Posts Tagged ‘ಪತ್ರ ಬರೆಯಲಾ’

ಎಕ್ಸಾಮ್ ಹಾಲಲ್ಲಿ ಉತ್ರ ಬರೆಯೋಕೆ ಗೊತ್ತಿಲ್ದೆ ಹಾಲೇ ‘ಸೆರೆಮನೆ’ಯಾದಾಗ ‘ಅರಮನೆ’ ಚಿತ್ರದ ‘ಪತ್ರ ಬರಯಲಾ… ಇಲ್ಲಾ ಚಿತ್ರ ಬಿಡಿಸಲಾ…’ ಹಾಡು ‘ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ’ ಎಂಬ ಸಂದಿಗ್ಧದ ಪಾಡಾಗಿದೆ 🙂

 

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬಲಿ ನಾನು… ಖಾಲಿ ಪುಟಗಳ

ಕಾಪಿ-ಮಾಡಲಾ… ಇಲ್ಲಾ ನೀಕಿ ನೋಡಲಾ
ಹೇಗೆ ಕಳೆಯಲಿ ನಾನು… ಎರಡು ಗಂಟೆಗಳ
ಉತ್ರ ಬರೆಯಲಾ…

ಮುಷ್ಟೀಲಿ ಹಿಡಿದು ನನ್ನ…ಟಫ್ಫಾದ ಈ ಪೇಪರನ್ನ
ಮಡ್ಚುತ್ತಾ ಹಾಗೆ ಅಲ್ಲೇ… ಮುದ್ದೆಯ ಮಾಡುವ ಆಸೆ
ಆರಾಮಾಗಿ ಸುಮ್ಮನೆ ನನ್ನ… ಡೆಸ್ಕ್-ಮೇಲೆ ಮಲಗುವ ಮುನ್ನ
ಈ ಎಕ್ಸಾಮು ಹಾಲಿನಿಂದ… ನಾ ಓಡಿ ಹೋಗುವಾಸೆ

ಸುಮ್ನೆ ಕೂರಲಾ… ನಿದ್ರೆ ಮಾಡಲಾ… ಓಡಿ ಹೋಗಲಾ…
ನಾ ಏನು ಏನು ಏನು ಮಾಡಲಿ?

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬಲಿ ನಾನು… ಖಾಲಿ ಪುಟಗಳ
ಉತ್ರ ಬರೆಯಲಾ…

ಕಷ್ಟವಾದ ಪ್ರಶ್ನೆಗಳನ್ನ… ಪರೀಕ್ಷೇಲಿ ಕೇಳ್ದವರನ್ನ
ಬಾಯ್ತುಂಬಾ ಬೈಬೇಕಂತ… ನನ್ನ ಮಹದಾಸೆ
ಫೇಲು ಆಗಿ ಬಿಟ್ಟರೆ ಹೇಗೂ… ಇನ್ನೊಮ್ಮೆ ಕೂರುವೆ ನಾನು
ಉತ್ರವೆನುತ ಪ್ರಶ್ನೆ ಬರೆದು… ಪುಟ ತುಂಬೋದ್-ವಾಸಿ

ಬರೋ ಮಾರ್ಚಿಗೂ… ಅದರಾಚೆಗೂ… ಬರೆದ್ರಾಯಿತು
ನಾ ಫೇಲು ಫೇಲು ಫೇಲು ಆದರೆ

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬಲಿ ನಾನು… ಖಾಲಿ ಪುಟಗಳ

ಕಾಪಿ-ಮಾಡಲಾ… ಇಲ್ಲಾ ನೀಕಿ ನೋಡಲಾ
ಹೇಗೆ ಕಳೆಯಲಿ ನಾನು… ಎರಡು ಗಂಟೆಗಳ
ಉತ್ರ ಬರೆಯಲಾ…

ಮೂಲ ಹಾಡು: ‘ಅರಮನೆ’ ಚಿತ್ರದ ‘ಪತ್ರ ಬರಯಲಾ… ಇಲ್ಲಾ ಚಿತ್ರ ಬಿಡಿಸಲಾ…’
ಕೃಪೆ : kannadalyrics.com

