Posts Tagged ‘ಒಗಟು’

ಒಂದು ಸಂತೋಷದ ಸಂಗತಿ ಅಂದ್ರೆ ಚಂದನ ವಾಹಿನಿಯ ಬಹು ಜನಪ್ರಿಯ ಹಾಗು ವಿಶಿಷ್ಟ ಕಾರ್ಯಕ್ರಮ ಥಟ್ ಅಂತ ಹೇಳಿಯ ಕ್ವಿಜ್ ಮಾಸ್ಟರ್ ನಾ.ಸೋಮೇಶ್ವರ ಅವರು ಈ ಎಲ್ಲಾ ಒಗಟುಗಳಿಗೂ ಸರಿಯುತ್ತರ ನೀಡಿದ್ದಾರೆ. ಅವರು ನನ್ನ ಬ್ಲಾಗಿಗೆ ಬಂದಿದ್ದು, ಇಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿದ್ದು ನನಗಂತೂ ಹಿಡಿಸಲಾಗದಷ್ಟು ಖುಶಿಯಾಗಿದೆ.  ಅವರಿಗೆ ಅಭಿನಂದನೆ ಹೇಳುತ್ತ ಉತ್ತರಗಳನ್ನು ನೋಡೋಣವೇ?

 

( ಈ ಖುಶಿಯ ನಡುವೆಯೂ…ಈ ಒಗಟನ್ನು ಐವತ್ತಕ್ಕೂ ಮಿಕ್ಕಿ ಮಂದಿ ನೋಡಿದ್ದರೂ, ಉತ್ತರಿಸಲು ಯತ್ನಿಸಿದ್ದು ಕೆಲವೇ ಕೆಲವರು ಅನ್ನೋ ಬೇಜಾರೂ ಇದೆ)

 

1.          ದೇವರಿಲ್ಲದ ಗುಡಿಗೆ ಬಗ್ಗಿ ಬಗ್ಗಿ ಸಲಾಮು                             – ಸೌದೆ ಒಲೆ

2.          ಕಪ್ಪೆ ಮುಟ್ಟದ ಕೈಲಾಸದ ನೀರು                                     – ಎಳನೀರು ( ನಮ್ಮೂರಿನ ಬೊಂಡ)

3.          ಅಜ್ಜನ ಹೊಟ್ಟೆ ಹಿಡ್ಕೊಂಡು ಮೊಮ್ಮಗ ನೇತಾಡ್ತಾನೆ                – ಗೇರುಹಣ್ಣು ಮತ್ತು ಗೇರುಬೀಜ

4.         ಕಾಸಿನ ಕುದುರೆಗೆ ಮಾರುದ್ದ ಲಗಾಮು                               – ಸೂಜಿ ದಾರ

5.          ಕೈ ಹಿಡಿತಾನೆ ಗಂಡನಲ್ಲ. ಬಟ್ಟೆ ಹರಿಯುತ್ತಾನೆ ಹುಚ್ಚನಲ್ಲ           – ಬಳೆಗಾರ ಮತ್ತು ದರ್ಜಿ

ಈ ಸಲ ಸ್ವಲ್ಪ ಸುಲಭವಾಗಿರುವ ಒಂದಿಷ್ಟು ಒಗಟು ಕೇಳ್ತಾ ಇದ್ದೇನೆ. ಉತ್ತರ ನಿಮಗೆ ಖಂಡಿತವಾಗಿಯೂ ಗೊತ್ತಿರುತ್ತೆ ಬಿಡಿ. ಹಾಗಾಗಿ ಒಗಟು ನೋಡಿದ ತಕ್ಷಣ ಉತ್ತರ ಕೊಟ್ಟು ಬಿಡಿ

 

೧.         ದೇವರಿಲ್ಲದ ಗುಡಿಗೆ ಬಗ್ಗಿ ಬಗ್ಗಿ ಸಲಾಮು

೨.         ಕಪ್ಪೆ ಮುಟ್ಟದ ಕೈಲಾಸದ ನೀರು

೩.         ಅಜ್ಜನ ಹೊಟ್ಟೆ ಹಿಡ್ಕೊಂಡು ಮೊಮ್ಮಗ ನೇತಾಡ್ತಾನೆ

೪.         ಕಾಸಿನ ಕುದುರೆಗೆ ಮಾರುದ್ದ ಲಗಾಮು

೫.         ಕೈ ಹಿಡಿತಾನೆ ಗಂಡನಲ್ಲ. ಬಟ್ಟೆ ಹರಿಯುತ್ತಾನೆ ಹುಚ್ಚನಲ್ಲ

 

ಉತ್ರ ಗೊತ್ತಾಯ್ತಲ್ವಾ? ಬೇಗ ಬೇಗ ಹೇಳಿ….

ನನ್ನ ಒಗಟಿಗೆ ಉತ್ತರ…

Posted: ಸೆಪ್ಟೆಂಬರ್ 26, 2008 in ಹಾಗೆ ಸುಮ್ಮನೆ
ಟ್ಯಾಗ್ ಗಳು:, ,

ಈ ವಾರದ ಶುರುವಿನಲ್ಲಿ ಒಂದು ಒಗಟು ಪೋಸ್ಟ್ ಮಾಡಿದ್ದೆ. ನಿಮ್ಮಲ್ಲಿ ಕೆಲವರು ಉತ್ತರ ನೀಡಲು ಪ್ರಯತ್ನ ಪಟ್ಟರೂ ಸರಿ ಉತ್ತರ ಹೇಳಿದ್ದು ಇಬ್ಬರು. ಅವರಲ್ಲಿ ಪವನ್ ಮಾತ್ರ ಸಮರ್ಪಕ ವಿವರಣೆಯೊಂದಿಗೆ ಸರಿ ಉತ್ತರ ನೀಡಿದ್ದಾರೆ. ನೀಲಗಿರಿ ಅವರು ಉತ್ತರ ಕೊಟ್ಟಿದ್ದರೂ ಅನುಮಾನದಲ್ಲಿ ಹೇಳಿದ್ದಾರೆ.

