Posts Tagged ‘ಮಿಲನ’

ಬಿ.ಜೆ.ಪಿ. ಯಿಂದ ಗುಳೆ ಹೊಂಟು ಹೋಗಿ, ಕೆ.ಜೆ.ಪಿ ಪಕ್ಷ ಕಟ್ಟಿದ ಮೇಲೆ, ‘ನಿಮ್-ಹಿಂದೆ’ ನಾವಿದೀವಿ… ಅಂದೋರೆಲ್ಲಾ ‘ಬೆನ್-ಹಿಂದೆ’ ಚೂರಿ ಹಾಕಿ, ಕೈ ಕೊಟ್ಟಿದ್ದು ನೋಡಿ ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ ಹಾಡು ಯಡ್ಡಿ ಬಾಯಲ್ಲಿ ಕೇಳಿ ‘ಗುಳೆ ಹೊಂಟು ಹೋದ ಮೇಲೆ…’ 🙂

 

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಮಾಡುವುದು ಏನು… ಉಳಿದುಹೋಗಿದೆ?
ಸಾಯಲಿ ಏನು… ತಿಳಿಯದಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಹಾವೇರೀಲಿ ಆಣೆ ಮಾಡಿ
ಬರುವೆ ಅಂದೋರ
ನಿಲುವು ಬೇರೆ ಆಯಿತೇ
ಯಾಕೆ ನಂತರ

ನಮ್ಮ ಪಾರ್ಟಿಯಲ್ಲಿ ಇಂದು
ಗೆಲ್ಲುವ ಆತುರ
ಒಂದೇ ಸಾರಿ ನೀವ್
ತೋರಿರಿ ಕನಿಕರ

ಬಿಜೆಪಿಯ ನಾಶ… ಮಾಡ ಬೇಕಿದೆ
ಮಾಡಲಿ ಹೇಗೆ… ತಿಳಿಯದಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಇನ್ನು ತಡವ ಮಾಡದೆ
ಪಾರ್ಟಿಯ ಸೇರ್ರಣ್ಣ
ನಿಮ್ಮ ಹಟವ ತೋರದೆ
ಮನಸು ಮಾಡ್ರಣ್ಣ

ಗಡುವು ದೂರವೇನಿಲ್ಲ
ಹತ್ತಿರ ಬಂತಣ್ಣ
ನೀವು ಬಾರದೆ
ಏತಕೋ ತಲ್ಲಣ

ಭರವಸೆ ಎಲ್ಲಾ… ಕಳೆದು ಹೋಗಿದೆ
ಎಲೆಕ್ಷನು ಸೋಲು… ಖಾತ್ರಿಯಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಮಾಡುವುದು ಏನು… ಉಳಿದುಹೋಗಿದೆ?
ಸಾಯಲಿ ಏನು… ತಿಳಿಯದಾಗಿದೆ

ಮೂಲ ಹಾಡು: ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ (ಸಾಹಿತ್ಯ: ಜಯಂತ ಕಾಯ್ಕಿಣಿ)
ಕೃಪೆ: http://kn.wikisource.org/wiki/

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ನೋವಿನಲ್ಲಿ ಜೀವ ಜೀವ
ಅರಿತ ನಂತರ
ನಲಿವು ಬೇರೆ ಏನಿದೆ
ಏಕೆ ಅಂತರ

ನಿನ್ನ ಹಾಡಿನಲ್ಲಿ ಇಂದು
ಬೆರೆವ ಕಾತರ
ಒಂದೇ ಸಾರಿ ನೀ
ಕೇಳೆಯ ಈ ಸ್ವರ

ಮನಸಲ್ಲಿ ಚೂರು… ಜಾಗ ಬೇಕಿದೆ
ಕೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ
ಕನಸೆ ಜೀವನ
ಸಣ್ಣ ಹಠವ ಮಾಡಿದೇ
ಹೃದಯ ಈ ದಿನ

ಎದೆಯ ದೂರವಾಣಿಯ
ಕರೆಯ ರಿಂಗಣ
ಕೇಳು ಜೀವವೇ
ಏತಕೀ ಕಂಪನ

ಹೃದಯವು ಇಲ್ಲೆ… ಕಳೆದು ಹೋಗಿದೆ
ಹುಡುಕಲೇ ಬೇಕೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ

ಕಣ್ಣಿನ ದೃಷ್ಟಿ ಮಂಜಾದ ಮೇಲೆ ಟೀಮಲ್ಲಿ ಜಾಗ ಹುಡುಕುತ್ತಾ ಇರುವ ಸೆಹವಾಗ್ ಮೇಲೆ ಒಂದು ಅಣಕ.‘ಮಿಲನ’ ಚಿತ್ರದ ‘ಮಳೆ ನಿಂತು ಹೋದಮೇಲೆ… ಹನಿಯೊಂದು ಮೂಡಿದೆ’ ಧಾಟಿಯಲ್ಲಿ ‘ಕಣ್ಣು ಮಂಜು ಆದ ಮೇಲೆ… ಹೊರಗಿಂದು ದೂಡಿದೆ’ ಅಂತ ಹಾಡುತ್ತಿರಬಹುದೇ? 🙂