ಪತ್ರ ಬರೆಯಲಾ… ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ… ಮನದ ಹಂಬಲ

ಮಾತನಾಡಲಾ… ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ… ಎದೆಯ ತಳಮಳ
ಪತ್ರ ಬರೆಯಲಾ…

ಬೊಗಸೇಲಿ ಹಿಡಿದು ನಿನ್ನ… ಮುದ್ಡಾದ ಈ ಮೊಗವನ್ನ
ನೋಡುತ್ತಾ ಹಾಗೆ ನಿನ್ನ… ಕಣ್ಣಲ್ಲೇ ಕರಗೋ ಆಸೆ
ಮಗುವಾಗಿ ಸುಮ್ಮನೇ ನಿನ್ನ… ಮಡಿಲಲ್ಲಿ ಮಲಗಿಸೋ ಮುನ್ನ
ಈ ಬೆಚ್ಚಗೆ ಎದೆಯಲ್ಲಿ… ನಾ ಬಚ್ಚಿ ಕೂರುವಾಸೆ

ನಗುವಾಗಲಾ… ನೆರಳಾಗಲಾ… ಉಸಿರಾಗಲಾ…
ಐ ಲವ್ ಯೂ ಲವ್ ಯೂ ಲವ್ ಯೂ ಗೆಳೆಯ

ಪತ್ರ ಬರೆಯಲಾ… ಇಲ್ಲ ಚಿತ್ರ ಬಿಡಿಸಲಾ…
ಹೇಗೆ ಹೇಳಲಿ ನನ್ನ… ಮನದ ಹಂಬಲ
ಪತ್ರ ಬರೆಯಲಾ…

ನುಣುಪಾದ ಪಾದಗಳನ್ನ… ನೆಲವನ್ನು ಸೋಕುವ ಮುನ್ನ
ಅಂಗೈನ ಚಾಚಿ ನಿನ್ನ… ನಾ ನಡೆಸುವಾಸೆ
ಜೊತೆಯಾಗಿ ಇದ್ದರೆ ನಾವು… ಒಂದೊಮ್ಮೆ ಬಂದರೂ ಸಾವು
ನಗುನಗುತ ಅಲ್ಲೇ ಅದನು… ಸ್ವೀಕರಿಸುವಾಸೆ

ಯುಗದಾಚೆಗೂ… ಜಗದಾಚೆಗೂ… ಜೊತೆಯಾಗಿರು…
ಐ ಲವ್ ಯೂ ಲವ್ ಯೂ ಲವ್ ಯೂ ಗೆಳೆಯ

ಪತ್ರ ಬರೆಯಲಾ… ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ… ಮನದ ಹಂಬಲ

ಮಾತನಾಡಲಾ… ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ… ಎದೆಯ ತಳಮಳ
ಪತ್ರ ಬರೆಯಲಾ…

 

ಅರಮನೆ ಚಿತ್ರ ಇಲ್ಲಿ ಸಾಫ್ಟ್‌ವೇರ್-ಮನೆ ಯಾಗಿದೆ.

ಅದರ ಪಂಚ್‌ಲೈನು ಪ್ರೀತಿ ತುಂಬಿದ ಪ್ರತೀ ಗೂಡೂ ಅರಮನೆ ಅನ್ನೋದು ಇಲ್ಲ ಸ್ವಲ್ಪ ಬದಲಾಯಿಸಿ.. ಬಗ್ಸ್ ತುಂಬಿದ ಪ್ರತೀ ಕೋಡೂ ಕರಮಾನೇ ಅಂತಾಗಿದೆ J

 

ಅರಮನೆ ಚಿತ್ರದ ಪತ್ರ ಬರೆಯಲಾ….ಇಲ್ಲಾ ಚಿತ್ರ ಬಿಡಿಸಲಾ ಹಾಡು ಕೇಳಿದ್ದೀರಲ್ಲಾ…? ಅದೇ ಹಾಡನ್ನು ನಮ್ ಸಾಫ್ಟ್‌ವೇರ್ ಡೆವಲಪರ್ ಹಾಡಿದ್ರೆ ಹೇಗಿರುತ್ತೆ ಅಂತಾ ನೋಡಿ…!!