 

ನಿಮ್ಮ ಉತ್ತರಗಳು ಹಾಗೂ ಸರಿಯುತ್ತರ ಕೆಳಗಿದೆ ನೋಡಿ…

 

 ಕತ್ತಲೆ ಮನೆಯೊಳಗಿದ್ದಾತನ ಕೊಂದಾತನ ಅಗ್ರಜನ ಪಿತನ ವಾಹನದಂತೆ ಇದ್ದೀಯಲ್ಲೋ..

ಸರಿಯುತ್ತರ ಕೋಣ

ಹೇಗೆ ಅಂತ ಕೇಳ್ತೀರಾ?

 

ಕತ್ತಲೆ ಮನೆಯೊಳಗಿದ್ದಾತಕೀಚಕ

ಕೀಚಕನ ಕೊಂದಾತ – ಭೀಮ

ಭೀಮನ ಅಗ್ರಜ ಧರ್ಮರಾಯ

ಅವನ ಪಿತ ಯಮ

ಯಮನ ವಾಹನ ಕೋಣ

 

ರಂಜಿತ್

ಹೊಳೆಯುತಿಲ್ಲ.. L ಆದರೆ ಕ್ಲೂ ಕೊಡದೇ ಹೋದರೆ ಹೇಗೆ?

 

ಸುಶ್ರುತ ದೊಡ್ಡೇರಿ

ನಂಗೊತ್ತು ಆದ್ರೆ ಹೇಳೊಲ್ಲ J

 

ನೀಲಗಿರಿ

ಎಮ್ಮೆ ಅಥವಾ ಕೋಣ ಇರಬಹುದಾ??!!

 

ಪವನ್

ಕತ್ತಲೆ ಕೋಣೆಯಲ್ಲಿದ್ದವನು ಕೀಚಕ. ಅವನನ್ನು ಕೊಂದವನು ಭೀಮ. ಅವನ ಅಗ್ರಜ ಧರ್ಮರಾಯ. ಅವನ ಪಿತ ಯಮ. ಯಮನ ವಾಹನ ಕೋಣ. ಸರೀನಾ?

 

ಅನುಪಮ

 ಗರುಡ ಇರಬಹುದೇ?

 

ಶಿಶಿರ ಕನ್ನಂತ

ಗೂಬೆಇರಬಹುದೇ?

 

ನವಿಲುಗರಿ ಸೋಮು

ಹಂದೀನಾ ಗುರುಗಳೇ?

 

ವಿಕಾಸ್

ಕತ್ತಲೆ ಮನೆಯಾವುದು ಅಂತ ಗೊತ್ತಾಗ್ತಿಲ್ಲ!

ಅದು ಗೊತ್ತಾದ್ರೆ ಉತ್ರ ಗೊತ್ತಾದಂಗೆ.

 

ಉತ್ತರಿಸಲು ಯತ್ನಿಸಿದ ಎಲ್ಲರಿಗೂ ಧನ್ಯವಾದ. ಸರಿ ಉತ್ತರ ನೀಡಿದ ಪವನ್ ಮತ್ತು ನೀಲಗಿರಿಯವರಿಗೆ ಅಭಿನಂದನೆಗಳು

ನಿಮ್ಮಲ್ಲೂ ಈ ತರಹದ ಒಗಟು ಇದ್ದರೆ ಹಂಚಿಕೊಳ್ಳಿ. ಎಲ್ಲ ಸೇರಿ ಬಿಡಿಸೋಣ.

ಒಬ್ಬರು ಅಧ್ಯಾಪಕರು ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಆಗ ಗುಂಡ ಎಂದಿನಂತೆ ತರಲೆ ಮಾಡಲು ಶುರುಮಾಡಿದ. ಅಧ್ಯಾಪಕರಿಗೆ ತುಂಬಾ ಸಿಟ್ಟು ಬಂತು. ಅವನನ್ನು ಬಯ್ಯಲು ಹೊರಟರು. ಆದರೆ ಅವರಿಗೊಂದು ವಿಲಕ್ಷಣ ಅಭ್ಯಾಸವಿತ್ತು. ಯಾರನ್ನು ಬಯ್ಯುವುದಾದರೂ ಕೆಟ್ಟ ಶಬ್ದಗಳನ್ನು ಬಳಸದೆ, ಬಯ್ಗುಳವನ್ನು ಒಗಟಿನ ರೂಪದಲ್ಲಿ ಹೇಳುತ್ತಿದ್ದರು. ಹಾಗಾಗಿ ಗುಂಡನನ್ನು ಬಯ್ಯಲು ಕೂಡ ಒಂದು ಒಗಟನ್ನು ಹೇಳಿದರು. ಗುಂಡನಿಗೆ ಏನೂ ಅರ್ಥವಾಗದೆ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ನಿಂತ. ನಿಮಗೆ ಏನಾದರು ಅರ್ಥವಾಗುತ್ತದೆಯೆ ನೋಡಿ…ಗೊತ್ತಾದರೆ ಗುಂಡನಿಗೂ ಹೇಳಿ.. J

 

ಕತ್ತಲೆ ಮನೆಯೊಳಗಿದ್ದಾತನ ಕೊಂದಾತನ ಅಗ್ರಜನ ಪಿತನ ವಾಹನದಂತೆ ಇದ್ದೀಯಲ್ಲೋ..