Posts Tagged ‘ಹಾಗೇ ಸುಮ್ಮನೆ’

ನೆನಪಿನಾಳದ
ಕಣಿವೆಯೊಳಗೆ
ಸುಪ್ತ ಝರಿಯ
ಜುಳುಜುಳು ನಿನಾದ

ಅಂತರಂಗದ
ಹೂಬನದೊಳಗೆ
ಅರಳಿ ನಗುವ
ಸ್ಮೃತಿ ಸಂವಾದ

ಆಪ್ತಸ್ವರಗಳ
ಆಲಾಪನೆಯೊಳಗೇ
ಲುಪ್ತವಾದ ನಿಷಾದ
ಸ್ವರದ ವಿಷಾದ !!

ನನನ ನನ ನಾನಾ… ನನನಾನಾ ನನ ನಾನನ ನನ ನನನಾ… ನಕಾರದಲ್ಲಿ ನೆನಪನ್ನು ನೆನೆಯುತ್ತಾ 🙂

ನೆನಪು ನೋವೆಂಬರು
ನೋವು ನವಿರೆಂಬರು
ನವಿಲಗರಿಯೆಂಬರು ನೆಪಮಾತ್ರಕೆ

ನೆನಪಿನೋಣಿಯಲೊಮ್ಮೆ
ನಡೆದಾಡಿ ನೋಡಿದೆ
ನವಿರು-ನೋವು ನವಿಲಿಲ್ಲ… ನೀನಿಲ್ಲದೆ !!

ಮನಸಿನ ಭರಣಿಯೊಳಗೆ
ಕಣ್ಣೀರಿನಲಿ ಉಬ್ಬೆ ಹಾಕಿಟ್ಟ
ನೆನಪಿನ ಮಿಡಿ(ತ)ಗಳನೆಲ್ಲಾ
ಆಗೀಗ ಆರಿಸಿ ಕೊಯ್ದು ಬಡಿಸುತ್ತೇನೆ
ಜೊತೆಗಿಷ್ಟು ಖಾರ ಬೆರಸಿ !

ಚಪ್ಪೆಯಾದೆ ನಾ… ಅದ ಚಪ್ಪರಿಸಿ
ವಾಹ್ ಎನ್ನುವವರ ಲೊಟ್ಟೆ ಸದ್ದಿಗೆ

ಬೆಪ್ಪಾಗಿ ಮನಕೆ ಸಂದಿಗ್ಧವೀಗ…
ಬರಿದೇ ಬೆನ್ನು ತಟ್ಟಿ(ಸಿ)ಕೊಳ್ಳಬೇಕೋ
ಆರದ ಒದ್ದೆ ಕಣ್ಣು ಒರೆಸಿಕೊಳ್ಳಬೇಕೋ!!

ಸ್ಪಾಟ್ ಸ್ಪಿಟ್ ಪೋಸ್ಟ್ 🙂

“ಗಿನ್ನೀಸ್ ಬುಕ್ ಆಫ್ ರೆಕಾರ್ಡ್ನಲ್ಲಿ”ಬರೋವಂತಾ ಸಾಧನೆ ಮಾಡ್ರೋ ಚಂಡಿನಲ್ಲಿ ಅಂದ್ರೆ ಈ ಚಂಡಾಲರು

ಬುಕ್ಕೀಸ್ ಬುಕ್ “ಆಫ್ ದಿ ರೆಕಾರ್ಡ್” ನಲ್ಲಿ ಬರೋ ಹಂಗೇ “ಧನ” ಮಾಡಿ ಈಗ ಜೈಲಿನ

“ಖೈದೀಸ್ ರೆಕಾರ್ಡ್ ಬುಕ್ಕಲ್ಲಿ” ಎಂಟ್ರಿ ಪಡೆದು

“ಕಂಬೀಸ್ ಲೆಕ್ಕ ಆಫ್ ಜೈಲ್-ವಾರ್ಡ್” ಮಾಡ್ತಾ ಇವೆ ಮುಂಡೇವು