 

ಕಣ್ಣು ಮಂಜು ಆದ ಮೇಲೆ… ಹೊರಗಿಂದು ದೂಡಿದೆ
ಮ್ಯಾಚೆಲ್ಲಾ ಮುಗಿದಾ ಮೇಲೆ… ಭಯವೊಂದು ಕಾಡಿದೆ

ಆಡುವುದು ಇನ್ನೂ… ಉಳಿದು ಹೋಗಿದೆ
ಟೀಮಲಿ ಜಾಗ… ಸಿಗದಹಾಗಿದೆ

ಕಣ್ಣು ಮಂಜು ಆದ ಮೇಲೆ… ಹೊರಗಿಂದು ದೂಡಿದೆ
ಮ್ಯಾಚೆಲ್ಲಾ ಮುಗಿದಾ ಮೇಲೆ… ಭಯವೊಂದು ಕಾಡಿದೆ

ಟೀಮಿನಲ್ಲಿ ಧೋನಿ ನನ್ನ
ಜಗಳದ್ ನಂತರ
ಶಿಖರ್ ಬೇರೆ ಆಡಿದ
ಏಕೆ ನನ್-ಥರ?

ನಂಗೆ ಟೀಮಿನಲ್ಲಿ ಇಂದು
ಸೇರುವ ಕಾತುರ
ಮುಂದೆ ದಾರಿ ನೀ
ತೋರೆಯಾ ಈಶ್ವರ

ಬ್ಯಾಟಿನಲ್ಲಿ ನೂರು… ಮಾಡ ಬೇಕಿದೆ
ಹೊಡೆಯಲು ಬಾಲು… ಕಾಣದಾಗಿದೆ

ಕಣ್ಣು ಮಂಜು ಆದ ಮೇಲೆ… ಹೊರಗಿಂದು ದೂಡಿದೆ
ಮ್ಯಾಚೆಲ್ಲಾ ಮುಗಿದಾ ಮೇಲೆ… ಭಯವೊಂದು ಕಾಡಿದೆ

ಕಣ್ಣು ಮುಚ್ಚಿಯೇ ಬಾರ್ಸ್ತಿದ್ದೆ
ಬೌಂಡರಿ ಸಿಕ್ಸರನ್ನ
ನನ್ನ ಆಟವ ಆಡಿದೆ
ಮ್ಯಾಚಲಿ ಪ್ರತಿದಿನ

ಎದೆಯು ಭಾರವಾಗಿದೆ
ಕಥೆಯು ಹಿಂಗಣ್ಣ
ಹೇಳು ಧೋನಿಯೇ
ಏತಕೀ ಸಂಚಣ್ಣ?

ಭರವಸೆ ಇಲ್ಲ… ಕಳೆದುಹೋಗಿದೆ
ನಿವೃತ್ತಿಯು ಬೇಕೆ… ತಿಳಿಯದಾಗಿದೆ

ಕಣ್ಣು ಮಂಜು ಆದ ಮೇಲೆ… ಹೊರಗಿಂದು ದೂಡಿದೆ
ಮ್ಯಾಚೆಲ್ಲಾ ಮುಗಿದಾ ಮೇಲೆ… ಭಯವೊಂದು ಕಾಡಿದೆ

ಆಡುವುದು ಇನ್ನೂ… ಉಳಿದು ಹೋಗಿದೆ
ಟೀಮಲಿ ಜಾಗ… ಸಿಗದಹಾಗಿದೆ

ಮೂಲ ಹಾಡು: ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ (ಸಾಹಿತ್ಯ: ಜಯಂತ ಕಾಯ್ಕಿಣಿ)
ಕೃಪೆ: http://kn.wikisource.org/wiki/

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ನೋವಿನಲ್ಲಿ ಜೀವ ಜೀವ
ಅರಿತ ನಂತರ
ನಲಿವು ಬೇರೆ ಏನಿದೆ
ಏಕೆ ಅಂತರ

ನಿನ್ನ ಹಾಡಿನಲ್ಲಿ ಇಂದು
ಬೆರೆವ ಕಾತರ
ಒಂದೇ ಸಾರಿ ನೀ
ಕೇಳೆಯ ಈ ಸ್ವರ

ಮನಸಲ್ಲಿ ಚೂರು… ಜಾಗ ಬೇಕಿದೆ
ಕೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ
ಕನಸೆ ಜೀವನ
ಸಣ್ಣ ಹಠವ ಮಾಡಿದೇ
ಹೃದಯ ಈ ದಿನ

ಎದೆಯ ದೂರವಾಣಿಯ
ಕರೆಯ ರಿಂಗಣ
ಕೇಳು ಜೀವವೇ
ಏತಕೀ ಕಂಪನ

ಹೃದಯವು ಇಲ್ಲೆ… ಕಳೆದು ಹೋಗಿದೆ
ಹುಡುಕಲೇ ಬೇಕೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