Posts Tagged ‘ಡ್ರಾಮಾ’

ಸ್ಕ್ಯಾಮುಗಳ ‘ಡ್ರಾಮಾ’ ಮಾಡ್ತಾ ಇರೋ ಕೇಂದ್ರದ ಸರ್ಕಾರಕ್ಕೆ ‘ಡ್ರಾಮಾ’ ಚಿತ್ರದ ‘ತುಂಡ್ ಹೈಕ್ಳ ಸಾವಾಸಾ…ಹಾಡು ’ ಭಂಡ ಈ-ಕಳ್ಳ್ ಸರ್ಕಾರಾ’ ಅನ್ನೋ ಅಣಕವಾಗಿದೆ 🙂

 

ಭಂಡ್ ಈ-ಕಳ್ಳ್ ಸರ್ಕಾರಾ… ಸ್ಕ್ಯಾಮ್ ಹೊತ್ತ ಸರ್ದಾರಾ
ಒಬ್ಬ ಪಿಎಂ ಮೌನೇಶಾ… ಸೋನ್ಯಾ ಕೈಲೇ ಆದೇಸಾ

ಹೆಂಗೋ ತಳ್ಳುತಾನೇ… ನಾ…ಕ್ವರ್ಸ ಮುಗ್ಸ್-ತವ್ರೆ
ಸ್ಕ್ಯಾಮ್-ಗೋಳ ಮಾಡೋದಕ್ಕೆ… ಬೋ-ಸಂಚು ಮಾಡ್ತಾವ್ರೆ

ಹಿಂಗೇ ಮಾಡಿದರೆ… ಕೈ ಸೋಲ್ತದೆ
ಇನ್ನೂ ಸಹ್ಸಿಕೊಂಡ್ರೆ… ದೇಶಾ ಕೆಡ್ತದೆ
ಹಿಂಗೇ ಮಾಡಿದರೆ… ಕೈ ಸೋಲ್ತದೆ
ಇನ್ನೂ ಸಹ್ಸಿಕೊಂಡ್ರೆ… ದೇಶಾ ಕೆಡ್ತದೆ

ಭಂಡ್ ಈ-ಕಳ್ಳ್ ಸರ್ಕಾರಾ… ಸ್ಕ್ಯಾಮ್ ಹೊತ್ತ ಸರ್ದಾರಾ
ಒಬ್ಬ ಪಿಎಂ ಮೌನೇಶಾ… ಸೋನ್ಯಾ ಕೈಲೇ ಆದೇಸಾ

ಇವ್ರು ಬಾಯಿ ಬಿಟ್ರು ಅಂದ್ರೆ… ಬಣ್ಣಗೇಡು
ಈ ನಮ್ ಲೀಡರ್ಸ್-ಗೆ… ಸೆಕ್ಯುರಿಟಿ ಬೇರೆ ಕೇಡು
ಕೇ…ಡು…

ಒಂದು ವರ್ಷ ಕಳೆಯಲಿ… ಮತ್ತೆ ವೋಟು
ವೋ…ಟಲ್ಲಿ ಇಡುಗಂಟು… ಕಳೆ-ದೀತು

ಸರಿಯಾಗ್ ಒದ್ದು ಅಟ್ಟೋಕೆ… ಜನ ತೊಡೆ ತಟ್ಟಿ ಕಾಯ್ತಾವ್ರೆ
ದುಡ್ಡು ತಿಂದ ಮೋಸಕ್ಕೆ… ಸೋಲು ಕಟ್ಟಿ ಇಟ್ಟವ್ರೇ

ಅನ್ನಾ ತಿನ್ವಾ ಅಂದ್ರೆ… ಬೆಲೆ ಏರೈತೆ
ಮುಂದೇನೂ ನೀವು ಬಂದ್ರೆ… ತ್ರಾಸು ಆಯ್ತದೆ
ಅನ್ನಾ ತಿನ್ವಾ ಅಂದ್ರೆ… ಬೆಲೆ ಏರೈತೆ
ಮುಂದೇನೂ ನೀವು ಬಂದ್ರೆ… ತ್ರಾಸು ಆಯ್ತದೆ

