ್ನೊಂದು ಭಾವಾನುವಾದ. ಈ ಪದ್ಯ ಕೂಡಾ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದಾಗ ಓದಿದ್ದು. ಅಂತೆಯೇ ಅಚ್ಚುಮೆಚ್ಚಿನದ್ದು. ಇದು ಭಾವಾನುವಾದವೇ ಹೊರತು ಭಾಷಾನುವಾದವಲ್ಲ.

ಮೂಲ: ಸುಭದ್ರಾ ಕುಮಾರಿ ಚೌಹಾಣ್

ಕವಿತೆ : ಮೇರಾ ನಯಾ ಬಚ್‌ಪನ್

 

ಮತ್ತೆ ಮತ್ತೆ ನೆನಪಾಗುತಿದೆ ಆ ಬಾಲ್ಯಕಾಲ,

ಮತ್ತೆಂದಾದರೂ ಬಂದೀತೆ ಆ ರಮ್ಯ ಚೈತ್ರಕಾಲ?

 

ಬಡವ ಬಲ್ಲಿದ ಎಂಬ ಭೇದ ಗೊತ್ತಿರದ,

ಜಾತಿ-ಧರ್ಮಗಳ ಸೋಂಕೇ ಇರದ

 

ನನ್ನ ಪುಟ್ಟ ಗುಡಿಸಲಿಗೆ ನಾನೇ ರಾಣಿ,

ಹಂಸತೂಲಿಕಾ ಕಲ್ಪವಾಗಿ ಹರಕು ಗೋಣಿ

 

ಚಂದಮಾಮನ ನೋಡುತಾ ಬೆಳದಿಂಗಳ ಕೈತುತ್ತು,

ಅತ್ತು ಕರೆದಾಗಲೆಲ್ಲ ರಮಿಸಿ ಅಮ್ಮನ ಸಿಹಿಮುತ್ತು

 

ಅಜ್ಜಿಯ ಮಡಿಲಲಿ ಕುಳಿತು ಕೇಳಿದ ಕತೆ,

ತಟ್ಟುತಿರಲಿಲ್ಲ ಯಾವ ದುಃಖ, ಕಷ್ಟ, ವ್ಯಥೆ

 

ಬರಲಾರೆಯಾ ಮತ್ತೊಮ್ಮೆ ಮರಳಿ ಓ ಬಾಲ್ಯಕಾಲ,

ಬೀಸಲೋಸುಗ ಇನ್ನೊಮ್ಮೆ ನಿನ್ನ ದಿವ್ಯ ಮೋಹಜಾಲ

 

ಹೀಗೆ ಬಾಲ್ಯವ ಮರಳಿ ಕರೆವ ಹೊತ್ತಿನಲಿ,

ಒಳ ಬಂದಳು ನನ್ನ ಮುದ್ದು ಮಗಳು ಗತ್ತಿನಲಿ

 

ತಪ್ಪು ಹೆಜ್ಜೆಯ ಮೇಲೆ ಹೆಜ್ಜೆ ಹಾಕುತಾ,

ತೊದಲ್ನುಡಿಯಿಂದಲೆ ನನ್ನ ಕೂಗಿ ಕರೆಯುತಾ

 

ಅವಳಂತೆಯೇ ನಾನು ತೊದಲ್ನುಡಿಯುತ್ತಾ,

ಬಿಗಿದಪ್ಪಿದೆ ಕೈ ಹಾಕಿ ಕೊರಳ ಸುತ್ತಾ

 

ವರ್ಷಗಳ ಹುಡುಕಾಟಕೆ ಕೊನೆಗೂ ತೆರೆ ಬಿತ್ತು

ಕಳೆದ ಬಾಲ್ಯವು ಮತ್ತೆ ಮರುಕಳಿಸಿತ್ತು

ಇದು ಲಾರ್ಡ್ ಟೆನಿಸನ್‌ನ ಹೋಮ್ ದೆ ಬ್ರಾಟ್ ಹರ್ ವಾರಿಯರ್ ಡೆಡ್‌ನ ಭಾವಾನುವಾದ. ಈ ಪದ್ಯ ನಮಗೆ 10ನೇ ಕ್ಲಾಸಿನ ಇಂಗ್ಲೀಷ್ ಪಠ್ಯದ ಭಾಗವಾಗಿತ್ತು. ಈ ಪದ್ಯ ಅದರ ಭಾವ ತೀವ್ರತೆಯಿಂದಾಗಿ ನನ್ನನ್ನು ಗಾಢವಾಗಿ ತಟ್ಟಿತ್ತು. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ನನ್ನದು. ಅದರ ಮೂಲದ ತೀವ್ರತೆಯ ನೂರರಲ್ಲೊಂದು ಭಾಗ ಇಲ್ಲಿ ಬಂದಿದ್ದರೂ ನನ್ನ ಪ್ರಯತ್ನ ಸಾರ್ಥಕ

 

ಹೆಮ್ಮೆಯ ವೀರಯೋಧ ಆಕೆಯ ಪತಿ,

ಯುದ್ಧದಲಿ ಮಡಿದ ಅವನೀಗ ಬರೀ ಸ್ಮೃತಿ,

ಯೋಧನ ಶವವೀಗ ಮನೆಯ ಮುಂದಿದೆ,

ಅವಳ ಬಾಳ ಜ್ಯೋತಿಯೀಗ ನಂದಿದೆ.

 

ಅಳುವುದನೂ ಮರೆತಂತೆ ಕುಸಿದು ಕುಳಿತಿಹಳು,

ನಿರ್ಜೀವ ಭಾವ ಹೊರಸೂಸುವ ಕಂಗಳು,

ಶೋಕಭಾರಕೆ ಮೂಕಳಾಗಿಹ ಇವಳು,

ಅಳದಿದ್ದರೆ ಖಂಡಿತ ಬದುಕಿ ಉಳಿಯಳು.

 

ಣ್ಣೀರ ಬರಿಸಲೆಂದೇ ಅವನ ಹಾಡಿ ಹೊಗಳಿದರು,

ಬಣ್ನಿಸುತಾ ಅವನ ಶೌರ್ಯ ಸಾಹಸದ ಕತೆಗಳು,

ಕೇಳುತಾ ಕುಳಿತಳು ಅವಳು ಶಿಲೆಯಂತೆ,

ಈ ಲೋಕದಾ ಪರಿವೆಯೇ ಇಲ್ಲದವಳಂತೆ.

 

ಸ್ನೇಹಿತೆಯೊಬ್ಬಳು ಅವಳ ಕೈಹಿಡಿದು ಕರೆತಂದು,

ಯೋಧನ ಶವದ ಬಳಿಸಾರಿ ನಿಂದು,

ಮುಖವ ತೋರಿಸಿದಳು ಸರಿಸಿ ಬಿಳಿಬಟ್ಟೆ,

ಆದರೂ ಒಡೆಯಲಿಲ್ಲ ಅವಳ ದುಃಖದ ಕಟ್ಟೆ.

 

ಅಷ್ಟರಲಿ ಅಲ್ಲಿದ್ದ ವೃದ್ಧೆಯೊಬ್ಬಳು,

ಅಳುವ ಮಗುವ ತಂದು ಮಡಿಲಲಿಟ್ಟಳು,

ಉಕ್ಕಿ ಹರಿಯಿತು ಕಣ್ಣೀರು ಜಲಪಾತವಾಗಿ,

ಮುದ್ದು ಕಂದಾ ನಾ ಬದುಕಬೇಕು ಖಂಡಿತಾ ನಿನಗಾಗಿ