IPL ನಲ್ಲಿ ಸೋತು ಸುಣ್ಣವಾದ ಪುಣೆ ವಾರಿಯರ್ಸ್ ಪು(ಹಣೆ)ಬರಹ 🙂 ‘ಬಂಧನ’ ಚಿತ್ರದ ‘ಪ್ರೇಮದಾ ಕಾದಂಬರಿ’ ಧಾಟಿಯಲ್ಲಿ ‘ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ’ 🙂
ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ
ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ
ಮೊದಲ ಪ್ಲೇಸಿಗೂ… ಕೊನೆಯ ಪ್ಲೇಸಿಗೂ
ನಡುವೆ ಏಳೈತೆ ಅಂತರ
ಮೊದಲ ಪ್ಲೇಸಿಗೂ… ಕೊನೆಯ ಪ್ಲೇಸಿಗೂ
ನಡುವೆ ಏಳೈತೆ ಅಂತರ
ನೊಂದು ಹೋಗಿದೆ ಸೋತು ಸಾಲಲಿ
ನಮ್ಮ ತಂಡ ನಿರಂತರ
ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ
ನಮ್ಮ ಸೋಲಿಗೆ ಅಂತ್ಯ ದೊರೆತು
ಯುವಿಯು ಗೆಲ್ಲಿಸಲಿ ನಮ್ಮನು
ನಮ್ಮ ಸೋಲಿಗೆ ಅಂತ್ಯ ದೊರೆತು
ಯುವಿಯು ಗೆಲ್ಲಿಸಲಿ ನಮ್ಮನು
ಕೊನೆಯ ಮ್ಯಾಚುಗಳ… ಗೆಲ್ಲೋ ಆಸೆ
ದಿಂಡಾ ಗೆಲ್ಲಿಸಲಿ ನಮ್ಮನು 🙂
ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ
ವಿಜಯಸಿಗಲಿ ಹಂಬಲ
ವಿಜಯಸಿಗಲಿ ಉಹ್ಮ್… ಉಹ್ಮ್… ಹಂಬಲ
ಮೂಲ ಹಾಡು ‘ಬಂಧನ ’ ಚಿತ್ರದ ‘ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ…’
ಕೃಪೆ: kannadalyrics.com
ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ…ಮುಗಿಯದಿರಲೀ ಬಂಧನ
ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ… ಮುಗಿಯದಿರಲೀ ಬಂಧನ
ಮೊದಲ ಪುಟಕೂ… ಕೊನೆಯ ಪುಟಕೂ
ನಡುವೆ ಏನಿತು ಅಂತರ
ಮೊದಲ ಪುಟಕೂ… ಕೊನೆಯ ಪುಟಕೂ
ನಡುವೆ ಏನಿತು ಅಂತರ
ಬಂದು ಹೋಗುವ ಸ್ನೇಹ ಸಾವಿರ
ನಿಮ್ಮ ಬಂಧ ನಿರಂತರ
ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ… ಮುಗಿಯದಿರಲೀ ಬಂಧನ
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು
ಕೊನೆಯ ಉಸಿರಲಿ… ಒಂದೇ ಆಸೆ
ದೈವ ಹರಸಲಿ ನಿಮ್ಮನು
ಪ್ರೇಮದಾ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ
ಮುಗಿಯದಿರಲೀ ಬಂಧನ
ಮುಗಿಯದಿರಲೀ ಉಹ್ಮ್… ಉಹ್ಮ್… ಬಂಧನ