ಭಂಡ್ ಈ-ಕಳ್ಳ್ ಸರ್ಕಾರಾ… ಸ್ಕ್ಯಾಮ್ ಹೊತ್ತ ಸರ್ದಾರಾ
ಒಬ್ಬ ಪಿಎಂ ಮೌನೇಶಾ… ಸೋನ್ಯಾ ಕೈಲೇ ಆದೇಸಾ

ಮೌನೇ……ಸಾಆಆಅ…… ಆದೇಸಾ ಆಅಆ
ಮೌನೇಸ… ಆದೇಸಾಆಅಆ
ಮೌನೇ……ಸಾಆಆಅ… ಆದೇಸಾ

ದುಡ್ಡಿಗೆ ಮಾರುತಾರೆ… ದೇಶವನ್ನು
ಹುರ್ಕ್ಕೊಂಡು ಮುಕ್ಕುತಾವ್ರೆ… ಜನ್ಗೋಳನ್ನು
ಜನಗೋ…ಳನ್ನು…ಉಉಉ…

ಬೇಕಿಲ್ಲಾ… ದಬ್ಬಾಳಿಕೆ ನಮಗಿನ್ನು
ಬಡ್ಡೀ ಮಕ್ಳು… ಕಬಳಿಸ್ತಾವ್ರೆ ನಾಡನ್ನು

ಟೂಜಿ-ತ್ರೀಜಿ ತರಂಗ… ಬಯಲು-ಆಯ್ತ್ರಿ ವೃತ್ತಾಂತ
ಕೋಲು ಡೀಲು ಆದಾಗ… ಕಂಡಿದ್ವಲ್ಲಾ ಏನಂತ

ಪ್ರತೀ ಸ್ಕೀಮಿನಲ್ಲೂ… ಸ್ಕ್ಯಾಮು ಇರ್ತಾವೇ
ದುರಾತ್ಮರು ಮಾಡೋ ಹಲ್ಕಾ… ಎಲ್ಲಾ…ದಿಂಥಾವೇ
ಪ್ರತೀ ಸ್ಕೀಮಿನಲ್ಲೂ… ಸ್ಕ್ಯಾಮು ಇರ್ತಾವೇ
ದುರಾತ್ಮರು ಮಾಡೋ ಹಲ್ಕಾ… ಎಲ್ಲಾ…ದಿಂಥಾವೇ

ಭಂಡ್ ಈ-ಕಳ್ಳ್ ಸರ್ಕಾರಾ… ಸ್ಕ್ಯಾಮ್ ಹೊತ್ತ ಸರ್ದಾರಾ ಸಾ… ಸಾ… ಸಾ…
ಒಬ್ಬ ಪಿಎಂ ಮೌನೇಶಾ… ಸೋನ್ಯಾ ಕೈಲೇ ಆದೇಸಾ ಸಾ… ಸಾ… ಸಾ…
ಕುಂಞ್…

ಮೂಲ ಹಾಡು: ‘ಡ್ರಾಮಾ’ ಚಿತ್ರದ ‘ತುಂಡ್ ಹೈಕ್ಳ ಸಾವಾಸ…ಮೂರ್ ಹೊತ್ತೂ ಉಪ್ವಾಸಾ’

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ಎಂಗೋ… ಮೊನ್ನೆ ತಾನೇ,,, ಪೀಯೂ…ಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ… ರೀ…ಸರ್ಚು ನಡ್ಸವ್ರೆ

ಹೆಂಗೇ ಹಾಡಿದರೂ… ಬಾಯ್ ನೋಯ್ತವೆ
ಇನ್ನೂ ಕೇಳಿದರೆ… ಕಿವಿ ಹೋಯ್ತವೆ
ಹೆಂಗೇ ಹಾಡಿದರೂ… ಬಾಯ್ ನೋಯ್ತವೆ
ಇನ್ನೂ ಕೇಳಿದರೆ… ಕಿವಿ ಹೋಯ್ತವೆ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ಇವ್ರು ಕಾಲು ಇಟ್ರು ಅಂದ್ರೆ… ಅದೇ ರೋಡು
ಈ ನನ್ ಮಕ್ಳಿಗೆ… ಬಯೋಡಾಟಾ ಬ್ಯಾರೆ ಕೇಡು
ಕೇ…ಡು…

ಯವ್ವನದ ಹೊಳೆಯಲ್ಲಿ… ಹಳೇ ಬೋಟು
ಬೋಟ…ಲ್ಲಿ ನೂರಾ ಎಂಟು… ಹಳೇ ತೂತು

ಬೆಳಗಾಗ್ ಎದ್ದು ಬೆಟ್ಟಕ್ಕೇ… ಅರೆ ದಾರಾ ಕಟ್ಟಿ ಎಳ್ದವ್ರೇ
ಓಡುತ್ತಿದ್ದ ಕಾಲಕ್ಕೆ… ಕಾಲು ಅಡ್ಡ ಇಟ್ಟವ್ರೇ

ಅನಾಸಿನ್ನು ತಿಂದ್ರೂ… ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ… ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ… ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ… ಗ್ಯಾಸು ಆಯ್ತದೆ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ವೆಂಕ್ಟೇ……ಸಾಆಆಅ…… ಸತೀಸಾಆಅಆ
ವೆಂಕ್ಟೇಆಆಅ… ಸತೀಸಾಆಅಆ
ವೆಂಕ್ಟೇ……ಸಾಆಆಅ… ಸತೀಸಾ

ದೊಡ್ಡೋರು ಕೊಡೋದಿಲ್ಲಾ… ಪರ್ಮಿಸನ್ನು
ಕಾಂಪೌಂಡು ಹಾರುತಿದೆ… ಜನ್ರೇಸನ್ನು
ಜನರೇ…ಶನ್ನು…ಉಉಉ…

ಬೇಕಿಲ್ಲಾ… ಪ್ರಳಯಕೆ ಕಾಯೋದಿನ್ನು
ತುಂಡ್ ಹೈಕ್ಳು… ಮುಳುಗಿಸ್ತಾರೆ ಊರನ್ನು

ಮೀಸೆ-ಗೀಸೆ ಬಂದಾಗ… ಹಗಲು-ರಾತ್ರಿ ರಾದ್ಧಾಂತ
ಬಿಳೀ ಗಡ್ದ ಬಂದಾಗ… ಹೇಳಿದ್ದೆಲ್ಲಾ ವೇದಾಂತ

ಪ್ರತೀ ಎಂಡಿನಲ್ಲೂ… ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ
ಪ್ರತೀ ಎಂಡಿನಲ್ಲೂ… ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ ಸಾ… ಸಾ… ಸಾ…
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ ಸಾ… ಸಾ… ಸಾ…
ಆಞ್…