Posts Tagged ‘ಗುಲಾಬಿ ಟಾಕೀಸು’

ಗಿರೀಶ್ ಕಾಸರವಳ್ಳಿಯವರ ಗುಲಾಬಿ ಟಾಕೀಸು ಬಿಡುಗಡೆಯಾಗಿದೆ. ಈ ಚಿತ್ರ ಅನೇಕ ಕಾರಣಗಳಿಂದ ಆಸಕ್ತಿ ಕೆರಳಿಸುತ್ತಿದ್ದು ಅದರಲ್ಲಿ ಮುಖ್ಯವಾದುವೆಂದರೆ ಕಾಸರವಳ್ಳಿ ನಿರ್ದೇಶನ, ಉಮಾಶ್ರೀ ಅಭಿನಯ ಹಾಗೂ ನನ ಅಚ್ಚುಮೆಚ್ಚಿನ ಲೇಖಕಿ ವೈದೇಹಿ ಯಾನೆ ಜಾನಕಿ(ವೈದೇಹಿಯವರ ಒರಿಜಿನಲ್ ನಾಮಧೇಯ) ಯವರ ಕಥೆ ಇರೋದು.

 

ಆದರೆ ಬೇಸರದ ಸಂಗತಿಯೆಂದರೆ, ಬೆಂಗಳೂರಿನಲ್ಲಿ ಬರೀ ಪಿ.ವಿ.ಆರ್.ನಲ್ಲಿ ಮಾತ್ರ ಈ ಚಿತ್ರ ತೆರೆ ಕಂಡಿದ್ದು, ದಿನಕ್ಕೆ ಬರೀ ಒಂದು ಶೋ ಮಾತ್ರ ಇದೆ. ಈ ಬೇಸರದ ನಡುವೆಯೂ ಒಂದು ಸಂತೋಷ ಅಂದ್ರೆ ರೆಡಿಫ್ ಚಿತ್ರ ವಿಮರ್ಶೆಯಲ್ಲಿ ಈ ಚಿತ್ರಕ್ಕೆ ಲಭ್ಯವಿರುವ ಗರಿಷ್ಠ *****(5 Star) ಆತಿಥ್ಯ ಸಿಕ್ಕಿದೆ.

http://www.rediff.com/movies/2008/sep/08ssg.htm

 

ಏನ್ ಸಿಕ್ಕಿದ್ರೆ ಏನ್ ಬಂತು, ಜನ ನೋಡದಿದ್ದ ಮೇಲೆ ಅಂತೀರಾ? ಹಂಗಿದ್ರೆ ಈ ವೀಕೆಂಡ್ ಆದ್ರೂ ಈ ಚಿತ್ರ ನೋಡೋಕೆ ಹೋಗಿ ಬನ್ನಿ. ನಾನಂತೂ ಹೋಗ್ತೀನಪ್ಪ.