Posts Tagged ‘ಶೋಯೆಬ್ ಅಖ್ತರ್’

ಶೋಯೇಬ್ ಅಕ್ತರ್ ಗೆ ಹುಚ್ ನಾಯಿ ಕಚ್ಚಿ….ಸಚಿನ್ ಮೇಲೆ ಬಾಯಿಗೆ ಬಂದದ್ದೆಲ್ಲಾ ಬೊಗಳಿ ಆದ ಮೇಲೆ ಈಗ ಪರಮಾತ್ಮ ಚಿತ್ರದ ಯಾವನಿಗ್ಗೊತ್ತು ಹಾಡನ್ನು ಬದಲಾಯಿಸಿ ಹೀಂಗೆ ಹಲುಬುತ್ತಿದ್ದಾನೆ ನೋಡಿ… 🙂

ನೀನೆ ಜೀನಿಯಸ್ಸು… ಬಾಯಿತಪ್ಪಿಎಡವಟ್ಟಾಯ್ತೋ…
ಅದು ದ್ವೇಷಾನಾ… ನನ್ನ ಬುರ್ಡೇನಾ
ಮಂಡೆ ಕೆಟ್ಟಿತ್ತಾ…. ಯಾವಾನಿಗ್ ಗೊತ್ತು

ಏನು ಮಾಡೊದು… ಮೆಂಟ್ಲು ನಾಯೊಂದು
ರೋಡಲ್ಲಿ ಕಚ್ತು… ರೋಡಲ್ಲಿ ಕಚ್ತು
ಏನು ಹೇಳಿದ್ನೋ… ಇಂತ ಟೈಮಲ್ಲಿ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಸಣ್ಣದೊಂದು ನಾಯಿ… ನನ್ನತ್ರ ಬಂದು
ತನ್ನ ಹಲ್ಲು… ನೆಟ್ಟಂಗಾಯ್ತು

ನಾಯಿ ಯಾತಕ್ಕೆ.. ನಂಗೆ ಕಚ್ಚಿತ್ತೋ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಮರ್ಲು ಬಿಡ್ತದಾ… ಹಿಂಗೆ ಇರ್ತದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಅದು ಯಾವ್ದೊ ವರ್ಡು ಕಪ್ಪು… ಮ್ಯಾಚಲ್ಲಿ
ಬೌಲಿಂಗು ಮಾಡುತ್ತಿದ್ದೆ… ಸ್ಪೀಡಲ್ಲಿ
ನೀ ಬ್ಯಾಟಿಂಗ್ ಮಾಡ್ತಿದ್ದೆ… ಎದುರಲ್ಲಿ
ಅವಲಕ್ಕಿ ಕುಟ್ದದಂಗಾಯ್ತು… ಎದೆಯಲ್ಲಿ

ಆಮೇಲೇನು ಆಯ್ತು… ನಮ್ಮಪ್ಪನ್ನ ಕೇಳ್ರಿ
ಡಾಟು ಬಾಲಿಗಿಂತ… ಬೌಂಡ್ರಿ ಸಿಕ್ಸೇ ಹೆಚ್ಚ್ರಿ
ಮ್ಯಾಚ್ ಆದಮೇಲೆ… ಬೆಡ್ ಶೀಟು ಹಾಸಿ
ಮುಚ್ಚಾಕಿಕೊಂಡು… ಮಲ್ಕಂಬಿಟ್ಟೇ

ಇಂತ ಟೈಮಲ್ಲಿ… ಕನಸು ಬಿದ್ದಿತ್ತಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಕನಸಿನಲ್ಲೂನೂ… ಬೆಚ್ಚಿ ಬಿದ್ದಿದ್ನಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಬಾಲಲ್ಲಿ ಔಟು ಮಾಡೋಕ್… ಆಗ್ಲಿಲ್ಲ
ಯಾರ್ಕರು ಹಾಕಿದ್ರೂ ಔಟು… ಆಗ್ಲಿಲ್ಲ
ಬೌನ್ಸರು ಹಾಕಿದ್ರು ಸಿಕ್ಸು… ಹೊಡದ್ನಲ್ಲ
ನಿಮ್ಗೆ ಗೊತ್ತಲ್ವಾ… ನಾನು ಮುಟ್ಟಾಳ

ಮತ್ತೆ ಮತ್ತೆ ಬಂತು… ಬಾಲಿಗೊಂದು ಬೌಂಡರಿ
ತುಂಬಾ ಒಳ್ಳೇ ಆಡಿದ… ಬೌಲಿಂಗ್ ಮಾಡೋದ್ ಹೆಂಗ್ರಿ
ಮಂಡೆ ಪೆಟ್ಟಾಗಿ… ಮಾತಾಡ್ದೆ ನಾನು
ಸುಮ್ಮನೆ ಮನೇಲಿ… ಇರಾಬೌದಿತ್ತು