 

ನಿಮ್ಮ ಅನುಕೂಲಕ್ಕೆ ಒರಿಜಿನಲ್ ಹಾಡನ್ನು ಪಕ್ಕದಲ್ಲೇ ಕೊಟ್ಟಿದ್ದೀನಿ ನೋಡಿ…

 

ಟೆಸ್ಟ್ ಮಾಡಲಾ… ಇಲ್ಲಾ ಡಿಬಗ್ ಮಾಡಲಾ…

ಹೇಗೆ ಹುಡುಕಲಿ ನನ್ನ ಮಾಡ್ಯುಲ್ ಬಗ್‌ಗಳಾ…

 

ಪ್ರೊಫೈಲರ್ ಹಾಕಲಾ… ಇಲ್ಲಾ ಬ್ರೇಕ್‌ಪಾಯಂಟ್ ಹಾಕಲಾ…

ಹೇಗೆ ತಿಳಿಯಲಿ ನಾನು ಎರರ್ ಮೂಲಗಳಾ…

ಟೆಸ್ಟ್ ಮಾಡಲಾ……..

 

ಮುಗಿದಾದ ಮಾಡ್ಯುಲನ್ನ… ಬದಲಾಯ್ಸಿ ಹಾಕುವ ಮುನ್ನ…

ತೆಗೆದಿಟ್ಟು ಬ್ಯಾಕಪ್ಪನ್ನ… ಸೇವ್ ಮಾಡಬೇಕು…

ತಪ್ಪಿರೋದು ಬ್ಯಾಕೆಂಡಲ್ಲಾ… ಬಗ್ ಇರೋದು ಫ್ರಂಟೆಂಡಲ್ಲಾ…

ಜಾಲಾಡಿ ಹುಡುಕಿ ಬೇಗ… ಬಗೆಹರಿಸುವಾಸೆ

 

ನಾನೇ ಮಾಡಲಾ… ಕಲೀಗ್ನ ಕೇಳಲಾ..ನೆಟ್‌ನಲ್ಲಿ ಹುಡುಕಲಾ….

ನಾ ಏನು ಏನು ಏನು ಮಾಡಲೀ….

 

ಟೆಸ್ಟ್ ಮಾಡಲಾ… ಇಲ್ಲಾ ಡಿಬಗ್ ಮಾಡಲಾ… ||

  

ಒಂದು ಬಗ್ ಫಿಕ್ಸ್ ಆಗೋ ಮುನ್ನ… ಮತ್ತೆರಡು ಬಂತಲ್ಲಣ್ಣ…

ಮನೆ ಸೇರಿ ರಾತ್ರಿಗೆ ಮುನ್ನ… ಮಲಗೋಕೆ ಆಸೆ…

ರಿಕ್ವಾಯರ್‌ಮೆಂಟು ಫ್ರೀಜಾಗಿಲ್ಲ… ಬಫರ್ ಟೈಮು ಮೊದಲೇ ಇಲ್ಲ…

ಡೆಡ್‌ಲೈನು ಹತ್ರ ಬಂತಲ್ಲಾ… ಮುಗಿಸೋದು ಹ್ಯಾಗೆ…

 

ನೈಟ್‌ಔಟ್ ಮಾಡಲಾ… ವೀಕೆಂಡ್ ಬರಲಾ.. ಏನ್ ಸಾಯಲೀ…

ನಾ ಏನು ಏನು ಏನು ಮಾಡಲೀ….

 

ಟೆಸ್ಟ್ ಮಾಡಲಾ… ಇಲ್ಲಾ ಡಿಬಗ್ ಮಾಡಲಾ… ||