ನನ್ನ ಕಚ್ಚಿದ… ನಾಯಿ ಇರಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು… ಸತ್ತು ಬಿದ್ದಿತ್ತಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಮೂಲ ಸಾಹಿತ್ಯ : ಪರಮಾತ್ಮ ಚಿತ್ರದ ‘ಯಾವನಿಗ್ ಗೊತ್ತು… ಯಾವನಿಗ್ ಗೊತ್ತು’
ಕೃಪೆ: kannadalyrics.com

ನಾನೇ ಜೀನಿಯಸ್ಸಾ… ಹ್ರುದೆಸೀರಿಸೇಲಾತಿ… ಲಬಬಾವೂ
ಎಬಿಸೀಡಿನಾ… ಆಲೂಗಡ್ದೆನಾ
ಗೋಡೆ ಹಲ್ಲೀನಾ… ಯಾವಾನಿಗ್ ಗೊತ್ತು

ಏನು ಮಾಡೋದು… ಒಂಟಿ ಹೂವೊಂದು
ರೋಡಲ್ಲಿ ಸಿಕ್ತು… ರೋಡಲ್ಲಿ ಸಿಕ್ತು
ಏನು ಹೇಳೋದು… ಇಂಥಾ ಟೈಮಲ್ಲಿ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಎದೆಯಂಬ ಖಾಲಿ… ಡಬಕ್ಕೆ ಒಂದು
ಸಣ್ಣ ಕಲ್ಲು… ಬಿದ್ದಂಗಾಯ್ತು

ಡಬ್ಬ ಯಾತಕ್ಕೆ… ಸೌಂಡು ಮಾಡುತ್ತೊ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಇವ್ಳು ಸಿಕ್ತಾಳ… ಕೈ ಕೊಡ್ತಾಳ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಅದು ಯಾವ್ದೋ ಒಂಟಿ ಹಕ್ಕಿ… ಸದ್ದನ್ನಾ
ಕೇಳುತ್ತಾ ಮಲ್ಕೊಂಡಿದ್ದೆ… ಮಧ್ಯಾಹ್ನ
ಕಾಲ್ ಕೇಜಿ ಪ್ರೀತಿಗೊಂದು… ಪದ್ಯಾನಾ
ಬರೆದಿಟ್ಟು ಕೆರೆದುಕೊಂಡೆ… ಗಡ್ಡಾನಾ

ಕಾಳಿದಾಸ ಕಾವ್ಯ… ನಮಪ್ಪನ್ನ ಕೇಳ್ರಿ
ಕಾಲಿ ಹಾಳೆಗಿಂತ… ಒಳ್ಳೆ ಕಾವ್ಯ ಇಲ್ರಿ
ಹೃದಯದ ಮೇಲೆ… ಹೈ-ಹೀಲ್ಡು ಹಾಕಿ
ರಾಜಕುಮಾರಿ… ನಿಂತಂಗಾಯ್ತು

ಇಂಥಾ ಟೈಮಲ್ಲಿ… ಹಾಡು ಬೇಕಿತ್ತಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ದೇವ ದಾಸಾನೂ… ಎಣ್ಣೆ ಬಿಟ್ಟಿದ್ನಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಕನಸಲ್ಲಿ ಯಾಕೊ ಯಾವ್ದೂ… ಸಾಲಲ್ಲ
ಮೋಡಾನ ಮುದ್ದು ಮಾಡೋ… ಕಾಗಲ್ಲಾ
ಚಿಟ್ಟೆಗೆ ಚಡ್ಡಿ ಹಾಕೋ… ಕಾಗ್ಲಿಲ್ಲ
ನಿಮ್ಗೆ ಗೊತ್ತಲ್ವಾ ನಾನು… ಮುಟ್ಟಾಳ

ಮತ್ತೆ ಮತ್ತೆ ಬಂತು… ಎದೆಯಲ್ಲೊಂದು ಲಹರಿ
ತುಂಬಾ ಒಳ್ಳೆ ಕನ್ನಡ… ಮಾತಾಡ್ಬಿಟ್ಟೆ ಕಣ್ರಿ
ಮೂಗು ಬೊಟ್ಟಾಗಿ… ಹುಟ್ಟಿದ್ರೆ ನಾನು
ಇವಳ ಮೂತೀಲೆ… ಇರಬೌದಿತ್ತು

ನನ್ನ ಆಸೆಗೂ… ಮೀನಿಂಗ್ ಇರಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು… ತಿಂಡಿ ಸಿಗಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು